ದೇಶದಲ್ಲಿಯೇ ಅತ್ಯುನ್ನತ ಶೈಕ್ಷಣಿಕ ಹಾಗೂ ಸಂಸ್ಥೆಗಳು ಕರ್ನಾಟಕದಲ್ಲಿದ್ದು, ಅವುಗಳ ಅಭಿವೃದ್ದಿ ಹಾಗೂ ಸಂಶೋಧನಾ ಕಾರ್ಯಕ್ಕೆ ರಾಜ್ಯ ಸರ್ಕಾರದಿಂದ ಸೂಕ್ತ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ರಾಜ್ಯದ ಮಾಹಿತಿ-ತಂತ್ರಜ್ಞಾನ ಮತ್ತು ಐಟಿ ಬಿಟಿ ಇಲಾಖೆ ಕಾರ್ಯದರ್ಶಿ ಡಾ.ಏಕರೂಪ್ ಕೌರ್ ಹೇಳಿದರು.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ಕೇಂದ್ರ ವೈಜ್ಞಾನಿಕ ಸಲಹಾ ಸಚಿವಾಲಯ ಸಹಯೋಗದಲ್ಲಿ ಬೆಂಗಳೂರಿನ ಜಿಕೆವಿಕೆ ಬಳಿಯ ಸಿ- ಕ್ಯಾಂಪ್ ನಲ್ಲಿ ‘ INDIA AMR INNOVATION’ ಕಾರ್ಯಾಗಾರ ಆಯೋಜಿಸಲಾಗಿತ್ತು. ಈ ಸಂದರ್ಭ ಮಾತನಾಡಿದ ಏಕರೂಪ್, ಜೈವಿಕ-ಮಾಹಿತಿ ತಂತ್ರಜ್ಞಾನ ಪ್ರಗತಿಗಾಗಿ ಬಯೋಟೆಕ್ ನೀತಿ 2024-29 ನೀತಿ ರೂಪಿಸಲಾಗಿದೆ. ಪ್ರತಿವರ್ಷ 100 ಸ್ಟಾರ್ಟ್ ಅಫ್ ಗಳನ್ನು ಗುರುತಿಸಿ ಅವುಗಳಿಗೆ 50 ಲಕ್ಷ ರೂಪಾಯಿ ಅನುದಾನ ನೀಡಲಾಗುತ್ತಿದೆ ಎಂದರು.
ಈ ವೇಳೆ ಕೇಂದ್ರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಅಜಯ್ ಕುಮಾರ್ ಸೂದ್, ಸಿ- ಕ್ಯಾಂಪ್ ನಿರ್ದೇಶಕ ಡಾ. ತಸ್ಲೀಮಾರಿಫ್ ಸಯ್ಯದ್ ಮತ್ತಿತರರು ಉಪಸ್ಥಿತರಿದ್ದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel