Advertisement
MIRROR FOCUS

ತರಕಾರಿ ಬೀಜಗಳನ್ನು ಯಾವ ತಿಂಗಳು ವಾರಗಳಲ್ಲಿ ಬಿತ್ತನೆ ಮಾಡಬೇಕು | ನಿರ್ವಿಷ ನಿರಂತರ ತರಕಾರಿ ಕ್ಯಾಲೆಂಡರ್

Share

ರೈತರು ಭತ್ತ ನಾಟಿ‌ ಮಾಡಬೇಕಾದರೆ ದಿನ‌ ನೋಡುವ ವಾಡಿಕೆ ಇದೆ. ಅದೇ ರೀತಿ ತರಕಾರಿ ಬೀಜ ಬಿತ್ತಲು ದಿನ, ವಾರ ಇದೆ. ನಮಗೆ ಮನಸ್ಸು‌ ಬಂದ ಹಾಗೆ ಬಿತ್ತಿದರೆ ಫಲ ಸರಿಯಾಗಿ ಕೈ ಸೇರುವುದಿಲ್ಲ. ಅದಕ್ಕೆಂದೇ ದಿನ, ತಿಥಿ ಇದೆ.. ಶಿವಪ್ರಸಾದ್ ಮುರ್ಮುಡಿಯವರು ನಿಖರವಾದ ವಾರ, ದಿನ ತಿಥಿಗಳನ್ನು ಹೇಳುತ್ತಾರೆ. ಅದರಂತೆ ತರಕಾರಿ ಬೀಜ ಬಿತ್ತಿದರೆ ಫಲಸು ಕೈ ಹಿಡಿಯುವುದು ಖಂಡಿತ.

Advertisement
Advertisement
Advertisement
Advertisement
  1. April ತಿಂಗಳ 20 ನೇ ತಾರೀಕಿನ ನಂತ್ರ ಬರುವ ಅಮಾವಾಸ್ಯೆಯ ಹಿಂದೆ ಮುಂದಾಗಿ ಶನಿವಾರ/ಬುಧವಾರ,ಮಿ/ ತಿಥಿ ಬಿಟ್ಟು ಗೊಬ್ರಗಳಿಂದ ಮಣ್ಣು ಹದಮಾಡಿದ ಏರು ಮಡಿಗಳಲ್ಲಿ ಎರಡಿಂದ ಮೂರು ಇಂಚು ಆಳದಲ್ಲಿ ಈ ಕೆಳಗಿನ ತರಕಾರಿ ಬೀಜಗಳನ್ನು ಬಿತ್ತುವುದು. ನೀರು ಖಂಡಿತಾ ಹಾಕಲೇಬಾರದು. ಮಳೆ ಬಂದು ಅದರಷ್ಟಕ್ಕೆ ಸ್ವಾಭಾವಿಕವಾಗಿ ಹುಟ್ಟಬೇಕು. 1.ಸೊರೆ.2.ಪಡುವಲ. 3.ದಾರಳೆ. 4.ಋಷಿಕೇಶದಾರಳೆ. 5.ಹಾಗಲ. 6.ಅಳಸಂಡೆ. 7.ಕುಂಬಳ. 8.ಚೀನಿಕಾಯಿ, ಬೆಂಡೆ ಹಾಕಬೇಡಿ.
  2. May ತಿಂಗಳ ಅಖೇರಿಗೆ ಬರುವ ಅಮವಾಸ್ಯೆ ಯ ಅಕ್ಕ ಪಕ್ಕ , ಮಿ/ ತಿಥಿ ಬಿಟ್ಟು ಶನಿವಾರ/ ಬುಧವಾರ ದಂದು ಬೆಂಡೆ ಬೀಜ ಬಿತ್ತಿ.
  3. ಮಳೆಗಾಲ ಬಂದ ತಕ್ಷಣ ಬೇಸಿಗೆಯ ಬದನೆ ಗಿಡಗಳ ಗೆಲ್ಲುಗಳನ್ನು ಸವರಿ ಸಾಲುಬಿಡಿಸಿ ಗೊಬ್ರ ಕೊಡಿ,ಸಮೃದ್ಧ ಬೆಳೆ.
  4. June Last week/ July First week ಬರುವ ಅಮವಾಸ್ಯೆ (ಆರ್ಧ್ರಾ ನಕ್ಷತ್ರ ) ಮುಳ್ಳು ಸೌತೆ,ಬೀಜ ಹಾಕುದು.
  5. July last week/ August first week ಬರುವ ಆಟಿ ಅಮವಾಸ್ಯೆ ಹತ್ರ ಸೌತೆ,ಕುಂಬಳ ಚೀನಿಕಾಯಿ ಬೀಜ ಬಿತ್ತುವುದು. ಬಸಾಳೆ ನಡುವುದು.
  6. ಮೇಲಿನ ದಿನವೇ ಬದನೆ ಬೀಜ ಬಿತ್ತುವುದು. Oct ನಲ್ಲಿ ನಡಲು ತಯಾರಿಗಾಗಿ.
  7. August last ಗೆ ತೊಂಡೆ ಬಳ್ಳಿ ನಡುವುದು,/ ಬಳ್ಳಿ ಕತ್ತರಿಸುವುದು.8. Oct 20 ರಿಂದ 30 ರ ಅಂದಾಜು ಬದನೆ ಗಿಡ ನಡುವುದು.
  8. Nov last week ಬೆಂಡೆ ಬೀಜ ಹಾಕುವುದು.
  9. Nov last week/Dec first week ಆಟಿಸೌತೆ ಮಾಡಿದ ಸಾಲನ್ನು ಹರಡಿ , ಕೊಚ್ಚಿ ಹರಿವೆ ಬೀಜ ಬಿತ್ತುವುದು.
  10. Dec last week ಅಳಸಂಡೆ, ಪಡುವಲ,ಹಾಗಲ,ದಾರಳೆ ಸಾಲು ಕಣಿ ಮಾಡಿವಬೀಜ ಬಿತ್ತುವುದು.
  11. Feb 25/30 ಅಂದಾಜು ಸೌತೆಕಾಯಿ, ಕುಂಬಳ,ಸೊರೆ,ಚೀನಿಕಾಯಿ, ಮುಳ್ಳುಸೌತೆ, ಬೆಂಡೆ ಬೀಜ ಬಿತ್ತುವುದು.
  12. April last week/Mayfirt week ಅಳಸಂಡೆ,ಮುಳ್ಳುಸೌತೆ, ಸೌತೆ, ಬೆಂಡೆ ಬೀಜ ಬಿತ್ತುವುದು.

ವಿ.ಸೂ.: ಎಲ್ಲಾಬೀಜ ಬಿತ್ತುವ ದಿನ ಮಿ ಯಿಂದ ಅಂತ್ಯಗೊಳ್ಳುವ ತಿಥಿ ಬಿಡಿ.( ಸಪ್ತಮಿ,ಅಷ್ಟಮಿ,ನವಮಿ……..)
ವಾರ : ಶನಿವಾರ,ಬುಧವಾರ, ಬೀಜ ಬಿತ್ತನೆಗೆ ಅತ್ಯಂತ ಯೋಗ್ಯ ಇವಿಷ್ಟು ಅನುಸರಿಸಿದರೆ ಬೆಳೆ ಸಮೃದ್ಧ. ರೋಗಭಾದೆ ಕಡಿಮೆ.
ನೆಲಬಸಾಳೆ, ಗಡ್ಡೆ ತರಕಾರಿ ಜೊತೆಯಲ್ಲಿರಲಿ.

Advertisement

ಮಾಹಿತಿ : ಪಿ. ಶಿವಪ್ರಸಾದ, ವರ್ಮುಡಿ (ಸಮೃದ್ಧಿ ಗಿಡಗೆಳೆತನ ಸಂಘದ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ )

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 23-02-2024 | ಇಂದು ಕೂಡಾ ಮೋಡ ಹಾಗೂ ಕೆಲವು ಕಡೆ ತುಂತುರು ಮಳೆ |

ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…

8 hours ago

ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |

ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…

2 days ago

ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!

ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.

3 days ago

ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |

ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…

3 days ago

ಸ್ವರ್ಗಕ್ಕಾಗಿ ಮೂರು ಕಾಲ್ತುಳಿತಗಳು

ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…

4 days ago

ಅಡಿಕೆಗೆ ಮೈಟ್ | ಆತಂಕ ಬೇಡ, ಇರಲಿ ಎಚ್ಚರ | ವಿಜ್ಞಾನಿಗಳಿಂದ ಮಾಹಿತಿ |

ಅಡಿಕೆಯ ಮೈಟ್‌ ಬಗ್ಗೆ ಸಿಪಿಸಿಆರ್‌ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…

4 days ago