ಕ್ಯಾಂಪ್ಕೋ ನೇತೃತ್ವದಲ್ಲಿ ಅಡಿಕೆ ಕೌಶಲ್ಯ ಪಡೆ ಸಜ್ಜಾಗುತ್ತಿದೆ. ಕಳೆದ ಬಾರಿ ಆರಂಭವಾದ ಅಡಿಕೆ ಕೌಶಲ್ಯ ಪಡೆ ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿ ದೋಟಿಯ ಮೂಲಕ ಅಡಿಕೆ ಕೊಯ್ಲು ಹಾಗೂ ಔಷಧಿ ಸಿಂಪಡಣೆಯ ಬಗ್ಗೆ ತರಬೇತಿ ಶಿಬಿರ ಆಯೋಜಿಸಿದೆ. ಮೂರು ದಿನಗಳ ಕಾಲ ವಿಟ್ಲದಲ್ಲಿ ಈ ಶಿಬಿರ ನಡೆಯಲಿದೆ.
ವಿಟ್ಲದ ಸಿಪಿಸಿಆರ್‌ಐ ವಠಾರದಲ್ಲಿ ಕ್ಯಾಂಪ್ಕೋ ನೇತೃತ್ವದಲ್ಲಿ ಅಡಿಕೆ ಪತ್ರಿಕೆ, ಸಿಪಿಸಿಆರ್‌ಐ ಹಾಗೂ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಆಶ್ರಯದಲ್ಲಿ ಆಯೋಜನಗೊಂಡ ಅಡಿಕೆ ಕೌಶಲ್ಯ ಪಡೆಯ ಫೈಬರ್‌ದೋಟಿ ಮೂಲಕ ಅಡಿಕೆ ಕೊಯ್ಲು ಮತ್ತು ಸಿಂಪಡಣೆ ತರಬೇತಿ ಶಿಬಿರದಲ್ಲಿ 19 ಮಂದಿ ಶಿಬಿರಾರ್ಥಿಗಳು ಇದ್ದಾರೆ. ಪೈಬರ್ ದೋಟಿಯ ಮೂಲಕ ಅಡಿಕೆ ಕೊಯ್ಲು ಮಾಡುವ ವಿಧಾನಗಳು ಹಾಗೂ ದೋಟಿಯನ್ನು ಸುಲಭವಾಗಿ ಆಧರಿಸುವ ಹಾಗೂ ತಾಂತ್ರಿಕ ವಿಧಾನಗಳನ್ನು ತಿಳಿಸಿಕೊಡಲಾಗುತ್ತಿದೆ. ಅದರ ಜೊತೆಗೆ ವಿದ್ಯುತ್ ಅವಘಡ ತಪ್ಪಿಸುವುದು , ಸೂಕ್ತ ಮುಂಜಾಗ್ರತಾ ಕ್ರಮಗಳು ಇತ್ಯಾದಿಗಳನ್ನು ತಿಳಿಸಲಾಗುತ್ತಿದೆ. ವಿಶೇಷವಾಗಿ ತರಬೇತಿ ನೀಡಲು ಉತ್ತರ ಕನ್ನಡ ಜಿಲ್ಲೆಯ ಮುರೂರು ಕಲ್ಲಬ್ಬೆಯ ರಾಜೇಶ್‌ಭಟ್, ಆರ್‌ಜಿ ಹೆಗಡೆ , ರಾಜು ಶೆಟ್ಟಿ, ರಮೇಶ್ ಭಟ್ ಆಗಮಿಸಿದ್ದಾರೆ. ಅವರ ಜೊತೆಗೆ ಸ್ಥಳೀಯವಾಗಿ ಕೆಲವು ವರ್ಷಗಳಿಂದ ಫೈಬರ್ ದೋಟಿ ಬಳಕೆ ಮಾಡುತ್ತಿರುವ ಮೈಕೆ ಗಣೇಶ್ ಭಟ್ ಅವರೂ ಇದ್ದಾರೆ.
ದೋಟಿ ಬಳಕೆಯ ವಿಧಾನಗಳಲ್ಲಿ ಪ್ರಮುಖವಾಗಿ ದೈಹಿಕ ಶ್ರಮ ಕಡಿಮೆಯಾಗುವಂತೆ ಹಾಗೂ ಕತ್ತು ನೋವು ಇತ್ಯಾದಿಗಳಿಂದ ದೂರ ಇರುವ ಬಗ್ಗೆಯೂ ಮಾಹಿತಿ ನೀಡಲಾಗುತ್ತಿದೆ. ಪೈಬರ್ ದೋಟಿಯು ಮುಂದಿನ ದಿನಗಳಲ್ಲಿ ಅನಿವಾರ್ಯವಾಗುವ ಸ್ಥಿತಿ ಅಡಿಕೆ ಬೆಳೆಗಾರರಿಗೆ ಬರಲಿದೆ. ಇದಕ್ಕಾಗಿ ಸೂಕ್ತ ರೀತಿಯ ತರಬೇತಿ ಅಗತ್ಯವಾಗಿದೆ ಎನ್ನುವುದು ಅಭಿಪ್ರಾಯವಾಗಿದೆ. ಶಿಬಿರದಲ್ಲಿ ಯುವಕರೇ ಹೆಚ್ಚಾಗಿ ಭಾಗವಹಿಸಿದ್ದು ಸೀಮಿತ ಜನರಿಗೆ ಮಾತ್ರಾ ಅವಕಾಶ ಮಾಡಲಾಗಿತ್ತು. ಸುಮಾರು 50 ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಅದರಲ್ಲಿ 20 ಜನ ಶಿಬಿರಾರ್ಥಿಗಳಿಗೆ ಮಾತ್ರವೇ ಈ ಬಾರಿ ಅವಕಾಶ ಲಭ್ಯವಾಗಿದೆ. ಮುಂದಿನ ದಿನಗಳಲ್ಲಿ ಇಂತಹ ತಾಂತ್ರಿಕ ಶಿಬಿರಗಳು ಹಳ್ಳಿಗಳಲ್ಲಿ ಆರಂಭವಾಗಬೇಕಿದೆ.
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…