ಅಕ್ರಮವಾಗಿ ಅಡಿಕೆ ಕಳ್ಳಸಾಗಾಣಿಕೆ ಪ್ರಕರಣಕ್ಕೆ ಸಂಬಂಧಿಸಿ ಆಮದು-ರಫ್ತು ಲೈಸನ್ಸ್ ಹೊಂದಿರುವ ಸಂಸ್ಥೆಯ ನಿರ್ದೇಶಕರೊಬ್ಬರನ್ನು ತನಿಖಾ ತಂಡವು ವಶಕ್ಕೆ ತೆಗೆದುಕೊಂಡಿದೆ. ಕಳೆದ ಹಲವು ಸಮಯಗಳಿಂದ ತಪ್ಪು ಮಾಹಿತಿ ನೀಡಿ ಅಡಿಕೆ ಆಮದು ನಡೆಯುತ್ತಿತ್ತು. ಈಚೆಗೆ ಕಸ್ಟಮ್ಸ್‌ನ ಗುಪ್ತಚರ ಮತ್ತು ತನಿಖಾ ದಳವು 9.65 ಕೋಟಿ ರೂಪಾಯಿಯ 189.6 ಮೆಟ್ರಿಕ್ ಟನ್ ಅಡಿಕೆ ಕಳ್ಳಸಾಗಣೆಯನ್ನು ವಶಪಡಿಸಿಕೊಂಡಿತ್ತು.
ಅಡಿಕೆ ಕಳ್ಳಸಾಗಣೆ ಪ್ರಕರಣದಲ್ಲಿ ತನಿಖೆ ನಡೆಸಲು ಆಮದುದಾರರು ಮತ್ತು ರಫ್ತುದಾರರಿಗೆ ಹಲವಾರು ಸಮನ್ಸ್‌ಗಳು ಮತ್ತು ಹುಡುಕಾಟ ನಡೆಸುತ್ತಿದ್ದ ಕಸ್ಟಮ್ಸ್‌ನ ವಿಶೇಷ ಗುಪ್ತಚರ ಮತ್ತು ತನಿಖಾ ದಳವು ಇದೀಗ ಆಮದು-ರಫ್ತು ಲೈಸನ್ಸ್ ಹೊಂದಿರುವ ಸಂಸ್ಥೆಯ ನಿರ್ದೇಶಕರೊಬ್ಬರನ್ನು ಬಂಧಿಸಿ ತನಿಖೆ ನಡೆಸುತ್ತಿದೆ.
ಯುಎಇಯಿಂದ ಭಾರತಕ್ಕೆ ಕಳ್ಳಸಾಗಣೆಯಾದ ಅಡಿಕೆಯ ವಾರೀಸುದಾರರಾದ ಘಾಟ್‌ಕೋಪರ್‌ನ ಮುಖೇಶ್ ಮಾಧವಿ ಭಾನುಶಾಲಿ. ತಪ್ಪು ಮಾಹಿತಿ ನೀಡಿ ಅಡಿಕೆ ಕಳ್ಳಸಾಗಣೆ ಮಾಡಲಾಗಿತ್ತು. ಡಾಬರು ಹೆಸರಿನಲ್ಲಿ ಅಡಿಕೆ ಸಾಗಾಟ ನಡೆದಿತ್ತು. ಈ ಪ್ರಕರಣದಲ್ಲಿ ಮುಂದ್ರಾ ಸೇರಿದಂತೆ ವಿವಿಧ ಬಂದರುಗಳಲ್ಲಿ ಕಸ್ಟಮ್ಸ್ ತನಿಖೆಗಳನ್ನು ಪ್ರಾರಂಭಿಸಿದೆ, ಎಲ್ಲಾ ಪ್ರಕರಣದಲ್ಲಿ ತೆರಿಗೆ ತಪ್ಪಿಸಿ ಅಡಿಕೆ ಸಾಗಾಣಿಕೆ ಮಾಡಲಾಗಿತ್ತು.ಈ ಪ್ರಕರಣದಲ್ಲಿ ಸುಮಾರು 11.63 ಕೋಟಿ ರೂಪಾಯಿ ತೆರಿಗೆ ವಂಚಿಸಲು ಯತ್ನಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ಅಕ್ರಮವಾಗಿ ಸಾಗಾಟವಾಗಿ ಬಹುಪಾಲು ಅಡಿಕೆಯು ಗುಟ್ಕಾ ಉದ್ಯಮದಲ್ಲಿ ವ್ಯಾಪಕವಾಗಿ ಬಳಕೆ ಮಾಡಲಾಗುತ್ತಿದೆ. ದೇಶಿಯ ಅಡಿಕೆ ಪೂರೈಕೆಯ ಕೊರತೆಯ ಹಿನ್ನೆಲೆಯಲ್ಲಿ ಅಡಿಕೆ ಕಳ್ಳಸಾಗಾಣಿಕೆ ಮೂಲಕ ತರಿಸಿಕೊಳ್ಳಲಾಗುತ್ತಿದೆ ಎಂದು ಹೇಳಲಾಗಿದೆ. ಆದರೆ ದೇಶೀಯ ಮಾರುಕಟ್ಟೆಯಲ್ಲಿ ಅಡಿಕೆ ಸಾಕಷ್ಟು ಪ್ರಮಾಣದಲ್ಲಿದ್ದರೂ, ಕಡಿಮೆ ದರದಲ್ಲಿ ವಿದೇಶಿ ಅಡಿಕೆ ಆಮದು ಮಾಡಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಹೀಗಾಗಿ ಗಂಭೀರವಾಗಿ ತನಿಖೆ ಆರಂಭವಾಗಿದೆ.
ಸರಕಾರದ ಸೂಚನೆಯಂತೆ ನ್ಯಾಯಬೆಲೆ ಅಂಗಡಿಗಳಲ್ಲಿ ಇ- ಕೆವೈಸಿ ಮಾಡಲಾದ ಪಡಿತರ ಚೀಟಿ ಫಲಾನುಭವಿಗಳನ್ನು…
ನೈಸರ್ಗಿಕ ರಬ್ಬರ್ ಮತ್ತು ಅದರ ಉತ್ಪನ್ನಗಳು ಅರಣ್ಯನಾಶ ಮುಕ್ತ ನಿಯಮಗಳಿಗಾಗಿ ಯುರೋಪಿಯನ್ ಒಕ್ಕೂಟ…
ಮುನ್ಸೂಚನೆಯಂತೆ ಮೇ 1 ರಿಂದ ದಕ್ಷಿಣ ಒಳನಾಡಿನ ಅಲ್ಲಲ್ಲಿ ಮಳೆ ಆರಂಭವಾಗುವ ಸಾಧ್ಯತೆಗಳಿವೆ.
ಖಾಸಗಿಯವರಿಂದ ಒತ್ತುವರಿಯಾಗಿರುವ ಪ್ರದೇಶವನ್ನು ಯಾವುದೇ ಮುಲಾಜಿಲ್ಲದೆ ತೆರವುಗೊಳಿಸಲು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮುಖ್ಯಮಂತ್ರಿ…
ಭಾರತವು 4.8 ಟನ್ ಲಸಿಕೆಗಳನ್ನು ಅಫ್ಘಾನಿಸ್ತಾನಕ್ಕೆಕಳುಹಿಸುವ ಮೂಲಕ ಮಾನವೀಯ ನೆರವು ನೀಡಿದೆ. ಇದರಲ್ಲಿ…
ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದು, ಭ್ರಷ್ಟಾಚಾರದ ವಿರುದ್ಧ…