ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಕಳೆದ ಸುಮಾರು 50 ವರ್ಷಗಳಿಂದ ಎಸ್ ಸಿ ಮೀಸಲು ಕ್ಷೇತ್ರವಾಗಿದೆ. ಹೀಗಾಗಿ ಸುಳ್ಯದ ಶೋಷಿತ ವರ್ಗಗಳ ಶೋಚನೀಯ ಪರಿಸ್ಥಿತಿ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ವರದಿ ಮಾಡಿ ಶ್ವೇತ ಪತ್ರ ಹೊರಡಿಸಬೇಕೆಂದು ಆಮ್ ಆದ್ಮಿ ಪಾರ್ಟಿ ಒತ್ತಾಯಿಸುತ್ತದೆ ಎಂದು ಆಮ್ ಆದ್ಮಿ ಪಾರ್ಟಿಯ ರಾಷ್ಟ್ರೀಯ ಮಂಡಳಿ ಸದಸ್ಯ, ದಕ- ಉಡುಪಿ ಜಿಲ್ಲಾ ವೀಕ್ಷಕ ಅಶೋಕ್ ಎಡಮಲೆ ತಿಳಿಸಿದ್ದಾರೆ.
ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಇಂದಿಗೂ ಹಲವು ಮೂಲಭೂತ ಸಮಸ್ಯೆಗಳು ಕಂಡುಬರುತ್ತಿವೆ,ಅದರಲ್ಲೂ ಎಸ್ ಸಿ – ಎಸ್ಟಿ ಸಮುದಾಯಗಳಿಗೂ ಸಾಕಷ್ಟು ಅಭಿವೃದ್ಧಿ ಪರವಾದ ಯೋಜನೆಗಳು ತಲುಪಿದಂತೆ ಕಾಣುತ್ತಿಲ್ಲ., ರಸ್ತೆ, ಸೇತುವೆ, ಮನೆ , ವಿದ್ಯುತ್ ಸೇರಿದಂತೆ ಹಲವು ಮೂಲಭೂತ ಕೊರತೆಗಳು ಎದ್ದು ಕಾಣುತ್ತಿವೆ. ಕೆಲವೊಮ್ಮೆ ಎಸ್ಸಿ- ಎಸ್ಟಿ ಯೋಜನೆಯ ಅನುದಾನಗಳೂ ಬಳಕೆಯಾಗದೇ ಇರುವುದೂ ಕಂಡುಬಂದಿದೆ. ಅದೂ ಅಲ್ಲದೆ ಮಾದರಿಯಾಗಿರುವ ಕಾಲನಿಗಳೂ ಎದ್ದು ಕಾಣುತ್ತಿಲ್ಲ. ಹಾಗಿದ್ದರೂ ಸುಳ್ಯದ ಜನಪ್ರತಿನಿಧಿಗಳು ಮಾತನಾಡುವುದು ಕಂಡುಬರುತ್ತಿಲ್ಲ. ಇದಕ್ಕೆ ಉದಾಹರಣೆಯಾಗಿ ಈಚೆಗೆ ವಿಧಾನ ಪರಿಷತ್ ಸದಸ್ಯರಾದ ಮುನಿರಾಜು ಗೌಡ ಅವರು ಸುಳ್ಯ ಮಂಡೆಕೋಲು ಗ್ರಾಮದ ಎಸ್ ಸಿ – ಎಸ್ಟಿ ಸಮುದಾಯಗಳ ಮನೆಗಳಿಗೆ ತೆರಳುವ ರಸ್ತೆ ಅವ್ಯವಸ್ಥೆ ಬಗ್ಗೆ ಧ್ವನಿ ಎತ್ತಿದ್ದಾರೆ.
ರಾಜ್ಯವನ್ನು ಈಗ ಆಳುವ ಬಿಜೆಪಿ ಪಕ್ಷದ ಅಧ್ಯಕ್ಷರಾಗಿದ್ದ, ಮುಖ್ಯಮಂತ್ರಿ, ಕೇಂದ್ರ ಮಂತ್ರಿಯಾಗಿದ್ದ ಡಿ ವಿ ಸದಾನಂದ ಗೌಡ ಅವರ ತವರು ಗ್ರಾಮ ಹಾಗೂ 27 ವರ್ಷ ಮೀಸಲು ಸುಳ್ಯ ಕ್ಷೇತ್ರದ ಶಾಸಕ, ಇದೀಗ ಸಚಿವರ ಕ್ಷೇತ್ರದ ಬಗ್ಗೆ ಸದನದಲ್ಲಿ ಬೇಡಿಕೆ ಇಟ್ಟ ಶೋಚನೀಯ ಸ್ಥಿತಿ ಬಂದಿದೆ. ಹೀಗಾಗಿ ಇಷ್ಟೂ ವರ್ಷಗಳಲ್ಲಿ ಸುಳ್ಯ ಕ್ಷೇತ್ರ ಸುಳ್ಯದ ಶೋಷಿತ ವರ್ಗಗಳ ಶೋಚನೀಯ ಪರಿಸ್ಥಿತಿ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ವರದಿ ಮಾಡಿ ಶ್ವೇತ ಪತ್ರ ಹೊರಡಿಸಬೇಕು ಎಂದು ಆಮ್ ಆದ್ಮಿ ಪಾರ್ಟಿ ಒತ್ತಾಯಿಸುತ್ತದೆ ಎಂದು ಆಮ್ ಆದ್ಮಿ ಪಾರ್ಟಿಯ ರಾಷ್ಟ್ರೀಯ ಮಂಡಳಿ ಸದಸ್ಯ, ದಕ- ಉಡುಪಿ ಜಿಲ್ಲಾ ವೀಕ್ಷಕ ಅಶೋಕ್ ಎಡಮಲೆ ತಿಳಿಸಿದ್ದಾರೆ.
ವಿಧಾನಪರಿಷತ್ ನಲ್ಲಿ ಮುನಿರಾಜು ಅವರು ಸುಳ್ಯದ ರಸ್ತೆ ವಿಚಾರದ ಬಗ್ಗೆ ಪ್ರಶ್ನೆ……
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…