ಯಾವುದೇ ಕೃಷಿ ಉತ್ಪನ್ನಗಳ ದರ ಏರಿಳಿಕೆ ಸಾಮಾನ್ಯ. ಆದರೆ ರೈತರು ಇದನ್ನೇ ಉಗ್ರರೂಪ ತಾಳಿ ಪ್ರತಿಭಟಿಸುವುದು ನಿಜಕ್ಕೂ ದುರದೃಷ್ಟಕರ ಸಂಗತಿ. ಗೂಂಡಾಗಿರಿ ಮಾಡಿ, ಕಚೇರಿ, ವಾಹನಗಳನ್ನು ಧ್ವಂಸ ಮಾಡಿ ಬೆಂಕಿ ಹಚ್ಚಿ ಪ್ರತಿಭಟಿಸುವ ರೈತ ನಿಜಕ್ಕೂ ಆತ ರೈತನೇ ಅಲ್ಲ. ಇದು ಅವನ ಸಂಪತ್ತು. ಅದನ್ನು ಅವನೇ ಹಾಳುಗೈದರೆ ಯಾರಿಗೆ ನಷ್ಟ..? ರೈತ ಅಂದರೆ ತಾಳ್ಮೆ ಪ್ರತೀಕ. ಸಮಾಧಾನ, ಕಾಯುವಿಕೆ, ಅನುಸರಿಸಿಕೊಂಡು ಹೋಗೋದು ಅವನ ರಕ್ತದಲ್ಲೇ ಇರುತ್ತದೆ. ಆದರೆ ಇಲ್ಲಿ ನಡೆದದ್ದು ಏನು..?
ಬ್ಯಾಡಗಿ ಮೆಣಸಿನಕಾಯಿ (Byadagi Red Chilies) ದರ ದಿಢೀರ್ ಕುಸಿತದಿಂದ ಆಕ್ರೋಶಗೊಂಡಿರುವ ರೈತರು ಹಾವೇರಿಯಲ್ಲಿ (Haveri) ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ನಿಯಂತ್ರಣಕ್ಕೆ ಮುಂದಾದ ಪೊಲೀಸರನ್ನೇ ರೈತರು ಅಟ್ಟಾಡಿಸಿದ್ದಾರೆ. ದಿಢೀರ್ ಮೆಣಸಿನಕಾಯಿ ದರ ಕಡಿಮೆಯಾದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರೈತರು (Farmers) ಮಾರುಕಟ್ಟೆ ಆಡಳಿತ ಕಚೇರಿಗೆ (Market Administration Office) ಕಲ್ಲುತೂರಿ, ವಾಹನಗಳಿಗೆ ಬೆಂಕಿ ಇಟ್ಟ ಘಟನೆ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ (Byadgi Chilli Market) ನಡೆದಿದೆ.
ಪ್ರತಿಭಟನೆ ತಡೆಯಲು ಬಂದ ಪೊಲೀಸರನ್ನೇ ರೈತರು ಓಡಿಸಿದ್ದಾರೆ. ಆಡಳಿತದ ಕಚೇರಿ ಬಳಿ ಬಂದ 15 ಕ್ಕೂ ಅಧಿಕ ಪೊಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸಲಾಗದೇ ಸ್ಥಳದಿಂದ ಓಡುತ್ತಿರುವ ದೃಶ್ಯದ ವೀಡಿಯೋ ವೈರಲ್ ಆಗಿದೆ. ಕೈಯಲ್ಲಿ ದೊಣ್ಣೆ ಹಿಡಿದು ಪ್ರತಿಭಟನಾಕಾರರು ಪೊಲೀಸರನ್ನು ಓಡಿಸಿದ್ದಾರೆ. ತಮಗೆ ಅಪಾಯ ಆಗಬಹುದೆಂಬ ಭೀತಿಯಿಂದ ಪೊಲೀಸರು ಸ್ಥಳದಿಂದ ಓಡಿ ಹೋಗಿದ್ದಾರೆ. ಈ ವೇಳೆ ಇಬ್ಬರು ಪೊಲೀಸರಿಗೆ ಗಾಯವಾಗಿದೆ.
ಕಳೆದ ಬಾರಿ ಮೆಣಸಿನ ಬೆಲೆ ಗಗನಕ್ಕೇರಿತ್ತು. ಆಗ ಗ್ರಾಹಕರೇನಾದ್ರು ಇದೇ ಸ್ಥಿತಿಯಲ್ಲಿ ಪ್ರತಿಭಟಿಸಿ ಮೆಣಸಿನಕಾಯಿ ಗೋಡೌನ್ ಗಳಿಗೆ ಬೆಂಕಿ ಹಚ್ಚಿದ್ದರೆ ಏನಾಗುತ್ತಿತ್ತು..? ಏಕಾಏಕಿ ಅತಿರೇಕಕ್ಕೆ ಹೋಗಿ ಮನುಷ್ಯತ್ವ ಕಳೆದುಕೊಂಡು ನ್ಯಾಯ ಕೇಳುವ ಈ ರೀತಿಯ ವ್ಯವಸ್ಥೆ ಆಗಬಾರದಿತ್ತು.
– ಅಂತರ್ಜಾಲ ಮಾಹಿತಿ
Farmers who are outraged by the sudden fall in the price of Byadagi Red Chilies are protesting in Haveri. Farmers beat up the police who came forward to control the protest. An incident took place in Byadgi Chilli Market where angry farmers pelted stones at the Market Administration Office and set vehicles on fire due to the sudden reduction in the price of chillies.
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…