ಸುಳ್ಯದ ಎಲಿಮಲೆ ಇಕ್ರಾಮುಸ್ಸುನ್ನ ಸನದುದಾನ ಮಹಾಸಮ್ಮೇಳನ ಹಾಗೂ ನುಸ್ರತುಲ್ ಇಸ್ಲಾಂ ಎಸೋಸಿಯೇಷನ್ ಇದರ 42 ನೇ ವಾರ್ಷಿಕ ಸಮಾರಂಭವು ನಾಳೆ ಜನವರಿ 29 ಮತ್ತು 30 ರಂದು ಎಲಿಮಲೆ ಮಸೀದಿ ವಠಾರದಲ್ಲಿ ನಡೆಯಲಿದೆ.
ಸೈಯಿದ್ ಮುಹ್ಸಿನ್ ಸೈದಲವಿಕೋಯ ಅಲ್ ಬಖಾರಿ ಕುಂಜಿಲಂ ತಂಙಳ್ ಮುದರ್ರಿಸ್ ಎಲಿಮಲೆ ಯವರ ನೇತೃತ್ವದಲ್ಲಿ ನಡೆಸುತ್ತಿರುವ ಇಕ್ರಾಮುಸ್ಸುನ್ನ ದರ್ಸ್ ಎಲಿಮಲೆ ಇದರ ಎರಡನೇ ಸನದುದಾನ ಮಹಾಸಮ್ಮೇಳನ ಹಾಗೂ ಎಲಿಮಲೆ ಯುವಕರ ಸಂಘಟನೆಯಾದ ನುಸ್ರತುಲ್ ಇಸ್ಲಾಂ ಎಸೋಸಿಯೇಷನ್ ಇದರ 42 ನೇ ವಾರ್ಷಿಕ ಸಮಾರಂಭ ಕಾರ್ಯಕ್ರಮವು ಗುರುವಾರ ಮತ್ತು ಶುಕ್ರವಾರ ಇಕ್ರಾಮುಸ್ಸುನ್ನ ಕ್ಯಾಂಪಸ್ ಎಲಿಮಲೆಯಲ್ಲಿ ಜರುಗಲಿದೆ.
ಜನವರಿ 29 ಗುರುವಾರ ಬೆಳಿಗ್ಗೆ ಧ್ವಜಾರೋಹಣದೊಂದಿಗೆ ಪ್ರಾರಂಭವಾಗುವ ಕಾರ್ಯಕ್ರಮ ಮಹಿಳೆಯರಿಗಾಗಿ ವಿಶೇಷ ತರಬೇತಿ ಶಿಬಿರ, ಎಲಿಮಲೆ ತಂಗಳ್ ರವರ ಪಿತಾಮಹರ ಆಂಡ್ ನೇರ್ಚೆ, ಬೃಹತ್ ಬುರ್ಧಾ ಮಜ್ಲಿಸ್, ಸಾರ್ವಜನಿಕರಿಗೆ ಉಚಿತ ಆರೋಗ್ಯ ಶಿಬಿರ, ಜಿಸಿಸಿ ಎಲಿಮಲೆ ಗಲ್ಫ್ ಮೀಟ್, ಹಳೆ ವಿಧ್ಯಾರ್ಥಿಗಳ ಅಲುಮ್ನಿ ಮೀಟ್ ಧಾರ್ಮಿಕ ಉಪನ್ಯಾಸ ಮುಂತಾದ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಬಹು: ನೂರುಸ್ಸಾದಾತ್ ಬಾಯಾರ್ ತಂಙಳ್, ಝೈನುಲ್ ಆಬಿದೀನ್ ತಂಙಳ್ ದುಗಲಡ್ಕ, ಸೈದಲವಿಕೋಯ ಅಲ್ ಬಖಾರಿ ಕುಂಜಿಲಂ ತಂಙಳ್, ಮಾಣಿ ಉಸ್ತಾದ್, ಕರ್ನಾಟಕ ವಿಧಾನಸಬಾಧ್ಯಕ್ಷರಾದ ಜನಾಬ್ ಯುಟಿ ಖಾದರ್ ಫರೀದ್, ಟಿಎಂ ಶಹೀದ್, ಪ್ರಖ್ಯಾತ ಬುರ್ದಾ ಗಾಯಕರಾದ ಕಾಸಿಮ್ ಕಾಮಿಲ್ ಸಖಾಫಿ, ಸಮದ್ ಸಖಾಫಿ, ಅಝರ್ ಕಲ್ಲೂರು, ಆಸಿಫ್, ಮಿಕ್ದಾದ್ ಹಾಗೂ ಕರ್ನಾಟಕದ ಪ್ರಖ್ಯಾತ ನಅತ್ ಗಾಯಕರಾದ ನಬೀಲ್ ಬರಕಾತಿ ಬೆಂಗಳೂರು ಹಾಗೂ ಸಾಮಾಜಿಕ ರಾಜಕೀಯ ಧಾರ್ಮಿಕ ನೇತಾರರು ಭಾಗವಹಸದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಶಾಲಾ ಮಕ್ಕಳಿಗೆ ಚೆಸ್ ಆಟವನ್ನು ಪರಿಚಯಿಸುವ “ಚೆಸ್…
ಅಡಿಕೆ ಬೆಳೆಗಾರ ಇಂದು ಕೇವಲ ಬೆಳೆಗಾರನಲ್ಲ. ಅವನು ಹವಾಮಾನ ಬದಲಾವಣೆ, ರೋಗದ ಸಮಸ್ಯೆ,…
ಕೇಂದ್ರ ಕೃಷಿ ಸಚಿವಾಲಯವು ಜನವರಿ 23, 2026ರವರೆಗಿನ ರಬಿ ಬೆಳೆ(ಚಳಿಗಾಲದ ಬಿತ್ತನೆ) ಬಿತ್ತನೆಯ…
ದೇಶದಲ್ಲಿನ ಕೃಷಿ ಬೆಳೆಗಳಿಗೆ ಅಗತ್ಯವಾದ ಪೋಷಕಾಂಶ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ರಸಗೊಬ್ಬರ ವಲಯವು ದೇಶೀಯ…
ಹಿಮಾಲಯವನ್ನು ಶುದ್ಧ ಮತ್ತು ಸುರಕ್ಷಿತ ವಾತಾವರಣದ ಪ್ರತೀಕವೆಂದುಕೊಂಡಿದ್ದರೂ, ಜಾಗತಿಕ ಹವಾಮಾನ ಬದಲಾವಣೆ ಹಾಗೂ…
ರಾಜಸ್ಥಾನದಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳನ್ನು ಉತ್ತೇಜಿಸುವ ಮೂಲಕ ರೈತರ ಭವಿಷ್ಯವನ್ನು ಸಂಪೂರ್ಣವಾಗಿ ಬದಲಾಯಿಸಬಹುದು…