ಸುದ್ದಿಗಳು

ವಾರೆವ್ಹಾ ಸುಳ್ಯ…! | ಸಮಸ್ಯೆಗಳನ್ನು ಹೇಳಲೂಬಾರದು…ಪ್ರಶ್ನಿಸಲೂಬಾರದು..! | ಕೀಬೋರ್ಡ್‌ ವಾರಿಯರ್‌ನಿಂದ ಪೊಲೀಸ್‌ ದೂರಿನವರೆಗೆ…! |

Share

ಕೀಬೋರ್ಡ್‌ ವಾರಿಯರ್‌ನಿಂದ ಈಗ ಪೊಲೀಸ್‌ ಠಾಣೆಗೆ ದೂರು ನೀಡುವವರೆಗೆ ತಲುಪಿದೆ ಸುಳ್ಯ ನಗರ ಪಂಚಾಯತ್‌ ಅಧ್ಯಕ್ಷರ ಸುದ್ದಿ. ವಾರಗಳ ಹಿಂದೆ ಸುಳ್ಯ ರಸ್ತೆ ಸಮಸ್ಯೆ ಬಗ್ಗೆ ಸಾಮಾಜಿಕ ಕಾರ್ಯಕರ್ತ, ರೇಡಿಯೋ ಜಾಕಿ ,ಸಾಮಾಜಿಕ ಜಾಲತಾಣದಲ್ಲಿ ಜಾಗೃತಿ ಮೂಡಿಸುತ್ತಿರುವ ಆರ್‌ ಜೆ ತ್ರಿಶೂಲ್‌ ಗೌಡ ಕಂಬಳ ರಸ್ತೆ ಸಮಸ್ಯೆ ಬಗ್ಗೆ ಗಮನ ಸೆಳೆದಿದ್ದರು. ಇದೀಗ ಈ ಸುದ್ದಿ ಪೊಲೀಸ್‌ ಠಾಣೆಯವರೆಗೂ ತಲುಪಿದೆ. ಠಾಣೆಗೆ ಮುಟ್ಟಿಸಿದವರು ಸುಳ್ಯ ನಗರ ಪಂಚಾಯತ್‌ ಅಧ್ಯಕ್ಷರು…! ಕಾರಣ ಏನು ಇಲ್ಲಿದೆ ಓದಿ.  

Advertisement

ಸುಳ್ಯ ನಗರದ  ರಸ್ತೆಗುಂಡಿಗಳ ಬಗ್ಗೆ  ಆರ್‌ ಜೆ ತ್ರಿಶೂಲ್ ಗೌಡ ಕಂಬಳ ಅವರು ಸೋಶಿಯಲ್ ಮೀಡಿಯಾಗಳ ಮೂಲಕ ಗಮನಸೆಳೆದಿದ್ದರು. ಇದು ಚರ್ಚೆಯಾಗುತ್ತಿದ್ದಂತೆಯೇ ಸುಳ್ಯ ನಗರದ ಜವಾಬ್ದಾರಿ ಇರುವ ಸ್ವತ: ನಗರ ಪಂಚಾಯತ್‌ ಅಧ್ಯಕ್ಷರು ‘ಕೀಬೋರ್ಡ್ ವಾರಿಯರ್’ ಎಂದು ಟೀಕಿಸಿದ್ದರು. ಇದಕ್ಕೆ ಆರ್‌ ಜೆ ತ್ರಿಶೂಲ್‌ ಸೇರಿದಂತೆ ಹಲವರು ಸಾಮಾಜಿಕ ಜವಾಬ್ದಾರಿ ಇರುವ ವ್ಯಕ್ತಿಯೊಬ್ಬರ ಈ ರೀತಿಯ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಸಾಮಾನ್ಯ ವ್ಯಕ್ತಿಯ ಟೀಕೆಗೂ ಜವಾಬ್ದಾರಿ ಇರುವ ವ್ಯಕ್ತಿಗಳ ಟೀಕೆಗೂ ವ್ಯತ್ಯಾಸ ಇದೆ ಎಂದೂ ಹೇಳಿದ್ದರು. ಹೀಗಾಗಿ ಆರ್‌ ಜೆ ತ್ರಿಶೂಲ್‌ ಅವರು ನಗರ ಪಂಚಾಯತ್‌ ಅಧ್ಯಕ್ಷರಿಗೆ ಸವಾಲು ಹಾಕಿದ್ದರು, ಸುಳ್ಯದ ಸಮಸ್ಯೆಗಳ ಪಟ್ಟಿ ಜೊತೆ ಬರುತ್ತೇನೆ ಅಲ್ಲಿಯೇ ಉತ್ತರಿಸಿ ಎಂದೂ ಸವಾಲು ಹಾಕಿದ್ದರು. ಕೊನೆಗೆ ದೂರವಾಣಿ ಕರೆಯ ಮೂಲಕವೂ ಸವಾಲು ಹಾಕಲಾಗಿದ್ದು ವೈರಲ್‌ ಆಗಿತ್ತು. ಸಹಜವಾಗಿಯೇ ಸುಳ್ಯದ ಅನೇಕ ಮೂಲಭೂತ ಸಮಸ್ಯೆಗಳಿಂದ ಬೇಸತ್ತ ಜನರು ಆರ್‌ ಜೆ ತ್ರಿಶೂಲ್‌ ಅವರಿಗೆ ಬೆಂಬಲಿಸಿದ್ದರು ಕೂಡಾ.

ಜನಪ್ರತಿನಿಧಿಗಳನ್ನು ಎಚ್ಚರಿಸಬೇಕಾದ್ದು ಮಾಧ್ಯಮಗಳ, ಸಾಮಾಜಿಕ ಕಾರ್ಯಕರ್ತರ, ಆಯಾ ಪಕ್ಷದ ಕಾರ್ಯಕರ್ತರ, ವಿಪಕ್ಷಗಳ, ಜನರ ಕೆಲಸವೂ ಹೌದು. ನಿರೀಕ್ಷಿತ ಮಟ್ಟದಲ್ಲಿ ಕೆಲಸ ಆಗದೇ ಇದ್ದಲ್ಲಿ ಜನರೂ ಅಸಮಾಧಾನಗೊಳ್ಳುತ್ತಾರೆ. ಮತ ನೀಡಿದವರು ಪ್ರಶ್ನಿಸಲೇಬೇಕು, ಇದು ಪ್ರಜಾಪ್ರಭುತ್ವ. ಅಧಿಕಾರದಲ್ಲಿ ಇರುವವರನ್ನು, ಜವಾಬ್ದಾರಿಯಲ್ಲಿ ಇರುವವರನ್ನು ಮಾಧ್ಯಮಗಳೂ ಪ್ರಶ್ನಿಸಬೇಕು. ಆದರೆ ಸುಳ್ಯದಲ್ಲಿ ಮಾತ್ರಾ ಹಾಗಲ್ಲ. ಇಲ್ಲಿ ಪ್ರಶ್ನಿಸುವ ಮಾತು ಬಿಡಿ, ಸಮಸ್ಯೆಗಳನ್ನೂ ಹೇಳುವ ಹಾಗಿಲ್ಲದ ಸ್ಥಿತಿ ಬಂದಿರುವುದು  ಇಲ್ಲಿನ ಜನರ ದುರಂತ…!. ಇಲ್ಲಿ ಪ್ರಶ್ನಿಸಿದವರು ವಿವಿಧ ಬಿರುದುಗಳನ್ನು ಪಡೆಯಬೇಕಾಗುತ್ತದೆ. ಈ ಹಿಂದೆ ಸ್ವಚ್ಛತೆಯ ಜಾಗೃತಿ ಮಾಡುತ್ತಿರುವ ಚಿತ್ರನಟ ಅನಿರುದ್ಧ ಅವರಿಗೂ ಕಿರಿಕಿರಿಯಾಗಿತ್ತು. ರಸ್ತೆ ಸಮಸ್ಯೆ ಹೇಳಿದ ಆರ್‌ ಜೆ ತ್ರಿಶೂಲ್‌ ಅವರಿಗೂ ಅದೇ ಆಗಿದೆ. ಸುಳ್ಯದ ವಿವಿಧ ಕಡೆಯ ಮೂಲಭೂತ ಸಮಸ್ಯೆಗಳ ಬಗ್ಗೆ ಗಮನ ಸೆಳೆದವರಿಗೆಲ್ಲರಿಗೂ ಇದೇ ಮಾದರಿಯ ಅನುಭವ ಆಗಿದೆ. ಹಾಗೆಂದು ಆ ಸಮಸ್ಯೆಗಳ ಪರಿಹಾರ ಮಾಡುತ್ತೇವೆ ಎನ್ನುವ ಯಾವ ಭರವಸೆಯೂ ಬಂದಿಲ್ಲ…!. ಇದು ಪ್ರಜಾಪ್ರಭುತ್ವ..!.

ಈಗ ಇದೇ ವಿಚಾರವನ್ನು ಮುಂದಿಟ್ಟುಕೊಂಡು ನಗರ ಪಂಚಾಯತ್‌ ಅಧ್ಯಕ್ಷರು ಸುಳ್ಯ‌ ಠಾಣೆಗೆ ದೂರು ನೀಡಿದ್ದಾರೆ. ಆರ್‌ ಜೆ ತ್ರಿಶೂಲ್‌ ಅವರು ಪೇಸ್‌ ಬುಕ್‌ ನಲ್ಲಿ ಹಾಕಿರುವ ಪೋಸ್ಟ್‌ಗಳಿಗೆ ಸಾರ್ವಜನಿಕವಾಗಿ ಉತ್ತಮ ಪ್ರತಿಕ್ರಿಯೆ ಬಂದಿರುವುದೇ ಈಗ ದೂರು ನೀಡಲು ಕಾರಣವಾಗಿದೆ…!. ಸಾರ್ವಜನಿಕವಾಗಿ ಉತ್ತಮ ಪ್ರತಿಕ್ರಿಯೆಯೂ ಬಂದಿದೆ. ಸುಳ್ಯದ ಹಲವು ಸಮಸ್ಯೆಗಳನ್ನೂ ಗಮನ ಸೆಳೆದಿದ್ದಾರೆ. ಸದ್ಯ ಪೊಲೀಸ್‌ ಠಾಣೆಯಿಂದ ನೋಟೀಸು ಬಂದರೆ ಪೊಲೀಸರ ಮುಂದೆ ಹಾಜರಾಗುವುದಾಗಿ ತ್ರಿಶೂಲ್‌ ತಿಳಿಸಿದ್ದಾರೆ.

ಸುಳ್ಯದ ಸಮಸ್ಯೆಗಳನ್ನು ಇನ್ನು ಎಲ್ಲಿ? ಯಾರ ಜೊತೆ ಹೇಳುವುದು ? ಎನ್ನುವುದು ಸದ್ಯ ಟ್ರೋಲ್‌ ಆಗುತ್ತಿರುವ ವಿಷಯ. ಈಗಾಗಲೇ ಹಲವಾರು ಮಂದಿ ಪೊಲೀಸ್‌ ದೂರೂ ನೀಡಿರುವ ನಗರ ಪಂಚಾಯತ್‌ ಅಧ್ಯಕ್ಷರ ನಡೆಯನ್ನು ಖಂಡಿಸಿದ್ದಾರೆ.

ಸುಳ್ಯದ ಸಮಸ್ಯೆಗಳ ಬಗ್ಗೆ ಗಮನಸೆಳೆದ ಆರ್‌ ಜೆ ತ್ರಿಶೂಲ್‌ ಅವರು ವಾಸ್ತವನ್ನು ತಿಳಿಸಿದ್ದಾರೆ. ಅವರ ಹಾಗೂ ಮಾಧ್ಯಮಗಳ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡಿದರೆ  ಅಂಬೇಡ್ಕರ್ ರಕ್ಷಣಾ ವೇದಿಕೆಯಿಂದ ಸುಳ್ಯ ನಗರ ಪಂಚಾಯತ್ ಮುಂಭಾಗದಲ್ಲಿ  ಪ್ರತಿಭಟನೆ ಮಾಡುವುದಾಗಿ ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಪಿ.ಸುಂದರ ಪಾಟಾಜೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅನ್ನದ ಪರಿಮಳ ಮನವರಳಿಸ ಬಹುದಲ್ಲವೇ..!

ಅನ್ನದ ಪರಿಮಳ ಎಷ್ಟು ಸೊಗಸು. ಅಡುಗೆ ಮನೆಯ ಭಾಷೆಯೇ ಅಂತಹದ್ದು.

1 hour ago

ಹೆಚ್ಚಿನ ಮೌಲ್ಯದ ಹಣ್ಣಿನ ಬೆಳೆಗಳ ಕುರಿತು ಚರ್ಚೆ | ಹಲಸು , ಡ್ರಾಗನ್‌ಫ್ರುಟ್‌ ಕೃಷಿಯ ಕಡೆಗೆ ಆದ್ಯತೆ |

ಭಾರತದ ವಿವಿಧ ಕಡೆಗಳಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುವ ಸಾಮರ್ಥ್ಯ ಇರುವ ಡ್ರಾಗನ್‌ ಫ್ರುಟ್(ಕಮಲಂ) ಹಾಗೂ…

2 hours ago

ದೆಹಲಿಯಲ್ಲಿ ಹೀಟ್‌ವೇವ್‌ , ಬಿಹಾರದಲ್ಲಿ ಮಳೆ, ಕರ್ನಾಟಕದಲ್ಲಿ ಬಿಸಿ ಗಾಳಿ ಎಚ್ಚರಿಕೆ |

ಏಪ್ರಿಲ್ ಮಧ್ಯದ ವೇಳೆಗೆ ದೆಹಲಿಯಲ್ಲಿ ತಾಪಮಾನವು 40 ಡಿಗ್ರಿಗಿಂತ ಹೆಚ್ಚಾಗಬಹುದು, ಈ ಬಾರಿ…

4 hours ago

ಹೊಸರುಚಿ| ಗುಜ್ಜೆ ರೋಲ್

ಗುಜ್ಜೆ ರೋಲ್ ಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ : ಮೊದಲಿಗೆ ಗುಜ್ಜೆ ಕಟ್…

5 hours ago

ಅಮರನಾಥ ಯಾತ್ರೆಗೆ ನೋಂದಣಿ ಪ್ರಕ್ರಿಯೆ ಆರಂಭ | ಜೂನ್‌ 29 ರಿಂದ ಯಾತ್ರೆ ಆರಂಭ |

ಹಿಂದೂಗಳ ಪವಿತ್ರ ಯಾತ್ರಾಸ್ಥಳ, ವಾರ್ಷಿಕ ಪವಿತ್ರ ಅಮರನಾಥ ಯಾತ್ರೆ  ಜೂನ್‌ 29 ರಿಂದ, …

5 hours ago

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ಅನಿರ್ಧಿಷ್ಟಾವದಿ ಲಾರಿ ಮುಷ್ಕರ | ಸಂಧಾನ ಮಾತುಕತೆಯೂ ವಿಫಲ |

ಡೀಸೆಲ್ ದರ ಹೆಚ್ಚಳವನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು, ಟೋಲ್ ಶುಲ್ಕ ಕಡಿಮೆ ಮಾಡಬೇಕು,…

5 hours ago