ಶಾಲೆಯಲ್ಲಿ ನಡೆಯುವ ಪಾಲಕರ ಸಭೆಯನ್ನು ತಪ್ಪಿಸುವುದಕ್ಕಾಗಿ ವಿದ್ಯಾರ್ಥಿಯೊಬ್ಬ ಆತ್ನಹತ್ಯೆಗೆ ಯತ್ನಿಸಿದ ಘಟನೆ ಲಕ್ನೋದಲ್ಲಿ ನಡೆದಿದೆ. ಪಾಲಕರ ಸಭೆಯಲ್ಲಿ ಪಾಲಕರು ಶಿಕ್ಷಕರನ್ನು ಭೇಟಿಯಾಗುವುದನ್ನು ತಪ್ಪಿಸುವುದಕ್ಕಾಗಿ ಲಕ್ನೋದ 9 ನೇ ತರಗತಿಯ ವಿದ್ಯಾರ್ಥಿ ಈ ಕೃತ್ಯ ನಡೆಸಿದ್ದಾನೆ.
ಗೋಮತಿ ನಗರ ವಿಸ್ತರಣೆಯ ನಿವಾಸಿ ಆದಿತ್ಯ ತಿವಾರಿ ಎಂಬ 9 ನೇ ತರಗತಿಯ ವಿದ್ಯಾರ್ಥಿ ರೈಲ್ವೇ ಹಳಿಯಲ್ಲಿ ಗಾಯಗೊಂಡಿದ್ದು, ಇದೀಗ ಅವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಖಾಸಗಿ ಶಾಲೆಯ ವಿದ್ಯಾರ್ಥಿಯಾಗಿರುವ ಈತ ತನ್ನ ವ್ಯಾಸಂಗದಲ್ಲಿ ಉತ್ತಮವಾಗಿದ್ದು, ಆದರೆ ಅವನು ತನ್ನ ಕೊನೆಯ ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಗಳಿಸಿದ ಕಾರಣ ಪಾಲಕ-ಶಿಕ್ಷಕರ ಸಭೆಯನ್ನು ಕರೆಯಲಾಗಿದೆ ಎಂದು ಹೇಳಿದರು. ವಿದ್ಯಾರ್ಥಿ ಸಭೆಯಿಂದ ತಪ್ಪಿಸಿಕೊಳ್ಳುತ್ತಿದ್ದು, ಆದಿತ್ಯನ ಪೋಷಕರನ್ನು ಭೇಟಿಯಾಗಲು ಮನೆಗೆ ಹೋಗುವುದಾಗಿ ಶಿಕ್ಷಕರು ನಿರ್ಧರಿಸಿದ್ದರು. ಇದನ್ನು ತಿಳಿದ ಆದಿತ್ಯ ಹೆದರಿದ ತನ್ನ ಜೀವನವನ್ನು ಅಂತ್ಯಗೊಳಿಸಲು ಆತ್ಮಹತ್ಯೆಗೆ ಯತ್ನಿಸಿದ್ದ ಎನ್ನಲಾಗಿದೆ. ಅದಕ್ಕೂ ಮುನ್ನ ಪತ್ರ ಬರೆದಿದ್ದ, ಹೀಗಾಗಿ ಘನೆಯ ಕಾರಣ ತಿಳಿದಿದೆ.
ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಜುಲೈ 27 ರಂದು ಮಧ್ಯಪ್ರದೇಶ ದಾಟಿ ರಾಜಸ್ಥಾನ ಗಡಿ…
ಭಾರತದಲ್ಲಿ, ಮೇ ತಿಂಗಳಿನಲ್ಲಿ ಉಂಟಾದ ತೀವ್ರ ಉಷ್ಣತೆಯು ಬೆಳೆ ಇಳುವರಿ ಮತ್ತು ಪೂರೈಕೆ…
ಗಂಡ-ಹೆಂಡತಿ ಸಂಬಂಧವು ಜೀವನದ ಅತ್ಯಂತ ಗಾಢವಾದ ಮತ್ತು ಆಧ್ಯಾತ್ಮಿಕ ಬಂಧವಾಗಿದೆ. ಜ್ಯೋತಿಷ್ಯ ಶಾಸ್ತ್ರದ…
ಹಲಸಿನ ಬೀಜದ ಖಾರದ ಕಡ್ಡಿ ಮಳೆ ಬರುವಾಗ ಬಿಸಿ ಬಿಸಿಯಾದ ಕಾಫಿ, ಟೀ,…
ದಕ್ಷಿಣ ಜಿಲ್ಲೆಯಲ್ಲಿ ನಾನ್-ಸಿಆರ್ಝೆಡ್ ದೇಶದಲ್ಲಿ ಗುರುತಿಸಿ ಮಂಜೂರಾಗಿರುವ 15 ಮರಳು ಬ್ಲಾಕ್ಗಳಲ್ಲಿನ ಮರಳು…
ಬಾಂಗ್ಲಾದೇಶ ಕರಾವಳಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಬಾಂಗ್ಲಾದೇಶ ಕರಾವಳಿಯಲ್ಲಿ ಪ್ರವೇಶಿಸಿದ್ದು ಇನ್ನು ಒಂದೆರಡು…