ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಸಮಿತಿಯ ವಾರ್ಷಿಕ ಕೌನ್ಸಿಲ್ ಮಹಾಸಭೆ ಜ. 17ರಂದು ನೆಕ್ಕಿಲ ಮದರಸಾ ಹಾಲ್ ನಲ್ಲಿ ಡಿವಿಷನ್ ಸಮಿತಿ ಅಧ್ಯಕ್ಷ ಜಿ.ಕೆ ಇಬ್ರಾಹಿಂ ಅಂಜದಿಯವರ ಅಧ್ಯಕ್ಷತೆಯಲ್ಲಿ ಜರಗಿತು. ಎಸ್ಸೆಸ್ಸೆಫ್ ದ.ಕ ಈಸ್ಟ್ ಝೋನ್ ಸದಸ್ಯ ಜುನೈದ್ ಸಖಾಫಿ ಜೀರ್ಮುಖಿ ದುಆ ನೆರವೇರಿಸಿ, ಎಸ್.ಎಂ.ಎ ಸುಳ್ಯ ರೀಜನಲ್ ಪ್ರ. ಕಾರ್ಯದರ್ಶಿ ಲತೀಫ್ ಸಖಾಫಿ ಗೂನಡ್ಕ ಉದ್ಘಾಟಿಸಿದರು.
ನೆಕ್ಕಿಲ ಜುಮಾ ಮಸ್ಜಿದ್ ಮುದರ್ರಿಸ್ ಝಿಯಾದ್ ಸಖಾಫಿ ಬಾರೆಬೆಟ್ಟು ಸಂಘಟನಾ ತರಬೇತಿ ನಡೆಸಿದರು. ವೀಕ್ಷಕರಾಗಿ ಆಗಮಿಸಿದ ಎಸ್ಸೆಸ್ಸೆಫ್ ದ.ಕ. ಈಸ್ಟ್ ಝೋನ್ ಸದಸ್ಯ ಅಬ್ದುರ್ರಹ್ಮಾನ್ ಪದ್ಮುಂಜ ಕೌನ್ಸಿಲ್ ನಿಯಂತ್ರಿಸಿದರು. ಪ್ರ.ಕಾರ್ಯದರ್ಶಿ ಸಿರಾಜುದ್ದೀನ್ ಹಿಮಮಿ ಕುಂಭಕ್ಕೋಡು ವರದಿ ಹಾಗೂ ಕೋಶಾಧಿಕಾರಿ ಹಸೈನಾರ್ ನೆಕ್ಕಿಲ ಲೆಕ್ಕ ಪತ್ರ ಮಂಡಿಸಿದರು. ಮುಖ್ಯ ಅತಿಥಿಗಳಾಗಿ ಕೆ.ಸಿ.ಎಫ್ ಅಬುಧಾಬಿ ಝೋನ್ ಅಧ್ಯಕ್ಷ ಹಸೈನಾರ್ ಅಮಾನಿ, ಎಸ್.ವೈ.ಎಸ್ ದ.ಕ.ಈಸ್ಟ್ ಜಿಲ್ಲಾ ಸದಸ್ಯ ಸಿದ್ದೀಖ್ ಕಟ್ಟೆಕಾರ್, ಎಸ್.ವೈ.ಎಸ್ ನೆಕ್ಕಿಲ ಬ್ರಾಂಚ್ ಅಧ್ಯಕ್ಷ ರಫೀಖ್, ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಮಾಜಿ ಕಾರ್ಯದರ್ಶಿ ಎ.ಬಿ. ಅಬ್ಬಾಸ್ ಹಾಗೂ ನೆಕ್ಕಿಲ ಜಮಾಅತ್ ನಾಯಕರು ಉಪಸ್ಥಿತರಿದ್ದರು.
ನೂತನ ಸಮಿತಿಯ ಅಧ್ಯಕ್ಷರಾಗಿ ಎ.ಎಂ.ಫೈಝಲ್ ಝುಹ್’ರಿ ಕಲ್ಲುಗುಂಡಿ, ಪ್ರ. ಕಾರ್ಯದರ್ಶಿಯಾಗಿ ಹಸೈನಾರ್ ನೆಕ್ಕಿಲ, ಕೋಶಾಧಿಕಾರಿ ಅಬ್ದುರ್ರಹ್ಮಾನ್ ಸಖಾಫಿ ತಂಬಿನಮಕ್ಕಿ, ಉಪಾಧ್ಯಕ್ಷರುಗಳಾಗಿ ಸಿರಾಜ್ ಹಿಮಮಿ ಕುಂಭಕ್ಕೋಡು, ಜುನೈದ್ ಸಖಾಫಿ ಜೀರ್ಮುಖಿ ಯವರನ್ನೂ, ಕಾರ್ಯದರ್ಶಿಗಳಾಗಿ ಖಲೀಲ್ ಝುಹ್ರಿ, ನೌಶಾದ್ ಕೆರೆಮೂಲೆ, ಸ್ವಬಾಹ್ ಹಿಮಮಿ, ಸ್ವಾದಿಖ್ ಕಲ್ಲುಗುಂಡಿ, ಕಲಾಂ ಝುಹ್ರಿ, ಶಮೀರ್ ಡಿ.ಎಚ್ ರವರೊಂದಿಗೆ 14 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನೂ ಆಯ್ಕೆ ಮಾಡಲಾಯಿತು.
ಪ್ರ. ಕಾರ್ಯದರ್ಶಿ ಸಿರಾಜ್ ಹಿಮಮಿ ಸ್ವಾಗತಿಸಿ ನೂತನ ಪ್ರ. ಕಾರ್ಯದರ್ಶಿ ಹಸೈನಾರ್ ನೆಕ್ಕಿಲ ವಂದಿಸಿದರು.
ಅಡಿಕೆಯಲ್ಲೂ ಟಿಶ್ಯೂ ಕಲ್ಚರ್ ತಂತ್ರಜ್ಞಾನದ ಅಳವಡಿಕೆ ಸಾಧ್ಯವೇ ಎಂಬ ಪ್ರಯತ್ನ ಸಾಕಷ್ಟು ಹಿಂದೆಯೇ…
ಅಡಿಕೆ ಆಮದು ಆಗುತ್ತಿರುವ ಹಿನ್ನಲೆ ನಮ್ಮ ಸ್ಥಳೀಯ ಅಡಿಕೆ ಬೆಳೆಗಾರರು ನ್ಯಾಯಸಮ್ಮತವಲ್ಲದ ದರ…
ಕೇಂದ್ರ ಬಜೆಟ್‌ನಲ್ಲಿ ಕೃಷಿ ವಲಯಕ್ಕೆ 1 ಲಕ್ಷದ 37 ಸಾವಿರದ 757 ಕೋಟಿ…
ಆನೆಗಳ ಸಂಖ್ಯೆಗೆ ಅನುಗುಣವಾಗಿ ಅರಣ್ಯ ಪ್ರದೇಶ ಹೆಚ್ಚಳವಾಗದ ಕಾರಣ ಆನೆ-ಮಾನವ ಸಂಘರ್ಷ ಹೆಚ್ಚುತ್ತಿದೆ.ಜನರ…
ಹೊಸರುಚಿಯ ಮೂಲಕ ಈ ವಾರ ಪಪಾಯ ಹಣ್ಣು ಬರ್ಫಿಯ ಬಗ್ಗೆ ಹೇಳಿದ್ದಾರೆ ಗೃಹಿಣಿ…
ರಾಮಸೀತೆಯರೊಂದಾಗಿ ಕುಶಲವರಿಗೆ ತಂದೆ ತಾಯಿ ಲಭಿಸಿದ ಘಳಿಗೆಯು ಎಲ್ಲರಿಗೂ ಸಂಭ್ರಮಯೋಗ್ಯವಾಗಿ ಕಾಣುತ್ತದೆ. ಹಾಗಾಗಿ…