ಕೇರಳದ ಕೋಝಿಕ್ಕೋಡ್ ಜಿಲ್ಲೆಯಲ್ಲಿ ಹರಡುತ್ತಿರುವ ನಿಫಾ ವೈರಸ್ ಬಗ್ಗೆ ಈಗ ಕೃಷಿಕರೂ ಆತಂಕಕ್ಕೆ ಒಳಗಾಗಿದ್ದಾರೆ. ಬಾವಲಿಗಳ ಕಾಟ ಹೆಚ್ಚಾಗಿರುವ ಪ್ರದೇಶದಲ್ಲಿ ಈಗ ಅಡಿಕೆ ಸಹಿತ ಕೃಷಿ ಕೆಲಸಕ್ಕೂ ಆತಂಕವಾಗಿದೆ.
ನಿಫಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಕೃಷಿಕರಿಗೆ ಸವಾಲಾಗಿ ಪರಿಣಮಿಸಿದೆ. ಬಾವಲಿಗಳ ಕೃಷಿಗೂ ಹೆಚ್ಚಾಗಿ ತೊಂದರೆ ಕೊಡುತ್ತವೆ. ಅಡಿಕೆ, ಬಾಳೆ, ತೆಂಗು ಕೃಷಿಯಲ್ಲೂ ಬಾವಲಿಗಳ ಓಡಾಟ ಇರುತ್ತದೆ. ನಿಫಾ ವೈರಸ್ ಬಾವಲಿ ಮೂಲಕ ಹರಡುತ್ತದೆ ಎನ್ನುವ ಸುದ್ದಿಯು ಕೇರಳದ ಕೋಝಿಕ್ಕೋಡ್ ಪ್ರದೇಶದ ಕೃಷಿಕರಿಗೆ ಆತಂಕಕ್ಕೆ ಕಾರಣವಾಗಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಕೋಝಿಕ್ಕೋಡ್ ಜಿಲ್ಲೆಯಲ್ಲೂ ಅಡಿಕೆ ಸ್ವಲ್ಪ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಈಗ ವೈರಸ್ ಹರಡುವ ಪ್ರದೇಶದಲ್ಲೂ ಅಡಿಕೆ ಕೃಷಿ ಇರುವುದರಿಂದ ಈಗ ಅಡಿಕೆ ಬಾವಲಿ ಕಚ್ಚಿ ಕೆಳಗೆ ಬೀಳಿಸುತ್ತದೆ. ಈ ಅಡಿಕೆಯನ್ನು ಹೆಕ್ಕುವ ಸಂದರ್ಭ ಕೃಷಿಕರಿಗೆ ಭಯದ ವಾತಾವರಣ ಉಂಟಾಗಿದೆ. ವೈರಾಣು ಹರಡುವ ಭೀತಿಯಿಂದ ಅಡಿಕೆ ಸಂಗ್ರಹಿಸಲು ಸಾಧ್ಯವಾಗದ ಪರಿಸ್ಥಿತಿ ಇಲ್ಲಿ ಇದೆ. ಬಾಳೆ ಕೃಷಿ ಸೇರಿದಂತೆ ಹಣ್ಣಿನ ಕೃಷಿಗಳನ್ನು ಬೆಳೆಸುವವರೂ ಇದೇ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ನಿಫಾ ಭೀತಿಯಿಂದ ಹಣ್ಣುಗಳ ಬೆಲೆಯೂ ಇಳಿಕೆಯಾಗಿದೆ. ವಿಶೇಷವಾಗಿ ಕೋಝಿಕ್ಕೋಡಿನ ಬಾಳುಶ್ಶೇರಿ ಕ್ಷೇತ್ರದ ಗುಡ್ಡಗಾಡು ಪ್ರದೇಶದಲ್ಲಿ ಭತ್ತದ ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದೇ ಭಾಗದಲ್ಲಿ ಅಡಿಕೆ ಹಾಗೂ ಹಣ್ಣಿನ ಕೃಷಿಯೂ ಇದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಎರಡು…
ಎಪ್ರಿಲ್ 24 ರಂದು ಮಧ್ಯಾಹ್ನ ನಿಮ್ಮ ನೆರಳನ್ನು ಕಾಣಲಾಗುವುದಿಲ್ಲ. ಏಕೆಂದರೆ ಈಗ ಕರ್ಕಾಟಕ…
ಹಂಚಿ ತಿನ್ನುವ ಅಭ್ಯಾಸ ರೂಡಿ ಇಲ್ಲವಾದರೂ ಸಂಸಾರಿಯಾದ ಕೂಡಲೇ ಎಲ್ಲವೂ ಬದಲಾಗುತ್ತದೆ. ಆ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಸಕಲಜೀವಿಗಳ ಆಡುಂಬೊಲ ನಮ್ಮೀ ಪ್ರಕೃತಿ. ಪ್ರಕೃತಿಯೊಡಲು ನಮ್ಮತಾಯ ಮಡಿಲು. ಪ್ರಕೃತಿಯು ಕೆಲವೆಡೆ ರುದ್ರರಮಣೀಯ;…
ಹಕ್ಕಿಗಳು ಮರಿಗಳಿಗೆ ಹಾರಲು ಕಲಿಸುತ್ತವೆ. ಒಮ್ಮೆ ಹಾರಲು ಬಂತೆಂದರೆ ಗೂಡು ಬಿಟ್ಟು ಹಾರುತ್ತವೆ…