ನಶೆ ತಲೆಗೇರಿ ಪೊಲೀಸ್‌ ಅತಿಥಿಯಾದ… ! | ತಲವಾರು ಹಿಡಿದು ಓಡಾಡಿದವನ ಕತೆ…! |

August 10, 2022
2:16 PM

ಅಮಲು ತಲೆಗೇರಿದರೆ ಏನಾಗುತ್ತದೆ..? ಪೊಲೀಸ್‌ ಅತಿಥಿಯಾಗಬೇಕಾಗುತ್ತದೆ…!. ಹೀಗೆ ಒಂದು ಪ್ರಶ್ನೆ… ಒಂದು ಉತ್ತರ. ಇದಕ್ಕೆ ಕಾರಣ ಇದೆ. ಸುಳ್ಯದ ಕನಕಮಜಲಿನಲ್ಲಿ ಯುವಕನೊಬ್ಬ ತಲವಾರು ಹಿಡಿದು ರಸ್ತೆಯಲ್ಲಿ ಓಡಾಡಿದ. ಅದರ ವಿಡಿಯೋ ವೈರಲ್‌ ಆಯಿತು. ಈಗ ಪೊಲೀಸ್‌ ಅತಿಥಿಯಾದ. ನಶೆ ಇಳಿದಾಗ ಮಾಡಿದ ತಪ್ಪು ಅರಿವಾಯ್ತು…!

ಸುಳ್ಯ ತಾಲೂಕಿನ ಕನಕಮಜಲು ಗ್ರಾಮದ ಸುಣ್ಣಮೂಲೆ ಎಂಬಲ್ಲಿ ತಲವಾರು ಹಿಡಿದು ಯುವಕನೊಬ್ಬ ರಸ್ತೆಯಲ್ಲಿ ಸುತ್ತಾಡಿದ. ಈ ಯುವಕನ ಹೆಸರು ಸಂದೀಪ್.‌ ಈತ ತಲವಾರು ಹಿಡಿದು ಓಡಾಡುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಯ್ತು. ಅದು ಸಾಮಾಜಿಕ ತಾಲತಾಣಗಳಲ್ಲಿ ವೈರಲ್‌ ಆಯ್ತು. ಪೊಲೀಸ್‌ ಠಾಣೆಗೂ ಸುದ್ದಿ ತಲಪಿತು. ದ ಕ ಜಿಲ್ಲೆ ಮೊದಲೇ ಸೂಕ್ಷ್ಮ ಪ್ರದೇಶವಾಗಿದೆ. ಈಗಾಗಲೇ ಅಶಾಂತಿಯ ವಾತಾವರಣ ತಣ್ಣಗಾಗುತ್ತಿದೆ. ಈ ನಡುವೆಯೇ ತಲವಾರು ಹಿಡಿದು ಓಡಾಟದ ದೃಶ್ಯ ಕಂಡು ಬಂದ ತಕ್ಷಣವೇ ಪೊಲೀಸರು ಜಾಗೃತರಾಗದರು. ಯುವಕ ಸಂದೀಪ್‌ ನನ್ನು ಬಂಧಿಸಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಿದರು.

ವಿಚಾರಣೆ ವೇಳೆ, ಆತ ಉದ್ದೇಶಪೂರ್ವಕವಾಗಿ ಹೀಗೆ ತಲವಾರು ಹಿಡಿದು ಓಡಿದ್ದಲ್ಲ. ತಲೆಗೆ ಅಮಲು ಏರಿದ್ದರ ಪರಿಣಾಮ ಹೀಗಾಗಿದೆ. ಈಗ ಕೆಲವು ಸಮಯಗಳಿಂದ ಮದ್ಯಪಾನ ಬಿಟ್ಟಿದ್ದ. ನಿನ್ನೆ ಮತ್ತೆ ಮದ್ಯ ಸೇವಿಸಿದ ಪರಿಣಾಮ ತಲೆಗೆ ಒಮ್ಮೆಲೇ ನಶೆ ಏರಿದೆ. ಇದರ ಪರಿಣಾಮವಾಗಿ ಆತ ತಲವಾರು ಹಿಡಿದು ಓಡಾಡಿದ. ಸದ್ಯ ಪೊಲೀಸ್‌ ಅತಿಥಿಯಾಗಿದ ಯುವಕನನ್ನು ವಿಚಾರಣೆ ನಡೆಸಿದ್ದಾರೆ ಪೊಲೀಸರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಲೆನಾಡು ತಪ್ಪಲಲ್ಲಿ ಧಾರಾಕಾರ ಮಳೆ – ಹಲವು ಕಡೆ ಕೆಲವೇ ಗಂಟೆಯಲ್ಲಿ 100 ಮಿಮೀ ದಾಟಿದ ಮಳೆ
August 25, 2026
1:40 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ |25-08-2026 | ಕರಾವಳಿ, ಮಲೆನಾಡಿನಲ್ಲೂ ಬಿಡುವಿನ ಅವಧಿ ಹೆಚ್ಚಳ -ಕೆಲವೆಡೆ ಉತ್ತಮ ಮಳೆ – ರಾಜ್ಯದಲ್ಲಿ ಮಳೆ ಪರಿಸ್ಥಿತಿ ಹೇಗೆ..?
August 25, 2026
1:04 PM
by: ಸಾಯಿಶೇಖರ್ ಕರಿಕಳ
ಕರಾವಳಿಗೆ ವಾಡಿಕೆ ಮಳೆ, ಮಲೆನಾಡು ದಾಟದ ಮುಂಗಾರು ಮೋಡ..!
August 25, 2026
12:13 PM
by: ದ ರೂರಲ್ ಮಿರರ್.ಕಾಂ
ಬೆಲೆ ಏರಿಕೆಯನ್ನಷ್ಟೇ ನೋಡುವುದಲ್ಲ ; ಮುಂದಿನ ಮಾರುಕಟ್ಟೆಯನ್ನು ನಿರ್ಮಿಸುವ ಕಾಲ
August 25, 2026
10:38 AM
by: ಅರುಣ್‌ ಕುಮಾರ್ ಕಾಂಚೋಡು

You cannot copy content of this page - Copyright -The Rural Mirror