ಸುಳ್ಯ ತಾಲೂಕು ಬ್ರಾಹ್ಮಣ ಸಂಘದ ವತಿಯಿಂದ ತಾಲೂಕು ವಿಪ್ರ ಸಮಾವೇಶವು ಸುಳ್ಯ ತಾಲೂಕಿನ ಕಲ್ಮಡ್ಕದ ಶ್ರೀರಾಮ ಭಜನಾ ಮಂದಿರದಲ್ಲಿ ಎರಡು ದಿನಗಳ ಕಾಲ ನಡೆಯಿತು. ಎರಡು ದಿನಗಳ ಸಮಾವೇಶದಲ್ಲಿ ಬ್ರಾಹ್ಮಣರ ಆಚರಣೆ ಹಾಗೂ ವೈಚಾರಿಕ ದೃಷ್ಟಿಕೋನದ ಚಿಂತನೆಗಳು ನಡೆದವು.
ಕಳೆದ ಕೆಲವು ಸಮಯಗಳಿಂದ ಸುಳ್ಯ ತಾಲೂಕು ವಿಪ್ರ ಸಮಾವೇಶ ನಡೆಯುತ್ತಿದೆ. ಈ ಬಾರಿಯ ಸಮಾವೇಶವು ಹೆಚ್ಚು ಗಮನ ಸೆಳೆಯಿತು. ವಿವಿಧ ಗೋಷ್ಠಿಗಳ ಮೂಲಕ ಚಿಂತನೆಗಳು ನಡೆದವು. ಬ್ರಾಹ್ಮಣರ ವಲಸೆ ಬಗ್ಗೆ ಡಾ.ಎಂ ಪ್ರಭಾಕರ ಜೋಷಿ ಮಾತನಾಡಿದರೆ, ಸಾಹಿತ್ಯದಲ್ಲಿ ಸುಳ್ಯ ಬ್ರಾಹ್ಮಣರ ಕೊಡುಗೆಗಳ ಬಗ್ಗೆ ದೀಪಾ ಫಡ್ಕೆ ಅವರು ಮಾತನಾಡಿದರು. ವೈದ್ಯಕೀಯ ಸೇವೆಯ ಬಗ್ಗೆ ಡಾ.ಕಿಶನ್ ರಾವ್ ಬಾಳಿಲ ಮಾತನಾಡಿದರು.
ಬ್ರಾಹ್ಮಣರಲ್ಲಿ ಆಚರಣೆಯ ಬಗ್ಗೆ ಮಾತನಾಡಿದ ಡಾ.ವೀಣಾ ಫಾಲಚಂದ್ರ, ಯಾವುದೇ ಕೆಲಸಗಳಲ್ಲಿ ಬ್ರಾಹ್ಮಣರು ತಮ್ಮ ತನವನ್ನು ಉಳಿಸಿಕೊಳ್ಳಬೇಕು. ಒಟ್ಟು 8 ಗುಣಗಳಲ್ಲಿ ಬ್ರಾಹ್ಮಣರ ಬದುಕು ಇರುತ್ತದೆ. ಬಾಹ್ಯ ಕೆಲಸಗಳಲ್ಲಿ ಇದು ಕೆಲಸ ಮಾಡುತ್ತದೆ. ಬ್ರಾಹ್ಮಣರ ಮೂಲ ಸತ್ವವಾದ ಪರಿಗ್ರಹ ಸೇರಿದಂತೆ ಎಲ್ಲಾ ಅಗತ್ಯ ಇಲ್ಲದ ಯಾವುದನ್ನೂ ಸ್ವೀಕರಿಸಬಾರದು. ಈ ಎಲ್ಲಾ ಕಾರಣದಿಂದಲೇ ಬ್ರಾಹ್ಮಣರು ಎಲ್ಲಾ ಕ್ಷೇತ್ರದಲ್ಲೂ ತನ್ನದೇ ಆದ ಛಾಪನ್ನು ಮೂಡಿಸುತ್ತಾರೆ ಎಂದರು.
ಶಿಕ್ಷಕನಾಗಿ ಬ್ರಾಹ್ಮಣರ ಕೊಡುಗೆಯ ಬಗ್ಗೆ ಮಾತನಾಡಿದ ಪ್ರಕಾಶ್ ಮೂಡಿತ್ತಾಯ, ಸಮಾಜದಲ್ಲಿ ಶಿಕ್ಷಕರ ಪಾತ್ರ ಬಹುದೊಡ್ಡದು. ಅಂತಹ ಶಿಕ್ಷಕರಾಗಿ ಬ್ರಾಹ್ಮಣರು ಅತ್ಯಂತ ದೊಡ್ಡ ಕೊಡುಗೆಯನ್ನು ಸಮಾಜಕ್ಕೆ ನೀಡಿದ್ದಾರೆ. ಉತ್ತಮ ಶಿಕ್ಷಕರ ಪಟ್ಟಿ ಮಾಡಲು ಹೊರಟರೆ ಅಂತಹ ಪಟ್ಟಿಯೇ ದೊಡ್ಡದಾದೀತು ಎಂದರು.
ಸಮಾಜದಲ್ಲಿ ಯುವ ಬ್ರಾಹ್ಮಣರ ಕೊಡುಗೆಗಳ ಬಗ್ಗೆಯೂ ಗೋಷ್ಠಿ ನಡೆಯಿತು. ಈ ಗೋಷ್ಠಿಯ ಅಧ್ಯಕ್ಷತೆಯನ್ನು ಸುಬ್ರಾಯ ವಿ ವಹಿಸಿದ್ದರು. ಕೃಷ್ಣ ರಾವ್, ವಿ ಪಿ ಹೊಳ್ಳ, ಸುಧಾಕರ ನೆಟ್ಟಾರು ಭಾಗವಹಿಸಿದರು. ಇದೇ ಸಂದರ್ಭ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಿರೀಶ್ ಭಾರಧ್ವಾಜ್ ಉದ್ಘಾಟಿಸಿದರು. ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.
ಯುದ್ಧ ಆದರೆ ಅಥವಾ ಬಿಗುವಿನ ವಾತಾವರಣ ನಿರ್ಮಾಣವಾದರೆ ತಾತ್ಕಾಲಿಕವಾಗಿ ಎಲ್ಲಾ ಉತ್ಪನ್ನಗಳ ಮಾರುಕಟ್ಟೆಗಳು…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490
ಮಂಗಳೂರು ಟೌನ್ ಹಾಲ್ ನಲ್ಲಿ ಶನಿವಾರದಿಂದ ನಡೆಯುತ್ತಿದ್ದ ರಾಷ್ಟ್ರೀಯ ಓಪನ್ ಕ್ಲಾಸಿಕಲ್ ರೇಟೆಡ್…
ರಾಜ್ಯದ ವಿವಿಧ ಅರಣ್ಯ ಪ್ರದೇಶಗಳಲ್ಲಿ ಸಹಜವಾಗಿ ಸಾವನ್ನಪ್ಪುವ ಕಾಡುಪ್ರಾಣಿಗಳ ಕಳೇಬರವನ್ನು ಸುಡದೆ ಕಾಡಿನಲ್ಲಿಯೇ…
ಉತ್ತರಾಖಂಡದ ಪ್ರಸಿದ್ಧ ಯಾತ್ರಾ ಕ್ಷೇತ್ರ ಬದರೀನಾಥ ಧಾಮವನ್ನು ತೆರೆಯಲಾಗಿದೆ. ಮುಂಜಾನೆ 6 ಗಂಟೆಯ…
ಅರಣ್ಯ ಪ್ರದೇಶದಲ್ಲಿ ಆಗಿರುವ ಅಕ್ರಮ ಮಂಜೂರಾತಿ ರದ್ದುಪಡಿಸಿ, ಅರಣ್ಯ ಭೂಮಿ ಕಬಳಿಸಲು ಪ್ರಯತ್ನಿಸುತ್ತಿರುವವರ…