ರೇಷ್ಮೆ ಉದ್ಯಮ ಗ್ರಾಮೀಣ ಪ್ರದೇಶದ ರೈತರ ಆರ್ಥಿಕಾಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ

August 29, 2024
7:57 PM

ರೇಷ್ಮೆ ಉದ್ಯಮ ಗ್ರಾಮೀಣ ಪ್ರದೇಶದ ರೈತರ ಆರ್ಥಿಕಾಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಲಕ್ಷಾಂತರ ಜನರಿಗೆ ಉದ್ಯೋಗ ಒದಗಿಸಿದೆ. ಭಾರತ ಎರಡನೇ ಅತಿದೊಡ್ಡ ರೇಷ್ಮೆ ಉತ್ಪಾದಕ ದೇಶವಾಗಿದೆ ಎಂದು ಸೆಂಟ್ರಲ್ ಸಿಲ್ಕ್ ಬೋರ್ಡ್ ತಾಂತ್ರಿಕ ನಿರ್ದೇಶಕ ಮಂಥಿರಾ ಮೂರ್ತಿ ಹೇಳಿದರು.

ಕೇಂದ್ರ ರೇಷ್ಮೆ ಮಂಡಳಿ ಬೆಂಗಳೂರಿನಲ್ಲಿ ರೇಷ್ಮೆ ಕೃಷಿಗೆ ಸಂಬಂಧಿಸಿದಂತೆ ನಡೆದ ರಾಷ್ಟ್ರೀಯ ಮಟ್ಟದ ಕೈಗಾರಿಕೋದ್ಯಮಿಗಳ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.  ಸೆಂಟ್ರಲ್ ಸಿಲ್ಕ್ ಬೋರ್ಡ್ ನ ಸದಸ್ಯ ಕಾರ್ಯದರ್ಶಿ ಮಾತನಾಡಿ ಮಂಡಳಿಯು ದೇಶದಲ್ಲಿ ರೇಷ್ಮೆ ಕೃಷಿಯಲ್ಲಿ ತನ್ನದೇ ಆದ ತಾಂತ್ರಿಕ ನೈಪುಣ್ಯತೆ ಹೊಂದಿದ್ದು, ವಿವಿಧ ರೀತಿಯ ಸಂಶೋಧನೆಗಳನ್ನು ನಡೆಸುತ್ತಿದೆ. ಅಂತರಾಷ್ಟ್ರೀಯ ಮಾರುಕಟ್ಟೆಗೆ ತಮ್ಮ ಉತ್ಪನ್ನಗಳನ್ನು ಪರಿಚಯಿಸುವ ಮೂಲಕ ರೇಷ್ಮೆ ಕೃಷಿಯನ್ನು ಮತ್ತೊಂದು ಹಂತಕ್ಕೆ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.

ಸಂಶೋಧಕ ಅರುಣ್, ಹಿಪ್ಪು ನೇರಳೆಗೆ ಮಣ್ಣಿನಿಂದ ಬರುವ ರೋಗಗಳನ್ನು ತಡೆಗಟ್ಟಲು ಮಂಡಳಿಯಿಂದ ‘ಮಿಸ್ಟರ್ ಪ್ರೊ’ ಎಂಬ ದ್ರಾವಣವನ್ನು ಅಭಿವೃದ್ಧಿಪಡಿಸಲಾಗಿದೆ. ಇದರಿಂದ ಹಿಪ್ಪನೇರಳೆ ಗಿಡಕ್ಕೆ ಬರುವ ರೋಗಗಳು ನಿವಾರಣೆಯಾಗಲಿವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ದೇಶದ ವಿವಿಧ ರಾಜ್ಯಗಳ ಉದ್ಯಮಿಗಳು ಹಾಗೂ ರೇಷ್ಮೆ ಕೃಷಿಕರು ಭಾಗವಹಿಸಿದ್ದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ದರ ಇಳಿಯುತ್ತದೆ, ಕೂಲಿ ಏರುತ್ತದೆ ; ಬೆಳೆಗಾರನಿಗೆ ಉಳಿಯುವುದೇನು?
October 4, 2026
6:58 AM
by: ಪ್ರಬಂಧ ಅಂಬುತೀರ್ಥ
ಕಸೂತಿ ಕಲಿತು ಸ್ವಾವಲಂಬನೆಯತ್ತ ಗ್ರಾಮೀಣ ಮಹಿಳೆಯರು
October 4, 2026
6:47 AM
by: ದ ರೂರಲ್ ಮಿರರ್.ಕಾಂ
ಕರ್ನಾಟಕದಲ್ಲಿ ಬರದ ಹೊಡೆತ – ಬೆಳೆ ನಷ್ಟ ₹60 ಸಾವಿರ ಕೋಟಿವರೆಗೆ ಸಾಧ್ಯತೆ
October 4, 2026
6:37 AM
by: ದ ರೂರಲ್ ಮಿರರ್.ಕಾಂ
ದಾಖಲೆಗಳಿಲ್ಲದೆ ಜಾನುವಾರು ಸಾಗಿಸಿದ ಮಾತ್ರಕ್ಕೆ ವಧೆಗಾಗಿ ಸಾಗಿಸಲಾಗುತ್ತಿದೆ ಎಂದು ಊಹಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್
October 4, 2026
6:31 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror