ಕುಕ್ಕೆ ಸುಬ್ರಹ್ಮಣ್ಯದಿಂದ ಪುತ್ತೂರು- ಮಂಜೇಶ್ವರಕ್ಕೆ ಸಂಪರ್ಕಿಸುವ ಕರ್ನಾಟಕ ರಾಜ್ಯ ಹೆದ್ದಾರಿ ರಸ್ತೆಯು ಕುಮಾರಧಾರ ನದಿ ಬಳಿಯಲ್ಲಿ ಮಣ್ಣು ಸಡಿಲಗೊಂಡು ಕುಸಿಯಲು ಆರಂಭವಾಗಿದೆ. ತಕ್ಷಣವೇ ಈ ಬಗ್ಗೆಇಲಾಖೆಗಳು ಗಮನಹರಿಸಲು ಸ್ಥಳೀಯರು ಒತ್ತಾಯಿಸಿದ್ದಾರೆ.
ಕುಮಾರಧಾರಾ ನದಿ ನೀರು ಏರಿಕೆಯಾದ ತಕ್ಷಣವೇ ಮಣ್ಣು ಕುಸಿತ ಸಂಭವಿಸುತ್ತಿದೆ. ಹೀಗಾಗಿ ರಸ್ತೆ ಕುಸಿದು ಕುಮಾರಧಾರ ನದಿ ನೀರಿನ ಪಾಲಾಗುವ ಸಾಧ್ಯತೆ ಇದೆ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಮಂಜೇಶ್ವರ ರಸ್ತೆ ಸಂಪರ್ಕ ಕಡಿತ ಆಗುವ ಭೀತಿ ಎದುರಾಗಿದೆ.
ಜೂನ್ ಜುಲೈ ತಿಂಗಳಲ್ಲಿ ಸುರಿದ ಮಳೆ ನೀರು ಭೂಮಿಯಲ್ಲಿ ಇಂಗುತ್ತದೆ ಆಗಸ್ಟ್ ತಿಂಗಳಲ್ಲಿ ಬಂದ ನೀರು ಮಣ್ಣನ್ನು ಕೊಚ್ಚಿಕೊಂಡು ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ, ಆದ್ದರಿಂದ ಅಸುಪಸಿನ ಮನೆಗಳಿಗೂ ಹಾನಿಯಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಇದೇ ಭಾಗದಲ್ಲಿ ಕಳೆದ ವರ್ಷ ಮಳೆಗಾಲದಲ್ಲಿ ಮನೆ ಕುಸಿದು ಎರಡು ಪುಟ್ಟಮಕ್ಕಳು ಸಾವನ್ನಪ್ಪಿದ ದುರ್ಘಟನೆ ನಡೆದಿದೆ,
ಸುಬ್ರಹ್ಮಣ್ಯ ಮಂಜೇಶ್ವರ ಸಂಪರ್ಕಿಸುವ ರಾಜ್ಯ ರಸ್ತೆಯಲ್ಲಿ ಕುಮಾರಧಾರ ಬಳಿ ಸೇತುವೆ ಇದ್ದು ಈ ಸೇತುವೆಯು ವರ್ಷಂಪತಿ ಹಲವಾರು ಬಾರಿ ಮುಳುಗಡೆಯಾಗಿ, ಪುತ್ತೂರು,ಬಳ್ಪ, ಪಂಜ ಈ ಭಾಗದಿಂದ ಬರುವ ಹಲವಾರು ವಿದ್ಯಾರ್ಥಿಗಳಿಗೆ, ಹಾಗೂ ಸಾರ್ವಜನಿಕರಿಗೆ ತೀರಾ ತೊಂದರೆ ಆಗುತ್ತಿದೆ.( ವಿಡಿಯೋ ವರದಿ…..)
ಕಳೆದ ವಾರ ಬಂದ ಬಾರಿ ಮಳೆಗೆ ರಸ್ತೆ ಸಂಪೂರ್ಣ ಮುಳುಗಡೆಯಾಗಿತ್ತು ಕಾಲೇಜ್ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹರಸಾಹಸ ಪಟ್ಟು ನದಿ ನೀರನ್ನು ದಾಟಿ ಪರೀಕ್ಷೆ ಬರೆದಂತ ಘಟನೆ ನಡೆದಿದೆ.ಈ ರಸ್ತೆಯನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಿಸಬೇಕು ಹಾಗೂ ಸುಳ್ಯದ ಶಾಸಕರು ಇದರ ಬಗ್ಗೆ ಗಮನಹರಿಸಿ ಸೇತುವೆ ಹಾಗೂ ರಸ್ತೆಯನ್ನು ಮೇಲ್ದರ್ಜೆಗೆ ಏರಿಸಬೇಕು ಹಾಗೂ ಭೂಕುಸಿತಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು, ಇಲ್ಲದೆ ಹೋದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಪುತ್ತೂರು ಮಂಜೇಶ್ವರ ಕರ್ನಾಟಕ ರಾಜ್ಯ ಹೆದ್ದಾರಿ ಸಂಪರ್ಕ ರಸ್ತೆಯು ಕಡಿತುಕೊಳ್ಳುವ ಭೀತಿ ಇದೆ ಎಂದು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ್ ಇಂಜಾಡಿ ಹಾಗೂ ಮಾಜಿ ಗ್ರಾಮ ಪಂಚಾಯತ್ ಸದಸ್ಯ ಮೋಹನದಾಸ್ ರೈ ಹೇಳಿದ್ದಾರೆ.
ಬೇಸಿಗೆ ಕಾಲ ಪ್ರಾರಂಭವಾಗಿರುವುದರಿಂದ ಜಿಲ್ಲೆಯಲ್ಲಿ ಕುಡಿಯುವ ನೀರಿನ ನಿರ್ವಹಣೆ ಹಾಗೂ ಕಾಡ್ಗಿಚ್ಚು ನಿರ್ವಹಣೆ…
ಭಾರತವು ಕಾಫಿ ಉತ್ಪಾದನೆಯಲ್ಲಿ ಏಳನೇ ಅತಿ ದೊಡ್ಡ ಮತ್ತು ಜಾಗತಿಕವಾಗಿ ಐದನೇ ಅತಿ…
ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಎಫ್.ಎ.ಕ್ಯೂ.…
ಕಳೆದ ಕೆಲವು ದಿನಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ ವಿವಿಧ ಕಡೆಗಳಲ್ಲಿ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದೆ.…
ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ತಾಪಮಾನ ಏರಿಕೆಯಾಗಲಿದೆ ಎಂದು ಹವಾಮಾನ…
ಸ್ನಾನದ ಮೂಲಕವೂ ನದಿಯನ್ನು ಆರಾಧಿಸಬಹುದೆಂಬ ಭಾರತೀಯ ಕಲ್ಪನೆ ನಿಜಕ್ಕೂ ಅದ್ಭುತವಾದುದು ಎಂಬುದಾಗಿ ಎರಿಕ್…