ನಾಡಿನಾದ್ಯಂತ ಗಣೇಶ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ.ಮೈಸೂರಿನ ಈ ಗಣಪ ಹಾಗೂ ಇಲ್ಲಿರುವ ಪ್ರತಿಮೆಗಳು ಗಮನ ಸೆಳೆದಿದೆ. ದೇಶ ಹಾಗೂ ರಾಜ್ಯದ ಗಮನಸೆಳೆದ ಮೈಸೂರಿನ ಪ್ರಮುಖರ ಮಣ್ಣಿನ ಆಕೃತಿಯನ್ನು ಗಣಪತಿ ಮೂಲಕ ಪ್ರಸ್ತುತಪಡಿಸುವ ಕಾರ್ಯಕ್ಕೆ ಮೈಸೂರಿನ ಕಲಾವಿದ ರೇವಣ್ಣ ಮುಂದಾಗಿದ್ದಾರೆ. ಇದು ಈ ಬಾರಿಯ ವಿಶೇಷ.
ಈ ಬಾರಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ವಿಶೇಷ ಗಣೇಶನ ಮಣ್ಣಿನ ಆಕೃತಿಯೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಗಮನ ಸೆಳೆದ ಜಿಲ್ಲೆಯ ಪ್ರಮುಖರಾದ ಕಲಾವಿದ ಅರುಣ್ ಯೋಗಿ ರಾಜ್, ಮೇಘಾಲಯ ರಾಜ್ಯಪಾಲ ಹಾಗೂ ಮೈಸೂರಿನವರೇ ಆದ ಸಿ ಹೆಚ್ ವಿಜಯ್ ಶಂಕರ್ ಹಾಗೂ ಮೈಸೂರು ಕೊಡಗು ಸಂಸದ ಯದುವೀರ ಕೃಷ್ಣದತ್ತ ಒಡೆಯರ್ ಹಾಗೂ ಶ್ರೇಷ್ಠ ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದ ನಟ ರಿಷಬ್ ಶೆಟ್ಟಿ ಅವರ ಮಣ್ಣಿನಾಕೃತಿ ರಚಿಸುವ ಮೂಲಕ ಕಲಾವಿದ ಮೈಸೂರಿನ ಕುಂಬಾರಗೇರಿಯ ಕಲಾವಿದ ರೇವಣ್ಣ ಜನರ ಗಮನ ಸೆಳೆದಿದ್ದಾರೆ.
ಮಣ್ಣಿನಲ್ಲಿ ಪರಿಸರ ಮಾಲಿನ್ಯ ಮುಕ್ತ ಬಗೆ ಬಗೆಯ ಗಣಪತಿಗಳನ್ನು ತಯಾರಿಸುವ ಕಲಾವಿದ ರೇವಣ್ಣ ಈ ಬಾರಿ ಗಣೇಶನ ಮಣ್ಣಿನಾಕೃತಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಮಣ್ಣಿನ ಆಕೃತಿ ಹಾಗೂ ಅಯೋದ್ಯೆಯಲ್ಲಿ ಶ್ರೀರಾಮ ಲಲ್ಲನ ವಿಗ್ರಹ ಕೆತ್ತಿದ ಮೈಸೂರಿನ ಕಲಾವಿದ ಅರುಣ್ ಯೋಗಿ ರಾಜ್ ಅವರ ಮಣ್ಣಿನ ಆಕೃತಿಯನ್ನು ಗಣೇಶನ ವಿಗ್ರಹದಲ್ಲಿ ಪೂಜೆ ಸಲ್ಲಿಸುವ ಮಾದರಿ ತಯಾರಿಸುವ ಮೂಲಕ ಗೌರವ ಸಲ್ಲಿಸಿದ್ದಾರೆ.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…