Advertisement
Opinion

ವಿದೇಶಿ ಗೋವುಗಳ ತಳಿಯ ಹಾಲು ಮಕ್ಕಳಿಗೆ ಒಳ್ಳೆಯದಲ್ಲ..| ಆಯಾ ಪ್ರದೇಶದ ಹಸುಗಳ ಹಾಲು ಮಕ್ಕಳಿಗೆ ಅತೀ ಶ್ರೇಷ್ಠ |

Share

ಗುಜರಾತ್‌ನ ಜುಮ್ನಾರ್ಗ ಮೂಲದ ಆಯುರ್ವೇದ ಯೂನಿವರ್ಸಿಟಿಯ(Ayurvedic University) ಖ್ಯಾತ ಸಂಶೋಧಕ ಡಾ. ಹಿತೇಶ್ ಜಾನಿ, ಗೋವುಗಳ(Cattle) ಕುರಿತಂತೆ ನಡೆಸಿದ ಸಂಶೋಧನೆಯ(Research) ವರದಿ ವಿಶ್ವವ್ಯಾಪಿ ಚರ್ಚೆಯಾಗುತ್ತಿದೆ. ವಿಶ್ವದ ಖ್ಯಾತ ಸಂಶೋಧಕರು ಈ ಮಾಹಿತಿಯನ್ನು ಕಂಡು ಒಂದು ಕ್ಷಣ ಹೌಹಾರಿದ್ದಾರೆ. ಆ ವರದಿಯಲ್ಲಿ ವಿದೇಶಿ ತಳಿಗಳ ಹಾಲಿನಲ್ಲಿ ಬಿಸಿಎಂ-7 ಎಂಬ ರಾಸಾಯನಿಕ(Chemical) ಅಂಶವಿದ್ದು, ಇದರ ಸೇವನೆಯಿಂದ ದೇಹ ರೋಗಗಳ(Disease) ಗೂಡಾಗುತ್ತಿದೆ. ಅದರಲ್ಲೂ ಹೆಚ್ಚಾಗಿ ಮಕ್ಕಳ ಆರೋಗ್ಯದ(Children health) ಮೇಲೆ ಇದು ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತಿದೆ. ಸಣ್ಣ ವಯಸ್ಸಿನಲ್ಲಿಯೇ ದೊಡ್ಡ ರೋಗಗಳಿಗೆ ಮಕ್ಕಳು ತುತ್ತಾಗುತ್ತಿದ್ದಾರೆ.

ವಯಸ್ಸಿಗೆ ಮೀರಿದ ದೇಹ ರಚನೆಯೂ ಸೇರಿ ಸಾಕಷ್ಟು ಕಿವಿ ಹಾಗೂ ಮಿದುಳಿಗೆ ಸಂಬಂಧಿಸಿದ ರೋಗಗಳಿಗೆ ಮಕ್ಕಳು ಮತ್ತು ವಯಸ್ಕರು ಒಳಗಾಗುತ್ತಿದ್ದಾರೆ. ಅದೇ ಭಾರತೀಯ ಗೋತಳಿಗಳ ಹಾಲಿನ ಸೇವನೆಯು ಎಲ್ಲ ರೀತಿಯಲ್ಲಿಯೂ ಆರೋಗ್ಯಕ್ಕೆ ಅತ್ಯುತ್ತಮವಾಗಿದ್ದು, ಇದರ ಹಾಲಿನಲ್ಲಿ ಯಾವುದೇ ರೀತಿಯ ಹಾನಿಕಾರಕ ಅಂಶ ಕಂಡುಬರುವುದಿಲ್ಲ.

ಹಾಗೆಯೇ, ನಮ್ಮ ನಮ್ಮ ಕ್ಷೇತ್ರದ ತಳಿಯ ಗೋವುಗಳು ಹಾಲು ಆಯಾ ಪ್ರದೇಶದ ಸಿಗುವ ಹಾಲು ಮಕ್ಕಳಿಗೆ ಅತೀ ಶ್ರೇಷ್ಠ. ಇದು ಭಾರತೀಯರಿಗೆ ಪಕೃತಿ ನೀಡಿದ ಕೊಡುಗೆ. ಉದಾಹರಣೆ, ಕರ್ನಾಟಕ-ಮಹಾರಾಷ್ಟ್ರ ಮದ್ಯ ಸಿಗುವ ಕಿಲಾರ, ಮಲ್ಲಾಡ ಗಿಡ್ಡ, ಮೈಸೂರು ಹಳ್ಳಿಕಾರ, ಅಮೃತಮಹಲ, ಹೈದರಾಬಾದ್-ಕರ್ನಾಟಕ ದೇವಣಿ, ಗುಜರಾತ ಗೀರ, ರಾಜಸ್ಥಾನದ ಕಾಂಗ್ರಿಜ, ಪಂಗನೂರ್, ಶಾಹಿವಾಲ, ಶಿಂದಿ, ತಾರಪಾರಕರ, ವೆಂಚುರ, ರಾಟಿ ಇಂತಹ ಹಲವಾರು ದೇಶಿಯ ಗೋತಳಿ ನಮ್ಮನ್ನು ಅನಾದಿ ಕಾಲದಿಂದ ರಕ್ಷಣೆ ಮಾಡಿಕೊಂಡು ಬಂದಿದೆ. ಯಾವಾಗ ಮಿಶ್ರ ತಳಿಯ ಉಗಮವಾಯಿತೋ ಅಲ್ಲಿಂದ ಆರೋಗ್ಯ, ಆರ್ಥಿಕ, ಸಂಸ್ಕೃತಿಕ ಅಧಃಪತನ ಆರಂಭವಾಯಿತು. ಕಾರಣ ನಮ್ಮ ನಮ್ಮ ಕ್ಷೇತ್ರದಲ್ಲಿ ಗೋತಳಿ ಸಾಕಿ ಪ್ರಾಕೃತಿಕ ಸಮತೋಲನ ಕಾಯ್ದುಕೊಳ್ಳಲು ಮತ್ತು ವೈವಿಧ್ಯಮಯ ಜೀವ ವೈವಿಧ್ಯತೆ ಕಾಪಾಡುವ ಜವಾಬ್ದಾರಿ ನಮ್ಮದಲ್ಲವೆ? ಆ ಮೂಲಕ ಸ್ಥಳೀಯ ವೈವಿಧ್ಯಮಯ ಗೋತಳಿ ಬೆಳೆಸಿ.. ಮಕ್ಕಳು ಹಾಗೂ ನಮ್ಮೆಲ್ಲರ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸಾಗೋಣ….

ಬರಹ :
ಕೆ.ಎನ್.ಶೈಲೇಶ್ ಹೊಳ್ಳ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಅಡಿಕೆ ಅಕ್ರಮ ಆಮದು ಜಾಲದ ಮೇಲೆ ಇಡಿ ದಾಳಿ – 16 ಕಡೆ ಶೋಧ, ನೂರಾರು ಕೋಟಿ ಹಣದ ವಹಿವಾಟಿನ ತನಿಖೆ

ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ 16 ಸ್ಥಳಗಳಲ್ಲಿ ವಿದೇಶಿ ಅಡಿಕೆ ಅಕ್ರಮ ಸಾಗಾಟಕ್ಕೆ…

10 hours ago

ಹವಾಮಾನ ವರದಿ | 01-10-2026 | ಕರ್ನಾಟಕದಲ್ಲಿ ಮತ್ತೆ ಮಳೆ ಇಳಿಕೆ – ಕಾರಣವೇನು?

ಉತ್ತರ ಭಾರತದ ಶುಷ್ಕ ಗಾಳಿ ಹಾಗೂ ಪೆಸಿಫಿಕ್ ಸಾಗರದ ಪ್ರಬಲ ಚಂಡಮಾರುತಗಳ ಪರಿಣಾಮ…

17 hours ago

ಹೊಸ ಅಡಿಕೆ ಧಾರಣೆ 350 ಫಿಕ್ಸ್ – ಆರಂಭಿಕ ಧಾರಣೆಯೇ ಆಮದು ದರಕ್ಕಿಂತ ಕಡಿಮೆ..!

ಹೊಸ ಅಡಿಕೆಯ ಆರಂಭಿಕ ಧಾರಣೆ ₹330–350ಕ್ಕೆ ನಿಗದಿಯಾಗಿದ್ದು, ಆಮದು ಅಡಿಕೆಗೆ ಇರುವ ₹351ರ…

17 hours ago

ರಿಲಯನ್ಸ್ ಫೌಂಡೇಶನ್ ಪದವಿ ಪೂರ್ವ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ಪದವಿ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ರಿಲಯನ್ಸ್ ಫೌಂಡೇಶನ್ ವಿದ್ಯಾರ್ಥಿವೇತನಕ್ಕೆ…

22 hours ago

ರೈತನ ಹೊಲದಿಂದ ನಿಮ್ಮ ತಟ್ಟೆಯವರೆಗೆ… AI ಬರಲಿದೆ..!

ಕರ್ನಾಟಕದಲ್ಲಿ ಬೀಜದಿಂದ ಗ್ರಾಹಕರ ತಟ್ಟೆಯವರೆಗೆ ಕೃಷಿ ಉತ್ಪನ್ನದ ಪಯಣವನ್ನು ಪತ್ತೆಹಚ್ಚಲು AI ಆಧಾರಿತ…

22 hours ago

ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಚಿನ್ನದ ಬೇಟೆ – ಒಂದೇ ದಿನ 4 ಚಿನ್ನ; ಪದಕಗಳ ಸಂಖ್ಯೆ 60ಕ್ಕೆ ಏರಿಕೆ

ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಒಂದೇ ದಿನ 4 ಚಿನ್ನ ಸೇರಿದಂತೆ 7 ಪದಕ…

1 day ago