ಇಲ್ಲೊಂದು ಮೈಸೂರಿನ ಕುಟುಂಬ ಜೀವನಕ್ಕಾಗಿ ಕೃಷಿ #Agriculture ಮಾಡುತ್ತಿದೆ. ಹಾಗೆ ಉಳಿದವರ ಹಿತಾಸಕ್ತಿಯನ್ನು ನೋಡುತ್ತಿದೆ. ಒಂದೆಡೆ ಸೊಂಪಾಗಿ ಬೆಳೆದು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರೋ ಭತ್ತದ ಹೊಲ, ಅದರ ಪಕ್ಕದಲ್ಲಿ ಮೊಗ್ಗು ಅರಳಿಸಿಕೊಂಡು ನಿಂತಿರೋ ಸುಗಂಧ ರಾಜ ಹೂಗಳು. ಇನ್ನೂ ಮನೆಯಲ್ಲಿ ನೈಸರ್ಗಿಕ ಗಾಣದ ಸದ್ದು. ಹೀಗೆ ಅಪ್ಪ-ಮಗನ ಜೋಡಿ ಕೃಷಿ ಮಾಡಿ ಅದ್ಭುತ ಸಾಧನೆ ಮಾಡಿದ್ದಾರೆ
ಮೈಸೂರಿನ ಟಿ. ನರಸೀಪುರ ತಾಲೂಕಿನ ಕಯಂಬಳ್ಳಿಯ ರೈತ ಬಸಪ್ಪ ಅತೀ ಕಡಿಮೆ ಖರ್ಚಿನಲ್ಲಿ ಭತ್ತ ಬೆಳೆಯುತ್ತಾರೆ. ಇದಕ್ಕಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ತರಬೇತಿ ಪಡೆದಿರುವ ಬಸಪ್ಪ ಅವರು ಊರಿನಲ್ಲಿ ಅದೇ ಪ್ರಕಾರ ನಾಟಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಧರ್ಮಸ್ಥಳ ಸಂಸ್ಥೆಯ ಮಷಿನ್ನಿಂದ ನಾಟಿ ಮಾಡಿಸುವ ಬಸಪ್ಪ ಅವರು, ಕೇವಲ ಎರಡೂವರೆ ಸಾವಿರ ರೂಪಾಯಿಯಲ್ಲಿ 2 ಎಕರೆಯಲ್ಲಿ ಭತ್ತ ಬೆಳೆಯುತ್ತಾರೆ. ಇನ್ನು ಸುಗಂಧರಾಜವನ್ನು ಅರ್ಧ ಎಕರೆಯಲ್ಲಿ ಬೆಳೆದಿರುವ ಬಸಪ್ಪ ಅವರು, ಅದ್ರಿಂದಾಗಿ ದಿನಕ್ಕೆ 6 ರಿಂದ 7 ಸಾವಿರ ಆದಾಯವನ್ನು ಪಡೆಯುತ್ತಿರುವುದು ವಿಶೇಷ. ನೇರವಾಗಿ ತಾವು ಬೆಳೆದ ಹೂಗಳನ್ನು ಮಾರುಕಟ್ಟೆಗೆ ಕೊಂಡೊಯ್ಯುವ ಬಸಪ್ಪನವರು ಅಲ್ಲಿ ಮಾರಾಟ ಮಾಡುತ್ತಾರೆ. ಹೀಗೆ 3 ಎಕರೆ ಜಮೀನಿನಲ್ಲಿ ಉತ್ತಮ ಆದಾಯ ಪಡೆಯುತ್ತಿದ್ದಾರೆ.
ಗಾಣದಿಂದ ಎಣ್ಣೆ ತಯಾರಿ: ಬಸಪ್ಪ ಪುತ್ರ ಹರ್ಷ ಅವರು ಮನೆಯಲ್ಲಿಯೇ ಗಾಣದಿಂದ ಎಣ್ಣೆ ತಯಾರಿಸುತ್ತಾರೆ. ಎತ್ತುಗಳ ಸಹಾಯದಿಂದ ಮಾಡುವ ನೈಸರ್ಗಿಕ ಎಣ್ಣೆ ಗಾಣ ಇದಾಗಿದ್ದು, ಪಟ್ಟಣ ಪ್ರದೇಶದಿಂದಲೂ ಗ್ರಾಹಕರು ಹುಡುಕಿಕೊಂಡು ಇಲ್ಲಿಗೆ ಬರುತ್ತಾರೆ.ಕೊಬ್ಬರಿ, ಹರಳೆಣ್ಣೆ, ಕಡಲೆ ಎಣ್ಣೆ ಹೀಗೆ ಹಲವು ಬಗೆಯ ಎಣ್ಣೆಗಳನ್ನೂ ಇಲ್ಲಿ ತಯಾರಿಸಲಾಗುತ್ತೆ. ಜನರು ಗುಣಮಟ್ಟ ನೋಡಿ ಎಣ್ಣೆ ಖರೀದಿಸುತ್ತಾರೆ. ಹೀಗೆ ಅಪ್ಪ, ಮಗನ ಜೋಡಿಯ ಈ ಕೃಷಿ ಸಾಧನೆ ಕಂಡು ಗ್ರಾಮದ ಹಲವರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಗಳಿಸೋ ಇವರು ಜೀವನಕ್ಕಾಗಿ ಕೃಷಿಯನ್ನು ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ನೆಮ್ಮದಿಯ ಜೀವನ ಕಂಡುಕೊಂಡಿದ್ದಾರೆ.
ಪರಿಶುದ್ಧ ಮನಸ್ಸಿನಿಂದ ಶಿವನ ಧ್ಯಾನ, ಉಪಾಸನೆ ಮಾಡಿದಾಗ ಸಕಲ ಪಾಪ ಕರ್ಮಗಳ ಕೊಳೆ…
ತಮಿಳುನಾಡಿನ ಕೊಯಮತ್ತೂರಿನ ಈಶಾ ಫೌಂಡೇಷನ್ ಆದಿ ಯೋಗಿ ಪ್ರತಿಮೆಯ ಬಳಿ ಹಮ್ಮಿಕೊಂಡಿದ್ದ ಶಿವರಾತ್ರಿ…
ಮಹಾಶಿವರಾತ್ರಿಯ ಹಿನ್ನಲೆಯಲ್ಲಿ ನೇಪಾಳದ ಕಠ್ಮಂಡುವಿನಲ್ಲಿರುವ ಪಶುಪತಿನಾಥ ಮಂದಿರಕ್ಕೆ ಲಕ್ಷಾಂತರ ಭಕ್ತಾದಿಗಳು ಭೇಟಿ ನೀಡಿ…
ರೈಲ್ವೆ ಇಲಾಖೆ ಪ್ರಯಾಗ್ರಾಜ್ನಿಂದ 350 ಕ್ಕೂ ಹೆಚ್ಚು ರೈಲುಗಳನ್ನು ಓಡಿಸಲು ನಿರ್ಧರಿಸಿದೆ.
ಮ್ಯಾನ್ಮಾರ್ ಅಡಿಕೆ ಮಾರುಕಟ್ಟೆ ವಲಯದಲ್ಲಿ ಈ ಬಾರಿ ಭಾರತವು ಅಡಿಕೆ ಖರೀದಿಯನ್ನು ಪುನರಾರಂಭ…
ಅಡಿಕೆ ವ್ಯಾಪಾರ ನಡೆಸಿ ಹಣ ಕೊಡದೆ ವಂಚನೆ ನಡೆಸುತ್ತಿರುವ ಪ್ರಕರಣಗಳು ಹೆಚ್ಚುತ್ತಿದೆ. ಈ…