ಸುದ್ದಿಗಳು

53,200 ದ್ವೇಷ ಭಾಷಣಗಳನ್ನು ಪತ್ತೆಹಚ್ಚಿದ ಫೇಸ್‌ಬುಕ್ …! |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಸಾಮಾಜಿಕ ಜಾಲತಾಣಗಳ ಬಳಕೆ ಈಚೆಗೆ ಹೆಚ್ಚಾಗಿದೆ. ಅದರಲ್ಲೂ ಪೇಸ್‌ಬುಕ್‌, ಟ್ವಿಟ್ಟರ್‌,ಇನ್‌ಸ್ಟಾಗ್ರಾಂ ಬಳಕೆಯಲ್ಲಿ ಯುವಜನತೆ ಮುಂದಿದ್ದಾರೆ. ಇಂದಿನ ಬಹುತೇಕ ಚರ್ಚೆಗಳೂ ಸಾಮಾಜಿಕ ಜಾಲತಾಣಗಳ ಮೂಲಕ ನಡೆದು ಬಹಿರಂಗ ಚರ್ಚೆಗೆ ಕಾರಣವಾಗುತ್ತಿದೆ. ಅದರಲ್ಲೂ ದ್ವೇಷ ಭಾಷಣ, ಚರ್ಚೆ, ಅತ್ಯಂತ ಕೆಟ್ಟ ಪದಪ್ರಯೋಗಗಳೂ ಇಲ್ಲೇ ಆಗುತ್ತವೆ. ಮೆಟಾ ಬಿಡುಗಡೆ ಮಾಡಿರುವ ವರದಿ ಪ್ರಕಾರ ಎಪ್ರಿಲ್‌ನಲ್ಲಿ ಫೇಸ್‌ಬುಕ್  53,200 ದ್ವೇಷ ಭಾಷಣಗಳನ್ನು ಪತ್ತೆಹಚ್ಚಿದೆ ಹಾಗೂ ಕ್ರಮ ಕೈಗೊಂಡಿದೆ.

Advertisement

ಮೆಟಾ ಬಿಡುಗಡೆ ಮಾಡಿರುವ ವರದಿ ಪ್ರಕಾರ ಈಚೆಗೆ  ಫೇಸ್‌ಬುಕ್‌ ಬಳಕೆ ಹೆಚ್ಚಾಗಿದೆ. ಅದರ ಜೊತೆಗೆ ಸುಮಾರು 37.82 ರಷ್ಟು ಫೇಸ್‌ಬುಕ್‌ ನಲ್ಲಿ ಹಾಗೂ ಶೇಕಡಾ 86 ರಷ್ಟು ಇನ್‌ಸ್ಟಾಗ್ರಾಮ್‌ನಲ್ಲಿ ಹಿಂಸಾತ್ಮಕ ಮತ್ತು ಪ್ರಚೋದಿಸುವ ವಿಷಯಗಳು ನಡೆದಿದೆ. ಮೇ 31 ರಂದು ಬಿಡುಗಡೆಯಾದ ವರದಿಯ ಪ್ರಕಾರ, ಫೇಸ್‌ಬುಕ್ ಏಪ್ರಿಲ್‌ನಲ್ಲಿ 53,200 ದ್ವೇಷ ಭಾಷಣಗಳನ್ನು ಪತ್ತೆಹಚ್ಚಿದೆ, ಇದು ಮಾರ್ಚ್‌ನಲ್ಲಿ ಪತ್ತೆಯಾದ 38,600 ಕ್ಕೆ ಹೋಲಿಸಿದರೆ 37.82 ಶೇಕಡಾ ಹೆಚ್ಚಾಗಿದೆ.

ಮಾರ್ಚ್‌ನಲ್ಲಿ ಇನ್ಸ್ಟಾಗ್ರಾಮ್ ನಲ್ಲಿ‌ 41,300 ಹಿಂಸಾಚಾರ ಮತ್ತು ಪ್ರಚೋದನೆ-ಸಂಬಂಧಿತ ವಿಷಯ ವರದಿಯಾಗಿತ್ತು.  ಏಪ್ರಿಲ್‌ನಲ್ಲಿ 77,000 ಪ್ರಕರಣ ವರದಿಯಾಗಿದೆ.

ಅದರ ಜೊತೆಗೆ ಆತ್ಮಹತ್ಯೆ ಮತ್ತು ಗಾಯಗಳ ವರದಿಯೂ ಏರಿಕೆ ಕಂಡಿದ್ದು 7.15 ಲಕ್ಷ ಪ್ರಕರಣ ವರದಿಯಾಗಿದೆ.ಅಪಾಯಕಾರಿ ಸಂಘಟನೆ ಹಾಗೂ ವ್ಯಕ್ತಿಗಳಿಗೆ ಸಂಬಂಧಿಸಿ 85 ಸಾವಿರ ಪ್ರಕರಣ ದಾಖಲಾಗಿದೆ. ಅಪಾಯಕಾರಿ ಸಂಘಟನೆ ಹಾಗೂ ಸಂಸ್ಥೆಗಳು, ಭಯೋತ್ಪಾದಕ ಸಂಘಟನೆಗಳಿಗೆ ಸಂಬಂಧಿಸಿ 1.13 ಲಕ್ಷ ಪ್ರಕರಣವನ್ನು ಪೇಸ್‌ ಬುಕ್‌ ಪತ್ತೆ ಮಾಡಿದೆ. ಇದರ ಜೊತೆಗೆ ಲೈಂಗಿಕ ಪ್ರಕರಣ, ಮಕ್ಕಳಿಗೆ ಕಿರುಕುಳ, ಮಕ್ಕಳ ದುರ್ಬಳಕೆ ಇತ್ಯಾದಿ ಪ್ರಕರಣಗಳು ಹೆಚ್ಚಾಗಿ ನಡೆದಿದ್ದು  ಅಂತಹ ಘಟನೆಗಳನ್ನು ಪತ್ತೆ ಮಾಡಿದ ಪೇಸ್‌ ಬುಕ್‌ ತಕ್ಷಣವೇ ಕ್ರಮ ಕೈಗೊಂಡಿದೆ ಎಂದು ವರದಿ ಮಾಡಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಬೈಂದೂರು | ಕಡಲ ತೀರದ ಸ್ವಚ್ಛತೆಯ 100ನೇ ವಾರದ ‘ಕ್ಲೀನ್ ಕಿನಾರ’ ಕಾರ್ಯಕ್ರಮ | 50 ಟನ್ ಗಳಷ್ಟು ಕಸ ಸಂಗ್ರಹಿಸಿ ವಿಲೇವಾರಿ |

ಕಡಲ ತೀರದ ಸ್ವಚ್ಛತೆಯ 100ನೇ ವಾರದ 'ಕ್ಲೀನ್ ಕಿನಾರ' ಕಾರ್ಯಕ್ರಮಕ್ಕೆ ಶಾಸಕ ಗುರುರಾಜ್…

22 hours ago

ಹೊಸರುಚಿ | ಗುಜ್ಜೆ ಚಟ್ನಿ

ಗುಜ್ಜೆ ಚಟ್ನಿಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ:  ಗುಜ್ಜೆ 3/4 ಕಪ್ ,ನೀರು…

22 hours ago

ಮಂಗಳ ಗ್ರಹ ಸಂಚಾರ ಯೋಗ | ಈ 7 ರಾಶಿಗೆ ರಾಜಯೋಗ

2025ರಲ್ಲಿ ಮಂಗಳ ಗ್ರಹವು ವಿವಿಧ ನಕ್ಷತ್ರಗಳಲ್ಲಿ ಸಂಚಾರ ಮಾಡುವುದರಿಂದ ಕೆಲ ರಾಶಿಗಳಿಗೆ ವಿಶೇಷ…

22 hours ago

ಶಿವಮೊಗ್ಗದ ನವಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವ |

ಶಿವಮೊಗ್ಗದ ನವಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವದ ಅಂಗವಾಗಿ ಮೂರು ದಿನಗಳ…

1 day ago

ಬಾಗಲಕೋಟೆ ಮುಧೋಳ ಸೇಬು ಬೆಳೆಗಾರನ ಬಗ್ಗೆ ಮನ್ ಕೀ ಬಾತ್ ನಲ್ಲಿ ಪ್ರಧಾನಿ ಮೋದಿ ಮೆಚ್ಚುಗೆ

ಬೆಟ್ಟಗುಡ್ಡಗಳಲ್ಲಿ ಬೆಳೆಯಲಾಗುವ ಸೇಬನ್ನು ಕರ್ನಾಟಕದಲ್ಲಿಯೂ ಬೆಳೆಯಲಾಗುತ್ತಿದೆ ಎಂದು ಮನ್ ಕಿ ಬಾತ್‌ನಲ್ಲಿ ಪ್ರಧಾನಿ…

2 days ago