Advertisement
MIRROR FOCUS

ಬಿಜೆಪಿ ಭಿನ್ನಮತ ಸ್ಫೋಟ- ನ.7 ರವರೆಗೆ ಕಾಯುವಂತೆ ಅತೃಪ್ತ ಗುಂಪಿಗೆ ನಳಿನ್ ಸೂಚನೆ

Share
ಸುಳ್ಯ ಮಂಡಲ ಬಿಜೆಪಿಯಲ್ಲಿ ಭಿನ್ನಮತ ಮತ್ತು ಗುಂಪುಗಾರಿಕೆ ತೀವ್ರಗೊಂಡಿದ್ದು ಸಮಾವೇಶ ನಡೆಸಿ ಶಕ್ತಿಪ್ರದರ್ಶನಕ್ಕೆ ಅತೃಪ್ತರ ಗುಂಪು ನಿರ್ಧರಿಸಿದೆ. ಜಿಲ್ಲೆಯಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯುತ್ತಿದ್ದು ನ.7ರವರೆಗೆ ಯಾವುದೇ ಚಟುವಟಿಕೆ ನಡೆಸದಂತೆ ಮತ್ತು ಆ ಬಳಿಕ ಚರ್ಚೆಗೆ ಕರೆಯುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅತೃಪ್ತ ಗುಂಪಿಗೆ ಸೂಚನೆ ನೀಡಿದ್ದಾರೆ.
Advertisement
Advertisement

ಸುಳ್ಯ ಬಿಜೆಪಿಯಲ್ಲಿ ಸ್ಪಷ್ಟವಾಗಿ ಎರಡು ಬಣ ಉಂಟಾಗಿದ್ದು ಪಕ್ಷದ ಚಟುವಟಿಕೆಗಳಿಗೆ ತಮ್ಮನ್ನು ಕರೆಯದೆ ತಮ್ಮನ್ನು ಕಡೆಗಣಿಸುತ್ತಿರುವುದಾಗಿ ಎಸ್.ಎನ್.ಮನ್ಮಥ, ಎನ್.ಎ.ರಾಮಚಂದ್ರ ಮತ್ತಿತರ ನೇತೃತ್ವದಲ್ಲಿ ಬಿಜೆಪಿಯ 25ಕ್ಕೂ ಹೆಚ್ಚು ಮಂದಿ ಹಿರಿಯ ನಾಯಕರು ಸಭೆ ನಡೆಸಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದಿರೆ ಅವರಿಗೆ ದೂರು ನೀಡಿದ್ದರು. ಬಳಿಕ ಇವರನ್ನು ಕರೆಸಿ ಜಿಲ್ಲಾಧ್ಯಕ್ಷರು ಚರ್ಚೆ ನಡೆಸಿದ್ದರು. ಆದರೆ ಭೇಟಿ ಫಲಪ್ರದವಾಗದ ಹಿನ್ನಲೆಯಲ್ಲಿ ಅತೃಪ್ತರು ಸುದ್ದಿಗೋಷ್ಠಿ ನಡೆಸಿ ಅಸಮಾಧಾನವನ್ನು ಸಾರ್ವಜನಿಕವಾಗಿ ತೋರ್ಪಡಿಸಲು ಮತ್ತು ಸಮಾವೇಶ ನಡೆಸಿ ಶಕ್ತಿ ಪ್ರದರ್ಶನ ನಡೆಸಲು ನಿರ್ಧರಿಸಿದ್ದರು. ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನ.7ರ ಬಳಿಕ ಇವರ ಜೊತೆ ಚರ್ಚೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜಿನಾಮೆಗೆ ಪಟ್ಟು:

ಸುಳ್ಯ ಬಿಜೆಪಿ ಮಂಡಲ‌ ಸಮಿತಿ ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ ಕೂಡಲೇ ರಾಜಿನಾಮೆ ನೀಡಬೇಕು ಅಥವಾ ಅವರನ್ನು ಕೂಡಲೇ ಬದಲಾವಣೆ ಮಾಡಬೇಕು, ಎನ್.ಎ.ರಾಮಚಂದ್ರ, ಎಸ್.ಎನ್.ಮನ್ಮಥ ಅವರನ್ನು ಬಿಜೆಪಿ ಕೋರ್ ಕಮಿಟಿಗೆ ಸೇರಿಸಬೇಕು ಎಂಬುದು ಅತೃಪ್ತರ ಗುಂಪಿನ ಪ್ರಮುಖ ಬೇಡಿಕೆ. ಮಂಡಲ ಕೋರ್ ಕಮಿಟಿಯಲ್ಲಿ ಕೆಲವೇ‌ ಕೆಲವು ಮಂದಿ ಇದ್ದು ಅಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಎಲ್ಲರ ಮೇಲೆ ಹೇರಲಾಗುತ್ತಿದೆ.

Advertisement

ಸುಳ್ಯ ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ಏಕಪಕ್ಷೀಯ ತೀರ್ಮಾನ ಕೈಗೊಂಡು ಪ್ರಮುಖ ನೇತಾರರನ್ನು ಮತ್ತು ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆ. ಅಲ್ಲದೆ ಆರ್ ಎಸ್ ಎಸ್ ನ ಕೆಲವು ಪ್ರಮುಖರು ಪಕ್ಷದ ಚಟುವಟಿಕೆಯಲ್ಲಿ ಮಧ್ಯಪ್ರವೇಶಿಸಿ ಪಕ್ಷದ ಪ್ರಮುಖರನ್ನು ಕಡೆಗಣಿಸುತ್ತಿದ್ದಾರೆ ಎಂಬುದು ಅತೃಪ್ತರ ಗುಂಪು ಜಿಲ್ಲಾ ಪ್ರಮುಖರ ಮುಂದೆ ಇರಿಸಿದ ಪ್ರಮುಖ ಆರೋಪ ಮತ್ತು ಬೇಡಿಕೆಯಾಗಿದೆ. ಆದರೆ ಈ ಬೇಡಿಕೆಗಳಿಗೆ ಜಿಲ್ಲಾ ನೇತೃತ್ವ ಸೂಕ್ತವಾದ ಉತ್ತರ ನೀಡದ ಕಾರಣ ಚರ್ಚೆ ಮುರಿದು ಬಿದ್ದಿದೆ ಎಂದು ತಿಳಿದು ಬಂದಿದೆ. ಅಲ್ಲದೆ ಬಂಡಾಯವಾಗಿ ಸ್ಪ್ರರ್ಧಿಸಿ ಗೆದ್ದ ಸಹಕಾರಿ ಸಂಘದ ಅಧ್ಯಕ್ಷ ಸ್ಥಾನ ತ್ಯಜಿಸುವಂತೆ ಜಿಲ್ಲಾ ಪ್ರಮುಖರು ಮುಂದಿಸಿದ ಸಲಹೆಯನ್ನು ಅತೃಪ್ತರ ಗುಂಪು ನಿರಾಕರಿಸಿದೆ.

8-10 ಗ್ರಾಮಗಳಲ್ಲಿ ಬಲ ಪ್ರದರ್ಶನಕ್ಕೆ ನಿರ್ಧಾರ:

Advertisement

ತಮ್ಮ ಬೇಡಿಕೆಗಳಿಗೆ ಪಕ್ಷದ ಜಿಲ್ಲಾ ನೇತೃತ್ವ ಸ್ಪಷ್ಟವಾದ ಕ್ರಮ ಕೈಗೊಳ್ಳದೇ ಇದ್ದರೆ ಮುಂದಿನ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ 8-10 ಗ್ರಾಮಗಳಲ್ಲಿ ಬಂಡಾಯ ಸ್ಪರ್ಧೆ ನೀಡಿ ಬಲ ಪ್ರದರ್ಶನಕ್ಕೆ ಅತೃಪ್ತರ ಗುಂಪು ನಿರ್ಧಾರ ಕೈಗೊಂಡಿದೆ ಎಂದು ತಿಳಿದು ಬಂದಿದೆ. ಕಳೆದ ವರ್ಷ ಎಸ್ ಸಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಏಳು ಮಂದಿ ಅಡ್ಡ ಮತದಾನ ಮಾಡಿದ ಕಾರಣ ಸಹಕಾರ ಭಾರತಿ ಅಭ್ಯರ್ಥಿಯ ಸೋಲಿಗೆ ಕಾರಣವಾಗಿತ್ತು. ಇದರಿಂದ ಸುಳ್ಯ ಬಿಜೆಪಿಯಲ್ಲಿ ದೊಡ್ಡ ಬಿರುಗಾಳಿಯೇ ಎದ್ದಿತ್ತು. ಯಾರು ಅಡ್ಡಮತದಾನ ಮಾಡಿದ್ದಾರೆ ಎಂದು ಪತ್ತೆ ಹಚ್ಚಲು ವಿಫಲವಾದ ಪಕ್ಷ ಚುನಾವಣೆಯಲ್ಲಿ ಪ್ರತಿನಿಧಿಗಳಾಗಿದ್ದ 17 ಮಂದಿಯ ಮೇಲೆ ಕ್ರಮಕ್ಕೆ ಮುಂದಾಗಿ ಅವರ ರಾಜಿನಾಮೆಯನ್ನು ಕೇಳಿತ್ತು. ಆದರೆ ಹಲವು ಮಂದಿ ರಾಜಿನಾಮೆ ನೀಡಲಿಲ್ಲ. ಬಳಿಕ ನಡೆದ ಸಹಕಾರ ಸಂಘದ ಚುನಾವಣೆಯಲ್ಲಿ ಹಲವು ಕಡೆಗಳಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಬಂಡಾಯವಾಗಿ ಸ್ಪರ್ಧೆ ನಡೆಸಿತ್ತು. ಅರಂತೋಡು, ಐವರ್ನಾಡು ಮತ್ತಿತರ ಕಡೆಗಳಲ್ಲಿ ಬಿಜೆಪಿಯ ಅಧಿಕೃತ ಅಭ್ಯರ್ಥಿಗಳಿಗೆ ಹೀನಾಯ ಸೋಲಾಗಿತ್ತು. ತಮ್ಮ ಬೇಡೀಕೆಗಳು ಈಡೇರದೆ ಇದ್ದರೆ ಇದೇ ಮಾದರಿಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿಯೂ ಬಂಡಾಯ ಸ್ಪರ್ಧೆಗೆ ಅತೃಪ್ತರ ಗುಂಪು ಸ್ಪರ್ಧೆಗೆ ಇಳಿಯುವ ಸಾಧ್ಯತೆ ಇದೆ.

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕರಾವಳಿ ಭಾಗದಲ್ಲಿ ಭಾರಿ ಮಳೆ : ಮಂಗಳೂರಿನ ಸಮುದ್ರ ತೀರದಲ್ಲಿ ಹೈಅಲರ್ಟ್: ಉಡುಪಿಯಲ್ಲಿ ಸಮುದ್ರ ಪ್ರಕ್ಷುಬ್ದ

ಕಳೆದ ವರ್ಷ ಮುಂಗಾರು ಮಳೆ(Mansoon Rain) ಕೊಟ್ಟ ಹಿನ್ನೆಲೆ, ಈ ಬಾರಿ ರಾಜ್ಯದ್ಯಂತ…

3 mins ago

ರಬ್ಬರ್‌, ಟಯರ್‌ ಆಮದಿಗೆ ಅನುಮತಿ ನೀಡಬಾರದು | ರಬ್ಬರ್‌ ಉದ್ಯಮ, ರಬ್ಬರ್ ಬೆಳೆಗಾರರನ್ನು ಬೆಂಬಲಿಸಬಹುದಾದ ಕ್ರಮಗಳು |

ರಬ್ಬರ್‌ ಆಮದು ತಡೆಯಾದರೆ ಟಯರ್‌ ಉದ್ಯಮ ಹಾಗೂ ರಬ್ಬರ್‌ ಬೆಳೆಗಾರರ ರಕ್ಷಣೆ ಸಾಧ್ಯವಿದೆ…

2 hours ago

Karnataka Weather | 21-05-2024 | ರಾಜ್ಯದ ಹಲವು ಕಡೆ ಮುಂದುವರಿದ ಮಳೆ | ಮೇ.23 ನಂತರ ಮಳೆ ಕಡಿಮೆ |

ಮೇ 22 ರಂದು ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಮೇ 26ರಂದು ಮ್ಯಾನ್ಮಾರ್,…

3 hours ago

ಬೆವರುವುದು ಕಿರಿಕಿರಿ ಎನಿಸಿದರೂ ಬೆವರಿನಿಂದಾಗುವ ಪ್ರಯೋಜನಗಳನ್ನು ತಿಳಿದರೆ ಅಚ್ಚರಿಪಡುತ್ತೀರಿ..!

ಬೇಸಿಗೆ(summer) ಮತ್ತು ಬೆವರು(Sweating) ಒಂದು ಪರಿಪೂರ್ಣ ಸಮೀಕರಣವಾಗಿದೆ. ಬೇಸಿಗೆಯಲ್ಲಿ ಬೆವರುವುದು ಒಂದು ದೊಡ್ಡ…

18 hours ago