ತಂದೆಗೆ ಉಡುಗೊರೆ | ಮಕ್ಕಳೆಂದರೆ ಹೀಗಿರಬೇಕು… ಇಷ್ಟು ಸಾಕು ವೃದ್ದ ತಂದೆ ತಾಯಿಯರಿಗೆ |

July 26, 2024
4:53 PM
ಒಂದು ಆಪ್ತವಾದ ಬರಹ. ಸೋಶಿಯಲ್‌ ಮೀಡಿಯಾದಲ್ಲಿ ಕಂಡುಬಂದಿತ್ತು. ಸಾಮಾಜಿಕ ವ್ಯವಸ್ಥೆಗೆ ಅಗತ್ಯವಾದ ಬರಹ ಇದಾಗಿದೆ.

ತುಂಬಾ ಬಡತನದಲ್ಲಿ ಬೆಳೆದ ಒಬ್ಬ ಆರ್ಡಿನರಿ ಅಂಚೆ ಕಚೇರಿಯ ಉದ್ಯೋಗಿ. ತನ್ನ ಇಬ್ಬರು ಮಕ್ಕಳನ್ನು ಚೆನ್ನಾಗಿ ಓದಿಸಿ ಉದ್ಯೋಗಸ್ಥರನ್ನಾಗಿ ಮಾಡಿ ವಿದೇಶಗಳಲ್ಲಿ ವಾಸ್ತವ್ಯ ಹೂಡುವ ಹಾಗೇ ಮಾಡಿದ. ಇಬ್ಬರು ಮಕ್ಕಳಿಗೆ ಮದುವೆಯಾಗಿ ಮಕ್ಕಳಾದವು . ಇಬ್ಬರೂ ಸುಖೀ ಸಂಸಾರಸ್ಥರೇ. ಆದರೆ ತಂದೆಗೆ ಊರಿಂದೂರಿಗೆ ವರ್ಗಾವಣೆಗಳಾಗುತ್ತಾ ಕೊನೆಗೆ ಆಂದ್ರಪ್ರದೇಶದ ಚಿಂತಲಪಲ್ಲಿ ಎಂಬ ಕಚೇರಿಯಲ್ಲಿ ನಿವೃತ್ತಿ ಸ್ಥಾನಕ್ಕೆ ಬಂದು ನಿಂತರು.

Advertisement
Advertisement
Advertisement

ನಿವೃತ್ತಿಯು ಆಯಿತು, ಈಗ ಅಪ್ಪನಿಗೆ ಚಿಂತೆ. ಮಕ್ಕಳಿಗೆ ಫೋನಾಯಿಸುತ್ತಾರೆ “ಒಂದೆರಡು ದಿನ ಊರಿಗೆ ಬಂದುಹೋಗಲು ಸಾಧ್ಯವೇ” ಎಂದು.? ಮಕ್ಕಳು ಸಹ ಒಪ್ಪುತ್ತಾರೆ .ಆದರೆ ಮಕ್ಕಳು ಒಂದೆರಡು ದಿನವಲ್ಲದೆ ಒಂದು ತಿಂಗಳು ರಜೆ ಮಾಡಿ ಊರಿಗೆ ಬರುತ್ತಾರೆ. ಬಂದ ಮಕ್ಕಳಿಗೆ ತಂದೆ ಹೇಳುತ್ತಾರೆ “ನಿಮಗೊಂದು ವಿಷಯ ತಿಳಿಸಬೇಕಿದೆ “ಎಂದು.

Advertisement

“ನನ್ನ ನಿವೃತ್ತಿಯಾಗಿದೆ. ಹಾಗೆಯೇ ನನ್ನ ಖಾತೆಗೆ ಒಂದಷ್ಟು ಲಕ್ಷ ಪಿ ಎಫ್ ಹಣವು ಬಂದಿದೆ. ನೀವಿಬ್ಬರು ಆ ಹಣವನ್ನು ಹಂಚಿಕೊಂಡರೆ ನಾನು ನನ್ನ ಪೆನ್ಶನ್ ಹಣದಲ್ಲಿ ನಿಮ್ಮ ತಾಯಿಯನ್ನು ಸಾಕಬಲ್ಲೆ. ಈ ಸುದ್ದಿ ಹೇಳಲಿಕ್ಕೆಂದೇ ನಿಮ್ಮನ್ನು ಕರೆಸಿದೆ ಎಂದು ಮತ್ತೆ ಒಂದೆರಡು ದಿನ ಒಟ್ಟಿಗೆ ಎಲ್ಲರೂ ಎಲ್ಲಾದರೂ ಸುತ್ತಿ ಬರೋಣವೆಂದು” ಇಚ್ಛೆ ವ್ಯಕ್ತಪಡಿಸುತ್ತಾರೆ.

ಅದಕ್ಕೆ ಮಕ್ಕಳು ಹೇಳುತ್ತಾರೆ
“ಮೊದಲ ಸಲ ಕೆಲಸ ಮಾಡಿದ ಅಂಚೆ ಕಚೇರಿಯಾದ ಉಡುಪಿಯ ಹಿತ್ತಲುಮನೆ ಎಂಬ ಗ್ರಾಮಕ್ಕೆ ಹೋಗಿ ಬರೋಣ” ಎಂದು ಹೇಳುತ್ತಾರೆ, ತಂದೆಗೆ ಆಶ್ಚರ್ಯ ಆ ಗ್ರಾಮದ್ಲಲೇನಿದೆ ಎಂದು ಆದರೂ ಮಕ್ಕಳಿಗೆ ನಿರಾಸೆಗೊಳಿಸದೆ ಹೊರಟುನಿಲ್ಲುತ್ತಾರೆ.

Advertisement

ಆ ಗ್ರಾಮದಲ್ಲಿ ಮೊದಲು ಕೆಲಸ ಮಾಡುವ ಸಮಯದಲ್ಲಿ ವಾಸ್ತವ್ಯ ಹೂಡಿದ್ದ ಗುಡಿಸಲು ಚೊಕ್ಕವಾದ ಮನೆ. ತನ್ನ ಮಕ್ಕಳು ಆಟವಾಡಿದ್ದ ಅಂಗಳ ಹಸಿರುಮಯವಾಗಿದೆ. ಆಗ ನೆಟ್ಟ ಸಸಿಗಳು ಮರಗಳಾಗಿವೆ. ತೆಂಗಿನ ಮರ ತುಂಬಾ ಕಾಯಿಗಳಿವೆ. ಎತ್ತ ನೋಡಿದರು ಹಸಿರು. ಮನೆಯ ಕಂಪೌಂಡಿನ ಒಳಗೆ ಪರಿಶುದ್ಧ ತುಳಸಿ ಗಿಡ ಗೇಟು ಪ್ರವೇಶಿಸುವಷ್ಟರಲ್ಲಿ ಒಬ್ಬ ಆಳು ಬಂದು ಗೇಟಿನ ಬೀಗದ ಕೀಲಿ
ಮಗನ ಕೈ ಗೆ ಇಡುತ್ತಾನೆ. ಮಗ ಬೀಗ ತೆಗೆದು ಒಳ ಬಂದಾಗ ತಂದೆಗೆ ಎಲ್ಲವೂ ಅಯೋಮಯ ಈ ಆಳು ಯಾರು, ಈ ಮನೆಗೆ ಏಕೆ ಬಂದೆವು, ಎಲ್ಲವೂ ನಿಗೂಢವೇ…

ಮನೆಯ ಒಳಗೆ ಬರುವಷ್ಟರಲ್ಲಿ ಎಲ್ಲವೂ ಸ್ವಚ್ಛಂದ ಸ್ವಚ್ಛಂದ… ತಂದೆ ಏನೋ ಕೇಳಲು ಬರುವಷ್ಟರಲ್ಲಿ ಮಕ್ಕಳೇ ಮಾತನಾಡಲು ಶುರು ಮಾಡುತ್ತಾರೆ “ಅಪ್ಪ…. ನಿಮ್ಮ ನಿವೃತ್ತಿ ಹತ್ತಿರವಿದೆಯೆಂದು ತಿಳಿಯಿತು . ಈ ಸ್ಥಳ ನಿಮಗೆ ತುಂಬಾ ಇಷ್ಟವೆಂದು ಒಂದು ವರ್ಷದ ಹಿಂದೆ ಈ ಸ್ಥಳವನ್ನು ನಾವೇ ಕೊಂಡುಕೊಂಡಿದ್ದೇವೆ. ವರ್ಗಾವಣೆಗಳಿಂದ ಬಸವಳಿದಿದ್ದೀರಿ. ಸಾಕು.. ನಿಮ್ಮ ನೆಮ್ಮದಿಗೆ ಒಂದು ಮನೆ ಇರಬೇಕು ಎಂದು ನಿಮಗೆ ತಿಳಿಸದೆ ನಾವಿಬ್ಬರು ಬಂದು ಇಲ್ಲಿ ಎಲ್ಲವೂ ಸರಿಪಡಿಸಿ ಹೋದೆವು.

Advertisement

ನಿಮ್ಮ ಪಿಎಫ್ ಹಣ ಖಾತೆಯಲ್ಲೇ ಇರಲಿ ನಮ್ಮನ್ನು ಬಡತನದಲ್ಲಿ ಓದಿಸಿದಿರಿ, ಬೆಳೆಸಿದಿರಿ ನಾವು ಈಗ ಸದೃಢರಾಗಿದ್ದೇವೆ. ನಮ್ಮ ಮಕ್ಕಳನ್ನು ನಿಮ್ಮಲ್ಲಿಯೇ ಬಿಟ್ಟು ಹೋಗುತ್ತೇವೆ. ಅವರು ನಿಮ್ಮ ಅಡಿಯಲ್ಲಿ ಬೆಳೆದರೆ ನಮ್ಮ ಸಂಸ್ಕೃತಿ ಸಂಪ್ರದಾಯಗಳು ಅವರಿಗೂ ತಿಳಿಯುತ್ತದೆ. ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಿ. ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ. ಮೊಮ್ಮಕ್ಕಳನ್ನು ಓದಿಸಿ. ಕೆಲಸಕ್ಕೆಂದು ಆಳು ಇದ್ದಾನೆ. ಪ್ರತಿ ತಿಂಗಳು ಅವನ ಸಂಬಳವನ್ನು ಅವನ ಖಾತೆಗೆ ತುಂಬುತ್ತೇವೆ. ನಮ್ಮ ಮನೆಯ ಪಕ್ಕದಲ್ಲೇ ಅವನಿಗೂ ವಾಸ್ತವ್ಯವಿದೆ. ವರ್ಷಕ್ಕೊಮ್ಮೆ ತಪ್ಪದೆ ಬಂದುಹೋಗುತ್ತೇವೆ ಎಂದು ಹೇಳುವಷ್ಟರಲ್ಲಿ ಅಪ್ಪನ ಕಣ್ಣಾಲಿಗಳು ತುಂಬಿ, ಮೂಕಪ್ರೇಕ್ಷಕರಾಗಿ ಬಿಟ್ಟರು. ಪ್ರತಿಯೊಬ್ಬ ಮಕ್ಕಳು ಇದೇ ತರಹ ನಡೆದುಕೊಂಡರೆ ಸಮಾಜದಲ್ಲಿ ವ್ರದ್ಧಾಶ್ರಮಗಳ ಅಗತ್ಯತೆ ಉದ್ಭವಿಸುವುದಿಲ್ಲ. ಪ್ರತಿಯೊಬ್ಬ ಪಾಲಕರು ಸಂತೋಷದಿಂದ ಜೀವನ ನಡೆಸಬಹುದು. ಇಂತಹ ಉತ್ತಮ ಮಾರ್ಗದಲ್ಲಿ ನಾವು – ನೀವು ಸಾಗೋಣ.

ಕೃಪೆ : Social network (ಮೂಲ ಬರಹಗಾರರ ಮಾಹಿತಿ ಇಲ್ಲ )

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ನೀವು ಡಿವಿಡೆಂಡ್‌ ಪಡೆದುಕೊಂಡಿದ್ದೀರಾ…?
October 17, 2024
6:49 AM
by: ದ ರೂರಲ್ ಮಿರರ್.ಕಾಂ
ಭಾರತದ ಕೃಷಿ ಮುಂಗಾರು ಜೊತೆಗೆ ಹೋರಾಟ..!| ಲಾಭ-ನಷ್ಟ ಸಮಾನವಾಗಿ ಸ್ವೀಕರಿಸಲು ಸಾಧ್ಯವೇ..?
October 8, 2024
11:23 AM
by: ಎ ಪಿ ಸದಾಶಿವ ಮರಿಕೆ
ಅಡಿಕೆ ಮಾರುಕಟ್ಟೆ ಏನಾಗುತ್ತದೆ…? | ಯಾರಿಗಾದರೂ ಮಾಹಿತಿ ಇದೆಯೇ..? |
September 25, 2024
12:41 PM
by: ಪ್ರಬಂಧ ಅಂಬುತೀರ್ಥ
ತುಪ್ಪ ತಿಂದ ಬಾಯಲ್ಲಿ ತಪ್ಪು ಬಂದೀತೇ?
September 23, 2024
12:49 PM
by: ಮುರಲೀಕೃಷ್ಣ ಕೆ ಜಿ

You cannot copy content of this page - Copyright -The Rural Mirror