Advertisement
ಅನುಕ್ರಮ

ಕೌಶಲ್ಯಾಭಿವೃದ್ಧಿ ಮತ್ತು ಸ್ವಾವಲಂಬನೆ : ಯುವಜನತೆಗೆ ಕಾಲದ ಕರೆಯೇ?

Share

“ಉತ್ತಿಷ್ಠತ ಜಾಗ್ರತ ಪ್ರಾಪ್ಯ ವರಾನ್ನಿಬೋಧತ”

ಎದ್ದು ನಿಲ್ಲಿ, ಎಚ್ಚರವಾಗಿರಿ, ಗುರಿ ತಲುಪುವವರೆಗೆ ನಿಲ್ಲಬೇಡಿ ಎಂಬ ಉಪನಿಷತ್ತಿನ ಈ ಕರೆಯು ಇಂದು ನಮ್ಮ ಯುವಸಮಾಜಕ್ಕೆ ಇನ್ನಷ್ಟು ಪ್ರಸ್ತುತವಾಗಿದೆ. ಏಕೆಂದರೆ ಇಂದಿನ ಸಮಾಜದಲ್ಲಿ ಶಿಕ್ಷಣ ಹೆಚ್ಚಾಗಿದೆ; ಆದರೆ ಉದ್ಯೋಗಾರ್ಹತೆ ಕುಸಿದಿದೆ. ಪದವಿಗಳ ಸಂಖ್ಯೆ ಹೆಚ್ಚಾದರೂ, ಬದುಕನ್ನು ಕಟ್ಟಿಕೊಳ್ಳುವ ಕೌಶಲ್ಯಗಳು ವಿರಳವಾಗಿವೆ. ಈ ವೈರುಧ್ಯದ ಮಧ್ಯೆ ಕೌಶಲ್ಯಾಭಿವೃದ್ಧಿ ಮತ್ತು ಸ್ವಾವಲಂಬನೆ ಎಂಬುದು ಕೇವಲ ನೀತಿ ಪದಗಳಾಗದೇ, ಕಾಲದ ತತ್ವಶಾಸ್ತ್ರೀಯ ಅಗತ್ಯವಾಗಿ ನಮ್ಮ ಮುಂದೆ ನಿಂತಿದೆ.

ಅಂಕಗಳಾಚೆ ಇರುವ ಶೂನ್ಯತೆ – ಸವಾಲುಗಳ ವಾಸ್ತವ : ನಮ್ಮ ಶಿಕ್ಷಣ ವ್ಯವಸ್ಥೆ ಬಹುಪಾಲು ಕಾಲ ಅಂಕಗಳು ಮತ್ತು ಪ್ರಮಾಣಪತ್ರಗಳ ಸುತ್ತಲೇ ಸುತ್ತಿಕೊಂಡಿದೆ.

“ಶಿಕ್ಷಣಂ ನಾಮ ಕೇವಲಂ ಪುಸ್ತಕಜ್ಞಾನಂ ನ ಭವತಿ” ಎಂಬ ಪ್ರಾಚೀನ ಚಿಂತನೆಯಂತೆ, ಶಿಕ್ಷಣವೆಂದರೆ ಪುಸ್ತಕದ ಜ್ಞಾನ ಮಾತ್ರವಲ್ಲ. ಆದರೆ ನಾವು ಜೀವನೋಪಯೋಗಿ ಕೌಶಲ್ಯಗಳನ್ನು ಕಡೆಗಣಿಸಿದ್ದೇವೆ.

ಇದರ ಪರಿಣಾಮವಾಗಿ ಇಂದು ಕಂಡುಬರುವ ಸವಾಲುಗಳು:

  • ಪದವಿದಾರರ ಹೆಚ್ಚಳ, ಉದ್ಯೋಗಾರ್ಹರ ಕೊರತೆ.
  • ಶಿಕ್ಷಣ ಮತ್ತು ಉದ್ಯಮಗಳ ನಡುವೆ ವಿಸ್ತಾರವಾದ ಅಂತರ.
  • ಗ್ರಾಮೀಣ ಯುವಕರಿಗೆ ಸಮಾನ ಅವಕಾಶಗಳ ಅಭಾವ.
  • “ಉದ್ಯೋಗ ಬೇಕು” ಎಂಬ ಮನೋಭಾವ; “ಉದ್ಯಮ ಮಾಡಬಹುದು” ಎಂಬ ಆತ್ಮವಿಶ್ವಾಸದ ಕೊರತೆ.
  • ವಿಫಲತೆಯ ಭಯದಿಂದ ಪ್ರಯತ್ನವನ್ನೇ ತ್ಯಜಿಸುವ ಪ್ರವೃತ್ತಿ

ಈ ಎಲ್ಲಾ ಸಮಸ್ಯೆಗಳ ಮೂಲದಲ್ಲಿ ಇರುವುದೇ – ಸ್ವಾವಲಂಬನೆಯ ಚಿಂತನೆಯ ಕೊರತೆ.

ಕರ್ಮದ ತತ್ವ ಮತ್ತು ಕೌಶಲ್ಯದ ದಾರಿ :  ಭಗವದ್ಗೀತೆ ಜೀವನಕ್ಕೆ ಕೊಟ್ಟ ದೊಡ್ಡ ಸಂದೇಶವೇ ಕರ್ಮದ ಗೌರವ. ಫಲದ ಭಯವಿಲ್ಲದೆ ಪ್ರಯತ್ನ ಮಾಡು ಎಂಬುದನ್ನು.ಕೌಶಲ್ಯಾಭಿವೃದ್ಧಿಯೂ ಹಾಗೇ. ಅದು ತಕ್ಷಣ ಫಲ ಕೊಡುವ ಮಾಯಾಜಾಲವಲ್ಲ; ನಿರಂತರ ಅಭ್ಯಾಸ ಮತ್ತು ಶ್ರಮದ ಫಲ. ಕಾರ್ಯಗಳು ಕನಸುಗಳಿಂದಲ್ಲ, ಶ್ರಮದಿಂದಲೇ ಸಿದ್ಧಿಸುತ್ತವೆ.

ಇಂದಿನ ಯುವಕರು ಮೊದಲು “ನನಗೆ ಏನು ಬರುತ್ತದೆ?” ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕು. ಆ ಉತ್ತರವೇ ಕೌಶಲ್ಯದ ಬೀಜ.

ಸ್ವಾವಲಂಬನೆ ಎಂಬುದು  ಆರ್ಥಿಕತೆಯಲ್ಲ, ಆತ್ಮಗೌರವದ ಪ್ರಶ್ನೆ.ಸ್ವಾವಲಂಬನೆ ಎಂದರೆ ಕೇವಲ ಸ್ವಂತ ಆದಾಯವಲ್ಲ; ಅದು ಆತ್ಮಗೌರವದ ಸ್ಥಿತಿ.“ಪರಾಶ್ರಯೇಣ ದೌರ್ಬಲ್ಯಂ, ಸ್ವಾಶ್ರಯೇಣ ತು ಪೌರುಷಮ್” – ಪರಾವಲಂಬನೆ ದುರ್ಬಲತೆ; ಸ್ವಾವಲಂಬನೆ ಶೌರ್ಯ.ವ್ಯಕ್ತಿಯೇ ತನ್ನ ಮಿತ್ರನೂ ಹೌದು , ಶತ್ರುವೂ ಹೌದು . ಸ್ವಾವಲಂಬನೆ ಮನಸ್ಸಿನಿಂದ ಆರಂಭವಾಗುತ್ತದೆ. ಅವಕಾಶಗಳು ಹೊರಗೆ ಸಿಗುತ್ತವೆ; ಆದರೆ ಆತ್ಮವಿಶ್ವಾಸ ಒಳಗೆ ಹುಟ್ಟಬೇಕು.

ಪರಿಹಾರಗಳು – ಚಿಂತನೆಯ ಪರಿವರ್ತನೆ : ಈ ಸವಾಲುಗಳಿಗೆ ಪರಿಹಾರವು ಕೇವಲ ಸರ್ಕಾರಿ ಯೋಜನೆಗಳಲ್ಲಿ ಇಲ್ಲ; ಅದು ಸಮಾಜದ ಸಮೂಹ ಚಿಂತನೆಗೆ ಸಂಬಂಧಿಸಿದದ್ದು.

  • ಶಾಲಾ ಹಂತದಲ್ಲಿಯೇ ಕೌಶಲ್ಯಾಧಾರಿತ ಕಲಿಕೆ.
  • ಸ್ಥಳೀಯ ಸಂಪನ್ಮೂಲಗಳಿಗೆ ತಕ್ಕ ತರಬೇತಿ.
  • ಶಿಕ್ಷಣ–ಉದ್ಯಮ ಸಹಭಾಗಿತ್ವ.
  • ಸ್ವಯಂ ಉದ್ಯಮಕ್ಕೆ ಸಾಲ, ಮಾರ್ಗದರ್ಶನ ಮತ್ತು ಮಾರುಕಟ್ಟೆ ಸಂಪರ್ಕ.
  • ವಿಫಲತೆಯನ್ನು ಅಪಮಾನವಲ್ಲ, ಪಾಠವೆಂದು ನೋಡುವ ಮನೋಭಾವ ಬೆಳೆಸಿಕೊಳ್ಳಬೇಕು..

ಗ್ರಾಮದ ಯುವಕನೊಬ್ಬ ತನ್ನ ಊರಿನ ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡಿ ಸ್ವಂತ ಉದ್ಯಮ ಆರಂಭಿಸಿದರೆ, ಆತ ಕೇವಲ ತನ್ನ ಬದುಕನ್ನೇ ಅಲ್ಲ ,ತನ್ನ ಊರಿನ ಆತ್ಮವಿಶ್ವಾಸವನ್ನೂ ಕಟ್ಟುತ್ತಾನೆ.

ಧನಾತ್ಮಕ ಚಿಂತನೆ – ಸಮಾಜದ ಭವಿಷ್ಯ : ಸತ್ಪ್ರಯತ್ನ ಮಾಡುವವನು ನಾಶವಾಗುವುದಿಲ್ಲ.ಈ ವಿಶ್ವಾಸವೇ ಯುವಕರನ್ನು ಮುನ್ನಡೆಸಬೇಕು. ಸ್ವಾವಲಂಬನೆ ವೈಯಕ್ತಿಕ ಯಶಸ್ಸಲ್ಲ; ಅದು ಸಮಾಜದ ಆರ್ಥಿಕ, ಸಾಂಸ್ಕೃತಿಕ ಮತ್ತು ನೈತಿಕ ಸ್ಥಿರತೆಯ ಮೂಲ.  ಅಂಕಗಳು ಜೀವನದ ಆರಂಭ ಮಾತ್ರ.  ಕೌಶಲ್ಯಗಳು ಜೀವನದ ದಿಕ್ಕು. ಸ್ವಾವಲಂಬನೆ ಎಂಬುದು ಜೀವನದ ಸಾಧನೆ.  ಆದ್ದರಿಂದ  ಶಿಕ್ಷಕರು ದಿಕ್ಕು ತೋರಬೇಕು, ಪೋಷಕರು ಧೈರ್ಯ ತುಂಬಬೇಕು, ಸಂಸ್ಥೆಗಳು ಅವಕಾಶ ಕಲ್ಪಿಸಬೇಕು,ಯುವಕರು ಎದ್ದು ನಿಲ್ಲಬೇಕು.

“ಸರ್ವೇ ಭವಂತು ಸುಖಿನಃ” ಎಂಬ ಮಹದಾಕಾಂಕ್ಷೆಯ ಸಾಕಾರಕ್ಕೆ  ಕೌಶಲ್ಯಾಭಿವೃದ್ಧಿ ಮತ್ತು ಸ್ವಾವಲಂಬನೆಯೇ ನಿಜವಾದ ಮಾರ್ಗ.

Skill development and self-reliance are essential for today’s youth to bridge the gap between education and employability. Building practical skills and entrepreneurial confidence can strengthen both individual dignity and the socio-economic stability of society.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಕುಮಾರಸುಬ್ರಹ್ಮಣ್ಯ ಮುಳಿಯಾಲ

ಕುಮಾರ ಸುಬ್ರಹ್ಮಣ್ಯ ಮುಳಿಯಾಲ ಅವರು, ಬೆಂಗಳೂರಿನ ಬಯೋ ಕ್ರಾಸ್ ಕೆಮ್, ಎಲ್ಎಲ್ ಪಿ  ಎಂಬ ಔಷಧಿ ಕಂಪೆನಿಯಲ್ಲಿ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ. ದ.ಕ. ಜಿಲ್ಲೆಯ ಪುತ್ತೂರಿನ ಸಮೀಪ ಹಿಂದಾರು ಎಂಬಲ್ಲಿ ಅಡಿಕೆ , ತೆಂಗು, ಕರಿಮೆಣಸು ಕೃಷಿ ಭೂಮಿ ಹೊಂದಿದ್ದಾರೆ. ಮೂಲತಃ ಅಡ್ಯನಡ್ಕ ಸಮೀಪದ ಮುಳಿಯಾಲದವರಾಗಿದ್ದು ಕೃಷಿ ಭೂಮಿ ಹೊಂದಿದ್ದು, ಕೃಷಿ ಚಿಂತನೆಗಳನ್ನು ಹೊಂದಿದ್ದಾರೆ.

Published by
ಕುಮಾರಸುಬ್ರಹ್ಮಣ್ಯ ಮುಳಿಯಾಲ

Recent Posts

ಹವಾಮಾನ ವರದಿ | 15-04-2026 | ಕರ್ನಾಟಕದಲ್ಲಿ ಬಿಸಿಗಾಳಿಯ ನಡುವೆ ಮಳೆಯ ಸುಳಿವು – ಏಪ್ರಿಲ್ 18 ರಿಂದ ಮಳೆ…!

ಕರ್ನಾಟಕದಲ್ಲಿ ಏಪ್ರಿಲ್ 18ರಿಂದ ಹಂತ ಹಂತವಾಗಿ ಮಳೆಯ ಚಟುವಟಿಕೆ ಆರಂಭವಾಗುವ ಸಾಧ್ಯತೆ ಇದೆ.…

2 hours ago

ವಿಷು ಹಬ್ಬದ ಅರ್ಥವೇನು ಗೊತ್ತಾ..? ಸೂರ್ಯ ಸಂಕ್ರಮಣದ ಈ ರಹಸ್ಯ ನಿಮ್ಮ ಜೀವನವೇ ಬದಲಾಯಿಸಬಹುದು..!

ವಿಷು ಹಬ್ಬವು ಸೂರ್ಯನ ಮೇಷ ಸಂಕ್ರಮಣದೊಂದಿಗೆ ಸಂಬಂಧಿಸಿದ ಆಧ್ಯಾತ್ಮಿಕ ಹಬ್ಬವಾಗಿದೆ. ವಿಷು ಕಣಿ…

8 hours ago

ಬೇಸಿಗೆ ಬಿತ್ತನೆ ಭರ್ಜರಿ ಏರಿಕೆ..! 64 ಲಕ್ಷ ಹೆಕ್ಟೇರ್ ದಾಟಿದ ಕೃಷಿ ವ್ಯಾಪ್ತಿ, 0.77 ಲಕ್ಷ ಹೆಕ್ಟೇರ್ ಹೆಚ್ಚಳ

ಈ ವರ್ಷ ಬೇಸಿಗೆ ಬಿತ್ತನೆ 64 ಲಕ್ಷ ಹೆಕ್ಟೇರ್ ದಾಟಿದ್ದು, ಕಳೆದ ವರ್ಷಕ್ಕಿಂತ…

8 hours ago

ಮುಂದಿನ 5 ದಿನ ತಾಪಮಾನ ಏರಿಕೆ ಎಚ್ಚರಿಕೆ ! ಉತ್ತರ-ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಬಿಸಿಗಾಳಿ ತೀವ್ರ

ಮುಂದಿನ ಐದು ದಿನಗಳಲ್ಲಿ ಉತ್ತರ ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚಾಗಲಿದೆ…

22 hours ago

ಹವಾಮಾನ ವರದಿ | 14-04-2026 | ಕರ್ನಾಟಕದಲ್ಲಿ ಉರಿಬಿಸಿಲು…! ಆದರೆ ಮಳೆಯೂ ಬರುತ್ತಿದೆ ! ಯಾವಾಗ ಗೊತ್ತಾ? – ಸದ್ಯ ರೈತರಿಗೆ ಸಲಹೆ ಏನು..?

ರಾಜ್ಯದಲ್ಲಿ ಬಿಸಿಲಿನ ತೀವ್ರತೆ ಮುಂದುವರಿದಿದ್ದು, ಏಪ್ರಿಲ್ 18ರಿಂದ ಮಳೆ ಆರಂಭವಾಗುವ ಸಾಧ್ಯತೆ ಇದೆ.…

1 day ago

ಇರಾನ್-ಇಸ್ರೇಲ್ ಯುದ್ಧದ ಪರಿಣಾಮ – ಮಾವಿನ ರಫ್ತು ಕುಸಿತ, ರೈತರಿಗೆ ಹೊಡೆತ | ಅಲ್ಫೋನ್ಸೊ ಬೆಲೆ ಅರ್ಧಕ್ಕೆ ಇಳಿಕೆ

ಇರಾನ್-ಇಸ್ರೇಲ್ ಯುದ್ಧದಿಂದ ಮಾವಿನ ರಫ್ತು ಕುಸಿತಗೊಂಡು ಬೆಲೆ ತೀವ್ರವಾಗಿ ಇಳಿಕೆಯಾಗಿದೆ. ರೈತರು ನಷ್ಟದಲ್ಲಿ…

1 day ago