#G-20Summit | ಯಶಸ್ವಿಯಾಗಿ ನಡೆದ 2 ದಿನಗಳ ಜಿ-20 ಶೃಂಗಸಭೆ | ಜಿ20 ಗುಂಪಿನ ಮುಂ |ದಿನ ಜವಬ್ದಾರಿ ಬ್ರೆಜಿಲ್‌ಗೆ

September 11, 2023
2:20 PM
ಜಿ-20ಶೃಂಗಸಭೆಯ ಭಾಗವಾಗಿ ವಿಶ್ವನಾಯಕರು ರಾಜಘಾಟ್‌ಗೆ ತೆರಳಿ ಮಹಾತ್ಮಾ ಗಾಂಧೀಜಿ ಸ್ಮಾರಕಕ್ಕೆ ನಮನ ಸಲ್ಲಿಸಿದ್ರು. ತುಂತುರು ಮಳೆ ನಡ್ವೆಯೂ ಪ್ರಧಾನಿ ಮೋದಿ, ಜೋ ಬೈಡನ್, ರಿಷಿ ಸುನಾಕ್ ಸೇರಿ ಜಿ-20 ನಾಯಕರು ಹೂಗುಚ್ಚ ಇರಿಸಿ ವಿಶ್ವಶಾಂತಿಗೆ ಪ್ರಾರ್ಥಿಸಿದರು.

ಭಾರತದ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ಎರಡು ದಿನ ನಡೆದ ಜಿ-20 ಶೃಂಗಸಭೆ G-20 Summit ಯಶಸ್ವಿಯಾಗಿ ಮುಗಿದಿದೆ. ಜಿ20 ಗುಂಪಿನ ಮುಂದಿನ ಜವಬ್ದಾರಿಯನ್ನು ಬ್ರೆಜಿಲ್ ಅಧ್ಯಕ್ಷರಿಗೆ ಭಾರತದ ಪ್ರಧಾನಿ ಮೋದಿ  ಹಸ್ತಾಂತರಿಸಿದ್ದಾರೆ.

ಶೃಂಗಸಭೆ ಫಲಪ್ರದವಾಗಿದ್ದಕ್ಕೆ ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. United Nations ಸೇರಿ ಹಲವು ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಸುಧಾರಣೆ ಆಗಬೇಕಿದೆ ಎಂದು ಮೋದಿ ಉದ್ಘರಿಸಿದ್ದಾರೆ. 51 ದೇಶಗಳೊಂದಿಗೆ ವಿಶ್ವಸಂಸ್ಥೆ ಆರಂಭವಾದ ಕ್ಷಣಕ್ಕೂ ಈಗಿನ ಪರಿಸ್ಥಿತಿಗೂ ಸಾಕಷ್ಟು ವ್ಯತ್ಯಾಸವಿದೆ. ಕಾಲಕ್ಕೆ ತಕ್ಕಂತೆ ವಿಶ್ವಸಂಸ್ಥೆ ಬದಲಾಗಬೇಕಿದೆ ಎಂದಿದ್ದಾರೆ.

ಈ ಮೂಲಕ ವಿಶ್ವಸಂಸ್ಥೆ ಭದ್ರತಾಮಂಡಳಿಯಲ್ಲಿ ಭಾರತಕ್ಕೆ ಖಾಯಂ ಸ್ಥಾನ ಸಿಗಬೇಕು ಎಂದು ಪರೋಕ್ಷವಾಗಿ ಮೋದಿ ಹೇಳಿದ್ದಾರೆ. ಜಿ-20ಶೃಂಗಸಭೆಯ ಭಾಗವಾಗಿ ವಿಶ್ವನಾಯಕರು ಇಂದು ರಾಜಘಾಟ್‌ಗೆ ತೆರಳಿ ಮಹಾತ್ಮಾ ಗಾಂಧೀಜಿ ಸ್ಮಾರಕಕ್ಕೆ ನಮನ ಸಲ್ಲಿಸಿದ್ರು. ತುಂತುರು ಮಳೆ ನಡ್ವೆಯೂ ಪ್ರಧಾನಿ ಮೋದಿ, ಜೋ ಬೈಡನ್, ರಿಷಿ ಸುನಾಕ್ ಸೇರಿ ಜಿ-20 ನಾಯಕರು ಹೂಗುಚ್ಚ ಇರಿಸಿ ವಿಶ್ವಶಾಂತಿಗೆ ಪ್ರಾರ್ಥಿಸಿದ್ರು. ಅಮೆರಿಕಾ ಅಧ್ಯಕ್ಷರು ಇಲ್ಲಿಂದ ನೇರವಾಗಿ ವಿಯೇಟ್ನಾಂ ಪ್ರವಾಸ ಕೈಗೊಂಡರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಬರಪೀಡಿತ ವಿಜಯಪುರದಲ್ಲಿ ಹಸಿರಿನ ಕ್ರಾಂತಿ
October 17, 2026
7:23 AM
by: ದ ರೂರಲ್ ಮಿರರ್.ಕಾಂ
ಅಡಿಕೆ ತೋಟದಿಂದ ನ್ಯಾನೋತಂತ್ರಜ್ಞಾನದವರೆಗೆ…! ಬೆಳೆಗಾರರಿಗೆ ಹೊಸ ಮೌಲ್ಯ ಸೃಷ್ಟಿಸುವ ಸಂಶೋಧನೆ
October 16, 2026
5:14 PM
by: ವಿಶೇಷ ಪ್ರತಿನಿಧಿ
ರಸ್ತೆ ಬದಿಯಲ್ಲಿ ಕಸ ಎಸೆಯುವವರೇ, ಒಮ್ಮೆ ಇವರನ್ನು ನೋಡಿ…! – 5 ದಿನಗಳಲ್ಲಿ ಕಂಡ ಭಯಾನಕ ವಾಸ್ತವ
October 13, 2026
11:01 PM
by: ಮಹೇಶ್ ಪುಚ್ಚಪ್ಪಾಡಿ
ಚಿತ್ರದುರ್ಗದಲ್ಲಿ ಕಣ್ಣೆದುರೇ ಒಣಗಿದ ಬೆಳೆ… ರೈತನಿಗೆ ದಿಕ್ಕೇ ತೋಚದ ಸ್ಥಿತಿ – ವಿಶೇಷ ಪ್ಯಾಕೇಜ್‌ಗೆ ರೈತರ ಒತ್ತಾಯ
October 13, 2026
9:55 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror