ಕೃಷಿ ಕಾರ್ಮಿಕರ ಸಮಸ್ಯೆ ನಿವಾರಣೆಗೆ ತಂತ್ರಜ್ಞಾನದ ಬಳಕೆಯೇ ಪರಿಹಾರ |

November 13, 2024
8:47 PM
ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಕೃಷಿ ಕಾರ್ಮಿಕರ ಸಮಸ್ಯೆ ಹೆಚ್ಚಾಗುತ್ತಿದೆ. ತಹ ಪರಿಸ್ಥಿತಿಯಲ್ಲಿ ರೈತರು ಆಧುನಿಕ ತಂತ್ರಜ್ಞಾನದ ಲಾಭ ಪಡೆದುಕೊಳ್ಳಬೇಕಿದೆ.

ಕೃಷಿ ಬೆಳವಣಿಗೆಯ ನಡುವೆ ಈಗ ಕಾಡುತ್ತಿರುವುದು ಕೃಷಿ ಕಾರ್ಮಿಕರ ಸಮಸ್ಯೆ. ಅದರಲ್ಲೂ ನುರಿತ ಕೃಷಿ ಕಾರ್ಮಿಕರು, ಕೌಶಲ್ಯ ಹೊಂದಿದ ಕಾರ್ಮಿಕರು ಅಪರೂಪದಲ್ಲಿ ಅಪರೂಪ. ರಾಜ್ಯದ ಎಲ್ಲಾ ಕಡೆಯೂ ಈ ಸಮಸ್ಯೆ ಇದೆ. ಈ ಸಮಸ್ಯೆ ನಿವಾರಣೆಗೆ ಕೃಷಿ ತಂತ್ರಜ್ಞಾನಗಳ ಬಳಕೆಯೇ ಪರಿಹಾರ ಎಂದು ಹಲವು ಕಡೆ ಅಭಿಪ್ರಾಯ ಕೇಳುತ್ತಿದೆ. ಹಾವೇರಿ ಜಿಲ್ಲೆಯ ಕೃಷಿಕರು ಆಧುನಿಕ ತಂತ್ರಜ್ಞಾನದ ಬಳಕೆಯ ಮೂಲಕ ಕೃಷಿ ಕಾರ್ಮಿಕರ ಸಮಸ್ಯೆಗೆ ಸ್ವಲ್ಪಮಟ್ಟಿನ ಪರಿಹಾರ ಕಂಡುಕೊಂಡಿದ್ದಾರೆ.

Advertisement

ಹಾವೇರಿ ಜಿಲ್ಲೆಯ ಹಲವೆಡೆ ರೈತರು ಆಧುನಿಕ ತಂತ್ರಜ್ಞಾನದ ಜರಡಿ ಬಳಸಿ ಸೋಯಾಬಿನ್ ಒಕ್ಕಣಿ ಮಾಡುತ್ತಿದ್ದಾರೆ. ಇಲ್ಲಿ ಕೂಡಾ ಇತ್ತೀಚಿನ ದಿನಗಳಲ್ಲಿ ಕೃಷಿ ಕಾರ್ಮಿಕರ ಸಮಸ್ಯೆ ಹೆಚ್ಚಾಗುತ್ತಿದೆ. ಉತ್ತಮ ಭತ್ಯೆ ಕೊಟ್ಟರೂ ಕೆಲಸಕ್ಕೆ ಕಾರ್ಮಿಕರು ಬರುತ್ತಿಲ್ಲ. ಹೀಗಾಗಿ ರೈತರು ಬೆಳೆ ಬೆಳೆಯಲು, ಬೆಳೆದ ಬೆಳೆಯನ್ನು ಹಸನು ಮಾಡಲು ಹರಸಾಹಸ ಮಾಡಬೇಕಾದ ಪರಿಸ್ಥಿತಿ ಇದೆ. ಇಂತಹ ಪರಿಸ್ಥಿತಿಯಲ್ಲಿ ಕೆಲವು ರೈತರು ಆಧುನಿಕ ತಂತ್ರಜ್ಞಾನದ ಲಾಭ ಪಡೆದುಕೊಳ್ಳುತ್ತಿದ್ದಾರೆ.

ಕೃಷಿ ಪ್ರಧಾನವಾದ ಹಾವೇರಿ ಜಿಲ್ಲೆಯಲ್ಲಿ ಸೋಯಾಬಿನ್, ಹತ್ತಿ, ಶೇಂಗಾ ಸೇರಿದಂತೆ ವಿವಿಧ ಬೆಳೆಗಳನ್ನು ರೈತರು ಬೆಳೆಯುತ್ತಾರೆ. ಹಾವೇರಿ ತಾಲೂಕು ಒಂದರಲ್ಲೇ 4500 ಹೆಕ್ಟೇರ್ ಪ್ರದೇಶದಲ್ಲಿ ಸೋಯಾಬಿನ್ ಬೆಳೆ ಬೆಳೆಯಲಾಗುತ್ತದೆ. ಹಿಂದೆ ಸೋಯಾಬಿನ್ ಬೆಳೆದ ನಂತರ ಅದರ ಒಕ್ಕಣಿ ಮಾಡಲು ಕಣಗಳಲ್ಲಿ ಬೆಳೆ ಹಾಕುತ್ತಿದ್ದರು. ಆದರೆ ಈಗ ಕಣಗಳ ಸಂಖ್ಯೆ ಕಡಿಮೆ ಆಗಿದ್ದು, ಕಾರ್ಮಿಕರ ಸಮಸ್ಯೆಯೂ ಹೆಚ್ಚಾಗಿದೆ. ಹೀಗಾಗಿ ರೈತರು ಈಗ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಪ್ರಸಕ್ತ ವರ್ಷ ಉತ್ತಮ ಮಳೆಯಾಗಿದ್ದರಿಂದ ಕಾಳುಗಳನ್ನು ಒಕ್ಕಣಿ ಮಾಡುವಾಗ ಮಣ್ಣು ಬರುತ್ತಿದೆ. ಕಾಳುಗಳಲ್ಲಿ ಮಣ್ಣು ಬೇರ್ಪಡಿಸಲು ರೈತರು ಕಷ್ಟಪಡುತ್ತಿದ್ದರು. ಹೀಗಾಗಿ ಜರಡಿ ಬಳಕೆಗೆ ಬಂದ ಮೇಲೆ ಮಣ್ಣಿನಿಂದ ಸುಲಭವಾಗಿ ಕಾಳುಗಳನ್ನು ಬೇರ್ಪಡಿಸಿ ಲಾಭ ಪಡೆಯುತ್ತಿದ್ದಾರೆ. ಸ್ಪೆರೊ ಸಪರೇಟರ್ ಎಂಬ ಹೆಸರಿನ ಈ ಜರಡಿ ಬಳಕೆಯಿಂದ ರೈತರಿಗೆ ಸೋಯಾಬಿನ್ ಒಕ್ಕಣೆ ಮಾಡುವುದು ಬಲು ಸುಲಭವಾಗಿದೆ. ಕಡಿಮೆ ಖರ್ಚು ಮತ್ತು ಕಡಿಮೆ ಕಾರ್ಮಿಕರ ಬಳಕೆ ಜೊತೆಗೆ ಸಮಯವೂ ಉಳಿತಾಯ ಆಗಲಿದೆ.

ಕೃಷಿಯಲ್ಲಿ ಈಚೆಗೆ ತಂತ್ರಜ್ಞಾನಗಳ ಬಳಕೆ ಹೆಚ್ಚಾಗಬೇಕು ಎನ್ನುವ ಮಾತುಗಳು ಕೇಳುತ್ತಿವೆ. ಆದರೆ ಹೊಸ ಹೊಸ ತಂತ್ರಜ್ಞಾನಗಳು ಬಂದಾಗ ಅದರ ಪರಿಚಯದ ಜೊತೆಗೆ ಸಾಧಕ ಬಾಧಕಗಳ ಬಗ್ಗೆಯೂ ರೈತರಿಗೆ   ಅರಿವು ಮೂಡಿಸಬೇಕಿದೆ.

ಸ್ಪೆರೋ ಸಫರೇಟರ್ ತಂತ್ರಜ್ಞಾನದಿಂದ ಬಳಕೆಯಿಂದ ರೈತರಿಗೆ ತುಂಬಾ ಅನುಕೂಲವಾಗುತ್ತಿದೆ. ಉತ್ತಮ ಗುಣಮಟ್ಟದ ಕಾಳುಗಳನ್ನು ಪಡೆದು ಮಾರುಕಟ್ಟೆಯಲ್ಲಿ ಉತ್ತಮ ದರ ಪಡೆಯಲು ನೆರವಾಗಿದೆ ಎನ್ನುತ್ತಾರೆ ರೈತ ವೀರಭದ್ರಪ್ಪ ಹೇಳುತ್ತಾರೆ
.

Advertisement

2.5 ಎಕ್ರೆ ಜಮೀನಿನಲ್ಲಿ ಸೋಯಾಬಿನ್ ಬೆಳೆದಿದ್ದೇವು. ಒಕ್ಕಣಿಗೆ ಮೊದಲು ಐದಾರು ಕಾರ್ಮಿಕರು ಬೇಕಾಗಿತ್ತು. ಆದರೆ ಈಗ ಒಬ್ಬರೇ ಇದ್ದರೂ ಜರಡಿ ಬಳಸಿ ಒಕ್ಕಣಿ ಮಾಡಬಹುದು. ಆಧುನಿಕ ಜರಡಿಯಿಂದ ಕೆಲಸವೂ ಬೇಗ ಆಗುತ್ತದೆ ಸುಲಭವಾಗಿ ಕಾಳುಗಳಿಂದ ಮಣ್ಣನ್ನು ತೆಗೆಯಬಹುದು ಎನ್ನುತ್ತಾರೆ ರೈತ ರಾಜು ದೊಡ್ಡಮನಿ.
Advertisement

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

ಇದನ್ನೂ ಓದಿ

ರಾಸಾಯನಿಕ ಉದ್ಯಮ | ಭಾರತವು ರಾಸಾಯನಿಕಗಳ ಪ್ರಮುಖ ಉತ್ಪಾದಕ ರಾಷ್ಟ್ರ
July 4, 2025
7:36 AM
by: The Rural Mirror ಸುದ್ದಿಜಾಲ
ಬುಧ ಮತ್ತು ಶನಿ ಕಾಟದಿಂದ ಈ ರಾಶಿಯವರು ಸ್ವಲ್ಪ ಜೋಪಾನವಾಗಿರಬೇಕು
July 4, 2025
7:24 AM
by: ದ ರೂರಲ್ ಮಿರರ್.ಕಾಂ
ಅಮರನಾಥ ಯಾತ್ರೆಗೆ ಚಾಲನೆ | ಮೊದಲ ಗುಂಪಿನ 5,880 ಯಾತ್ರಿಗಳು ಪ್ರಯಾಣ
July 3, 2025
11:46 PM
by: ದ ರೂರಲ್ ಮಿರರ್.ಕಾಂ
ರಾಜ್ಯದ ವಿವಿಧೆಡೆ ಧಾರಾಕಾರ ಮಳೆ | ಉತ್ತರಕನ್ನಡ, ಕೊಡಗಿನಲ್ಲಿ ಸಮಸ್ಯೆ
July 3, 2025
11:38 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group