ಹೈನುಗಾರಿಕೆ #DairyFarming ಲಾಭದಾಯಕ ಅಲ್ಲ ಅನ್ನೋದು ಅನೇಕ ರೈತರ ಮಾತು. ಆದರೆ ಜೀವನ ಮಾತ್ರ ಅದರಿಂದ ಸಾಗೋದು ಪಕ್ಕಾ. ಅತ್ಯಧಿಕ ಲಾಭ ದೊರೆಯದಿದ್ದರು ಜೀವನಕ್ಕೆ ಒಂದು ಆಧಾರ ಈ ಹೈನುಗಾರಿಕೆ ಅಂದರೆ ತಪ್ಪಾಗಲಾರದು. ಆದರೆ ಇಲ್ಲೊಬ್ಬರು ಹೈನುಗಾರಿಕೆಯನ್ನು ನಂಬಿ ತಮ್ಮ ಜೀವನವನ್ನೇ ಕಟ್ಟಿಕೊಂಡಿದ್ದಾರೆ. ಅದು ಐಷರಾಮಮಿ ಮನೆ ಕಟ್ಟಿಕೊಳ್ಳುವ ಮೂಲಕ.ಹೇಗೆ ಅವರ ಸಾಧನೆ….?
ಪ್ರಕಾಶ್ ಇಮ್ಡೆ ಅವರು ಮೂಲತಃ ಮಹಾರಾಷ್ಟ್ರದ ಸೋಲಾಪುರದವರು. ಹಸುವಿನ ಹಾಲು #Milk ಮಾರಾಟ ಮಾಡಿಯೇ ಇವರು 1 ಕೋಟಿ ರೂಪಾಯಿ ಮೌಲ್ಯದ ಬಂಗಲೆ ಕಟ್ಟಿಕೋಂಡಿದ್ದಾರೆ. ರೈತ ಪ್ರಕಾಶ್ ಇಮ್ಡೆ ಅವರ ಯಶಸ್ಸಿನ ಕಥೆ ಶುರುವಾಗಿದ್ದು ಕೇವಲ ಒಂದು ಹಸುವಿನಿಂದ. ಇದುವರೆಗೂ ತಮ್ಮ ಒಂದು ಕರುವನ್ನೂ ಮಾರಾಟ ಮಾಡಿಲ್ಲ. ಹಾಗಾಗಿಯೇ ಇಂದಿಗೂ ಅವರ ಬಳಿ 150 ಕ್ಕೂ ಹೆಚ್ಚು ಹಸುಗಳಿವೆ. 2006 ರಲ್ಲಿ ಹಸು ಲಕ್ಷ್ಮಿ ಮರಣದ ನಂತರ, ಅವರು ಅದರ ವಂಶಾವಳಿಯನ್ನು ಮುಂದುವರೆಸಿದ್ದರು. ಆದರೆ ಈಗ 150ಕ್ಕೂ ಹೆಚ್ಚು ಹಸಗಳೊಂದಿಗೆ ಡೈರಿ ಫಾರ್ಮ್ ನಡೆಸುತ್ತಿದ್ದಾರೆ.
ಸ್ಥಳೀಯರು ಪ್ರೀತಿಯಿಂದ ಪ್ರಕಾಶ್ ಇಮ್ಡೆ ಅವರನ್ನು ಬಾಪು ಎಂದು ಕರೆಯುತ್ತಾರಂತೆ. ಪ್ರತಿ ದಿನ ಮೊದಲು ಹಸು ಲಕ್ಷ್ಮಿಯ ಚಿತ್ರಕ್ಕೆ ಪ್ರಾರ್ಥನೆ ಸಲ್ಲಿಸುವ ಮೂಲಕ ದಿನದ ಕೆಲಸವನ್ನು ಪ್ರಾರಂಭಿಸುತ್ತಾರೆ.
ಪ್ರಕಾಶ್ ಇಮ್ಡೆ ನಿರ್ಮಿಸಿದ ಬಂಗಲೆಗೆ ಗೋಧನ್ ನಿವಾಸ ಎಂದು ಹೆಸರು ನೀಡಿದ್ದಾರೆ. 1998ರಲ್ಲಿ ಹಸುವಿನ ಹಾಲು ಮತ್ತು ಸಗಣಿ ಮಾರಾಟ ಮಾಡುವ ಉದ್ಯಮ ಆರಂಭಿಸಿದರು. ಆರಂಭದಲ್ಲಿ ಇವರು ತಮ್ಮ ಗ್ರಾಮದ ನಿವಾಸಿಗಳಿಗೆ ಹಾಲು ಮಾರುತ್ತಿದ್ದರು. ಕೇವಲ ಒಂದು ಹಸುವಿನ ಮೇಲೆ ಅವಲಂಬಿತವಾದ ವ್ಯಾಪಾರದಿಂದ, ಅವರು ಈಗ 150 ಕ್ಕೂ ಹೆಚ್ಚು ಹಸುಗಳೊಂದಿಗೆ ಡೈರಿ ಫಾರ್ಮ್ ಅನ್ನು ನಡೆಸುತ್ತಿದ್ದಾರೆ. ಪ್ರಸ್ತುತ ಫಾರ್ಮ್ ದಿನಕ್ಕೆ 1,000 ಲೀಟರ್ ಹಾಲು ಉತ್ಪಾದಿಸುತ್ತದೆ.
ಇಮ್ಡೆ ಅವರ ಇಡೀ ಕುಟುಂಬವು ಪ್ರತಿ ಹಂತದಲ್ಲೂ ವ್ಯಾಪಾರಕ್ಕೆ ಸಹಾಯ ಮಾಡುತ್ತಂತೆ. ಹಸುಗಳಿಗೆ ಹಾಲುಣಿಸುವುದು, ಅವುಗಳಿಗೆ ಆಹಾರ ನೀಡುವ ಕೆಲಸವನ್ನು ಕುಟುಂಬಸ್ಥರೇ ಮಾಡುತ್ತಾರೆ. ಪ್ರಕಾಶ್ ಇಮ್ಡೆ ಅವರು ತಮ್ಮ ಒಂದು ಕರುವನ್ನೂ ಮಾರಾಟ ಮಾಡಿಲ್ಲ. ಹಾಗಾಗಿಯೇ ಇಂದಿಗೂ ಅವರ ಬಳಿ 150ಕ್ಕೂ ಹೆಚ್ಚು ಹಸುಗಳಿವೆ. ಹಸುಗಳಿಗೆ ದಿನಕ್ಕೆ ನಾಲ್ಕೈದು ಟನ್ಗಳಷ್ಟು ಹಸಿರು ಮೇವು ಬೇಕಾಗುತ್ತದೆ. ಅವರು ಸಾಧ್ಯವಾದಷ್ಟು ಜಮೀನಿನಲ್ಲಿ ಬೆಳೆದು ಉಳಿದದ್ದನ್ನು ಹೊರಗಿನ ಮೂಲಗಳಿಂದ ಖರೀದಿಸುತ್ತಾರೆ.
Source: ಅಂತರ್ಜಾಲ
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…