ಸುಳ್ಯ ವಿಧಾನಸಭಾ ಕ್ಷೇತ್ರದ ಕಡಬ ತಾಲೂಕಿನ ಐತೂರು, ಕೊಣಾಜೆ, ಕೊಂಬಾರು ಮತ್ತು ಸುಬ್ರಹ್ಮಣ್ಯ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ. ಇದರಿಂದಾಗಿ ಕೃಷಿಕರು ಸಂಕಷ್ಟಕ್ಕೆ ಒಳಗಾಗಿದ್ದು ಅಪಾರ ಕೃಷಿ ನಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಶಾಸಕಿ ಭಾಗೀರಥಿ ಮುರುಳ್ಯ ಅವರು ಅರಣ್ಯ, ಜೀವಿ ಪರಿಸ್ಥಿತಿ ಹಾಗೂ ಪರಿಸರ ಸಚಿವರಾದ ಈಶ್ವರ ಖಂಡ್ರೆ ಅವರನ್ನು ಬೆಂಗಳೂರು ವಿಕಾಸ ಸೌಧ ಕಚೇರಿಯಲ್ಲಿ ಭೇಟಿ ಮಾಡಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಿದರು.
ಕಳೆದ ಹಲವು ಸಮಯಗಳಿಂ ಕಾಡಾನೆಗಳ ಹಾವಳಿಯಿಂದ ಕೃಷಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೃಷಿ ನಷ್ಟ, ಜೀವ ಹಾನಿ, ಜೀವ ಭಯ ಸೇರಿದಂತೆ ಆತಂಕದಿಂದ ಬದುಕಬೇಕಾಗಿದೆ. ಹೀಗಾಗಿ ಆನೆಗಳನ್ನು ಆನೆ ಶಿಬಿರಗಳಿಗೆ ಸ್ಥಳಾಂತರಿಸಬೇಕಾಗಿ ಮತ್ತು ಹಾನಿಯನ್ನು ತಪ್ಪಿಸಲು ಆನೆ ಕಂದಕ ಅಥವಾ ಸೋಲಾರ್ ಬೇಲಿ ಮತ್ತು ಸೋಲಾರ್ ಬೀದಿ ದೀಪ ಸಂರಕ್ಷಣಾ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಶಾಸಕರು ಒತ್ತಾಯಿಸಿದ್ದಾರೆ.
ಸುಳ್ಯ ಮಾತ್ರವಲ್ಲ ಮಡಿಕೇರಿ ಜಿಲ್ಲೆಯ ಹಲವು ಕಡೆಗಳಲ್ಲೂ ಕಾಡಾನೆಗಳ ಹಾವಳಿ ಹೆಚ್ಚಾಗಿದೆ, ಕೃಷಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಎರಡು ದಿನಗಳ ಹಿಂದೆ ಕರಿಕೆ ಪ್ರದೇಶದಲ್ಲೂ ಕಾಡಾನೆ ಹಾವಳಿಯಿಂದ ಕೃಷಿಕರು ನಷ್ಟ ಅನುಭವಿಸಿದ್ದಾರೆ.
ಅರಬ್ಬಿ ಸಮುದ್ರದ ವಾಯುಭಾರ ಕುಸಿತವು ಮೇ 23 ಅಥವಾ 24ರಂದು ಗುಜರಾತ್ ಕರಾವಳಿ…
ವಿಶ್ವ ದೂರ ಸಂಪರ್ಕ ಮತ್ತು ಮಾಹಿತಿ ಸೊಸೈಟಿ ದಿನ ಹಿನ್ನೆಲೆಯಲ್ಲಿ ಭಾರತೀಯ ದೂರಸಂಪರ್ಕ…
ಮಂಡ್ಯದಲ್ಲಿ ಸಕ್ಕರೆ ಕಾರ್ಖಾನೆಗಳು ಕಬ್ಬು ಸರಬರಾಜು ಮಾಡುವ ರೈತರಿಗೆ 15 ದಿನದೊಳಗೆ ಹಣ…
2024-25 ನೇ ಸಾಲಿನ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಸೂರ್ಯಕಾಂತಿ ಹುಟ್ಟುವಳಿ…
ಕಳೆದ ವಾರ ಅಡಿಕೆ ಹಾಳೆತಟ್ಟೆಯನ್ನು ಅಮೇರಿಕಾ ರಫ್ತು ಮಾಡಿತ್ತು, ಅದಾಗಿ ಈಗ ಮಾವಿನಹಣ್ಣು…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ . 9535156490