ದಿನದಿಂದ ದಿನಕ್ಕೆ ಲೋಕ ಸಭೆ ಚುನಾವಣೆಯ(Lok Sabha Election) ಕಾವು ಏರುತ್ತಿದೆ. ಬಿಜೆಪಿಯು ಮುಖ್ಯವಾಗಿ ನರೇಂದ್ರ ಮೋದಿ ಅವರನ್ನು ಮುಂದಿರಿಸಿ ಚುನಾವಣೆಯಲ್ಲಿ ಪ್ರಚಾರ ಮಾಡುತ್ತಿದೆ. ಅದರಲ್ಲೂ ಮೋದಿಯವರು ಕರ್ನಾಟಕಕ್ಕೆ(Karnataka) ಭೇಟಿ ನೀಡುತ್ತಿರುವುದು ಬಿಜೆಪಿ ಕಾರ್ಯಕರ್ತರಿಗೆ ಜೋಶ್ ನೀಡುತ್ತಿದೆ. ಬಿಜೆಪಿ ಬೆಲ್ಟ್ ದಕ್ಷಿಣಕನ್ನಡಕ್ಕಂತೂ(Dakshina Kannada) ಮೋದಿಯವರ ಭೇಟಿ ಕುತೂಹಲ ಮೂಡಿದೆ. ಆದರೆ ಅವರ ಕರ್ನಾಟಕ ಭೇಟಿ ಕಾರ್ಯಕ್ರಮದಲ್ಲಿ ಮತ್ತೆ ಮಹತ್ವದ ಬದಲಾವಣೆಯಾಗಿದೆ.
ಏಪ್ರಿಲ್14 ರಂದು ಪ್ರಧಾನಿ ಮೋದಿಯವರ ಬೃಹತ್ ಸಮಾವೇಶವನ್ನು ಮಂಗಳೂರು (Mangaluru) ಬದಲು ಮೈಸೂರಿನಲ್ಲಿ (Mysuru) ಆಯೋಜಿಸಲಾಗಿದೆ. ಹಳೇಮೈಸೂರು (Old Mysuru) ಭಾಗದಲ್ಲಿ ಸಿದ್ದರಾಮಯ್ಯ (Siddaramaiah) ಟಾರ್ಗೆಟ್ ಮಾಡಿರುವ ದೋಸ್ತಿಗಳು ಮೈಸೂರಿಗೆ ಮೋದಿ ಅವರನ್ನು ಕರೆಸಿ ಬೃಹತ್ ಸಮಾವೇಶ ನಡೆಸಲು ಮುಂದಾಗಿದ್ದಾರೆ. ಮೋದಿಯವರು ಏಪ್ರಿಲ್ 14 ರಂದು ಮೈಸೂರಿಗೆ ಸಂಜೆ 4 ಗಂಟೆಗೆ ಬರಲಿದ್ದಾರೆ. ಅಂದು ಮಹಾರಾಜ ಮೈದಾನದಲ್ಲಿ ಆಯೋಜನೆಗೊಂಡಿರುವ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಮೋದಿ ಮಾತಾಡಲಿದ್ದಾರೆ.
ಹಳೇ ಮೈಸೂರಿನ ನಾಲ್ಕು ಲೋಕಕ್ಷೇತ್ರಗಳನ್ನು ಟಾರ್ಗೆಟ್ ಇಟ್ಟುಕೊಂಡು ಮೋದಿಯವರು ಭಾಷಣ ಮಾಡಲಿದ್ದಾರೆ. ಈ ಸಮಾವೇಶದಲ್ಲಿ 1.5 ಲಕ್ಷಕ್ಕೂ ಹೆಚ್ಚು ಜನರನ್ನ ಸೇರಿಸಿ ಯಶಸ್ವಿ ಮಾಡಲು ದೋಸ್ತಿ ನಾಯಕರು ನಿರ್ಧರಿಸಿದ್ದಾರೆ. ಅಂದು ಸಂಜೆ 6 ಗಂಟೆಗೆ ಮಂಗಳೂರಿಗೆ ಆಗಮಿಸಿ ಬೃಹತ್ ರೋಡ್ ಶೋ (Road Show) ನಡೆಸಲಿದ್ದಾರೆ. ಮಂಗಳೂರಿನ ನಾರಾಯಣ ಗುರು ಸರ್ಕಲ್ ನಿಂದ ನವಭಾರತ ವೃತ್ತದವರೆಗೆ 1.5 ಕಿ.ಮೀ ವರೆಗೆ ಮೋದಿಯವರು ರೋಡ್ ಶೋ ನಡೆಸಲಿದ್ದಾರೆ. ಮೋದಿಯವರ ಜತೆ ರೋಡ್ ಶೋ ವೇಳೆ ಪಕ್ಷದ ಅಭ್ಯರ್ಥಿ ಮಾತ್ರ ಇರುವಂತೆ ಸೂಚಿಸಲಾಗಿದೆ.
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ…
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಸಂಕ್ರಾಂತಿ ಸಂಭ್ರಮ ವಿಶೇಷ ಕಾರ್ಯಕ್ರಮ…
ನಾಗರಿಕತೆ ಬೆಳವಣಿಗೆ, ಅಭಿವೃದ್ಧಿ ಅಂದರೆ ವ್ಯಕ್ತಿತ್ವಗಳೂ ಬೆಳೆಯಬೇಕು. ಅಭಿವೃದ್ಧಿಯ ಸೂಚ್ಯಂಕವೇ ವ್ಯಕ್ತಿತ್ವದ ಬೆಳವಣಿಗೆ…