ಮಳೆಗಾಲದ ಆರಂಭ | ರೈತರೇ ಎಚ್ಚರ ಹಾವುಗಳ ಓಡಾಟದ ಸಮಯ | ಶಿವಸುಬ್ರಹ್ಮಣ್ಯ ಕಲ್ಮಡ್ಕ ಅವರು ತೋಟದಲ್ಲಿ ಕಂಡ ಹಾವಿನ ಫೋಟೊ ಎಚ್ಚರಿಸಿದೆ |

May 23, 2022
10:15 AM
Special Report Summary
ಮಳೆಗಾಲದ ಆರಂಭಲ್ಲಿ  ಹಾವುಗಳ ಓಡಾಟ ಹೆಚ್ಚಿರುತ್ತದೆ. ರೈತರು ಈ ಸಮಯದಲ್ಲಿ ಸದಾ ಎಚ್ಚರಿಕೆ ವಹಿಸಬೇಕಾದ್ದು ಅಗತ್ಯ. ಪತ್ರಕರ್ತ ಶಿವಸುಬ್ರಹ್ಮಣ್ಯ ಕಲ್ಮಡ್ಕ ಅವರು ತಮಗಾದ ಅನುಭವ ಹೇಳಿದ್ದಾರೆ. ಪ್ರತಿ ವರ್ಷ ವಿಶ್ವದಾದ್ಯಂತ 81,000 ದಿಂದ 1,38,000 ಮಂದಿ ಹಾವು ಕಡಿತದಿಂದ ಸಾಯುತ್ತಿದ್ದಾರೆ. ಈ ಕಾರಣದಿಂದ ಮಳೆಗಾಲದ ಆರಂಭದಲ್ಲಿ ರೈತರನ್ನು ಎಚ್ಚರಿಸುವ ಕೆಲಸ “ದಿ ರೂರಲ್‌ ಮಿರರ್” ಮಾಡಿದೆ.

ಮಳೆಗಾಲದ ಆರಂಭದ ಹೊತ್ತು. ಬೇಸಗೆಯ ಕೊನೆಯ ಸಮಯ. ಪ್ರಕೃತಿ ಬದಲಾವಣೆ ಇರುತ್ತದೆ. ಮಳೆಯ ಆರಂಭಕ್ಕೆ ಭೂಮಿ ತಂಪಾದ ಕೂಡಲೇ ಒಮ್ಮೆಲೇ ತೋಟದಲ್ಲಿ ಕಾಡುಗಳು ಬೆಳೆಯುತ್ತವೆ. ಕಾಡಂಚಿನಲ್ಲೂ ಮರಗಳು, ಗಿಡಗಳು ಸೊಂಪಾಗಿ ಬೆಳೆಯುತ್ತವೆ. ತಂಪನ್ನೇ ಆಶ್ರಯಿಸುವ ಹಲವು ಪ್ರಾಣಿಗಳು ತಮ್ಮ ಬದುಕನ್ನು ಆರಂಭಿಸುತ್ತದೆ. ಅದೇ ಮಾದರಿಯಲ್ಲಿ ಓಡಾಟ ಆರಂಭಿಸುವವು ಸರಿಸೃಪಗಳು.  ಪರಿಸರದಲ್ಲೂ ಉರಗಗಳೂ ಬೇಕು. ಅವುಗಳ ಓಡಾಟ ಸಹಜವಾಗಿಯೇ ಇರುತ್ತದೆ. ಕೃಷಿಯೂ ಅಗತ್ಯ ಮನುಷ್ಯನ ಬದುಕಿಗೆ. ಈಗ ಮಳೆಗಾಲದ ಆರಂಭದಲ್ಲಿ ಅವುಗಳ ಓಡಾಟದ ವೇಳೆ ಕೃಷಿಕರು ಹಾಗೂ ನಾವೆಲ್ಲರೂ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಇದನ್ನು ಪತ್ರಕರ್ತ ಶಿವಸುಬ್ರಹ್ಮಣ್ಯ ಕಲ್ಮಡ್ಕ ಬಹಳ ಸುಂದರವಾಗಿ ಎಚ್ಚರಿಸಿದ್ದಾರೆ.

Advertisement
Advertisement

This slideshow requires JavaScript.

 ಶಿವಸುಬ್ರಹ್ಮಣ್ಯ ಕಲ್ಮಡ್ಕ ತಮ್ಮ ಪೇಸ್‌ ಬುಕ್‌ ವಾಲ್‌ನಲ್ಲಿ ಹೀಗೆ ಬರೆಯುತ್ತಾ ಎಚ್ಚರಿಸಿದ್ದಾರೆ, ತೋಟದಲ್ಲಿ ಕಂದಡಿ ಹಾವುಗಳಿವೆ ಜಾಗ್ರತೆ… ಎಂದು ಅಣ್ಣನ ಮಕ್ಕಳು ಆಗಾಗ ಎಚ್ಚರಿಸುತ್ತಿದ್ದರು. ಕಂದಡಿ ಹಾವು ಹರಿದಾಡುವ ದೃಶ್ಯ ವೀಡಿಯೋ ಮಾಡುವ ಅವಕಾಶವೂ ತೋಟದಲ್ಲೇ ನನಗೆ ಸಿಕ್ತು. ಆದರೆ ಕಂದಡಿ ಹಾವು ಕಚ್ಚುವ ಅಪಾಯದಿಂದ ಸ್ವಲ್ಪದರಲ್ಲೇ ಪಾರಾದೆ ಎಂದು ಈಗ ನಿಟ್ಟುಸಿರು ಬಿಡುತ್ತಿದ್ದೇನೆ. ಮಳೆ ಬಂದು ತೋಟಕ್ಕೆ ನೀರು ಹಾಕುವ ಅಗತ್ಯವಿಲ್ಲವೆಂದು ಸ್ಪಿಂಕ್ಲರ್ ಗಳನ್ನು ಒಂದೊಂದೇ ತೆಗೆದು ಇಡುತ್ತಿದ್ದೆ. ಕೆಲವೇ ಬಾಕಿ ಇತ್ತು. ಸ್ಪಿಂಕ್ಲರ್ ಒಂದನ್ನು ಪೈಪ್ ನಿಂದ ತೆಗೆಯಲು ಹತ್ತಿರ ಹೋಗಿ ಮುಟ್ಟುವಷ್ಟರಲ್ಲಿ ಏನೋ ಬಣ್ಣ ಕಾಣಿಸಿತು. ಮರು ಕ್ಷಣವೇ ಐದಾರು ಅಡಿ ದೂರ ನೆಗೆದು ಅಡಿಕೆ ಮರ ಹಿಡಿದುಕೊಂಡಿದ್ದೆ. ಬೆವರು ಇಳಿದಿತ್ತು!. ಕೆಲ ನಿಮಿಷ ಅಲ್ಲೇ ದಿಟ್ಟಿಸಿ ನೋಡಿದೆ. ಕಂದಡಿ ಹಾವಿಗೆ ಏನೂ ತೊಂದರೆ ಆಗಿಲ್ಲ ಎಂಬಂತೆ ಆರಾಮವಾಗಿತ್ತು.ನನ್ನ ಫೊಟೋ ಗ್ರಫಿ ಮನಸ್ಸು ಜಾಗೃತವಾಯಿತು. ಮನೆಗೆ ತೆರಳಿ, ಕ್ಯಾಮೆರಾ ದೊಡನೆ ವಾಪಸ್ ಬಂದೆ. ಹಾವು ಅಲ್ಲೇ ಇತ್ತು. ನನಗೆ ಕೆಲವು ಅತ್ಯುತ್ತಮ ಫೊಟೋ ಕೂಡಾ ಆಯಿತು! ರೈತರೇ, ಎಚ್ಚರಿಕೆ. ತೋಟದಲ್ಲಿ ಕೆಲಸ ಮಾಡುವಾಗ ಹಾವುಗಳ ಬಗ್ಗೆ ಗಮನ ಇರಲಿ. ಅಪಾಯ ತಂದೊಡ್ಡದಿರಿ. 

Advertisement

ಶಿವಸುಬ್ರಹ್ಮಣ್ಯ ಅವರು ತಮಗಾದ ಅನುಭವ ಹೇಳಿದ್ದಾರೆ. ತೋಟದಲ್ಲಿ  ಈಗ ಕೃಷಿಕರು ಕೆಲಸ ಆರಂಭ ಮಾಡುದ ಸಮಯ. ಇದೇ ವೇಳೆ ಪ್ರಾಣಿಗಳೂ ತಮ್ಮ ಬದುಕನ್ನು  ಗಟ್ಟಿ ಮಾಡಿಕೊಳ್ಳುವ ಸಮಯವಾದ್ದರಿಂದ ಕೃಷಿಕರು ಎಚ್ಚರದಿಂದ ಇರಬೇಕಾದ್ದು  ಅಗತ್ಯವಿದೆ. ಪರಿಸರದಲ್ಲಿ  ಎಲ್ಲವೂ ಸಮತೋಲನದಿಂದ ಇರಬೇಕಾಗುತ್ತದೆ. ಇದಕ್ಕಾಗಿ ಎಚ್ಚರಿಕೆಯೇ ಕೃಷಿಕರಿಗೆ ಅಗತ್ಯವಾಗಿದೆ.

ಸಾಮಾನ್ಯವಾಗಿ ಈಗ ಮಲೆನಾಡು ಅಥವಾ ಕೃಷಿ ಭೂಮಿಯಲ್ಲಿ ಪಿಟ್ ವೈಪರ್, ನಾಗರಹಾವು, ಕಟ್ಟುತೋಳ ಇತ್ಯಾದಿ ಹಾವುಗಳು ಕಂಡುಬರುತ್ತದೆ. ಎಲ್ಲಾ ಹಾವುಗಳು ವಿಷಕಾರಿ ಅಲ್ಲದೇ ಇದ್ದರೂ ಕೆಲವು ಮಾತ್ರವೇ ವಿಷಕಾರಿ ಹಾವುಗಳು. ಕೃಷಿಕರು ಹಾವುಗಳಿಗೆ ಏನೂ ಮಾಡದೇ ಇದ್ದರೂ ಕೆಲವೊಮ್ಮೆ ಭಯದಿಂದ ಹಾವುಗಳು ಕಚ್ಚಿ ಬಿಡುತ್ತದೆ.

Advertisement

ಕಳೆದ 20 ವರ್ಷಗಳಲ್ಲಿ ಭಾರತದಲ್ಲಿ 12 ಲಕ್ಷ ಮಂದಿ ಹಾವು ಕಡಿತದಿಂದ ಸಾವನ್ನಪ್ಪಿದ್ದಾರೆ. ಇವರಲ್ಲಿ ಅರ್ಧಕ್ಕಿಂತ ಹೆಚ್ಚಿನವರು 30-69 ವರ್ಷ ವಯೋಮಾನದವರು. ಕಾಲು ಭಾಗದಷ್ಟು ಮಕ್ಕಳು ಎಂದು ಅಧ್ಯಯನವೊಂದು ತಿಳಿಸಿದೆ. ರಸಲ್ಸ್ ವೈಪರ್ಸ, ಕ್ರೈಟ್ಸ್ ಮತ್ತು ಕೋಬ್ರಾ ಹಾವುಗಳ ಕಡಿತದಿಂದ ಬಹುತೇಕರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನುಳಿದ ಸಾವುಗಳು 12 ವಿವಿಧ ಜಾತಿಯ ಹಾವುಗಳ ಕಡಿತದಿಂದ ಸಂಭವಿಸಿವೆ. ಬಹುತೇಕ ಹಾವು ಕಡಿತದ ಘಟನೆಗಳು ಮಾರಣಾಂತಿಕವಾಗಲು ಕಾರಣ ತಕ್ಷಣದ ಚಿಕಿತ್ಸೆ ಆಗದೇ ಇರುವುದು  ಹಾಗೂ ನಿರ್ಲಕ್ಷ್ಯ. ಜೂನ್, ಸೆಪ್ಟೆಂಬರ್ ನಲ್ಲಿ ಹಾವಿನಿಂದ ಹೆಚ್ಚು ಸಾವು ಆಗಿರುವುದು  ವರದಿ ಹೇಳುತ್ತದೆ. ಪ್ರತಿ ವರ್ಷ ವಿಶ್ವದಾದ್ಯಂತ 81,000 ದಿಂದ 1,38,000 ಮಂದಿ ಹಾವು ಕಡಿತದಿಂದ ಸಾಯುತ್ತಿದ್ದಾರೆ. ಇದರ ಮೂರು ಪಟ್ಟು ಮಂದಿ ಬದುಕುಳಿದರೂ ಶಾಶ್ವತ ವಿಕಲತೆಯನ್ನು ಹೊಂದುತ್ತಾರೆ ಎಂಬುದು ಅಧ್ಯಯನ ವರದಿ.

ಇದಕ್ಕಾಗಿ ಈಗ ಗ್ರಾಮೀಣ ಭಾಗಗಳಲ್ಲಿ ಸುರಕ್ಷೆಯ ಅರಿವು ಮೂಡಿಸಬೇಕಿದೆ.  ಗ್ರಾಮೀಣ ಭಾಗದಲ್ಲಿ  ಮುಂಗಾರು ಆರಂಭದಿಂದ   ಹಾವು ಕಡಿತಕ್ಕೆ ಬಲಿಯಾಗುವ ಸಂಭವ ಬಹಳ ಹೆಚ್ಚಿದೆ. ಹಾಗಾಗಿ ಗ್ರಾಮೀಣ ಭಾರತದಲ್ಲಿ “ಹಾವುಗಳಿಂದ-ಸುರಕ್ಷೆ” ಪಡೆಯುವ ವಿಧಾನಗಳ ಬಗ್ಗೆ ಅರಿವು ಅಗತ್ಯವಿದೆ. ಇದಕ್ಕಾಗಿ ಇಲ್ಲಿ ರಬ್ಬರ್‌ ಟ್ಯಾಪಿಂಗ್‌, ತೋಟದ ಕೆಲಸ , ಗದ್ದೆ ಕೆಲಸದ ಸಂದರ್ಭದಲ್ಲಿ ಗಮ್ ಬೂಟ್ ಧರಿಸುವುದು, ಕೆಲಸದ ವೇಳೆ ಸೂಕ್ಷ್ಮವಾಗಿ ಗಮನಿಸುವುದು  ಅಗತ್ಯ.

Advertisement

ಒಂದು ವೇಳೆ ಕೆಲಸದ ವೇಳೆ ಹಾವು ಕಡಿತವಾದರೆ ತಕ್ಷಣವೇ ಭಯಗೊಳ್ಳಬೇಕಾದ ಅವಶ್ಯಕತೆಯೂ ಇಲ್ಲ. ಹಾವು ಕಡಿತವಾದರೆ ವಿಷದ ಹಾವೇ ಅಲ್ಲವೇ ಎಂಬುದು ಮೊದಲನೇ ಖಾತ್ರಿ, ಅದಾದ ಬಳಿಕ ವಿಷದ ಹಾವಾದರೆ ಎಷ್ಟು ವಿಷ ದೇಹಕ್ಕೆ ಪ್ರವೇಶವಾಗಿದೆ ಎಂಬುದರ ಮೇಲಿರುತ್ತದೆ. ಹೀಗಾಗಿ ಹಾವು ಕಚ್ಚಿದ ತಕ್ಷಣವೇ ಭಯಗೊಳ್ಳಬೇಕಾಗಿಲ್ಲ. ತಕ್ಷಣ ಚಿಕಿತ್ಸೆಯ ವ್ಯವಸ್ಥೆ ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ಹಾವು ಕಡಿತಕ್ಕೆ ಒಳಗಾದವರಲ್ಲಿ ಸುಸ್ತು, ದುರ್ಬಲತೆ, ರಕ್ತಸ್ರಾವ, ಉರಿ, ಊತ, ಮಾಂಸಖಂಡಗಳ ದೌರ್ಬಲ್ಯ ಉಂಟಾಗಬಹುದಾಗಿದೆ. ಹಾವು ಕಡಿತಕ್ಕೆ ಒಳಗಾದ ವ್ಯಕ್ತಿಯ ಜೊತೆಯಲ್ಲಿರುವವರು ರೋಗಿಗೆ ಮಾನಸಿಕ ಧೈರ್ಯ ತುಂಬುವುದು ಅತಿಮುಖ್ಯ. 70% ವಿಷಕಾರಿಯಲ್ಲದ ಹಾವುಗಳಿರುತ್ತವೆ ಎಂಬುದೂ ಹೆಚ್ಚು ಗಮನಿಸಬೇಕಾಗುತ್ತದೆ. ವಿಳಂಬ ಮಾಡದೆ ವೈದ್ಯರಲ್ಲಿಗೆ ತೆರಳುವುದು ಇಲ್ಲಿ ಮೊದಲನೇ ಕೆಲಸವಾಗಿರುತ್ತದೆ.

ಬರಹದ ಪ್ರೇರಣೆ :
ಶಿವಸುಬ್ರಹ್ಮಣ್ಯ ಕಲ್ಮಡ್ಕ

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

ಇದನ್ನೂ ಓದಿ

ಇತ್ತೀಚಿಗೆ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತಿದೆ : ಮಕ್ಕಳ ತೂಕ ಮತ್ತು ಎತ್ತರವನ್ನು ಹೆಚ್ಚಿಸುವ ಆಹಾರಗಳು
April 25, 2024
3:13 PM
by: The Rural Mirror ಸುದ್ದಿಜಾಲ
ಕೊನೆಗೂ ಗಾಂಧಿ ಕುಡಿಗಳ ಕ್ಷೇತ್ರ ಫಿಕ್ಸ್‌ : ರಾಯ್ ಬರೇಲಿಯಿಂದ ಪ್ರಿಯಾಂಕಾ, ಅಮೇಥಿಯಿಂದ ರಾಹುಲ್ ಸ್ಪರ್ಧೆ ಬಹುತೇಕ ಖಚಿತ
April 25, 2024
3:00 PM
by: The Rural Mirror ಸುದ್ದಿಜಾಲ
ಬರಗಾಲ ಎಫೆಕ್ಟ್‌ : ಗಗನಕ್ಕೇರಿದ ತರಕಾರಿ ದರ : ಕ್ಯಾರೆಟ್, ಬೀನ್ಸ್, ಮೆಣಸಿನಕಾಯಿ ಯಾವುದೂ ಮುಟ್ಟುವಂಗಿಲ್ಲ..
April 25, 2024
2:39 PM
by: The Rural Mirror ಸುದ್ದಿಜಾಲ
ಕರಾವಳಿ ಜಿಲ್ಲೆಯ ಕೃಷಿ ಕ್ಷೇತ್ರದ ಕಡೆಗೆ ಗಮನ | ಅಡಿಕೆ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಯತ್ನ | ಮಂಗಳೂರು ಬಿಜೆಪಿ ಅಭ್ಯರ್ಥಿ ಭರವಸೆ |
April 25, 2024
2:00 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror