Advertisement
Opinion

ಗಾಣದ ಎಣ್ಣೆ ಬಳಸಲು ಪ್ರಾರಂಭಿಸಬೇಕು ಏಕೆ…. ? | ರಿಫೈನ್ಡ್ ಆಯಿಲ್ ಗಳು ಅಪಾಯಕಾರಿ ಹೇಗೆ.. ?

Share

ನಾನು ಇಂಗ್ಲೆಂಡಿನಲ್ಲಿದ್ದಾಗ(England) ಭಾರತೀಯರೊಬ್ಬರು, ಭಾರತ(India) ಜಗತ್ತಿನಲ್ಲಿ ಅತಿ ಹೆಚ್ಚು ಪದವೀಧರರನ್ನು ಸೃಷ್ಟಿಸುತ್ತಿದೆ, ಆದರೆ ಅವರೆಲ್ಲ ಅವಿದ್ಯಾವಂತರು..! ಎಂದರು. ಅದು ಹೇಗೆ? ಎಂಬ ನನ್ನ ಪ್ರಶ್ನೆಗೆ ಅವರು, ಮೂರು ಕಿಲೋ ಕಡಲೆ ಕಾಯಿಯಿಂದ ಒಂದು ಕಿಲೋ ಕಡಲೆ ಕಾಯಿ ಎಣ್ಣೆ(Ground nut oil) ಬರುತ್ತದೆ. ಆದರೆ ಮಾರುಕಟ್ಟೆಯಲ್ಲಿ ಕಡಲೆಕಾಯಿಯ ಮತ್ತು ಅದರ ಎಣ್ಣೆಯ ಬೆಲೆ ಒಂದೇ ಇರುತ್ತದೆ..!!ಇದು ಹೇಗೆ ಸಾಧ್ಯ? ಎಂಬ ಗಣಿತ ಗೊತ್ತಿಲ್ಲದವರಿಗೆ ಅವಿದ್ಯಾವಂತರು, ಎಂದು ಕರೆದರೆ ತಪ್ಪೇನಿದೆ? ಅಂದರು. ಅವರ ವಾದವನ್ನು ನಾನು ಒಪ್ಪಿಕೊಂಡೆ.

Advertisement
Advertisement
Advertisement

ಗಲ್ಫ್ ದೇಶಗಳಲ್ಲಿ ಕ್ರೂಡ್ ಆಯಿಲ್ ನಿಂದ ಪೆಟ್ರೋಲ್ – ಡೀಸೆಲ್(Petrol – Diesel) ಹೊರ ತೆಗೆದಾಗ ಬರುವ ಮಿನರಲ್ ಆಯಿಲ್(Mineral Oil), ಜಗತ್ತಿನಲ್ಲಿ ಅತಿ ಹೆಚ್ಚು ಉತ್ಪಾದನೆ ಆಗುವ ತ್ಯಾಜ್ಯ ವಸ್ತು. ಅದನ್ನು ಭೂಮಿಗೆ(Land) ಹಾಕಿದರೆ ಅಲ್ಲಿ ಬಂಜರುಭೂಮಿ, ಸಮುದ್ರಕ್ಕೆ(Ocean) ಹಾಕಿದರೆ ಪ್ರಾಣಿಗಳು ಸಾಯುತ್ತವೆ. ಹೇಗೋ ಸಾಯುತ್ತಾರೆ, ಸ್ವಲ್ಪ ಬೇಗ ಸಾಯಲಿ ಎಂದು ಭಾರತಕ್ಕೆ ಪುಕ್ಕಟೆಯಾಗಿ ಕಳುಹಿಸುತ್ತಾರೆ. ಆರೋಗ್ಯದ ಕಡೆ ಗಮನವಿರದ, ಪುಕ್ಕಟೆಯಾಗಿ ಸಿಕ್ಕರೆ ಯಾವುದನ್ನೂ ಕೊಟ್ಟರೂ ಸೇವಿಸುವ ಭಾರತೀಯರ, ಅಡಿಗೆ ಎಣ್ಣೆ ಎಂದು ಬಳಸುವ ಎಣ್ಣೆಯಲ್ಲಿ ಮಿನರಲ್ ಆಯಿಲ್ ಹೇರಳವಾಗಿದೆ! ಜೊತೆಗೆ ರಿಫೈನ್ಡ್ ಆಯಿಲ್ ಎಂಬುದು ಒಂದು ಸತ್ತ ಎಣ್ಣೆಯಾಗಿದ್ದು ಅದರಿಂದ ದೇಹಕ್ಕೆ ಉಪಯುಕ್ತವಾದದ್ದು ಏನೂ ದೊರೆಯುವುದಿಲ್ಲ!

Advertisement

ರಿಫೈನ್ಡ್ ಆಯಿಲ್ ಬಳಕೆಯಿಂದ ಕೀಲು ನೋವು, ಕ್ಯಾನ್ಸರ್, ಶ್ವಾಸಕೋಶದ ತೊಂದರೆ, ಮುಂತಾದ ರೋಗಗಳು ಬರುತ್ತವೆ ಎಂಬ ವರದಿಗಳು ಇವೆ. ರಕ್ತನಾಳಗಳಲ್ಲಿ ಕಟ್ಟಿಕೊಂಡು ಹೃದಯದ ಕಾಯಿಲೆಗಳು, ಹೃದಯಸ್ತಂಬನ, ಚಿಕ್ಕ ವಯಸ್ಸಿನಲ್ಲಿಯೇ ಸಾವು ಇವುಗಳನ್ನು ತರುತ್ತದೆ. ಮನುಷ್ಯನ ಆಯುಸ್ಸು ಕಡಿಮೆಗೊಳ್ಳುತ್ತದೆ. ನಮ್ಮ ಜೀವ ತಂತುಗಳಲ್ಲಿ ಬದಲಾವಣೆಯಾಗಿ ಅಶಕ್ತ ಮುಂದಿನ ಪೀಳಿಗೆ ಜನಿಸುತ್ತದೆ. ಗರ್ಭಕೋಶದಲ್ಲಿ ಕಟ್ಟಿಕೊಂಡು ಗರ್ಭ ನಿಲ್ಲದಂತೆ ಮಾಡುತ್ತದೆ!! ಇನ್ನೇನು ಬೇಕು? ಒಟ್ಟಿನಲ್ಲಿ ಭೂಮಿಗೆ ಹಾಕಿದರೆ ಬಂಜರಭೂಮಿ, ತಿಂದರೆ ಬಂಜೆ!

ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ವಿದ್ಯಾವಂತರು – ಶ್ರೀಮಂತರು ಕೂಡ ದೇಹಕ್ಕೆ ಅನುಪಯುಕ್ತವಾದ ರಿಫೈನ್ಡ್ ಆಯಿಲ್ ಬಳಸಿ ತಮ್ಮ ಸಂತಾನವನ್ನು ಇಲ್ಲವಾಗಿಸಿಕೊಳ್ಳಲು ಬಿಜಿಯಾಗಿದ್ದಾರೆ. ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಕೀಲು ನೋವಿನಿಂದ ಬಳಲದವರು ಸಿಗುವುದೇ ಅಸಾಧ್ಯ..! ಆಸ್ಪತ್ರೆಗಳು ಪ್ರತಿಯೊಂದು ಊರಿನಲ್ಲೂ ಕ್ಯಾನ್ಸರ್, ಹೃದಯದ ಕಾಯಿಲೆ, ಸಕ್ಕರೆ ಕಾಯಿಲೆ, ಮುಂತಾದ ರೋಗಿಗಳಿಂದ ತುಂಬಿ ತುಳುಕುತ್ತಿವೆ. ರಿಫೈನ್ಡ್ ಆಯಿಲ್ ಬಳಕೆ ನಿಲ್ಲಿಸಿ ಗಾಣದ ಎಣ್ಣೆ ಬಳಸಲು ಪ್ರಾರಂಭಿಸಿದ ನಂತರ ಆರೋಗ್ಯ ಸುಧಾರಿಸಿದ ಸಾಕಷ್ಟು ಉದಾಹರಣೆಗಳು ನಮ್ಮೆದುರಿಗೆ ಇವೆ. ತಮ್ಮ ಮತ್ತು ತಮ್ಮ ಮಕ್ಕಳ ಆರೋಗ್ಯದ ಚಿಂತೆ ಇಲ್ಲದ ತಂದೆ- ತಾಯಿಗಳಿಂದ ಭಾರತವನ್ನು ಉಳಿಸುವುದು ಹೇಗೆ?

Advertisement

ಕಿರು ಪ್ರಯತ್ನವಾಗಿ ಧಾರವಾಡದಲ್ಲಿ ಗಾಣದ ಎಣ್ಣೆ ತರಬೇತಿ ಶಿಬಿರ ಗಳನ್ನು ರಾಜೀವ ದೀಕ್ಷಿತ ಬಳಗದ ವತಿಯಿಂದ ನಡೆಸಲಾಗುತ್ತಿದೆ. ಲಾಭ ಇಲ್ಲವೆಂದು 1970 ರಲ್ಲಿ ಭಾರತದಲ್ಲಿದ್ದ ಆರೂವರೆ ಲಕ್ಷ ಗಾಣಗಳು ಮುಚ್ಚಿ ಹೋದವು. ಆದರೆ ಎಣ್ಣೆ ದಂಧೆಯಲ್ಲಿ ತೊಡಗಿರುವ ದುರುಳರು ಇಂದು ಕ್ರಿಕೆಟ್ ಸ್ಪಾನ್ಸರ್ ಮಾಡುವಷ್ಟರ ಮಟ್ಟಿಗೆ ಶ್ರೀಮಂತರಾಗಿದ್ದಾರೆ! ಅದು ಹೇಗಾಯಿತು ಎಂದು ಚಿಂತೆ ಮಾಡುವ ಜ್ಞಾನಿಗಳು ಇಂದು ಇಲ್ಲ!! ದಯವಿಟ್ಟು ನಿಮ್ಮ ಪೀಳಿಗೆಯ ಉಳಿವಿಗಾಗಿ ಗಾಣದ ಎಣ್ಣೆ ಬಳಸಲು ಪ್ರಾರಂಭಿಸಿ. ಸಾಧ್ಯವಿದ್ದರೆ ನಿಮ್ಮ ಊರಿನಲ್ಲಿ ಒಂದು ಗಾಣ ಹಾಕಿ, ಊರವರ ಆರೋಗ್ಯ ಸುಧಾರಿಸಿ.

ಬರಹ :
ಡಾ. ಶ್ರೀಶೈಲ ಬದಾಮಿ,
ಧಾರವಾಡ 9480640182
Advertisement

Use of refined oil can cause joint pain, cancer, lung problems, etc. It builds up in blood vessels and causes heart diseases, heart attacks, and early death. Man’s life span is reduced. A change in our life fiber will result in a disabled next generation. It binds in the uterus and prevents pregnancy!! What else do you need? In general, if you put it on the land, it is barren land, if you eat it, it is barren!

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 19.01.2025 | ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಕೃಷಿಕರೇ ಇರಲಿ ಎಚ್ಚರ |

20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…

8 hours ago

ಸರ್ಕಾರದ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳುವಂತೆ ಸಚಿವ ಈಶ್ವರ್ ಖಂಡ್ರೆ ಕರೆ

ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…

11 hours ago

ಅಡಿಕೆ ಬೆಳೆಗಾರರಿಗೆ ಆತಂಕ ಬೇಡ | ಅಡಿಕೆ ಬೆಳೆಗಾರರ ಸಮಸ್ಯೆ ಬಗಹೆರಿಸಲು ಸಿದ್ದ | ಕೇಂದ್ರ ಸಚಿವ ಶಿವರಾಜ್ ಸಿಂಗ್  ಚಾವ್ಙಾಣ್ ಭರವಸೆ |

ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…

12 hours ago

ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ

ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…

3 days ago

ಮುಂಜಾನೆ ಏಳಬೇಕು, ಬೇಗನೇ ಏಳಬೇಕು

ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…

3 days ago

ಹವಾಮಾನ ವರದಿ | 15-01-2025 | ಕೆಲವು ಕಡೆ ಇಂದೂ ತುಂತುರು ಮಳೆ ಸಾಧ್ಯತೆ |

ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…

4 days ago