ಅನೇಕ ಮಹಿಳೆಯರು ಕುರುಕುಲು ತಿಂಡಿ ಚಕ್ಕುಲಿ, ನಿಪ್ಪಟ್ಟು, ಕಾರಕಡ್ಡಿ ಮುಂತಾದವು ಮಾಡಿ, ಮಾರಿ ಜೀವನ ಸಾಗಿಸುತ್ತಾರೆ. ಈ ಕುರುಕುಲು ತಿಂಡಿ ತಿನಿಸುಗಳನ್ನು ಮಾಡೋದೇನೋ ಸರಿ. ಆದರೆ ಈ ಬೇಸಗೆಯ ಬಿಸಿಲಿನ ತಾಪಕ್ಕೆ ಒಲೆಯ ಮುಂದೆ ಬೇಯೋದು ಯಾರು..? ಆದರೆ ವಿಧಿ ಇಲ್ಲ.. ಜೀವನ ಸಾಗಬೇಕಲ್ಲ.. ಆದ್ರೆ ಈ ತಾಪತ್ರಯಗಳಿಗೆ ಈಗೊಂದು ಸುಲಭ ದಾರಿ ಸಿಕ್ಕಿದೆ.
ಸೂರ್ಯನ ಬೆಳಕಿನಿಂದ ಈಗ ಚಕ್ಕುಲಿಯನ್ನೂ ತಯಾರಿಸಬಹುದು. ಹೌದು, ಸೂರ್ಯನ ಬೆಳಕಿನಿಂದ ಚಕ್ಕುಲಿ ತಯಾರಿಸುವ ವಿಶೇಷ ಸಾಧನವೊಂದನ್ನು ಆವಿಷ್ಕಾರ ಮಾಡಲಾಗಿದೆ. ಸಾಮಾಜಿಕ ಆರ್ಥಿಕ ಅಭಿವೃದ್ಧಿಗೆ ತನ್ನದೇ ಕೊಡುಗೆ ನೀಡುತ್ತಿರುವ ಸೆಲ್ಕೋ ಸಂಸ್ಥೆ ಸೋಲಾರ್ ಚಕ್ಕುಲಿ ಮೇಕರ್ ಸಾಧನವನ್ನು ಕಂಡುಹಿಡಿದೆ. ಈ ಚಕ್ಕುಲಿ ಮೇಕರ್ನ್ನು ಇತ್ತೀಚಿಗೆ ಉಡುಪಿಯಲ್ಲಿ ನಡೆದ ಕೃಷಿ ಮೇಳದಲ್ಲಿ ಪ್ರದರ್ಶನ ಮಾಡಲಾಗಿದೆ.
ಈ ಸೋಲಾರ್ ಚಕ್ಕುಲಿ ಮೇಕರ್ ಬಳಸಿ ಒಂದೇ ಗಂಟೆಯಲ್ಲಿ 10 ಕೆಜಿ ಚಕ್ಕುಲಿಯನ್ನು ತಯಾರಿಸಬಹುದಾಗಿದೆ. ಚಕ್ಕುಲಿಯೊಂದೇ ಅಲ್ಲದೇ, ಕೋಡುಬಳೆ ಮತ್ತಿತರ ತಿಂಡಿಗಳನ್ನು ಸಹ ಈ ಸಾಧನ ಬಳಸಿ ತಯಾರಿಸಬಹುದಾಗಿದೆ.
ಈ ಸೋಲಾರ್ ಚಕ್ಕುಲಿ ಮೇಕರ್ ಸಾಧನವನ್ನು ಈಗಾಗಲೇ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಆದರೂ ಬಳಕೆದಾರರ ಪ್ರತಿಕ್ರಿಯೆಯನ್ನು ಆಧರಿಸಿ ಸಂಶೋಧನೆ ಮತ್ತು ಅಭಿವೃದ್ಧಿಯ ಅಂತಿಮ ಹಂತದಲ್ಲಿದ್ದೇವೆ ಎಂದು ಸೆಲ್ಕೋ ಸಂಸ್ಥೆ ತಿಳಿಸಿದೆ.
ಸೋಲಾರ್ ಚಕ್ಕುಲಿ ಮೇಕರ್ ಯಂತ್ರವನ್ನು ಬ್ಲೂಟೂತ್ ಮೂಲಕ ಮೊಬೈಲ್ ಫೋನ್ಗೆ ಸಂಪರ್ಕಿಸಬಹುದು. ಚಕ್ಕುಲಿ ತಯಾರಿಸುವಾಗ ಮೊಬೈಲ್ ಅಪ್ಲಿಕೇಶನ್ ಮೂಲಕವೇ ಚಕ್ಕುಲಿ ಹಿಟ್ಟಿನ ಪ್ರಮಾಣ, ಗಾತ್ರ ಮತ್ತು ದಪ್ಪ ಮುಂತಾದವುಗಳನ್ನು ನಿರ್ಧರಿಸಬಹುದು ಎಂದು ಸೆಲ್ಕೋ ಪ್ರತಿನಿಧಿ ತಿಳಿಸಿದ್ದಾರೆ.
ಗ್ರಾಮೀಣ ಭಾಗದ ಯುವಕ ಯುವತಿಯರ ಜೀವನವನ್ನು ಸರಳಗೊಳಿಸುವ ನಿಟ್ಟಿನಲ್ಲಿ ಈ ಸೋಲಾರ್ ಚಕ್ಕುಲಿ ಮೇಕರ್ ತಯಾರಿಸಲಾಗಿದೆ. ಈ ಯಂತ್ರ ಹಳ್ಳಿಗಳಲ್ಲಿ ಹೊಸ ವ್ಯವಹಾರಕ್ಕೆ ಕೈಹಾಕುವ ಉತ್ಸಾಹಿಗಳಿಗೆ ನೆರವಾಗಲಿದೆ ಎನ್ನಲಾಗಿದೆ.
ಅಂದಾಜು 2.5 ಲಕ್ಷ ರೂ. ಬೆಲೆಯ ಈ ಚಕ್ಕುಲಿ ಮೇಕರ್ ಯಂತ್ರಕ್ಕೆ ಸೆಲ್ಕೋ ಶೇ.25ರಷ್ಟು ಸಬ್ಸಿಡಿ ನೀಡುವುದಾಗಿ ತಿಳಿಸಿದೆ. ಒಟ್ಟಾರೆ ಈ ಯಂತ್ರದ ಮೂಲಕ ಗ್ರಾಮೀಣ ಭಾಗದ ಉತ್ಸಾಹಿಗಳಿಗೆ ಈ ಸೋಲಾರ್ ಯಂತ್ರ ಹೊಸ ಬ್ಯುಸಿನೆಸ್ ಆರಂಬಿಸಲು ದಾರಿಯಾಗುವ ಲಕ್ಷಣವಿದೆ.
ಅಡಿಕೆ ಸಿಪ್ಪೆ, ಸೋಗೆ ಮತ್ತು ಇತರ ಕೃಷಿ ಅವಶೇಷಗಳಿಂದ ಕಾರ್ಬನ್ ನ್ಯಾನೋಸ್ಫಿಯರ್ಗಳನ್ನು ಅಭಿವೃದ್ಧಿಪಡಿಸಿ,…
ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಬೆಳ್ಳಾರೆ…
ಸುಬ್ರಹ್ಮಣ್ಯದಲ್ಲಿ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಹೋಮಿಯೋಕೇರ್ ಗುತ್ತಿಗಾರಿಗೆ ಸ್ಥಳಾಂತರಗೊಂಡಿದ್ದು, ಎಸ್ಎಂಎಸ್ಜಿ ಕಾಂಪ್ಲೆಕ್ಸ್ನಲ್ಲಿ…
ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಗುಡುಗು…
ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜುಲೈ 1ರಿಂದ ಅಕ್ಟೋಬರ್ 14ರವರೆಗೆ ದಾಖಲೆಯ…