ಕರಾವಳಿ ಪ್ರತಿಭೆ ರಿಷಭ್ ಶೆಟ್ಟಿ ಒಂದಲ್ಲ ಒಂದು ಪ್ರಯೋಗಳನ್ನು ಮಾಡುತ್ತಲೇ ಇರುತ್ತಾರೆ. ತಾವು ಸಿನಿಮಾ ಮಾಡೋದು, ನಟಿಸೋದು ಬಿಟ್ಟು ಅದರಾಚೆಗೆ ತಮ್ಮ ಬ್ಯಾನರ್ ಅಡಿಯಲ್ಲಿ ಅನೇಕ ಹೊಸ ಪ್ರತಿಭೆಗಳಿಗೆ, ನವ ಯುವಕರಿಗೆ ಅವಕಾಶಗಳನ್ನು ನೀಡುತ್ತಿರುತ್ತಾರೆ. ಇದೀಗ ಇವರ ಬ್ಯಾನರ್ ಅಡಿಯಲ್ಲಿ ಬಂದ ಹೊಸೊಬ್ಬರ ಚಿತ್ರವೊಂದು ಭಾರಿ ಪ್ರಶಸ್ತಿಗಳ ಸುರಿಮಳೆಯನ್ನೇ ಪಡೆದುಕೊಂಡಿದೆ.
ದೊಡ್ಡ ಬಜೆಟ್ಟಿನ ಚಿತ್ರಗಳ ಅಬ್ಬರದ ನಡುವೆ ಕನ್ನಡದ ಕೆಲವು ಸಣ್ಣ ಸಿನಿಮಾಗಳು ಭಾರತದ ಗಡಿಯಾಚೆಗೆ ಸಂಚರಿಸಿ ಅಲ್ಲಿನ ಚಿತ್ರೋತ್ಸವಗಳಲ್ಲಿ ಮನ್ನಣೆ ಗಳಿಸಿ ಕನ್ನಡ ಚಿತ್ರೋದ್ಯಮದ ಕೀರ್ತಿ ಪತಾಕೆಯನ್ನು ಹಾರಿಸಿವೆ. ಅದರಲ್ಲಿ ನಮ್ಮ ರಿಷಬ್ ಶೆಟ್ಟಿ ಸಂಸ್ಥೆಯ ‘ಶಿವಮ್ಮ’ಚಿತ್ರ ಪ್ರಪಂಚಾದ್ಯಂತ ತನ್ನ ತೆಕ್ಕೆಗೆ ಪ್ರಶಸ್ತಿ, ಪ್ರಶಂಸೆಯನ್ನು ಗಳಿಸಿ ತನ್ನ ವರ್ಲ್ಡ್ ಟೂರಿನ ಮ್ಯಾರಥಾನ್ ಅನ್ನು ಮುಂದುವರಿಸಿದೆ.
ಈವರೆಗೂ ಶಿವಮ್ಮ ಗೆದ್ದ ಪ್ರಶಸ್ತಿಗಳ ಪಟ್ಟಿ ದೊಡ್ಡದಿದೆ. ನ್ಯೂ ಕರೆಂಟ್ಸ್ ಪುರಸ್ಕಾರ, ಬುಸಾನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ 2022, ಯಂಗ್ ಜೂರಿ ಪುರಸ್ಕಾರ, ಫೆಸ್ಟಿವಲ್ ಡೆಸ್ 3 ಕಾಂಟಿನೆಂಟಸ್, ನಾಂಟೆಸ್ 2022, ಅತ್ಯುತ್ತಮ ನಿರ್ದೇಶಕ, ಫಾಜರ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಗ್ರಾಂಡ್ ಪ್ರಿಕ್ಸ್ ಅಟ್ ಜೆರ್ಕೋಲೊ ಹೈನಾನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಚೀನಾ ಬ್ಲಾಕ್ ಮೂವಿ, ಸ್ವಿಟ್ಜರ್ಲ್ಯಾಂಡ್ ಫಜರ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ , ಇರಾನ್ ಗೋಥೆಂಬರ್ಗ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಸ್ಪೀಡನ್ ಫಿಲ್ಮ್ ಫೆಸ್ಟ್ ಮುಂಚಿಯನ್, ಮ್ಯುನಿಚ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಜೆರ್ಕಾಲೋ , ರಷ್ಯಾ ಇಮೆಜಿನ್ ಇಂಡಿಯಾ, ಸ್ಪೇನ್ ಅಲ್ಬರ್ಟಾ ಭಾರತೀಯ ಚಲನಚಿತ್ರೋತ್ಸವ, ಕೆನಡ ಇಂಡಿಯನ್ ಪಿಲ್ಮ್ ಫೆಸ್ಟಿವಲ್, ಮೆಲ್ಬೋರ್ನ್ ಅಂಡ್ರಿ ತರ್ಕೊವ್ಸ್ಕಿ ಅಂತರ್ರಾಷ್ಟ್ರೀಯ ಚಿತ್ರೋತ್ಸವ ಮುಂತಾದ ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.
ಈ ಸಿನಿಮಾದ ಬಗ್ಗೆ ರಿಷಬ್ ಶೆಟ್ಟಿ ಹೆಮ್ಮೆಯಿಂದಲೇ ಮಾತನಾಡಿದ್ದಾರೆ. ಇಂತಹದ್ದೊಂದು ಸಿನಿಮಾ ತಮ್ಮದೇ ಬ್ಯಾನರ್ ನಲ್ಲಿ ಬಂದಿದ್ದು, ಸಹಜವಾಗಿಯೇ ಅವರಿಗೆ ಸಂಭ್ರಮ ತಂದಿದೆ. ಈ ಸಿನಿಮಾ ಇನ್ನೂ ಹಲವು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆಯಲಿ ಎಂದು ನಿರ್ದೇಶಕರಿಗೆ ರಿಷಬ್ ಹಾರೈಸಿದ್ದಾರೆ.
ಹಿಂದೂ ಧರ್ಮದ ವಿಶೇಷತೆ ಎಂದರೆ ಅದು ಸ್ವ ವಿಮರ್ಶೆಯ (self -criticism) ಸ್ವಾತಂತ್ರ್ಯ…
ಮುಳಿಯ ಗೋಲ್ಡ್ ಅಂಡ್ ಡೈಮಂಡ್ ಹೊಸತನದ ಶೋರೂಮ್ ಅನಾವರಣದ ಅಂಗವಾಗಿ ಮೇ 9…
ಮುಳಿಯ ನೂತನ ನವೀಕೃತ ವಿಸ್ತೃತ ಆಭರಣ ಮಳಿಗೆಯ ಅನಾವರಣ ಪ್ರಯುಕ್ತ ಕೃಷಿ ಬೆಳವಣಿಗೆಗೆ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರದ ಎಲ್ಲಾ…
ರಾಜ್ಯದ 6 ಜಿಲ್ಲೆಗಳಲ್ಲಿ ತೋಟಗಾರಿಕಾ ಬೆಳೆಗಳಿಗೆ ಅನುಕೂಲವಾಗುವಂತೆ ಶೀಥಲೀಕರಣ ಘಟಕಗಳನ್ನು ನಿರ್ಮಿಸಲಾಗುತ್ತಿದೆ ಎಂದು…