Advertisement
ಸುದ್ದಿಗಳು

ಬಂಟ್ವಾಳದ ಅಭಿಮಾನಿಗೆ ಬಾಲಿವುಡ್ ನಟ ಸೋನು ಸೊದ್ ನ ಅಭಿನಂದನೆ

Share
ಬಡವರ ಪಾಲಿಗೆ ಮನೆ ಮಗನಾಗಿ,ದೇಶದ ರಿಯಲ್  ಹೀರೋ ಎಂದು ಕರೆಸಿಕೊಂಡು  ಸಿನಿಮಾದಲ್ಲಿ ಕಳನಾಯಕನಾಗಿ ಅಭಿನಯಿಸುತ್ತಿರುವ ಬಾಲಿವುಡ್ ನಟ ಸೋನು ಸೂದ್ ಕೋರೋನ ಸಂಕಷ್ಟದ ಸಂದರ್ಭದಲ್ಲಿ ಅನೇಕ ಬಡ ಕುಟುಂಬಗಳಿಗೆ ನೆರವಾಗಿದ್ದು ಅವರ ನಿಕಲ್ಮಷ ಸೇವೆಗೆ ಬಂಟ್ವಾಳದ ಅಭಿಮಾನಿಯೊಬ್ಬರು ಅವರ ಕಾರಿನ ಮೈಮೇಲೆ ಸೋನು ಸೂದ್ ಭಾವಚಿತ್ರಗಳ ಹಚ್ಚೆ ಹಾಕಿಸಿ ವಿಶೇಷ ರೀತಿಯ ಮೂಲಕ ಗೌರವವನ್ನು ಸಲ್ಲಿಸಿದ್ದಾರೆ.
ಕೊರೋನ ಎಂಬ ಕಾಣದ ವೈರಸ್ ಅದೆಷ್ಟೋ ಜನರ ಪಾಲಿಗೆ ಯಮನಾಗಿ ಬಡ ಕುಟುಂಬಗಳ ಜೀವನಕೆ ಹೆಮ್ಮರಿಯಂತೆ ವಕ್ಕರಿಸಿದ ಸಂದರ್ಭದಲ್ಲಿ ಸಾವಿರಾರು ಕುಟುಂಬಗಳು ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ನೊಂದವರ ಪಾಲಿಗೆ ಮನೆ ಮಗನಂತೆ ಎಲ್ಲರ ಕಷ್ಟಕ್ಕೆ ಸ್ಪಂದಿಸಿದ ನಟ ಸೋನು ಸೂದ್ ಕಳೆದ ವರುಷ ಲಾಕ್ ಡೌನ್ ಆರಂಭವಾದ ನಂತರ ಜನಸಾಮಾನ್ಯರಿಗೆ ಸಹಾಯ ಮಾಡುತ್ತಾ ಬಂದಿದ್ದಾರೆ  ವಲಸೆ ಕಾರ್ಮಿಕರನ್ನು ಮನೆಗೆ ತಲುಪಿಸುವ ವ್ಯವಸ್ಥೆ , ಆಕ್ಸಿ ಜನ್ ಅಗತ್ಯ ಇದವರಿಗೆ ನೆರವಾಗಿ ಬೆಡ್ ವ್ಯವಸ್ಥೆ ಮಾಡಿಸಿ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ಒಂದು ಕೋಟಿ ರೂ. ಗೂ ಅಧಿಕ ಉತ್ಪಾದನಾ ಘಟಕ ಕ್ಕೆ ಶೇ .80 ರಷ್ಟು ನೆರವು ನೀಡುವ ಮೂಲಕ ಲಕ್ಷಾಂತರ ಜನರ ಪ್ರೀತಿ , ಆಶೀರ್ವಾದಕೆ ಪಾತ್ರರಾಗಿ ಯುವಕರಿಗೆ ಮತ್ತು ಅವರ ಅಭಿಮಾನಿಗಳಿಗೆ ಸ್ಫೂರ್ತಿಯಾಗಿದ್ದಾರೆ .
ಸೂದ್ ಅವರ ಅನೇಕ ಸಮಾಜ ಸೇವೆಗೆ ಶರಣಾಗಿ ರಿಯಲ್ ಹೀರೋನ ಅಭಿಮಾನಿ ಯದವರಲ್ಲಿ ಕರಾವಳಿಯ ಬಂಟ್ವಾಳದ ಜಕ್ರಿಬೆಟ್ಟು ನಿವಾಸಿ ಶ್ರೀ ಪ್ರಸಾದ್ ಆಚಾರ್ಯ ಕೂಡ ಒಬ್ಬರು ಶ್ರೀ ಟಾಕೀಸ್ ಸ್ಟುಡಿಯೋ ನಡೆಸುತ್ತಾ ಫೋಟೋ/ವಿಡಿಯೋಗ್ರಾಫರ್ ಕಿರುಚಿತ್ರ,ಸಂಗೀತ,ಆಲ್ಬಂ ಚಿತ್ರೀಕರಣದಲ್ಲಿ ತಮ್ಮನ್ನು ತೊಡಗಿಸಿಕೊಂಡು ಹೆಸರಾದ ಇವರು ತಮ್ಮ ಇಯನ್ ಕಾರಿನ ಬಲ ಎಡ ಭಾಗಗಳಲ್ಲಿ ಹಿಂದಿನ ಗಾಜು ತುಂಬೆಲ್ಲ ಕೋವಿಡ್ ಸೇವೆಗಳ ವಿವರ ಹಾಗೂ ಸೋನು ಘೋಷಣೆಯಾದ ‘ನಾನು ಇರುವುದು ರಾಜಕೀಯ ಕ್ಕಾಗಿ ಅಲ್ಲ ಬದಲು ಹೃದಯಗಳ ಗೆಲ್ಲಲು’ ಎಂಬ ಮಾತಿನಂತೆ ಬರಹಗಳನ್ನು ಬರೆಸುವ ಮೂಲಕ ಅಭಿಮಾನಿಯಾಗಿ ಪ್ರೀತಿಯ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ  ಪ್ರಸಾದ್ ಸಹೋದರಿ ಸತ್ ನೀಡಿದ್ದು ಅವರ ಅಭಿಮಾನಕ್ಕೆ ಸೋನು ಸೂದ್ ಟ್ವೀಟ್ ಮೂಲಕ ಅಭಿನಂದಿಸಿದ್ದಾರೆ .
# ಸುಕನ್ಯ ಎನ್. ಆರ್
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆ ದರ ಇಳಿಯುತ್ತದೆ, ಕೂಲಿ ಏರುತ್ತದೆ ; ಬೆಳೆಗಾರನಿಗೆ ಉಳಿಯುವುದೇನು?

ಅಡಿಕೆ ದರ ಕುಸಿಯುತ್ತಿರುವ ಸಂದರ್ಭದಲ್ಲಿ ಕೃಷಿ ಕೂಲಿ ದರ ನಿರಂತರವಾಗಿ ಏರುತ್ತಿರುವುದು ಮಲೆನಾಡಿನ…

1 hour ago

ಕಸೂತಿ ಕಲಿತು ಸ್ವಾವಲಂಬನೆಯತ್ತ ಗ್ರಾಮೀಣ ಮಹಿಳೆಯರು

ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದಲ್ಲಿ ಗ್ರಾಮೀಣ ಮಹಿಳೆಯರಿಗೆ ಒಂದು ತಿಂಗಳ ಉಚಿತ ಮಗ್ಗಂ…

2 hours ago

ಕರ್ನಾಟಕದಲ್ಲಿ ಬರದ ಹೊಡೆತ – ಬೆಳೆ ನಷ್ಟ ₹60 ಸಾವಿರ ಕೋಟಿವರೆಗೆ ಸಾಧ್ಯತೆ

ಕರ್ನಾಟಕದ ಬರ ಪರಿಸ್ಥಿತಿಯಿಂದ ಉಂಟಾಗಿರುವ ಬೆಳೆ ನಷ್ಟ ₹50 ಸಾವಿರ ಕೋಟಿಯಿಂದ ₹60…

2 hours ago

ದಾಖಲೆಗಳಿಲ್ಲದೆ ಜಾನುವಾರು ಸಾಗಿಸಿದ ಮಾತ್ರಕ್ಕೆ ವಧೆಗಾಗಿ ಸಾಗಿಸಲಾಗುತ್ತಿದೆ ಎಂದು ಊಹಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

ದಾಖಲೆಗಳಿಲ್ಲದೆ ಜಾನುವಾರು ಸಾಗಿಸಿರುವುದನ್ನು ಮಾತ್ರ ಆಧಾರವಾಗಿಟ್ಟುಕೊಂಡು ವಧೆಗಾಗಿ ಸಾಗಿಸಲಾಗುತ್ತಿದೆ ಎಂದು ಊಹಿಸಲು ಸಾಧ್ಯವಿಲ್ಲ…

2 hours ago

ಹವಾಮಾನ ವರದಿ | 3-10-2026 | ಬಂಗಾಳಕೊಲ್ಲಿಯಿಂದ ತೇವಾಂಶದ ಗಾಳಿ – ಕರ್ನಾಟಕದಲ್ಲಿ ಮತ್ತೆ ಮಳೆ?

ಬಂಗಾಳಕೊಲ್ಲಿಯಿಂದ ತಮಿಳುನಾಡು ಮೂಲಕ ತೇವಾಂಶದ ಗಾಳಿ ರಾಜ್ಯದ ದಕ್ಷಿಣ ಒಳನಾಡಿನತ್ತ ಬೀಸುವ ಸಾಧ್ಯತೆಯಿಂದ…

17 hours ago

ಮಳೆ ಕೈಕೊಟ್ಟಿದೆ… ಜಾನುವಾರುಗಳಿಗೆ ಮೇವು ಎಲ್ಲಿಂದ..?

ಬರದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗದಂತೆ ಸರ್ಕಾರ ಉಚಿತವಾಗಿ…

22 hours ago