ಅದೊಂದು ಮರೆಯದ ದಿನ…… |

Advertisement
Advertisement
ಯುವ ಬರಹಗಾರ್ತಿ ಅನನ್ಯ ಅವರು ಕಥೆ ಬರೆದಿದ್ದಾರೆ. ಅದರ ಯಥಾ ರೂಪ ಇಲ್ಲಿದೆ…

ನಾನೊಬ್ಬಳು ದ್ವಿತೀಯ ಪಿಯುಸಿ ಹುಡುಗಿ ಪರೀಕ್ಷೆಯ ದಿನದ ಸಮಯದಲ್ಲಿ ನಾನೊಬ್ಬಳೇ ಮನೆಯಲ್ಲಿ ಓದುವ ಕ್ಷಣ. ಸಂಬಂಧಿಕರ ಮನೆಯಲ್ಲಿ ವಿಜ್ರಂಭಣೆಯಿಂದ ನಡೆಯುವ ಮದುವೆ ಸಮಾರಂಭಕ್ಕೆ ಮನೆಯವರೆಲ್ಲಾ ನೀನು ಬರಬೇಡ ನಿನಗೆ ಪರೀಕ್ಷೆರಲ್ಲವೇ ಓದಿ ಎಲ್ಲಾ ಮುಗಿಸು ಯಾರು ಇರಲ್ಲ ಮನೆಯಲ್ಲಿ ಯಾರದ್ದೂ ಸಹ ಕಿರಿಕಿರಿ ಗಲಭೆಗಳಿಲ್ಲವಲ್ಲ ಎಂದು ಹೊರಟು ಹೋದರು.

Advertisement

ನಾನು ಕೋಪ ಬೇಜಾರವನ್ನು ಮುಂದಿಟ್ಟುಕೊಂಡು ಮನಸಿಲ್ಲದಿದ್ದರು ಓದಿ ಮುಗಿಸುವೆ ಎಂದು ಕುಳಿತುಕೊಂಡೆ. ಓದಲು ಕೂತ ಕ್ಷಣ ಒಂದು ಮಾತ್ರ ನೆನಪು ಇದೆ…. ಮತ್ತೇನಾಯಿತು ಎಂದು ಅರಿವಿಲ್ಲ. ಹೊಟ್ಟೆಗೆ ಊಟ, ನೀರು ಇಲ್ಲದೆ ಪ್ರಪಂಚವೇ ತಲೆ ಮೇಲೆ ಬಿದ್ದಂತೆ ಕುಳಿತುಕೊಂಡು ಓದಿರೋದರಲ್ಲಿ ಕಣ್ಣು ಮುಚ್ಚಿ ನಿದ್ದೆ ಹೋಗಿರುವುದು ಗೊತ್ತೇ ಇಲ್ಲ.

Advertisement
Advertisement

ಎಚ್ಚರವಾದಾಗ ಎದ್ದು ನೋಡಿದರೇ ಏನೂ ಗೊತ್ತಾಗುತ್ತಿಲ್ಲ ಓದಲು ಹಿಡಿದಿದ್ದ ಪುಸ್ತಕಗಳು ಎಲ್ಲಾ ಹರಿದು ನೆಲದಲ್ಲಿ ಉರುಳಿ ಬಿದ್ದಿದೆ. ಬಾಗಿಲು ಕಿಟಕಿಗಳೆಲ್ಲ ತೆರೆದು ಗಾಳಿಗೆ ಬಡಿಯುತ್ತಾ ಶಬ್ದ ಬರುತ್ತಿತ್ತು. ಗಡಿಯಾರದ ಕಡೆ ಕಣ್ಣು ಹಾಯಿಸಿದರೆ ಒಂದು ಕ್ಷಣ ಎದೆಗೆ ಬಡಿದಂತಿತ್ತು. ಹೊತ್ತು ದಾಟಿ ರಾತ್ರಿ 8 ಗಂಟೆ ಆಗಿ ಬಿಟ್ಟಿತ್ತು.

ಮನೆಯಲ್ಲಾ ಹುಡುಕಾಡಿದರೂ ಅಮ್ಮ ಸಿಗಲೇ ಇಲ್ಲ. ಅಮ್ಮ ಸಂಬಂಧಿಕರ ಮನೆಗೆ ಹೋಗಿರುವುದನ್ನು ಮರೆತುಬಿಟ್ಟು ಹುಡುಕಾಡಿರುವೆ ಎಂದು ತಡವಾಗಿ ಅರಿವಾಯಿತು. ಕಣ್ಣೀರು ಹಾಕುತ್ತಲೇ ತಿನ್ನಲು ಏನಾರು ಮಾಡಬೇಕೆಂದು ಅಡುಗೆ ಮನೆ ಕಡೆಗೆ ಹೋಗುವೆ. ಮಾಡಲು ಏನೂ ಗೊತ್ತಿಲ್ಲದಿದ್ದರೂ, ಮಾಡಿಕೊಂಡು ತಿನ್ನುವುದು ಅನಿವಾರ್ಯವಾಗಿದ್ದರಿಂದ ಅನ್ನ ಬೇಯಿಸಿ ಹೆಂಗೋ ಒಂದು ಸಪ್ಪೆ ಸಪ್ಪೆಯಾದ ಸಾಂಬಾರು ಮಾಡಿ ಊಟ ಮಾಡಿದೆ ಅದು 10 ಗಂಟೆ ಕಳೆದ ನಂತರ.

Advertisement
Advertisement

ಇನ್ನೂ ಮಲಗುವುದಾ… ಅಲ್ಲಾ… ಓದುವುದಾ ಎಂದು ಅರಿತಿಲ್ಲ… ಈಚೆ ನೋಡಿದರೆ ನಾಳೆಯ ಪರೀಕ್ಷೆಗೆ ಬೇಕಾದ ಪಾಠಗಳೇ ಓದಿ ಆಗಿಲ್ಲ. ಮಲಗುದು ಎಂದರೇ ಮನೆಯಲ್ಲಿ ಯಾರಿಲ್ಲ ಎಂಬ ಭಯ. ಈ ಕರಾಳ ದಿನ ಎಂದೂ ನನಗೆ ಬರುವುದು ಬೇಡ ಎಂದೂ ದೇವರ ಮೊರೆ ಹೋದೆ.

ದೇವರನ್ನು ಪ್ರಾರ್ಥಿಸುವಾಗಲೇ ಹೊರಗಡೆಯಿಂದ ಏನೋ ವಿಚಿತ್ರ ಧ್ವನಿಯಲ್ಲಿ ನಾಯಿಗಳ ಕೂಗು. ಹೊರಗಡೆಯೂ ಹೋಗದೇ ಕುಳಿತಲ್ಲೇ ಕಣ್ಣು ಮುಚ್ಚಿ ಜೋರಾಗಿ ಅಳುತ್ತಾ ಅಲ್ಲೇ ಕುಳಿತೇ. ಭಯದಲ್ಲಿ ಅದೊಂದು ರಾತ್ರಿಯನ್ನು ಕಳೆದುಕೊಂಡಿರುವೆ.

Advertisement
ಮರುದಿನ ಕಾಲೇಜಿಗೆ ಹೋಗಿ ಗೆಳತಿಯರೊಂದಿಗೆ ನಡೆದ ಘಟನೆಯನ್ನು ಹೇಳುತ್ತಾ ದುಃಖ ಪಟ್ಟಿರುವೆ. ನಾನು ಎಷ್ಟು ದೊಡ್ಡವಳಾದರೂ, ಎಲ್ಲೇ ಹೋದರೂ ಇದೊಂದು ಕರಾಳ ಕ್ಷಣವನ್ನು ಎಂದೂ ಮರೆಯಲ್ಲ ಅಂದು ಮನಸ್ಸಿಗೆ ತುಂಬಾ ಹತ್ತಿರವಾಗಿರುವ ಗೆಳತಿಯನ್ನು ಅಪ್ಪಿಕೊಂಡು ಮೌನವಾದೆ.

ಬರಹ:
# ಅನನ್ಯ ಎಚ್ ಸುಬ್ರಹ್ಮಣ್ಯ 
Advertisement
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಅದೊಂದು ಮರೆಯದ ದಿನ…… |"

Leave a comment

Your email address will not be published.


*