Advertisement
MIRROR FOCUS

ಗ್ರಾಮ ಪಂಚಾಯತಿಗಳ ಮೂಲಕ ಸಹಜ ಬೇಸಾಯ ಅನುಷ್ಠಾನವಾಗಬೇಕು | ಸಹಜ ಕೃಷಿ ವಿಜ್ಞಾನಿ ಡಾ| ಮಂಜುನಾಥ

Share

ಚಾಮರಾಜನಗರದ ಯಳಂದೂರು ತಾಲೂಕಿನ ದುಗ್ಗಹಟ್ಟಿ ರಾಜೇಶ ಅವರ ತೋಟದಲ್ಲಿ, ಜೆ ಎಸ್ ಬಿ ಪ್ರತಿಷ್ಠಾನ ವತಿಯಿಂದ ಸುಸ್ಥಿರ ಕೃಷಿ ತರಬೇತಿ ಕಾರ್ಯಾಗಾರ(Agricultural workshop) ಹಮ್ಮಿಕೊಳ್ಳಲಾಗಿತ್ತು.

Advertisement
Advertisement
Advertisement

ಭಾರತ(India) ಕೃಷಿ ಪ್ರಧಾನ ದೇಶವಾಗಿದೆ. ಅನಾದಿಕಾಲದಿಂದ ಮಾನವ(Human) ಮತ್ತು ಕೃಷಿಗೆ(Agriculture) ಅನ್ಯೋನ್ಯ ಸಂಬಂಧವಿದೆ. ಪರಿಸರ ರಕ್ಷಣೆ(Save nature) ನಮ್ಮ ಹೊಣೆ, ಯಾವತ್ತೂ ಕೃಷಿ ನಮ್ಮನ್ನು ಕೈ ಬಿಟ್ಟಿಲ್ಲ ಮುಂದೆ ಸಹ ಬಿಡಿವುದಿಲ್ಲ. ಆದರೆ ನಾವು ಕೃಷಿಯನ್ನು ಕಡೆಗಣಿಸುತ್ತಿರುವುದು ಖೇದಕರ. ಕೃಷಿ ಇಲ್ಲದಿದ್ದರೆ ಬದುಕು ಸಾಧ್ಯವಿಲ್ಲ. ಯುವಕರು ಕೃಷಿಗೆ ಒಲವು ತೋರಿಸಬೇಕು ಇದರಿಂದ ಕೃಷಿಯಿಂದ ವಲಸೆ ಹೋಗುವುದನ್ನು ತಪ್ಪಿಸಬಹುದು. ಸ್ವಾವಲಂಬನೆ ಬದುಕು(Independent Life) ಸಾಗಿಸುವುದಕ್ಕೆ ಉಪ ಬೆಳೆಗಳು, ಪರ್ಯಾಯ ಬೆಳೆಗಳ(Sub crops, alternate crop) ಬಗ್ಗೆ ಗಮನ ಅಗತ್ಯವಾಗಿದೆ ಎಂದು ಸಹಜ ಕೃಷಿ ವಿಜ್ಞಾನಿ ಡಾ| ಮಂಜುನಾಥ   ತಿಳಿಸಿದರು.

Advertisement

ಇಂದಿನ ಹವಾಮಾನ ಬದಲಾವಣೆಯಿಂದ ಅತಿವೃಷ್ಟಿ, ಅನಾವೃಷ್ಟಿ, ತಾಪಮಾನ ಏರಿಕೆ, ಅಂತರ್ಜಲ ಕುಸಿತ ಇವುಗಳಿಂದ ಕೃಷಿ ಕ್ಷೇತ್ರದ ಮೇಲೆ ಗಂಭೀರವಾದ ಪರಿಣಾಮ ಬೀರುತ್ತಿರುವುದರಿಂದ ಕೃಷಿ ಕ್ಷೇತ್ರವನ್ನು ಸುಸ್ಥಿರವಾಗಿಸಲು ಮತ್ತು ಹವಾಮಾನ ಬದಲಾವಣೆಯ ಸವಾಲು ಎದುರಿಸಲು ಹಾಗು ರೈತರ ಕೃಷಿ ಆದಾಯವನ್ನು ಹೆಚ್ಚಿಸಲು ವೈಜ್ಞಾನಿಕವಾಗಿ ಕೃಷಿ ಕ್ಷೇತ್ರವನ್ನು ವಿನ್ಯಾಸಗೊಳಿಸುವ ಅನಿವಾರ್ಯತೆಯ ಬಗ್ಗೆ ಕಾರ್ಯಗಾರದಲ್ಲಿ ಚರ್ಚಿಸಲಾಯಿತು.

ಕೃಷಿ ಕ್ಷೇತ್ರವನ್ನು ಸ್ಥಳೀಯವಾಗಿ ತಿಳಿಯಲು ಮತ್ತು ಅಲ್ಲಿನ ವಾತಾವರಣಕ್ಕೆ ಅನುಗುಣವಾಗಿ ಕೃಷಿ ಅಥವಾ ತೋಟಗಾರಿಕೆ ಬೆಳೆಗಳನ್ನು ಆಯೋಜನೆ ಮಾಡಲು ಸ್ಥಳೀಯ ರೈತರೊಂದಿಗೆ ಗ್ರಾಮ ಸಭೆ ನೆಡೆಸುವುದು, ಸಭೆಯಲ್ಲಿ ಗ್ರಾಮ ಪಂಚಾಯತಿಯ ಪಿಡಿಒ, ಇಒ ಕೃಷಿ, ತೋಟಗಾರಿಕೆ, ರೇಷ್ಮೆ, ಪಶು ಸಂಗೋಪನೆ, ಮೀನುಗಾರಿಕೆ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು, ಗ್ರಾಮ, ತಾಲೂಕು & ಜಿಲ್ಲಾ ಪಂಚಾಯತಿ ಸದಸ್ಯರೂ ಸೇರಿದಂತೆ ಎಲ್ಲರೂ ಒಟ್ಟಾಗಿ ಚರ್ಚಿಸಿ, ಅಲ್ಲಿನ ಸ್ಥಳೀಯ ರೈತರ ಜಮೀನಿನಲ್ಲಿ ಸಹಜ ಬೇಸಾಯ ತಾಕುಗಳನ್ನು ಸೃಷ್ಟಿಸಲು ಬೇಕಾದ ತಾಂತ್ರಿಕ ಮಾಹಿತಿ ಮತ್ತು ಅದರ ಅನುಷ್ಠಾನಕ್ಕೆ ಬೇಕಾಗುವ ಹಣಕಾಸಿನ ವಿವರವನ್ನು ಅಂತಿಮಪಡಿಸಿ, ಯೋಜನೆ ಅನುಷ್ಠಾನ ಮಾಡಲು ಗ್ರಾಮ ಪಂಚಾಯತಿ ಸಭೆಯಲ್ಲಿ ತೀರ್ಮಾನ ಮಾಡುವುದು.
ಮೊದಲಿಗೆ, ಒಂದು ಎಕರೆ ತೆಂಗಿನ ತೋಟಕ್ಕೆ ಅಥವಾ ಖಾಲಿ ಜಮೀನು ಹೊಂದಿರುವ ರೈತರನ್ನು ಆರಿಸಿಕೊಳ್ಳುವುದು, ಅವರಲ್ಲಿ ನೀರಿನ ಸೌಲಭ್ಯದ ಜೊತೆಗೆ ಜಾನುವಾರುಗಳಿರಬೇಕು, ಮಹಿಳೆಯರು, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಮೊದಲ ಪ್ರಾಶಸ್ತ್ಯವನ್ನು ಕೊಡುವುದು. ತೆಂಗಿನ ತೋಟದಲ್ಲಿ ಕೋಕೋ, ಬಾಳೆ, ಅರಿಶಿನ, ನುಗ್ಗೆ, ಜಾಯಿಕಾಯಿ, ಲವಂಗ, ಚಕ್ಕೆ, ಜಮೀನಿನ ಹೊರ ಭಾಗದ ಬದುವಿನಲ್ಲಿ ಮಾವು, ಸಪೋಟ, ಬೆಣ್ಣೆ ಹಣ್ಣು, ಪೇರಲೆ ಹೀಗೆ ಬಗೆಬಗೆಯ ಹಣ್ಣುಗಳನ್ನು ಬೆಳೆಯುವುದು.
ಬದು ನಿರ್ಮಾಣ, ಗುಂಡಿ ತೆಗೆಯಲು, ಉತ್ತಮ ತಳಿಯ ಗಿಡಗಳನ್ನು ಖರೀದಿಸಲು, ಜೀವಾಣುಗಳನ್ನು ತಯಾರಿಸಲು, ಪ್ರತಿ ನಾಲ್ಕು ಅಡಿಗೆ ಸಾಕಾಗುವಷ್ಟು ಡ್ರಿಪ್, ಹೀಗೆ ಒಟ್ಟು ವೆಚ್ಚದ ಸುಮಾರು 80-85% ಹಣಕಾಸಿನ ನೆರವನ್ನು ಗ್ರಾಮ ಪಂಚಾಯತಿ ಮೂಲಕ ನೀಡುವುದು. ಕೃಷಿ ಭೂಮಿಗೆ ಬೇಕಾದ ಫಲವತ್ತಾದ ಕೊಟ್ಟಿಗೆ ಗೊಬ್ಬರ, ಮಾನವ ಶ್ರಮ, ಒಳಸುರಿ ತಯಾರಿಸಲು ಬೇಕಾದ ಪರಿಕರ ಹೀಗೆ ಶೇ.15-20% ವೆಚ್ಚವನ್ನು ರೈತರು ಭರಿಸಿಕೊಳ್ಳಬೇಕು.
ಕೃಷಿ ವಿಜ್ಞಾನ ಕೇಂದ್ರ, ಕೃಷಿ, ತೋಟಗಾರಿಕೆ ಹಾಗು ಸಂಬಂಧಿಸಿದ ಇತರೆ ಎಲ್ಲಾ ಸರ್ಕಾರಿ ಇಲಾಖೆಗಳು ರೈತರಿಗೆ ಸಹಜ ಕೃಷಿ ಬಗ್ಗೆ ತರಬೇತಿ ನೀಡಬೇಕು. ಕೃಷಿ ಹಾಗು ಪಶು ಸಖಿಯರು ತರಬೇತಿ ಕಾರ್ಯಕ್ರಮದ ಕೇಂದ್ರ ಬಿಂದುಗಳಾಗಿರುತ್ತಾರೆ ಮತ್ತು ಅವರು ರೈತರು ಮತ್ತು ವಿಜ್ಞಾನಿಗಳ ನಡುವೆ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಾರೆ. ಕೃಷಿ ವಿಜ್ಞಾನ ಕೇಂದ್ರದವರು ತರಬೇತಿ ಜೊತೆಗೆ ರೈತರಿಗೆ ವಿತರಣೆ ಮಾಡಲು ಜೀವಾಣುಗಳು, ಜೇನು ಪೆಟ್ಟಿಗೆ ಇತ್ಯಾದಿ ನೀಡುವುದು, ತೋಟಗಾರಿಕೆ ಇಲಾಖೆಯವರು ಹನಿ ನೀರಾವರಿ, ಗಿಡಗಳು, ಗಿಡಗಳನ್ನು ನೆಡಲು ಗುಂಡಿ ತೆಗೆಸುವುದು, ಕೃಷಿ ಇಲಾಖೆಯವರು ಹಸಿರು ಹೊದಿಕೆಗೆ ಬೇಕಾಗುವ ಬೀಜ ಹಾಗು ಇತ್ಯಾದಿ ಪರಿಕರದ ಜವಾಬ್ಧಾರಿ, ಮೀನುಗಾರಿಕೆ ಇಲಾಖೆಯವರು ಕೃಷಿ ಹೊಂಡಕ್ಕೆ ಮೀನುಗಳನ್ನು ಕೊಡುವುದು, ಪಶು ಸಂಗೋಪನೆಯವರು ಜಾನುವಾರುಗಳಿಗೆ ರೋಗ ರುಜಿನಗಳು ಬರದಂತೆ ಹಾಗು ಮೇವಿಗೆ ಕೊರತೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಹೀಗೆ ವಿವಿಧ ಇಲಾಖೆಯವರು ಜವಾಬ್ದಾರಿ ನಿರ್ವಹಣೆಯನ್ನು ನಿಭಾಯಿಸಿಕೊಂಡು ಹೋಗುವುದು ಎಂದು ವಿಸ್ತೃತವಾಗಿ ಚರ್ಚಿಸಲಾಯಿತು.
ಪ್ರತಿ ಜಿಲ್ಲೆಗೆ ಬೇಕಾದ ಕಾರ್ಯಕ್ರಮದ ರೂಪುರೇಷೆ, ಸಹಜ ಬೇಸಾಯಕ್ಕೆ ಬೇಕಾದ ಎಲ್ಲಾ ತಾಂತ್ರಿಕ ಬೆಂಬಲ ಮತ್ತು ತರಬೇತಿ ಒದಗಿಸುವ ಬಗ್ಗೆ ರೈತರು ಶೀಘ್ರದಲ್ಲಿ ಸಭೆ ಸೇರಿ ಅನುಷ್ಠಾನದ ಮಾರ್ಗಸೂಚಿಗಳನ್ನು ಕಾರ್ಯಗತಗೊಳಿಸಲು ಕಾರ್ಯಾಗಾರದಲ್ಲಿ ತೀರ್ಮಾನಿಸಲಾಯಿತು. ಕಾರ್ಯಾಗಾರದಲ್ಲಿ ರೈತ ಸಂಘದ ಹೂನ್ನೂರು ಪ್ರಕಾಶ, ದುಗ್ಗಟ್ಟಿ ರಾಜೇಶ, ಪ್ರಶಾಂತ ಜಯರಾಂ, ಎಪಿಎಂಸಿ ಮಾಜಿ ಅಧ್ಯಕ್ಷ ಶಂಕರಮೂರ್ತಿ, ಪ್ರಸನ್ನ, ಮಹೇಂದ್ರ, ಚಂದ್ರಶೇಖರಯ್ಯ, ವೆಂಕಟೇಶ, ರಕ್ಷಿತ್, ದೀಪಾ ಮತ್ತು ರಾಜ್ಯದ ವಿವಿಧ ಭಾಗದಿಂದ 50ಕ್ಕೂ ಹೆಚ್ಚಿನ ರೈತರು ಭಾಗವಹಿಸಿದ್ದರು.

(ಮಾಧ್ಯಮ ಮಾಹಿತಿ: ಶಶಿಕುಮಾರ್)

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 23-11-2024 | ರಾಜ್ಯದಲ್ಲಿ ಒಣಹವೆ ಮುಂದುವರಿಕೆ | ನ.28 ರಿಂದ ಕೆಲವು ಕಡೆ ಮಳೆ ಸಾಧ್ಯತೆ |

ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.

3 hours ago

ಇಂಧನ ಉಳಿತಾಯ | ಪರಿಸರ ಜಾಗೃತಿ | ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ

ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…

9 hours ago

ಕೃಷಿ ಭೂಮಿ ಉಳಿಸಿಕೊಳ್ಳಲು- ಆರೋಗ್ಯ ಕಾಪಾಡಲು ಸಾವಯವ ಕೃಷಿಯತ್ತ ಒಲವು ಬೆಳೆಸಿ | ಐಐಟಿ ನಿರ್ದೇಶಕ ಡಾ.ವೆಂಕಪ್ಪಯ್ಯ ಆರ್. ದೇಸಾಯಿ

ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…

9 hours ago

ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಕ್ಯೂಆರ್ ಕೋಡ್ ಅಳವಡಿಕೆ

ಕ್ಯೂಆರ್ ಕೋಡ್  ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…

9 hours ago

ಅಡಿಕೆ ಹಳದಿರೋಗ ಪೀಡಿತ ಪ್ರದೇಶದಲ್ಲಿ ಗೇರುಕೃಷಿ ಹೇಗೆ..? | ಸಂಪಾಜೆಯಲ್ಲಿ ಪರ್ಯಾಯ ಕೃಷಿಯ ಬಗ್ಗೆ ಚಿಂತನೆ |

ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…

10 hours ago

ಅಡಿಕೆ ಮೇಲೆ ಕ್ಯಾನ್ಸರ್‌ ತೂಗುಗತ್ತಿಯ ಭಯ ಏಕೆ ? | ಅಡಿಕೆಯ ಔಷಧೀಯ ಅಧ್ಯಯನ ಸಾಕಷ್ಟಿದೆ | ಈಗ ಸಂಘಟಿತ ಹೋರಾಟ ಅಗತ್ಯ |

ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…

19 hours ago