ಅಮೆರಿಕ ಅಧ್ಯಕ್ಷೀಯ ಚುನಾವಣೆ ಕುತೂಹಲ ಮೂಡಿಸಿದೆ. ಇತಿಹಾಸದಲ್ಲಿ ಅತಿ ಹೆಚ್ಚು ಮತ ಗಳಿಸುವ ಮೂಲಕ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೊ ಬೈಡನ್ ದಾಖಲೆ ನಿರ್ಮಿಸಿದ್ದು ಗೆಲುವಿನತ್ತ ಮುಖ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಈಗಾಗಲೇ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ದಾಖಲೆಯನ್ನು ಮುರಿದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ನ. 3ರಂದು ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆಯಲ್ಲಿ ಜೊ ಬಿಡೆನ್ 70.7 ಕೋಟಿಗೂ ಅಧಿಕ ಮತಗಳನ್ನು ಗಳಿಸಿದ್ದು, ಇದುವರೆಗೆ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳಲ್ಲಿಯೇ ಅತಿ ಹೆಚ್ಚಿನ ಮತ ಗಳಿಸಿದವರಾಗಿದ್ದಾರೆ ಎಂದು ನ್ಯಾಶನಲ್ ಪಬ್ಲಿಕ್ ರೇಡಿಯೊ(ಎನ್ ಪಿಆರ್) ವರದಿ ಮಾಡಿದೆ.
2008ರಲ್ಲಿ ಬರಾಕ್ ಒಬಾಮಾ 6 ಕೋಟಿಯ 94 ಲಕ್ಷದ 98 ಸಾವಿರದ 516 ಮತಗಳನ್ನು ಗಳಿಸಿ ದಾಖಲೆ ನಿರ್ಮಿಸಿದ್ದರು.
ಅಮೆರಿಕ ಅಧ್ಯಕ್ಷರಾಗಲು ಮ್ಯಾಜಿಕ್ ಸಂಖ್ಯೆ 270 ಸ್ಥಾನಗಳನ್ನು ಪಡೆಯಬೇಕು, ಬೈಡನ್ 264 ಎಲೆಕ್ಟೊರಲ್ ಕಾಲೇಜು ಮತಗಳಲ್ಲಿ ಮುಂದಿದ್ದಾರೆ. ಈಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 214 ಎಲೆಕ್ಟೊರಲ್ ಕಾಲೇಜ್ ಮತಗಳನ್ನು ಪಡೆದಿದ್ದಾರೆ.
ಅಕ್ವಾನ್ ಚಂಡಮಾರುತ ದುರ್ಬಲಗೊಂಡ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಚಳಿಯ ಪ್ರಮಾಣ ಕಡಿಮೆಯಾಗಿ, ನವೆಂಬರ್ 23ರಿಂದ…
ಕರ್ನಾಟಕದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರು ಒನ್, ಕರ್ನಾಟಕ ಒನ್ ಮತ್ತು ಗ್ರಾಮ ಒನ್ ಕೇಂದ್ರಗಳಿಗೆ…
ನವೆಂಬರ್ 20ರಂದು ಕರ್ನಾಟಕದಾದ್ಯಂತ ಒಣ ಹವೆ ಮುಂದುವರಿಯುವ ಸಾಧ್ಯತೆಯಿದೆ. ಅಕ್ವಾನ್ ಚಂಡಮಾರುತ ಶಿಥಿಲಗೊಂಡ…
ದೆಹಲಿಯ ಯಮುನಾ ನದಿಯಲ್ಲಿ ನಡೆಸಿದ ಅಧ್ಯಯನದಲ್ಲಿ 2,289 ಮೈಕ್ರೋಪ್ಲಾಸ್ಟಿಕ್ ಕಣಗಳು ಮತ್ತು 321…
ಮ್ಯಾನ್ಮಾರ್‌ನಿಂದ ಮಿಜೋರಾಂ ಮೂಲಕ ಭಾರತದ ವಿವಿಧ ರಾಜ್ಯಗಳಿಗೆ ಅಡಿಕೆ ಕಳ್ಳಸಾಗಣೆ ಮಾಡುತ್ತಿದ್ದ ಸುಮಾರು…
ಅಕ್ವಾನ್ ಚಂಡಮಾರುತವು ನವೆಂಬರ್ 20ರಂದು ಒಡಿಸ್ಸಾ ಕರಾವಳಿಯಲ್ಲಿ ದುರ್ಬಲವಾಗಿ ಭೂ ಪ್ರವೇಶಿಸುವ ಸಾಧ್ಯತೆಯಿದೆ.…