ಸಂಖ್ಯಾ ದೃಷ್ಟಿಯಿಂದ ಕಡಿಮೆಯಿದ್ದರೂ ವಿಪ್ರರನ್ನು ಕಡೆಗಣಿಸಬಾರದು ಎಂದು ಸುಳ್ಯ ತಾಲೂಕು ವಿಪ್ರ ಸಮಾವೇಶದಲ್ಲಿ ಸರ್ಕಾರವನ್ನು ಆಗ್ರಹಿಸಲಾಗಿದೆ.
ಕಲ್ಮಡ್ಕದ ಶ್ರೀ ರಾಮ ಮಂದಿರ ಸಭಾಭವನದಲ್ಲಿ ಭಾನುವಾರ ನಡೆದ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಈ ಸಂಬಂಧ ನಿರ್ಣಯ ಕೈಗೊಳ್ಳಲಾಯಿತು.ಸಮಾರೋಪ ಸಮಾರಂಭದಲ್ಲಿ ಅಖಿಲ ಕರ್ನಾಟಕ ವಿಪ್ರ ಮಹಾಸಭಾದ ಅಧ್ಯಕ್ಷ, ರಾಜ್ಯ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಅಶೋಕ್ ಹಾರ್ನಹಳ್ಳಿ ಉಪಸ್ಥಿತರಿದ್ದರು.
ದೇಶದ ಅಭಿವೃದ್ಧಿಗೆ ವಿಪ್ರ ಸಮಾಜದ ಕೊಡುಗೆ ಅಪಾರ. ವಿಪ್ರ ಪ್ರತಿಭೆಗಳನ್ನು ಕಡೆಗಣಿಸುವುದರಿಂದ ದೇಶಕ್ಕೆ ನಷ್ಟವಾಗುತ್ತದೆ. ಆದ್ದರಿಂದ ವಿಪ್ರ ಪ್ರತಿಭೆಗಳಿಗೆ ನ್ಯಾಯ ಒದಗಿಸಬೇಕು ಎಂದೂ ಒತ್ತಾಯಿಸಲಾಯಿತು. ವಿಪ್ರರು ಮೀಸಲಾತಿ ಕೇಳಲಾರರು. ಆದರೆ ಅವರ ಪ್ರತಿಭೆಗೆ ಅನುಗುಣವಾಗಿ ಅವರ ಬಯಕೆಯಂತೆ ಅವಕಾಶಗಳು ದೊರಬೇಕು ಎಂದು ಸಮಾವೇಶವು ಅಭಿಪ್ರಾಯಪಟ್ಟಿತು.
ಸುಳ್ಯ ತಾಲೂಕು ಮಟ್ಟದಲ್ಲಿ ವಿಪ್ರ ಯುವ ವೇದಿಕೆ ಮತ್ತು ವಿಪ್ರ ಮಹಿಳಾ ವೇದಿಕೆ ಆರಂಭಿಸಲು ಇದೇ ಸಂದರ್ಭದಲ್ಲಿ ನಿರ್ಧರಿಸಲಾಯಿತು.
ಎರಡೂ ವೇದಿಕೆಯ ಸಂಚಾಲಕರನ್ನಾಗಿ ಗುರುರಾಜ ಕಲ್ಕಾಡು ಮರ್ಕಂಜ, ಸಾಯಿನಾರಾಯಣ ಕಲ್ಮಡ್ಕ, ಅಖಿಲ್ ಸೋಮಯಾಜಿ, ಡಾ| ವೀಣಾ, ಮಮತಾ ಮೂಡಿತ್ತಾಯ, ಪ್ರಸನ್ನಾ ಭಾರಧ್ವಜ ಅವರನ್ನು ನೇಮಿಸಲಾಯಿತು. ವಿಪ್ರ ಸಮಾಜದ ವಿವಿಧ ಗಣ್ಯರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳ ನೆಲೆಗಳ…
ಯುದ್ಧ ಆದರೆ ಅಥವಾ ಬಿಗುವಿನ ವಾತಾವರಣ ನಿರ್ಮಾಣವಾದರೆ ತಾತ್ಕಾಲಿಕವಾಗಿ ಎಲ್ಲಾ ಉತ್ಪನ್ನಗಳ ಮಾರುಕಟ್ಟೆಗಳು…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490
ಮಂಗಳೂರು ಟೌನ್ ಹಾಲ್ ನಲ್ಲಿ ಶನಿವಾರದಿಂದ ನಡೆಯುತ್ತಿದ್ದ ರಾಷ್ಟ್ರೀಯ ಓಪನ್ ಕ್ಲಾಸಿಕಲ್ ರೇಟೆಡ್…
ರಾಜ್ಯದ ವಿವಿಧ ಅರಣ್ಯ ಪ್ರದೇಶಗಳಲ್ಲಿ ಸಹಜವಾಗಿ ಸಾವನ್ನಪ್ಪುವ ಕಾಡುಪ್ರಾಣಿಗಳ ಕಳೇಬರವನ್ನು ಸುಡದೆ ಕಾಡಿನಲ್ಲಿಯೇ…