ಭಾರತೀಯ ಗೋತಳಿಗಳು ಎಲ್ಲವೂ ವಿಶಿಷ್ಟವಾದ ಗುಣಗಳನ್ನು ಹೊಂದಿವೆ. ಹಾಲಿಗಾಗಿ ಮಾತ್ರಾ ಈ ಗೋವುಗಳು ಅಲ್ಲ. ಉಳಿದೆಲ್ಲಾ ಹಸುಗಳಿಗಿಂತ ಹೆಚ್ಚಿನ ಗುಣಧರ್ಮಗಳನ್ನು ಹೊಂದಿವೆ. ಆಯಾ ಭಾಗಕ್ಕೆ ಹೊಂದಿಕೊಳ್ಳುವ ಭಾರತೀಯ ಗೋತಳಿಗಳು ಆಯಾ ಪ್ರದೇಶದಲ್ಲಿ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಅಂತಹದ್ದರಲ್ಲಿ ಮಲೆನಾಡು ಗಿಡ್ಡ ಗೋತಳಿಯೂ ಒಂದು. ಈ ತಳಿ ಉಳಿಯಬೇಕು ಏಕೆ.? ಇಲ್ಲಿದೆ ಅದರ ವಿಶೇಷತೆಗಳು..…….ಮುಂದೆ ಓದಿ…..
ಅದಕ್ಕಾಗಿಯೇ ಅವುಗಳನ್ನು ಕಾಮಧೇನು(ಬೇಡಿದ್ದನ್ನು ನೀಡುವ ದೇವತಾ ಗೋವು)ವಿನ ಸಂತತಿ ಎಂದು ನಂಬಲಾಗಿದೆ. ಇಂತಹ ಯೋಗ್ಯತೆಗಳಿರುವ ಮಲೆನಾಡಗಿಡ್ಡಗಳನ್ನು ಗುರುತಿಸುವುದು ಹೇಗೆ?
ಮಲೆನಾಡಗಿಡ್ಡಗಳ ಗಾತ್ರ ಚಿಕ್ಕದು. ಆಹಾರ ಕಡಿಮೆಯಾದರೂ ಬೇಗನೆ ಸೊರಗಲಾರವು. ವಿವಿಧ ಬಣ್ಣ ಹಾಗೂ ವಿವಿಧ ಕೊಂಬಿನ ಆಕೃತಿಗಳಲ್ಲಿ ಕಂಡುಬರುವ ಗಿಡ್ಡಗಳು ಸಾಮಾನ್ಯವಾಗಿ ಕಿವಿಯ ಮೂಲಕ ತಮ್ಮ ಪರಿಶುದ್ಧತೆಯನ್ನು ತೋರಿಸ್ತವೆ. ಶಂಖದ ರಚನೆಯಂತಹ ಕಿವಿ,ತುದಿ ಸಾಕಷ್ಟು ಚೂಪಾದ ಆಕೃತಿ.ಕೆಲವಕ್ಕಿ ಕಿವಿಯೊಳಗೆ ಕಪ್ಪಾದ ಮಚ್ಚೆ, ಜೆರ್ಸಿ ಎಚ್ಚೆಫ್ಗಳ ಕಿವಿಗಳನ್ನು ನೋಡಿ ಗಿಡ್ಡಗಳ ಕಿವಿಯ ವ್ಯತ್ಯಾಸವನ್ನು ಕಂಡು ಹಿಡಿಯಬಹುದು. ಕೂದಲು ಅತ್ಯಂತ ಚಿಕ್ಕದಾಗಿರುವುದು. ನೀಳವಾದ ಬಾಲ ಕೆಲವು ಹಸುಗಳ ಬಾಲ ನೆಲಕ್ಕೆ ತಾಗುವಂತಿರುವುದು. ಬಾಲದ ತುದಿಯ ಕೂದಲು ಕೂಡ ತಲೆಕೂದಲಿನಂತೆ ನೀಳವಾಗಿರುವುದು. ಪೃಷ್ಠಭಾಗದ ಎಲುಬುಗಳು ಕಾಣದೆ ವೃತ್ತಾಕಾರವಾಗಿರುವುದು. ಹಣೆ ಹುಬ್ಬು ಬೆನ್ನು ತೊಡೆ ಹಾಗೂ ತೊಡೆಯ ಒಳಭಾಗದಲ್ಲಿ ಸುರುಳಿಯಾಕಾರದ ಕೂದಲಿನ ರಚನೆ. ಬೆನ್ನಿನ ಮೇಲೆ ರೇಖೆಯಂತಹ ರಚನೆ.ಕೆಲವಕ್ಕೆ ನೀಳ ಮುಖ ಇನ್ನು ಕೆಲವಕ್ಕೆ ಗಿಡ್ಡವೂ ಚಿಕ್ಕದೂ ಆದ ಮೂತಿ. ಕರುಗಳು ಹುಟ್ಟಿದ ಕೆಲವೇ ನಿಮಿಷದಲ್ಲಿ ಎದ್ದು ಓಡಾಡುವುದು.
ಹಸುಗಳು ತಮ್ಮ ಕರುವಿಗಾಗಿ ಹಾಲನ್ನು ಕಟ್ಟಿಡುವ ಸ್ವಭಾವ ಹೊಟ್ಟೆ ತುಂಬಿದರೆ ಆಹಾರ ಸ್ವೀಕರಿಸದ ಸ್ವಭಾವ,ಕಡಿಮೆ ನೀರು ಕುಡಿಯುವುದು. ಆಡಿನ ಹಿಕ್ಕೆಯಂತಹ ಸೆಗಣಿಯ ಉಂಡೆಗಳು ಅಥವಾ ಚಪ್ಪಟೆಯಾದ ಪದರುಗಳುಳ್ಳ ಸೆಗಣಿ
ಮೈ ಮೇಲೆ ಸೆಗಣಿಮೆತ್ತದಂತೆ ಶುಚಿಯಾಗಿಟ್ಥುಕೊಳ್ಳುವುದು ಜ್ವರದಂತಹ ಖಾಯಿಲೆ ಬಂದರೆ ಆಹಾರ ಮುಟ್ಟದಿರುವುದು. ಕರುವಿಲ್ಲದೆ ಹಾಲು ಕೊಡದಿರುವುದು. ಕರು ಹಾಕಿ ಮೂರು ನಾಲ್ಕು ತಿಂಗಳು ಮಾತ್ರ ಹಾಲು ಕೊಡುವುದು.
ಇಂತಹ ಹಲವಾರು ಅದ್ಭುತ ವಿಶೇಷತೆಯುಳ್ಳ ಮಲೆನಾಡ ಗಿಡ್ಡ ಗೋ ವಂಶವನ್ನು ಕಟುಕರ ಪಾಲಾಗದಂತೆ ರಕ್ಷಿಸಿ ಸಂವರ್ಧಿಸುವ ಗುರುತರ ಹೊಣೆಗಾರಿಕೆ ಮಾನವರ ಮೇಲಿದೆ.
ಆದ್ದರಿಂದ ಸ್ವಚ್ಛ ಪರಿಸರದಲ್ಲಿ ಮುಕ್ತವಾಗಿ ಗೋವುಗಳು ಮೇಯಲು ತಿರುಗಾಡಿ ತಮ್ಮ ಸಂತತಿಯನ್ನು ಬೆಳೆಸುತ್ತಾ ಮುಂದಿನ ಜೀವಜಾಲದ ಪೀಳಿಗೆಯ ಉಳಿವಿಗೆ ಆಧಾರವಾದ ದೇಶೀ ತಳಿಗಳಲ್ಲಿ ಒಂದಾದ ಮಲೆನಾಡ ಗಿಡ್ಡಗಳನ್ನು ಉಳಿಸುವ ಕಾರ್ಯದಲ್ಲಿ ಮುನ್ನಡೆಯೋಣ.
ನಕಲಿ ಮತ್ತು ಕಳಪೆ ಗುಣಮಟ್ಟದ ರಸಗೊಬ್ಬರಗಳ ಪೂರೈಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ…
ಸಹಾಯ ಸಂಘದ ಮಹಿಳೆಯರಿಗೆ ಮೇಕೆ, ಕುರಿ, ಕೋಳಿ ಸಾಕಾಣಿಕೆಯಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶವಿದೆ…
ವಿಶ್ವದ ಹಲವು ಭಾಗಗಳಲ್ಲಿನ ಭೌಗೋಳಿಕ ರಾಜಕೀಯ ಪರಿಸ್ಥಿತಿಗಳ ಹೊರತಾಗಿಯೂ ಭಾರತವು ಇಂಧನ ಲಭ್ಯತೆ,…
ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ಭಾಗದಲ್ಲಿ ವಾಹನಗಳ ದಟ್ಟಣೆ ನಿಯಂತ್ರಿಸಲು ಜಿಲ್ಲಾಡಳಿತ ವಾಹನಗಳಿಗೆ ಎರಡು…
ಯಾದಗಿರಿಯಲ್ಲಿ ಹೆಸರು ಬೆಳೆಗೆ ಹಳದಿ ನಂಜಾಣು ರೋಗದ ಭಾದೆ ಕಾಣಿಸಿಕೊಂಡಿದ್ದು, ಇದರ ತಡೆಗೆ…
ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಮಳೆಯಾಗಿದೆ. ದಕ್ಷಿಣಕನ್ನಡ ಜಿಲ್ಲೆಯ ಮುಲ್ಕಿಯಲ್ಲಿ 30…