ಹೀಗೊಂದು ಗೃಹ ಉದ್ದಿಮೆ | ಸೂರ್ಯನ ಬೆಳಕಿಂದ ಚಕ್ಕುಲಿ ತಯಾರಿಸಿ | ಉತ್ತಮ ಆದಾಯ ಗಳಿಸಿ…!

Advertisement

ಅನೇಕ ಮಹಿಳೆಯರು ಕುರುಕುಲು ತಿಂಡಿ ಚಕ್ಕುಲಿ, ನಿಪ್ಪಟ್ಟು, ಕಾರಕಡ್ಡಿ ಮುಂತಾದವು ಮಾಡಿ, ಮಾರಿ ಜೀವನ ಸಾಗಿಸುತ್ತಾರೆ. ಈ ಕುರುಕುಲು ತಿಂಡಿ ತಿನಿಸುಗಳನ್ನು ಮಾಡೋದೇನೋ ಸರಿ. ಆದರೆ ಈ ಬೇಸಗೆಯ ಬಿಸಿಲಿನ ತಾಪಕ್ಕೆ ಒಲೆಯ ಮುಂದೆ ಬೇಯೋದು ಯಾರು..? ಆದರೆ ವಿಧಿ ಇಲ್ಲ.. ಜೀವನ ಸಾಗಬೇಕಲ್ಲ.. ಆದ್ರೆ ಈ ತಾಪತ್ರಯಗಳಿಗೆ ಈಗೊಂದು ಸುಲಭ ದಾರಿ ಸಿಕ್ಕಿದೆ.

Advertisement

ಸೂರ್ಯನ ಬೆಳಕಿನಿಂದ ಈಗ ಚಕ್ಕುಲಿಯನ್ನೂ ತಯಾರಿಸಬಹುದು.  ಹೌದು, ಸೂರ್ಯನ ಬೆಳಕಿನಿಂದ ಚಕ್ಕುಲಿ ತಯಾರಿಸುವ ವಿಶೇಷ ಸಾಧನವೊಂದನ್ನು ಆವಿಷ್ಕಾರ ಮಾಡಲಾಗಿದೆ. ಸಾಮಾಜಿಕ ಆರ್ಥಿಕ ಅಭಿವೃದ್ಧಿಗೆ ತನ್ನದೇ ಕೊಡುಗೆ ನೀಡುತ್ತಿರುವ ಸೆಲ್ಕೋ ಸಂಸ್ಥೆ ಸೋಲಾರ್ ಚಕ್ಕುಲಿ ಮೇಕರ್ ಸಾಧನವನ್ನು ಕಂಡುಹಿಡಿದೆ. ಈ ಚಕ್ಕುಲಿ ಮೇಕರ್​ನ್ನು ಇತ್ತೀಚಿಗೆ ಉಡುಪಿಯಲ್ಲಿ ನಡೆದ ಕೃಷಿ ಮೇಳದಲ್ಲಿ ಪ್ರದರ್ಶನ ಮಾಡಲಾಗಿದೆ.

Advertisement
Advertisement

ಈ ಸೋಲಾರ್ ಚಕ್ಕುಲಿ ಮೇಕರ್ ಬಳಸಿ ಒಂದೇ ಗಂಟೆಯಲ್ಲಿ 10 ಕೆಜಿ ಚಕ್ಕುಲಿಯನ್ನು ತಯಾರಿಸಬಹುದಾಗಿದೆ. ಚಕ್ಕುಲಿಯೊಂದೇ ಅಲ್ಲದೇ, ಕೋಡುಬಳೆ ಮತ್ತಿತರ ತಿಂಡಿಗಳನ್ನು ಸಹ ಈ ಸಾಧನ ಬಳಸಿ ತಯಾರಿಸಬಹುದಾಗಿದೆ.

Advertisement

Advertisement

ಈ ಸೋಲಾರ್ ಚಕ್ಕುಲಿ ಮೇಕರ್ ಸಾಧನವನ್ನು ಈಗಾಗಲೇ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಆದರೂ ಬಳಕೆದಾರರ ಪ್ರತಿಕ್ರಿಯೆಯನ್ನು ಆಧರಿಸಿ ಸಂಶೋಧನೆ ಮತ್ತು ಅಭಿವೃದ್ಧಿಯ ಅಂತಿಮ ಹಂತದಲ್ಲಿದ್ದೇವೆ ಎಂದು ಸೆಲ್ಕೋ ಸಂಸ್ಥೆ ತಿಳಿಸಿದೆ.

ಸೋಲಾರ್ ಚಕ್ಕುಲಿ ಮೇಕರ್ ಯಂತ್ರವನ್ನು ಬ್ಲೂಟೂತ್ ಮೂಲಕ ಮೊಬೈಲ್ ಫೋನ್​ಗೆ ಸಂಪರ್ಕಿಸಬಹುದು. ಚಕ್ಕುಲಿ ತಯಾರಿಸುವಾಗ ಮೊಬೈಲ್ ಅಪ್ಲಿಕೇಶನ್ ಮೂಲಕವೇ ಚಕ್ಕುಲಿ ಹಿಟ್ಟಿನ ಪ್ರಮಾಣ, ಗಾತ್ರ ಮತ್ತು ದಪ್ಪ ಮುಂತಾದವುಗಳನ್ನು ನಿರ್ಧರಿಸಬಹುದು ಎಂದು ಸೆಲ್ಕೋ ಪ್ರತಿನಿಧಿ ತಿಳಿಸಿದ್ದಾರೆ.

Advertisement
Advertisement

ಗ್ರಾಮೀಣ ಭಾಗದ ಯುವಕ ಯುವತಿಯರ ಜೀವನವನ್ನು ಸರಳಗೊಳಿಸುವ ನಿಟ್ಟಿನಲ್ಲಿ ಈ ಸೋಲಾರ್ ಚಕ್ಕುಲಿ ಮೇಕರ್ ತಯಾರಿಸಲಾಗಿದೆ. ಈ ಯಂತ್ರ ಹಳ್ಳಿಗಳಲ್ಲಿ ಹೊಸ ವ್ಯವಹಾರಕ್ಕೆ ಕೈಹಾಕುವ ಉತ್ಸಾಹಿಗಳಿಗೆ ನೆರವಾಗಲಿದೆ ಎನ್ನಲಾಗಿದೆ.

ಅಂದಾಜು 2.5 ಲಕ್ಷ ರೂ. ಬೆಲೆಯ ಈ ಚಕ್ಕುಲಿ ಮೇಕರ್ ಯಂತ್ರಕ್ಕೆ ಸೆಲ್ಕೋ ಶೇ.25ರಷ್ಟು ಸಬ್ಸಿಡಿ ನೀಡುವುದಾಗಿ ತಿಳಿಸಿದೆ. ಒಟ್ಟಾರೆ ಈ ಯಂತ್ರದ ಮೂಲಕ ಗ್ರಾಮೀಣ ಭಾಗದ ಉತ್ಸಾಹಿಗಳಿಗೆ ಈ ಸೋಲಾರ್ ಯಂತ್ರ ಹೊಸ ಬ್ಯುಸಿನೆಸ್ ಆರಂಬಿಸಲು ದಾರಿಯಾಗುವ ಲಕ್ಷಣವಿದೆ.

Advertisement
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಹೀಗೊಂದು ಗೃಹ ಉದ್ದಿಮೆ | ಸೂರ್ಯನ ಬೆಳಕಿಂದ ಚಕ್ಕುಲಿ ತಯಾರಿಸಿ | ಉತ್ತಮ ಆದಾಯ ಗಳಿಸಿ…!"

Leave a comment

Your email address will not be published.


*