Advertisement
The Rural Mirror ಫಾಲೋಅಪ್

ಸುಳ್ಯದ ವಿದ್ಯುತ್‌ ಸಮಸ್ಯೆ | 110 ಕೆವಿ ವಿದ್ಯುತ್‌ ಸಬ್‌ ಸ್ಟೇಶನ್‌ 5 ಹೇಳಿಕೆಗಳು….! | ಸುಳ್ಯದ ವಿದ್ಯುತ್‌ ಸಮಸ್ಯೆ ಬಗ್ಗೆ ಮಾಧ್ಯಮಗಳು ಹೇಳುವುದು ಸುಳ್ಳೋ….? ಹೇಳಿಕೆಗಳು ಸುಳ್ಳೋ ? |

Share

ಸುಳ್ಯದ ವಿದ್ಯುತ್‌ ಸಮಸ್ಯೆ ಪ್ರತೀ ವರ್ಷವೂ ಚರ್ಚೆಯಾಗುತ್ತದೆ. ಆದರೆ ಪರಿಹಾರ ಮಾತ್ರಾ ಶೂನ್ಯ. ಈ ಬಾರಿಯೂ ಸುಳ್ಯ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ವಿದ್ಯುತ್‌ ಸಮಸ್ಯೆ ತಲೆದೋರಿದೆ. ಮಳೆಗಾಲದ ಈ ಅವಧಿಯಲ್ಲಿ ಗ್ರಾಮೀಣ ಭಾಗದಲ್ಲಿ ಎರಡು-ಮೂರು ದಿನಗಳ ಕಾಲ ಕತ್ತಲೆಯಲ್ಲಿ ಕಳೆಯುತ್ತದೆ. ಈ ನಡುವೆಯೇ ಸುಳ್ಯದ  110 ಕೆವಿ ಸಬ್‌ ಸ್ಟೇಶನ್‌ ಬಗ್ಗೆಯೂ ಚರ್ಚೆಯಾಗಿದೆ. ಇದೀಗ ಸುಳ್ಯದ ಮಾಧ್ಯಮಗಳು ಹೇಳುವುದು ಸುಳ್ಳೋ ಅಥವಾ ಹೇಳಿಕೆಗಳು ಸುಳ್ಳೋ ? ಎಂದು ಸಾರ್ವಜನಿಕರು ಪ್ರಶ್ನೆ ಮಾಡುವಂತಾಗಿದೆ. ಮಾಧ್ಯಮಗಳೂ ಏಕೆ ಇಂತಹ ಹೇಳಿಕೆಗಳನ್ನು ಪ್ರಶ್ನಿಸುವುದಿಲ್ಲ ಎಂದು ವಿದ್ಯುತ್‌ ಬಳಕೆದಾರರು ಕೇಳುತ್ತಾರೆ.

ಸುಳ್ಯದ ವಿದ್ಯುತ್‌ ಸಮಸ್ಯೆಗೆ ಏಕೆ ಮುಕ್ತಿ ಸಿಗುತ್ತಿಲ್ಲ ? ಹೀಗೆಂದು ಸುಳ್ಯದ ಜನರು ಕೇಳುತ್ತಾರೆ. ಇದಕ್ಕೆ ಉತ್ತರ 110 ಕೆವಿ ವಿದ್ಯುತ್‌ ಸಬ್‌ ಸ್ಟೇಶನ್‌ ಆದ ಕೂಡಲೇ ಎಂದು ಮೆಸ್ಕಾಂ ಮೂಲಗಳು ಹೇಳುತ್ತವೆ. ಪ್ರತೀ ಮಳೆಗಾಲವು ಕೂಡಾ ಅಲ್ಲಲ್ಲಿ ವಿದ್ಯುತ್‌ ತಂತಿ ತುಂಡಾಗುವುದೂ ಸೇರಿದಂತೆ ಮರದ ಗೆಲ್ಲು ತಾಗುವುದರಿಂದ ಟ್ರಿಪ್‌ ಆಗಿ ವಿದ್ಯುತ್‌ ಕಡಿತ ಉಂಟಾಗುತ್ತದೆ. ಗ್ರಾಮೀಣ ಭಾಗದಲ್ಲಿ ಮರ ಬಿದ್ದು ಕಂಬ ತುಂಡಾಗಿ ವಿದ್ಯುತ್‌ ಸರಬರಾಜು ಕಡಿತವಾಗುತ್ತದೆ. ಹೀಗಾಗಿ ಸುಳ್ಯಕ್ಕೆ ವಿದ್ಯುತ್‌ ಪ್ರತೀ ಮಳೆಗಾಲವೂ ಸಮಸ್ಯೆಯೇ ಆಗಿದೆ. ಆದರೆ 110 ಕೆವಿ ವಿದ್ಯುತ್‌ ಸಬ್‌ ಸ್ಟೇಶನ್‌ ಆದರೆ ಸುಳ್ಯದವರೆಗಿನ ವಿದ್ಯುತ್‌ ಸರಬರಾಜು ಯಾವುದೇ ತಡೆ ಇಲ್ಲದೆ ಬರಲು ಸಾಧ್ಯವಿದೆ ಎನ್ನುವುದು  ಮೆಸ್ಕಾಂ ಮೂಲಗಳ ಅಭಿಪ್ರಾಯ.

ಹಾಗಿದ್ದರೆ 110 ಕೆವಿ ವಿದ್ಯುತ್‌ ಸಬ್‌ ಸ್ಟೇಶನ್‌ ಕೆಲಸ ಏನಾಗಿದೆ ಎಂದು ಕೇಳಿದರೆ ಕಳೆದ 3 ವರ್ಷಗಳಿಂದ ಹೇಳಿಕೆಗಳು ಬರುತ್ತವೆ. ಆದರೆ ಪ್ರಗತಿ ಕಾಣುತ್ತಿಲ್ಲ ಎಂದು ಸಾರ್ವಜನಿಕರು ಹೇಳುತ್ತಾರೆ. ಮಾಧ್ಯಮಗಳು ಈ ಬಗ್ಗೆ ಪ್ರಶ್ನಿಸಿದರೆ “ಮಾಧ್ಯಮಗಳು ಆದದ್ದು ಬರೆಯುತ್ತಿಲ್ಲ ಎನ್ನುವ ಆರೋಪ” ಕೇಳಿಬರುತ್ತದೆ. ಹಾಗಿದ್ದರೆ ಕಳೆದ ಮೂರು ವರ್ಷದಲ್ಲಿ 110 ಕೆವಿ ವಿದ್ಯುತ್‌ ಸಬ್‌ ಸ್ಟೇಶನ್‌ ಸಂಬಂಧಿಸಿದ ಹೇಳಿಕೆಗಳು ಇಲ್ಲಿದೆ. ಮಾಧ್ಯಮಗಳು ಹೇಳುವುದು, ಬರೆಯುವುದು ಸುಳ್ಳೋ ಅಥವಾ ಈ ಹೇಳಿಕೆಗಳು ಸುಳ್ಳೋ ಎಂದು ಜನರು ಪ್ರಶ್ನಿಸುವಂತಾಗಿದೆ.

2019 ಮೇ 27….

14 ಜನವರಿ 2020….

23 ಜನವರಿ 2020….

2020 ಮೇ 17…..

2022 ಮೇ 12….

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಸರ್ಕಾರದ ಸೌಲಭ್ಯಕ್ಕೆ ‘ಫ್ರೂಟ್ಸ್ ಐಡಿ’ ಕಡ್ಡಾಯ | ರೈತರಿಗೆ ಸೂಚನೆ

ಸರ್ಕಾರದ ಸೌಲಭ್ಯ ಪಡೆಯಲು ರೈತರಿಗೆ ‘FRUITS ID’ ಕಡ್ಡಾಯ. ನೋಂದಣಿ ಮಾಡದಿದ್ದರೆ ಭವಿಷ್ಯದ…

1 hour ago

ಗದಗ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ತಾಪಮಾನ | ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿ

ಗದಗ ಜಿಲ್ಲೆಯಲ್ಲಿ ಮುಂದಿನ 3-6 ದಿನ ತೀವ್ರ ಬಿಸಿಗಾಳಿ ಸಾಧ್ಯತೆ. ಸಾರ್ವಜನಿಕರು ಆರೋಗ್ಯದ…

1 hour ago

ಅಡಿಕೆ ಎಲೆ ಚುಕ್ಕಿ ರೋಗ ನಿರ್ವಹಣೆ | ಗುತ್ತಿಗಾರಿನ ಪ್ರಾತ್ಯಕ್ಷಿಕೆ ತೋಟಕ್ಕೆ ಸಿಪಿಸಿಆರ್‌ಐ ನಿರ್ದೇಶಕರ ಭೇಟಿ | ವೈಜ್ಞಾನಿಕ ಕ್ರಮಗಳು ರೈತರಿಗೆ ಆಶಾಕಿರಣ

ಅಡಿಕೆ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್‌ಐ ಪ್ರಾತ್ಯಕ್ಷಿಕೆ ಮುಂದುವರಿದಿದೆ. ವೈಜ್ಞಾನಿಕ ಕ್ರಮಗಳು ಮತ್ತು…

14 hours ago

ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆ – ಆಲಿಕಲ್ಲು ಮಳೆಯಿಂದ ರೈತರ ಬೆಳೆ ನಷ್ಟ

ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆ ಮತ್ತು ಆಲಿಕಲ್ಲು ಮಳೆಯಿಂದ ಬೆಳೆಗಳಿಗೆ ಹಾನಿಯಾಗಿದೆ.…

1 day ago

ಹವಾಮಾನ ವರದಿ | 05-04-2026 | ರಾಜ್ಯದಲ್ಲಿ ಮಳೆ ಕಡಿಮೆಯ ಸೂಚನೆ – ಕರಾವಳಿ-ಮಲೆನಾಡಿನಲ್ಲಿ ತುಂತುರು ಮಳೆ, ರಾಜ್ಯಾದ್ಯಂತ ಬಿಸಿಲು ಏರಿಕೆ..!

ಕರ್ನಾಟಕದಲ್ಲಿ ಏಪ್ರಿಲ್ 6ರಿಂದ ಮಳೆ ಕಡಿಮೆಯಾಗಲಿದೆ. ರಾಜ್ಯಾದ್ಯಂತ ಬಿಸಿಲು ಮತ್ತು ತಾಪಮಾನ ಏರಿಕೆ…

2 days ago

ಸಾರ್ವಜನಿಕ ಸ್ಥಳಗಳಲ್ಲಿ ಶಿಸ್ತು ಮತ್ತು ನಾಗರಿಕ ಸಂಸ್ಕೃತಿ – ಸಮಾಜದ ನಿಜವಾದ ಅಳತೆ

ಸಾರ್ವಜನಿಕ ಸ್ಥಳಗಳಲ್ಲಿ ಶಿಸ್ತು ಸಮಾಜದ ನಿಜವಾದ ಸಂಸ್ಕೃತಿಯನ್ನು ತೋರಿಸುತ್ತದೆ. ಸಣ್ಣ ಸಣ್ಣ ಸರಿಯಾದ…

2 days ago