ದೇಶದಲ್ಲಿ ಕರ್ನಾಟಕ-ಕೇರಳ ಪ್ರಮುಖವಾದ ಅಡಿಕೆ ಬೆಳೆಯುವ ಪ್ರದೇಶಗಳು. ಈಚೆಗೆ ತಮಿಳುನಾಡು, ಆಂಧ್ರಪ್ರದೇಶ ಮಾತ್ರವಲ್ಲ ಈಶಾನ್ಯ ರಾಜ್ಯಗಳಲ್ಲೂ ಅಡಿಕೆ ಪ್ರಮುಖ ಬೆಳೆಯಾಗುತ್ತಿದೆ. ಈಗ ಈಶಾನ್ಯ ರಾಜ್ಯಗಳಲ್ಲಿ ಅಡಿಕೆ ಕಳ್ಳಸಾಗಾಣಿಕೆಯೇ ಬಹುದೊಡ್ಡ ಸವಾಲು. ಅಡಿಕೆ ಕಳ್ಳಸಾಗಾಣಿಕೆಯ ಕಾರಣದಿಂದ ಅಲ್ಲಿನ ಅಡಿಕೆ ಧಾರಣೆ ಕುಸಿತವಾಗಿದೆ. ಹೀಗಾಗಿ ಈಗ ಚುನಾವಣೆಯ ವೇಳೆ ಅಲ್ಲಿನ ಅಭ್ಯರ್ಥಿಗಳಿಗೆ ಅಡಿಕೆ ಕಳ್ಳಸಾಗಾಣಿಕೆಯೇ ಒಂದು ಇಶ್ಯೂ ಆಗಿದೆ. ಈಗ ಕೃಷಿಕರು ಪ್ರಶ್ನಿಸುತ್ತಿದ್ದಾರೆ.
ಅಡಿಕೆ ಅಕ್ರಮ ಸಾಗಾಟದ ಸಮಸ್ಯೆ ಈಗ ಗಂಭೀರ ಸ್ವರೂಪದ ತಿರುವು ಪಡೆದುಕೊಳ್ಳುತ್ತಿರುವಂತೆ ಕಾಣುತ್ತಿದೆ. ಈ ಕುರಿತು ಮೇಘಾಲಯ ಸರ್ಕಾರ ಮೌನ ವಹಿಸಿರುವುದನ್ನು ಕೆಲವು ರೈತರು ಪ್ರಶ್ನಿಸಿದ್ದಾರೆ. ಮ್ಯಾನ್ಮಾರ್‌ನಿಂದ ಬಾಂಗ್ಲಾದೇಶದ ಮೂಲಕ ಅಕ್ರಮ ಅಡಿಕೆ ಸಾಗಾಟವು ಮೇಘಾಲಯದ ಕೆಲವು ಪ್ರದೇಶದ ಕೃಷಿಕರನ್ನು ಹಾಗೂ ವ್ಯಾಪಾರಿಗಳ ಮೇಲೂ ಪರಿಣಾಮ ಬೀರಿದೆ.ಹಲವು ಸಮಯಗಳಿಂದ ಈ ಕಳ್ಳಸಾಗಾಣಿಕೆಯಾಗುತ್ತಿದ್ದರೂ ಧಾರಣೆ ಕುಸಿತದ ಕಾರಣದಿಂದ ಅಡಿಕೆ ಪ್ರಮುಖ ಬೆಳೆಯಾಗಿರಲಿಲ್ಲ. ಆದರೆ ಈಚೆಗೆ ಕೆಲವು ಸಮಯಗಳಿಂದ ಧಾರಣೆ ಏರಿಕೆಯಾದ ಕಾರಣ ಅಡಿಕೆ ಪ್ರಮುಖ ಬೆಳೆಯಾಗುತ್ತಿದೆ. ಹೀಗಾಗಿ ಅಡಿಕೆ ಕಳ್ಳಸಾಗಾಣಿಕೆ ತಡೆಯಲು ಮೇಘಾಲಯದ , ತ್ರಿಪುರಾದ ಕೃಷಿಕರು ಒತ್ತಾಯ ಮಾಡುತ್ತಿದ್ದಾರೆ.
ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಪನ್ಸೆಂಗ್ ಬಿ ಮಾರಾಕ್ ಅಡಿಕೆ ಕಳ್ಳಸಾಗಾಣಿಕೆ ಬಗ್ಗೆ ಸರ್ಕಾರ ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಹೆಚ್ಚಿನ ಸಂಖ್ಯೆಯ ಜನರು ತಮ್ಮ ಅಡಿಕೆ ಬೆಳೆಯನ್ನು ಅವಲಂಬಿಸಿದ್ದಾರೆ. ಆದರೆ ಕಳ್ಳಸಾಗಾಣಿಕೆಯು ಇಲ್ಲಿನ ಕೃಷಿಕರ ಮೇಲೆ ಪರಿಣಾಮ ಬೀರುತ್ತಿದೆ, ಹಾಗಿದ್ದರೂ ಸರ್ಕಾರ, ಜನಪ್ರತಿನಿಧಿಗಳು ಮಾತನಾಡುತ್ತಿಲ್ಲ ಎಂದು ಹೇಳಿದ್ದಾರೆ. ಸ್ಥಳೀಯರು ಎದುರಿಸುತ್ತಿರುವ ಸಂಕಷ್ಟದ ಅರಿವಿದ್ದರೂ ಕಳ್ಳ ವ್ಯಾಪಾರವನ್ನು ಮುಂದುವರೆಸಿದ್ದಾರೆ, ರಾಜಕೀಯ ಪಕ್ಷಗಳು ಸೇರಿದಂತೆ ಅನೇಕ ಜನರು ಕಳ್ಳಸಾಗಣೆಯ ವಿಷಯವನ್ನು ಎತ್ತಿದ್ದಾರೆ ಆದರೆ ಸಚಿವರು ಈ ವಿಷಯದ ಬಗ್ಗೆ ಮೌನ ವಹಿಸಿದ್ದಾರೆ ಎಂದು ದೂರಿದ್ದಾರೆ.
The issue of illegal Arecanut from Myanmar through Bangladesh has literally shaken the entire Meghalaya with many complaining that the same was affecting the entire trade.
Source : TST News
ಬಂಗಾಳಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮದಿಂದ ಮುಂಗಾರು ಆಗಮನ ನಿರೀಕ್ಷೆಗಿಂತಲೂ ಮೊದಲೇ ಆಗಲಿದೆ. ಜೊತೆಗೆ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಅಡಿಕೆ ಹಾಳೆ ತಟ್ಟೆಯ ನಿಷೇಧವು ಅಡಿಕೆ ಕೃಷಿಗೆ ನೇರವಾಗಿ ಮಾತ್ರವಲ್ಲ, ಪರೋಕ್ಷವಾಗಿ ಸತತ…
ತಿರುಗಾಟವು ಜ್ಞಾನವೃದ್ಧಿಗೆ ಹೇತು. ಓಡಾಡದವನ ಜ್ಞಾನಕ್ಕೆ ಉಸಿರು ಇರುವುದಿಲ್ಲ. ತಂತ್ರಜ್ಞಾನದ ವಾಯುವೇಗದ ಕಾಲಘಟ್ಟದಲ್ಲಿ…
ದೆಹಲಿಯಲ್ಲಿ ಆಯೋಜಿಸಿದ್ದ 58ನೇ ಜ್ಞಾನಪೀಠ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ, ರಾಷ್ಟ್ರಪತಿ ದ್ರೌಪದಿ ಮುರ್ಮು…
ಮುಂದಿನ 5 ದಿನಗಳ ಕಾಲ ಕೇರಳದಲ್ಲಿಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ…