#RakshaBandhan | ಪ್ರಧಾನಿ ಮೋದಿಗೆ ರಾಖಿ ಕಟ್ಟಿದ ಪಾಕಿಸ್ತಾನಿ ಸಹೋದರಿ | ಮತ್ತೊಮ್ಮೆ ಭಾರತದ ಪ್ರಧಾನಿಯಾಗಲಿ ಎಂದು ಹಾರೈಕೆ |

August 30, 2023
1:06 PM
ಪ್ರಧಾನಿ ಮೋದಿಯವರ ಸುರಕ್ಷತೆಗಾಗಿ ರಾಖಿ ಕಟ್ಟಿದ್ದಾರೆ ಸಹೋದರಿ ಖಮರ್ ಜಹಾನ್. ಅದರಲ್ಲಿ ಒಂದು ಕಣ್ಣನ್ನು ಸಹ ಮಾಡಲಾಗಿದ್ದು, ಇದರಿಂದ ತನ್ನ ಸಹೋದರನನ್ನು ದುಷ್ಟರಿಂದ ರಕ್ಷಿಸಬಹುದು ಎನ್ನುವುದು ನಂಬಿಕೆ. ಮೋದಿ ಅವರಿಗೆ ವಿಶೇಷವಾಗಿ ಕೆಂಪು ಬಣ್ಣದ ರಾಖಿ ಮಾಡಿದ್ದೇನೆ. ಕೆಂಪು ಬಣ್ಣವನ್ನು ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ ಎಂದು ಖಮರ್ ಜಹಾನ್ ಹೇಳಿದ್ದಾರೆ.

ಭಾರತದಲ್ಲಿ ಸಹೋದರ, ಸಹೋದರಿ ಸಂಬಂಧದ ದ್ಯೋತಕವಾಗಿ ರಕ್ಷಾ ಬಂಧನ #RakshaBandhan ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ಪ್ರಧಾನಿಗಳು ಈ ಹಬ್ಬಕ್ಕೆ ವಿಶೇಷ ಸ್ಥಾನ ಮಾನವನ್ನು ನೀಡಿದ್ದಾರೆ. ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರ ಪಾಕಿಸ್ತಾನಿ ಸಹೋದರಿ ಖಮರ್ ಜಹಾನ್ ರಕ್ಷಾ ಬಂಧನ ಹಿನ್ನೆಲೆ ದೆಹಲಿ ತಲುಪಿದ್ದಾರೆ.  

ಪಾಕಿಸ್ತಾನದಿಂದ ಬಂದು ಅಹಮದಾಬಾದ್‌ನಲ್ಲಿ ನೆಲೆಸಿರುವ ಕಮರ್ ಜಹಾನ್ ಅವರು ಕಳೆದ ಹಲವು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಖಿ ಕಟ್ಟುತ್ತಿದ್ದಾರೆ. ಕಳೆದ  3 ವರ್ಷಗಳ ನಂತರ ರಾಖಿ ಕಟ್ಟಲು ದೆಹಲಿಗೆ ಬಂದಿದ್ದೇನೆ ಮತ್ತು ಪ್ರಧಾನಿ ಮೋದಿಗೆ ತನ್ನ ಕೈಯಿಂದಲೇ ರಾಖಿ ಕಟ್ಟಿದ್ದೇನೆ ಎಂದು ಕಮರ್ ಜಹಾನ್ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಮೋದಿ ವಿಶ್ವಗುರುವಾಗಿ ಹೊರಹೊಮ್ಮಿದ್ದಾರೆ. ನರೇಂದ್ರ ಮೋದಿಯವರ ದೀರ್ಘಾಯುಷ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ. ಮತ್ತು 2024 ರಲ್ಲಿ ಅವರು ಮತ್ತೊಮ್ಮೆ ಭಾರತದ ಪ್ರಧಾನಿಯಾಗಲಿ ಎಂದು ಹಾರೈಸುತ್ತೇನೆ ಎಂದು ಖಮರ್‌ ಹೇಳಿದ್ದಾರೆ.

ಖಮರ್ ಜಹಾನ್ ಕರಾಚಿಯಿಂದ ತನ್ನ ತಾಯಿಯೊಂದಿಗೆ ತನ್ನ ಸಂಬಂಧಿಕರನ್ನು ಭೇಟಿ ಮಾಡಲು ಭಾರತಕ್ಕೆ ಬಂದಿದ್ದರು. ಮತ್ತು ನಂತರ ಇಲ್ಲಿಯೇ ಮದುವೆಯಾಗಿ ವೈವಾಹಿಕ ಜೀವನ ಆರಂಭಿಸಿದ್ದಾರೆ. ನಾನು ಪಾಕಿಸ್ತಾನದಲ್ಲಿಲ್ಲ ಆದರೆ ಭಾರತದಲ್ಲಿರುವುದು ನನ್ನ ಅದೃಷ್ಟ ಎಂದು ನಾನು ಭಾವಿಸುತ್ತೇನೆ, ಇಲ್ಲಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಎನ್ನುತ್ತಾರೆ ಅವರು.

Source: ANI

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಎತ್ತುಗಳಿಂದ ಡ್ರೋನ್‌ವರೆಗೆ… ಇದು ಭಾರತದ ಕೃಷಿಯ 79 ವರ್ಷಗಳ ಪಯಣ..!
August 15, 2026
7:42 AM
by: ದ ರೂರಲ್ ಮಿರರ್.ಕಾಂ
ತೀವ್ರ ವಿರೋಧದ ಹಿನ್ನೆಲೆ – ರಾಜ್ಯದಲ್ಲಿ ಗುಟ್ಕಾ ನಿಷೇಧ ಹಿಂತೆಗೆದುಕೊಳ್ಳಲು ಸರ್ಕಾರ ನಿರ್ಧಾರ – ಹೊರಬೀಳದ ಅಧಿಕೃತ ಆದೇಶ..!
August 15, 2026
7:18 AM
by: ದ ರೂರಲ್ ಮಿರರ್.ಕಾಂ
ಗುಟ್ಕಾ–ಪಾನ್‌ಮಸಾಲಾ ನಿಷೇಧ : ಅಡಿಕೆ ಬೆಳೆಗಾರನ ಮುಂದಿರುವ ನಿಜವಾದ ಪ್ರಶ್ನೆ ಏನು?
August 14, 2026
7:14 AM
by: ಮಹೇಶ್ ಪುಚ್ಚಪ್ಪಾಡಿ
ಹವಾಮಾನ ವರದಿ | 13- 08-2026 | ಕರ್ನಾಟಕದಲ್ಲಿ ಮಳೆ ಮುಂದುವರಿಕೆ| ಸುಳ್ಯ, ಘಟ್ಟದ ಕೆಳಭಾಗದಲ್ಲಿ ಮಧ್ಯಾಹ್ನದ ಬಳಿಕ ಹೆಚ್ಚು ಮಳೆ ಸಾಧ್ಯತೆ
August 13, 2026
2:01 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror