ಸುಳ್ಯ ವಿಧಾನ ಸಭಾ ಕ್ಷೇತ್ರವು ಈ ಬಾರಿ ಕುತೂಹಲದ ಕ್ಷೇತ್ರಗಳಲ್ಲಿ ಒಂದು. 30 ವರ್ಷಗಳಿಂದ ಶಾಸಕರಾಗಿ, ಕಳೆದ ಬಾರಿ ಸಚಿವರಾಗಿದ್ದ ಅಂಗಾರ ಅವರ ಬದಲಾವಣೆ ಬಳಿಕದ ಕ್ಷೇತ್ರ. ಕಳೆದ ಕೆಲವು ಸಮಯಗಳಿಂದ ಜನರಿಂದ ಮತದಾನ ಬಹಿಷ್ಕಾರ ಕೇಳಿರುವ ಕ್ಷೇತ್ರ. ಕಾಂಗ್ರೆಸ್ ಈ ಬಾರಿಯಾದರೂ ಗೆಲ್ಲಲೇಬೇಕೆಂದು ಹಠ ಹಿಡಿದಿರುವ ಕ್ಷೇತ್ರ. ಮೊದಲ ಬಾರಿಗೆ ಆಮ್ ಆದ್ಮಿ ಪಕ್ಷವು ಪೈಪೋಟಿಗೆ ಇಳಿದಿರುವ ಕ್ಷೇತ್ರ… ಹೀಗೇ ಈ ಎಲ್ಲಾ ಬೆಳವಣಿಗೆಗಳ ಕಾರಣದಿಂದ ಸುಳ್ಯ ಈ ಬಾರಿ ಕುತೂಹಲ ಮೂಡಿಸಿದೆ. ಇದುವರೆಗಿನ ಬೆಳವಣಿಗೆ ಹೇಗಿದೆ , ಹಾಗಿದ್ದರೆ?
ಸುಳ್ಯದಲ್ಲಿ ಕಳೆದ 30 ವರ್ಷಗಳಿಂದ ಬಿಜೆಪಿ ಗೆಲುವು ಸಾಧಿಸುತ್ತಿದೆ. ಕಳೆದ 5 ವರ್ಷಗಳಿಂದ ಇಲ್ಲಿ ಅಭಿವೃದ್ಧಿಯ ಬಗ್ಗೆ ಚರ್ಚೆ ಆರಂಭವಾಯಿತು. ಈಚೆಗೆ ಎರಡು ವರ್ಷಗಳಿಂದ ಅಭಿವೃದ್ಧಿಯ ಬಗ್ಗೆಯೇ ಹೋರಾಟ ನಡೆಯಿತು. ಅಭಿವೃದ್ಧಿ ಆಗದೇ ಇರಲು ಶಾಸಕರೇ ಕಾರಣ ಎಂದೂ ವಿರೋಧ ಆರಂಭವಾಯಿತು, ಈಚೆಗೆ ಸುಮಾರು 18 ಕಡೆಗಳಲ್ಲಿ ಮತದಾನ ಬಹಿಷ್ಕಾರ ಸೇರಿದಂತೆ ಪ್ರತಿಭಟನೆಗಳು ಕಂಡುಬಂದವು. ಕೊನೆಗೆ ಅಭ್ಯರ್ಥಿ ಬದಲಾವಣೆ ನಡೆಯಿತು. ಅದಾದ ಬಳಿಕ ಇನ್ನೊಂದು ಬೆಳವಣಿಗೆ ನಡೆಯಿತು. ಅಂಗಾರ ಅವರೇ ಅಸಮಾಧಾನ ಹೊರಹಾಕಿ, ಆ ಬಳಿಕ ಮತ್ತೆ ಸಕ್ರಿಯವಾಗುತ್ತೇನೆ ಎನ್ನುವ ಮೂಲಕ ಪ್ರಕರಣ ತಣ್ಣಗಾದರೂ, ಒಳಗಿನ ಲೆಕ್ಕಾಚಾರಗಳು ಬೇರೆಯೇ ನಡೆಯುತ್ತಿದೆ. ಈಗಾಗಲೇ ಸಮುದಾಯದ ಆಧಾರದಲ್ಲಿ ಚರ್ಚೆ ನಡೆಯಲು ಆರಂಭವಾಗಿದೆ. ಪಕ್ಷೇತರವಾಗಿಯೂ ಅಭ್ಯರ್ಥಿಗಳು ಕಣಕ್ಕೆ ಇಳಿಯುವ ಸೂಚನೆ ಲಭ್ಯವಾಗಿದೆ.
ಕ್ಷೇತ್ರದಲ್ಲಿ ಹಾಲಿ ಶಾಸಕರ ವಿರುದ್ಧವಾಗಿ ಬಲವಾದ ವಿರೋಧ ಕಂಡುಬಂದರೂ ಕಾಂಗ್ರೆಸ್ ಮತ ಸೆಳೆಯುವಲ್ಲಿ, ಜನರ ಪರವಾಗಿ ಧ್ವನಿ ಎತ್ತುವಲ್ಲಿ ವಿಫಲವಾಗಿತ್ತು. ಹಾಗಿದ್ದರೂ ಈ ಬಾರಿ ಕಾಂಗ್ರೆಸ್ ಪರವಾದ ಒಲವು ಹಲವು ಕಡೆ ಇತ್ತು. ಆದರೆ ಕಾಂಗ್ರೆಸ್ ಒಳಗಿನ ಭಿನ್ನಾಭಿಪ್ರಾಯವು ಈ ಅವಕಾಶ ಪಡೆಯುವಲ್ಲಿ ಹಿನ್ನಡೆ ಅನುಭವಿಸಿದೆ. ಈಗ ಒಂದಾಗಿ ಪ್ರಚಾರ ಕಾರ್ಯ ನಡೆಸುತ್ತಿದ್ದರೂ ಒಳಗಿನ ಬೇಗುದಿ ಕಂಡುಬರುತ್ತಿದೆ. ಹೀಗಾಗಿ ಈಗ ಕಾಂಗ್ರೆಸ್ ವ್ಯವಸ್ಥಿತ ರೀತಿಯಲ್ಲಿ ಒಂದಾಗಿ ಪ್ರಚಾರ ಕಾರ್ಯ ನಡೆಸಿದರೆ ಈ ಬಾರಿ ಸುಳ್ಯದಲ್ಲಿ ಬದಲಾವಣೆಯ ವಾತಾವರಣ ಇದೆ.
ಇನ್ನು ಆಮ್ ಆದ್ಮಿ ಪಕ್ಷವು ಹೊಸ ರಾಜಕೀಯ ಅಲೆಯನ್ನು ಸೃಷ್ಟಿ ಮಾಡುತ್ತಿದೆ. ತನ್ನದೇ ಆದ ಮತದಾರರನ್ನು ಹೊಂದಿದೆ. ಎರಡೂ ಪಕ್ಷಗಳಿಂದ ಬೇಸತ್ತ ಮತದಾರರು ಎಎಪಿಯ ಕಡೆಗೆ ಒಲವು ಹೊಂದಿದ್ದಾರೆ. ಈ ಮತಗಳೂ ಎಎಪಿ ಬೆಳವಣಿಗೆಗೆ ಕಾರಣವಾಗಲಿದೆ. ಮೊದಲ ಚುನಾವಣೆಯಲ್ಲಿಯೇ ಉತ್ತಮ ಸ್ಪಂದನೆಯನ್ನು ಎಎಪಿ ಹೊಂದಿದೆ.
ಜೆಡಿಎಸ್ , ಪ್ರಜಾಕೀಯ ಪಕ್ಷಗಳು ಕೂಡಾ ಸುಳ್ಯದಲ್ಲಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದೆ. ಈ ನಡುವೆ ಪಕ್ಷೇತರ ಅಭ್ಯರ್ಥಿ ಕಣಕ್ಕೆ ಇಳಿಯುವ ಸೂಚನೆ ಇದೆ. ಸೋಮವಾರದಿಂದ ಚುನಾವಣಾ ಕಣದಲ್ಲಿನ ಸ್ಪಷ್ಟ ಚಿತ್ರಣಗಳು ಗೋಚರವಾಗಲಿದೆ.
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ…
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಸಂಕ್ರಾಂತಿ ಸಂಭ್ರಮ ವಿಶೇಷ ಕಾರ್ಯಕ್ರಮ…
ನಾಗರಿಕತೆ ಬೆಳವಣಿಗೆ, ಅಭಿವೃದ್ಧಿ ಅಂದರೆ ವ್ಯಕ್ತಿತ್ವಗಳೂ ಬೆಳೆಯಬೇಕು. ಅಭಿವೃದ್ಧಿಯ ಸೂಚ್ಯಂಕವೇ ವ್ಯಕ್ತಿತ್ವದ ಬೆಳವಣಿಗೆ…
ನಾಡಿನ ಸಮಸ್ತರಿಗೂ ಮಕರ ಸಂಕ್ರಾಂತಿ ಶುಭಾಶಯ. ರೈತರಿಗೂ ಇದು ಸುಗ್ಗಿಯ ಹಬ್ಬ. ಈ…
ಕರಾವಳಿ ಜಿಲ್ಲೆಗಳಲ್ಲಿ ಸಂಜೆ ಹಾಗೂ ರಾತ್ರಿಯ ತನಕವೂ ಪಶ್ಚಿಮದ ಗಾಳಿಯ ಪ್ರಭಾವ ಇರುವುದರಿಂದ…