ಬಿಜೆಪಿ ಕುಟುಂಬ ರಾಜಕಾರಣ ವಿರುದ್ಧ ವಾಗ್ದಾಳಿ ನಡೆಸುತ್ತಾ ಬಂದಿದೆ. ಆದ್ರೂ ಈ ಬಾರಿ ಮಾಜಿ ಸಚಿವ ಉಮೇಶ್ ಕತ್ತಿ ಪುತ್ರ, ಸೋದರನಿಗೆ ಬಿಜೆಪಿ ಟಿಕೆಟ್ ಸಿಕ್ಕಿದೆ. ಇತ್ತ ಆನಂದ್ ಮಾಮನಿ ಪತ್ನಿ ರತ್ನಾ ಮಾಮನಿ, ಮಾಜಿ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಸೇರಿದಂತೆ ಹಲವರಿಗೆ ಬಿಜೆಪಿ ಟಿಕೆಟ್ ಸಿಕ್ಕಿದೆ. ಬೆಳಗಾವಿ ಲೋಕಸಭಾ ಉಪ ಚುನಾವಣೆ ವೇಳೆ ಸುರೇಶ್ ಅಂಗಡಿ ಅವರ ಪತ್ನಿ ಮಂಗಳಾ ಅಂಗಡಿ ಅವರಿಗೆ ನೀಡಲಾಗಿತ್ತು. ಆದ್ರೆ ಲೋಕಸಭಾ ಚುನಾವಣೆಯಲ್ಲಿ ತೇಜಸ್ವಿನಿ ಅನಂತಕುಮಾರ್ ಅವರಿಗೆ ಟಿಕೆಟ್ ತಪ್ಪಿತ್ತು. ಟಿಕೆಟ್ ತಪ್ಪಿದ್ದಕ್ಕೆ ನಾವು ಕುಟುಂಬ ರಾಜಕಾರಣ ಮಾಡಲ್ಲ ಎಂದು ಹೇಳಿದ್ದ ಬಿಜೆಪಿ ತೇಜಸ್ವಿ ಸೂರ್ಯ ಅವರಿಗೆ ಅವಕಾಶ ನೀಡಿತ್ತು.
ಕೆಲವರ ಮಕ್ಕಳಿಗೆ ಟಿಕೆಟ್, ಒಂದಿಷ್ಟು ಕುಟುಂಬಗಳಿಗೆ ಯಾಕೆ ಅವಕಾಶ ಇಲ್ಲ. ಹಾಗಾದ್ರೆ ಕುಟುಂಬ ರಾಜಕಾರಣ ಅಥವಾ ಪರಿವಾರವಾದ ಎಂದರೇನು ಎಂಬ ಪ್ರಶ್ನೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಉತ್ತರ ನೀಡಿದ್ದಾರೆ.
ಖಾಸಗಿ ಟಿವಿಗೆ ನೀಡಿದ ಸಂದರ್ಶನದಲ್ಲಿ ಅಮಿತ್ ಶಾ ಪರಿವಾರವಾದ ಎಂದರೇನು? ಯಾಕೆ ಕೆಲವರಿಗೆ ಅವಕಾಶ ಸಿಕ್ತು ಎಂಬುದರ ಬಗ್ಗೆ ವಿವರವಾಗಿ ಹೇಳಿದ್ದಾರೆ.
ಅಮಿತ್ ಶಾ ಹೇಳಿದ ವ್ಯಾಖ್ಯಾನ
ಪರಿವಾರವಾದ/ಕುಟುಂಬ ರಾಜಕಾರಣದ ಬಗ್ಗೆ ನಮ್ಮ ಮತ್ತು ನಿಮ್ಮ ನಡುವಿನ ವ್ಯಾಖ್ಯಾನ ಭಿನ್ನವಾಗಿದೆ. ನನ್ನ ಪ್ರಕಾರ ಪರಿವಾರದವಾದ ಅದ್ರೆ ಒಬ್ಬ ವ್ಯಕ್ತಿ ಮುಖ್ಯಮಂತ್ರಿಯಾದ್ರೆ, ನಂತರ ಅತನೇ ಮಗ ಸಿಎಂ ಆಗೋದು. ಒಬ್ಬ ಪಕ್ಷದ ಅಧ್ಯಕ್ಷನಾದ್ರೆ ನಂತರ ಅವನೇ ಮಗನೇ ಆ ಸ್ಥಾನಕ್ಕೆ ಬರೋದು.
ಯಡಿಯೂರಪ್ಪ ನಂತರ ಬಸವರಾಜ್ ಬೊಮ್ಮಾಯಿ ಸಿಎಂ ಆದರು. ಚುನಾವಣೆಗೆ ಸ್ಪರ್ಧೆ ಮಾಡಿದ್ರು ಅಂತ ಅದನ್ನು ಪರಿವಾರವಾದ ಅಥವಾ ಕುಟುಂಬ ರಾಜಕಾರಣ ಎಂದು ಹೇಳಲು ಆಗಲ್ಲ.
ಉದಾಹರಣೆಗಳನ್ನ ಮುಂದಿಟ್ಟ ಅಮಿತ್ ಶಾ
ಕಾಂಗ್ರೆಸ್ನಲ್ಲಿ ಜವಾಹರ್ ಲಾಲ್ ನೆಹರು ಬಳಿಕ ಇಂದಿರಾ ಗಾಂಧಿ ಬಂದರು. ತದನಂತ ರಾಜೀವ್ ಗಾಂಧಿ, ಸೋನಿಯಾ ಗಾಂಧಿ. ಈಗ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಬಂದಿದ್ದಾರೆ. ಇದನ್ನು ಕುಟುಂಬ ರಾಜಕಾರಣ ಎಂದು ಹೇಳುತ್ತೇವೆ. ಮುಲಾಯಂ ಸಿಂಗ್ ಮತ್ತು ಅಖಿಲೇಶ್ ಯಾದವ್ ಹೀಗೆ ಒಂದೇ ಕುಟುಂಬ ಪಕ್ಷದ ಮೇಲೆ ಹಿಡಿತ ಸಾಧಿಸೋದು ಕುಟುಂಬ ರಾಜಕಾರಣ ಆಗುತ್ತದೆ ಎಂದು ಹೇಳುತ್ತಾ ಹಲವು ಉದಾಹರಣೆಗಳನ್ನು ನೀಡಿದರು.
ಪಕ್ಷದ ನಿಯಂತ್ರಣ ಕುಟುಂಬದ ಬಳಿ ಇರಬಾರದು
ಎಲ್ಕೆ ಅಡ್ವಾಣಿ ಅವರ ಬಳಿಕ ಆ ಸ್ಥಾನಕ್ಕೆ ಮೋದಿ ಅವರು ಬಂದರು. ನಂತರ ನಾನು ಪಕ್ಷದ ಅಧ್ಯಕ್ಷನಾದೆ. ಈಗ ಜೆಪಿ ನಡ್ಡಾ ಅವರು ನಮ್ಮ ಪಕ್ಷದ ಅಧ್ಯಕ್ಷರು. ಮುಂದೆ ನಡ್ಡಾ ಬಳಿಕ ಬೇರೆ ಜನರು ಬರುತ್ತಾರೆ. ಎಲ್ಲಿಯೂ ಒಂದೇ ಕುಟುಂಬದವರು ಪಕ್ಷದ ಅಧ್ಯಕ್ಷರು ಆಗಿಲ್ಲ ಎಂದರು. ಯಾವುದೇ ಪಕ್ಷದ ನಿಯಂತ್ರಣ ಒಂದು ಕುಟುಂಬದ ಬಳಿಯಲ್ಲಿ ಇರಬಾರದು ಎಂದು ಅಭಿಪ್ರಾಯಪಟ್ಟರು.
ಒಬ್ಬ ಶಾಸಕನ ಪುತ್ರನಿಗೆ ಚುನಾವಣೆ ಎದುರಿಸುವ ಸಾಮರ್ಥ್ಯ ಇದ್ರೆ ಸ್ಪರ್ಧಿಸಿ ಗೆಲ್ಲಲಿ. ಕರ್ನಾಟಕದಲ್ಲಿ ಕೆಲವರಿಗೆ ಟಿಕೆಟ್ ಸಿಕ್ಕಿದೆ. ಒಂದಿಷ್ಟು ಜನರಿಗೆ ಸಿಕ್ಕಿಲ್ಲ. ಐದು ಜನರಿಗೆ ಸಿಕ್ಕಿದ್ರೆ, 25 ಜನಕ್ಕೆ ಸಿಕ್ಕಿರಲ್ಲ ಎಂದು ಹೇಳಿದರು.
ಏಪ್ರಿಲ್ 7 ರಿಂದ 9 ರವರೆಗೆ ಪೂರ್ವ ಭಾರತದಲ್ಲಿ ಗುಡುಗು ಮತ್ತು ಮಿಂಚಿನೊಂದಿಗೆ…
ಮ್ಯಾನ್ಮಾರ್ ಭೂಕಂಪದ ಬಳಿಕ ವಿವಿಧ ರೀತಿಯಲ್ಲಿ ಭಾರತವು ನೆರವು ನೀಡುತ್ತಿದೆ. ಇದುವರೆಗೆ ಭಾರತೀಯ ಸೇನಾ…
ರಾಜ್ಯದಲ್ಲಿ 6395 ಆನೆಗಳಿದ್ದು, ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಯಲ್ಲಿ ಕಾಫಿ ತೋಟಗಳಲ್ಲಿ ನೂರಾರು…
ಬದುಕಿನ ದೀವಿಗೆ ಜ್ಞಾನ. ಅದು ಜ್ಞಾನ ದೀವಿಗೆ. ಜ್ಞಾನಕ್ಕೆ ಮುಪ್ಪಿಲ್ಲ, ಸಾವಿಲ್ಲ. ಅದು…
ರಾಜ್ಯದಲ್ಲಿ 1 ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಬೇಸಿಗೆಯಲ್ಲಿ 89 ಲಕ್ಷ ಲೀಟರ್‌ಗೆ…
ಹೆಚ್ಚಿನ ಮಾಹಿತಿಗೆ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490