ವಿಟ್ಲದ ಪಿಂಗಾರ ರೈತ ಉತ್ಪಾದಕ ಕಂಪನಿ ಮತ್ತೊಂದು ಪ್ರಯತ್ನಕ್ಕೆ ಇಳಿದಿದೆ. ಈಗಾಗಲೇ ದೋಟಿ ಕೊಯ್ಲು ಮೂಲಕ ರೈತರ ಸಮಸ್ಯೆಯನ್ನು ಬಹುಪಾಲು ಕಡಿಮೆ ಮಾಡಿದ ಪಿಂಗಾರ ಈಗ ಅಡಿಕೆ ದಾಸ್ತಾನಿಗೆ ನೈಟ್ರೋಜನ್ ಗ್ಯಾಸ್ ಹಾಗೂ ಹಣ್ಣಡಿಕೆ ಒಣಗಿಸಲು ಹ್ಯುಮಿಡಿಪೈಯರ್ ಯಂತ್ರವನ್ನು ಬಳಸಿಕೊಳ್ಳು ನಿರ್ಧರಿಸಿದೆ. ಎರಡನೇ ದಿನದಲ್ಲಿ ಹಣ್ಣಡಿಕೆ ಒಣಗಿಸುವ ವ್ಯವಸ್ಥೆಗೆ ಪಿಂಗಾರ ಮುಂದಾಗಿದೆ.
ವಿಟ್ಲದ ಪಿಂಗಾರ ಸಂಸ್ಥೆಯು ಅಡಿಕೆ ಹಾಗೂ ತೆಂಗು ಕೊಯ್ಲು ಮಾಡಲು ತಂಡವನ್ನು ರಚನೆ ಮಾಡಿ ಯಶಸ್ವಿಯಾಗಿದೆ. ಅನೇಕ ಕೃಷಿಕರ ಸಮಸ್ಯೆಗೆ ಪರಿಹಾರವನ್ನು ಕಂಡಿಕೊಂಡ ಸಂಸ್ಥೆ ಇದೀಗ ಅಡಿಕೆ ದಾಸ್ತಾನು ಮಾಡಲು ನೈಟ್ರೋಜನ್ ಗ್ಯಾಸ್ ಬಳಕೆ ಮಾಡುವುದು ಹಾಗೂ ಹಣ್ಣಡಿಕೆ ಒಣಗಿಸಲು ಡ್ರೈಯರ್ ಬಳಕೆ ಮಾಡಲು ಮುಂದಾಗಿದೆ. ಆದರೆ ಸದ್ಯ ಹಣ್ಣಡಿಕೆಯನ್ನು ರೈತರಿಂದ ಖರೀದಿ ಮಾಡಿ ಒಣಗಿಸಿ ಬಳಿಕ ಮಾರಾಟ ಮಾಡುವ ಯೋಜನೆ ಇದೆ. ಅಡಿಕೆ ಒಣಗಿಸಿ ಕೊಡುವ ಬಗ್ಗೆ ಸದ್ಯ ಯಾವುದೇ ಯೋಜನೆಯನ್ನು ಹಾಕಿಕೊಂಡಿಲ್ಲ.
ಪಿಂಗಾರ ಸಂಸ್ಥೆಯು ಹಣ್ಣಡಿಕೆ ಖರೀದಿ ಮಾಡಿ ಅದನ್ನು ಹ್ಯುಮುಡಿಪೈಯರ್ ಯಂತ್ರದ ಮೂಲಕ ಒಣಗಿಸುವ ಯೋಜನೆ ಇದಾಗಿದೆ. ಅಂದರೆ ಪ್ರಿಜ್ ಬಳಕೆಯ ಸರಿಯಾದ ಉಲ್ಟಾ ಪ್ರಕ್ರಿಯೆ ಇದೆ. ಬಿಸಿ ಗಾಳಿ ಒಳಗೆ ತೆಗೆದುಕೊಂಡು ತಣ್ಣಗಿನ ಗಾಳಿ ಅಂದರೆ ತೇವಾಂಶವನ್ನು ಹೊರಹಾಕುತ್ತದೆ. ಯಂತ್ರ ಆವಿಷ್ಕಾರ ಮಾಡಿದವರು ಕೃಷಿ ಕುಟುಂಬದವರೇ ಆದ್ದರಿಂದ ಅಡಿಕೆ ಒಣಗಿಸುವ ಸಮಸ್ಯೆಯನ್ನು ಬಲ್ಲವರಾಗಿದ್ದರೆ. ಈ ತಂತ್ರಜ್ಞಾನದ ಮೂಲಕ ಯಂತ್ರದ ಒಳಗೆ 70 ಡಿಗ್ರಿ ಉಷ್ಣತೆ ಇರುತ್ತದೆ. ಹೀಗಾಗಿ ಹಣ್ಣಡಿಕೆ ಎರಡೇ ದಿನದಲ್ಲಿ ಒಣಗಲು ಸಾಧ್ಯ ಇದೆ. ಅಡಿಕೆ ಮಾತ್ರವಲ್ಲ ಕಾಳುಮೆಣಸು, ಕೊಬ್ಬರಿ ಸಹಿತ ಎಲ್ಲಾ ಕೃಷಿ ವಸ್ತುಗಳೂ ಬೇಗನೆ ಒಣಗುತ್ತದೆ.
ಸದ್ಯ ಹಣ್ಣಡಿಕೆ ಖರೀದಿಯ ಬಗ್ಗೆ ಮಾತ್ರಾ ಯೋಜನೆ ರೂಪಿಸಿದ್ದು, ಅಡಿಕೆ ಒಣಗಿಸಿ ಮತ್ತೆ ರೈತರಿಗೆ ನೀಡುವ ಯೋಜನೆ ಮಾಡಿಲ್ಲ ಎಂದು ಸಂಸ್ಥೆಯ ಅಧ್ಯಕ್ಷ ರಾಮ್ ಕಿಶೋರ್ ಮಂಚಿ ಹೇಳುತ್ತಾರೆ.
ಅಡಿಕೆ ದಾಸ್ತಾನು ಮಾಡಲು ಈಗಾಗಲೇ ಸಂಸ್ಥೆಯು ಕಟ್ಟಡಗಳನ್ನು ಸಿದ್ಧ ಮಾಡಲು ಯೋಜನೆ ಹಾಕಿಕೊಂಡಿದೆ. ನೈಟ್ರೋಜನ್ ಗ್ಯಾಸ್ ಬಳಸಿ ಅಡಿಕೆ ದಾಸ್ತಾನು ಮಾಡುವುದು ಈಗಾಗಲೇ ಯಶಸ್ವಿಯಾಗಿದೆ. ರೈತರ ಅಡಿಕೆಯನ್ನು ದಾಸ್ತಾನು ಮಾಡಿ ಮತ್ತೆ ಹಿಂದಿರುಗಿಸಿ ರೈತರಿಗೆ ನೀಡುವ ಅಥವಾ ಮಾರಾಟ ಮಾಡುವ ಯೋಜನೆಯೂ ಇದೆ ಎಂದು ರಾಮ ಕಿಶೋರ್ ಮಂಚಿ ಹೇಳುತ್ತಾರೆ.
ಮಳೆಗಾಲದಲ್ಲಿ ಹಣ್ಣಡಿಕೆ ಒಣಗಿಸಲು ಸಮಸ್ಯೆ ಅಡಿಕೆ ಬೆಳೆಗಾರರಿಗೆ ಇದೆ. ಇದಕ್ಕಾಗಿ ಹಣ್ಣಡಿಕೆಯನ್ನು ಉತ್ತಮ ಧಾರಣೆಗೆ ಪಿಂಗಾರ ಸಂಸ್ಥೆಗೆ ಮಾರಾಟ ಮಾಡುವ ಅವಕಾಶ ಇನ್ನು ಮುಂದೆ ಬೆಳೆಗಾರರಿಗೆ ಸಿಗಲಿದೆ. ಇದರ ಜೊತೆಗೆ ಅಡಿಕೆ ದಾಸ್ತಾನು ಮಾಡುವುದು ಕೂಡಾ ಅಡಿಕೆ ಬೆಳೆಗಾರರಿಗೆ ಬಹುದೊಡ್ಡ ಸಮಸ್ಯೆ ಇದಕ್ಕೂ ಕೂಡಾ ಪಿಂಗಾರ ಸಂಸ್ಥೆ ಈಗ ಅವಕಾಶ ನೀಡುತ್ತಿದೆ.
Viitla Pingara Former Producer Company has decided to use nitrogen gas for Arecanut stock and humidifier machine for drying the Areca fruit.
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…
ಈ ಬಾರಿ ಫೆಬ್ರವರಿ ತಿಂಗಳಲ್ಲಿ 34 ಡಿಗ್ರಿ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ…