ಅಮಲು ತಲೆಗೇರಿದರೆ ಏನಾಗುತ್ತದೆ..? ಪೊಲೀಸ್ ಅತಿಥಿಯಾಗಬೇಕಾಗುತ್ತದೆ…!. ಹೀಗೆ ಒಂದು ಪ್ರಶ್ನೆ… ಒಂದು ಉತ್ತರ. ಇದಕ್ಕೆ ಕಾರಣ ಇದೆ. ಸುಳ್ಯದ ಕನಕಮಜಲಿನಲ್ಲಿ ಯುವಕನೊಬ್ಬ ತಲವಾರು ಹಿಡಿದು ರಸ್ತೆಯಲ್ಲಿ ಓಡಾಡಿದ. ಅದರ ವಿಡಿಯೋ ವೈರಲ್ ಆಯಿತು. ಈಗ ಪೊಲೀಸ್ ಅತಿಥಿಯಾದ. ನಶೆ ಇಳಿದಾಗ ಮಾಡಿದ ತಪ್ಪು ಅರಿವಾಯ್ತು…!
ಸುಳ್ಯ ತಾಲೂಕಿನ ಕನಕಮಜಲು ಗ್ರಾಮದ ಸುಣ್ಣಮೂಲೆ ಎಂಬಲ್ಲಿ ತಲವಾರು ಹಿಡಿದು ಯುವಕನೊಬ್ಬ ರಸ್ತೆಯಲ್ಲಿ ಸುತ್ತಾಡಿದ. ಈ ಯುವಕನ ಹೆಸರು ಸಂದೀಪ್. ಈತ ತಲವಾರು ಹಿಡಿದು ಓಡಾಡುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಯ್ತು. ಅದು ಸಾಮಾಜಿಕ ತಾಲತಾಣಗಳಲ್ಲಿ ವೈರಲ್ ಆಯ್ತು. ಪೊಲೀಸ್ ಠಾಣೆಗೂ ಸುದ್ದಿ ತಲಪಿತು. ದ ಕ ಜಿಲ್ಲೆ ಮೊದಲೇ ಸೂಕ್ಷ್ಮ ಪ್ರದೇಶವಾಗಿದೆ. ಈಗಾಗಲೇ ಅಶಾಂತಿಯ ವಾತಾವರಣ ತಣ್ಣಗಾಗುತ್ತಿದೆ. ಈ ನಡುವೆಯೇ ತಲವಾರು ಹಿಡಿದು ಓಡಾಟದ ದೃಶ್ಯ ಕಂಡು ಬಂದ ತಕ್ಷಣವೇ ಪೊಲೀಸರು ಜಾಗೃತರಾಗದರು. ಯುವಕ ಸಂದೀಪ್ ನನ್ನು ಬಂಧಿಸಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಿದರು.
ವಿಚಾರಣೆ ವೇಳೆ, ಆತ ಉದ್ದೇಶಪೂರ್ವಕವಾಗಿ ಹೀಗೆ ತಲವಾರು ಹಿಡಿದು ಓಡಿದ್ದಲ್ಲ. ತಲೆಗೆ ಅಮಲು ಏರಿದ್ದರ ಪರಿಣಾಮ ಹೀಗಾಗಿದೆ. ಈಗ ಕೆಲವು ಸಮಯಗಳಿಂದ ಮದ್ಯಪಾನ ಬಿಟ್ಟಿದ್ದ. ನಿನ್ನೆ ಮತ್ತೆ ಮದ್ಯ ಸೇವಿಸಿದ ಪರಿಣಾಮ ತಲೆಗೆ ಒಮ್ಮೆಲೇ ನಶೆ ಏರಿದೆ. ಇದರ ಪರಿಣಾಮವಾಗಿ ಆತ ತಲವಾರು ಹಿಡಿದು ಓಡಾಡಿದ. ಸದ್ಯ ಪೊಲೀಸ್ ಅತಿಥಿಯಾಗಿದ ಯುವಕನನ್ನು ವಿಚಾರಣೆ ನಡೆಸಿದ್ದಾರೆ ಪೊಲೀಸರು.
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…