ಬೇಸಿಗೆ ರಜೆ ಆರಂಭವಾಗಿದೆ… ಮಕ್ಕಳ ನಗುವು, ಆಟ, ಹರ್ಷ ಎಲ್ಲೆಡೆ ಕಾಣಿಸುತ್ತಿದೆ. ಶಾಲೆಯ ಒತ್ತಡದಿಂದ ಮುಕ್ತರಾದ ಮಕ್ಕಳು ಹೊರಾಂಗಣದಲ್ಲಿ ಹೆಚ್ಚು ಸಮಯ ಕಳೆಯಲು ಮುಂದಾಗುತ್ತಾರೆ. ಆದರೆ… ಈ ಸಂತೋಷದ ಹಿಂದೆ ಮೌನವಾಗಿ ಅಡಗಿರುವ ಅಪಾಯಗಳನ್ನು ನಾವು ಗಮನಿಸುತ್ತಿದ್ದೇವೇ?
ಒಂದು ಕ್ಷಣ ಯೋಚಿಸಿ…
ಮನೆ ಮುಂದೆ ಆಟವಾಡುತ್ತಿದ್ದ ನಿಮ್ಮ ಮಗು ನಿಧಾನವಾಗಿ ಕೆರೆ ಕಡೆಗೆ ಸಾಗುತ್ತದೆ…
ಅಥವಾ ಸ್ನೇಹಿತರ ಜೊತೆ ಕೃಷಿ ಹೊಂಡದ ಬಳಿ ಆಟವಾಡಲು ಹೋಗುತ್ತದೆ…
ನೀವು ಮನೆಯೊಳಗೆ ಇರುವಾಗ… “ಅವರು ಅಲ್ಲಿ ಇದ್ದಾರೆ” ಎಂಬ ನಂಬಿಕೆಯಲ್ಲಿ ಇರುತ್ತೀರಿ…
ಆ ಒಂದು ಕ್ಷಣದ ನಿರ್ಲಕ್ಷ್ಯ… ಒಂದು ಕುಟುಂಬದ ಜೀವನವನ್ನೇ ಬದಲಾಯಿಸಬಹುದು.
ಇದನ್ನು ಮನಗಂಡು ತುಮಕೂರು ಜಿಲ್ಲಾ ಪೊಲೀಸ್ ಇಲಾಖೆಯು ಪೋಷಕರಿಗೆ ಎಚ್ಚರಿಕೆ ನೀಡಿದೆ. ಮಕ್ಕಳ ಚಲನವಲನಗಳ ಮೇಲೆ ನಿಗಾ ಇರಿಸಬೇಕು ಮತ್ತು ಕೆರೆ, ಕಟ್ಟೆ, ಕೃಷಿ ಹೊಂಡಗಳ ಬಳಿ ಅವರನ್ನು ಬಿಡಬಾರದು ಎಂದು ಸೂಚಿಸಿದೆ.
ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಮೂಲಗಳು ಸಾಮಾನ್ಯವಾಗಿ ಸುರಕ್ಷತಾ ವ್ಯವಸ್ಥೆಗಳಿಲ್ಲದೆ ಇರುತ್ತವೆ. ಕೆರೆಗಳು, ಕಟ್ಟೆಗಳು, ಕೃಷಿ ಹೊಂಡಗಳು ಹೊರಗೆ ನೋಡಲು ಸಾಮಾನ್ಯವಾದ ಸ್ಥಳಗಳಂತೆ ಕಂಡರೂ, ಅವುಗಳ ಆಳ ಮತ್ತು ಜಾರಿ ಸ್ವಭಾವದಿಂದ ಅಪಾಯಕಾರಿ. ಮಕ್ಕಳಿಗೆ ಈ ಅಪಾಯಗಳ ಅರಿವು ಕಡಿಮೆ ಇರುವುದರಿಂದ, ಅವರು ಆಟದ ವೇಳೆ ಇಂತಹ ಸ್ಥಳಗಳಿಗೆ ಹತ್ತಿರ ಹೋಗುವ ಸಾಧ್ಯತೆ ಹೆಚ್ಚು.
ಮಕ್ಕಳು ಅಪಾಯವನ್ನು ಅರ್ಥಮಾಡಿಕೊಳ್ಳುವುದಿಲ್ಲ. ಅವರಿಗೆ ಅದು ಆಟ… ಸಾಹಸ… ಹೊಸ ಅನುಭವ ಆದರೆ ಪೋಷಕರಿಗೆ ಅದು ಜವಾಬ್ದಾರಿ. ಒಂದು ಚಿಕ್ಕ ನಿರ್ಲಕ್ಷ್ಯ…, ಒಂದು ಸಣ್ಣ ತಪ್ಪು… ಈಗ ಬರುತ್ತಾರೆ, ಆಟವಾಡಲಿ, ಏನೂ ಆಗದು ಎಂಬ ನಂಬಿಕೆ… ಇವೆಲ್ಲವೂ ದುರ್ಘಟನೆಗೆ ಕಾರಣವಾಗಬಹುದು.
ಆದ್ದರಿಂದ ಪೋಷಕರು ಮಕ್ಕಳನ್ನು ಒಬ್ಬರೇ ಹೊರಗೆ ಬಿಡುವುದನ್ನು ತಪ್ಪಿಸಬೇಕು. ಮಕ್ಕಳಿಗೆ ನೀರಿನ ಮೂಲಗಳ ಅಪಾಯಗಳ ಬಗ್ಗೆ ತಿಳಿಸಬೇಕು. ಮನೆ ಸುತ್ತಮುತ್ತಲಿನ ಅಪಾಯಕರ ಸ್ಥಳಗಳನ್ನು ಗುರುತಿಸಿ, ಅವುಗಳಿಂದ ದೂರ ಇರಲು ಮಕ್ಕಳಿಗೆ ತಿಳಿಸುವುದು ಬಹಳ ಮುಖ್ಯ. ಯಾವಾಗಲೂ ಹಿರಿಯರ ಮೇಲ್ವಿಚಾರಣೆಯಲ್ಲೇ ಮಕ್ಕಳು ಆಟವಾಡುವಂತೆ ನೋಡಿಕೊಳ್ಳುವುದು ಅತ್ಯುತ್ತಮ ಕ್ರಮ. ಇದಕ್ಕಾಗಿ ಹೀಗೆ ಮಾಡಬಹುದು,
ಬೇಸಿಗೆ ರಜೆ ಎಂದರೆ ಕೇವಲ ಅದು ಆಟದ ಸಮಯವಲ್ಲ, ಅದು ಪೋಷಕರಿಗೆ ಒಂದು ಪರೀಕ್ಷೆಯ ಸಮಯ, ಜವಾಬ್ದಾರಿಯಿಂದ ಇರುವ ಸಮಯವೂ ಹೌದು. ಮಕ್ಕಳಿಗೆ ಕಲಿಕೆಯ ಸಮಯವೂ ಹೌದು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
With summer holidays beginning, Tumakuru District Police has warned parents to closely monitor children’s movements. Children should not be allowed near ponds, lakes, or farm pits, as these areas pose serious safety risks.
ಕರ್ನಾಟಕದಲ್ಲಿ ಏಪ್ರಿಲ್ 5ರವರೆಗೆ ಗುಡುಗು ಸಹಿತ ಮಳೆಯ ಚಟುವಟಿಕೆ ಮುಂದುವರಿಯಲಿದೆ. ಏಪ್ರಿಲ್ 10ರಿಂದ…
ಮಂಗಳೂರು ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ₹500 ಮತ್ತು ಹಳೆ ಅಡಿಕೆ ₹555…
ರಸ್ತೆ ಬದಿ ಕಸ ಎಸೆಯುವವರಿಗೆ ದಂಡ ವಿಧಿಸಲಾಗುತ್ತದೆ, ಪಾವತಿಸದಿದ್ದರೆ FIR ದಾಖಲಾಗುತ್ತದೆ. ಗ್ರಾಮ…
ಕರಾವಳಿಯಲ್ಲಿ ಮಳೆಯ ಸಾಧ್ಯತೆ ಇದ್ದರೂ ಗಾಳಿಯ ಪ್ರಭಾವದಿಂದ ಅದು ಕಡಿಮೆಯಾಗಬಹುದು. ಉಳಿದ ಕರ್ನಾಟಕದಲ್ಲಿ…
ಅಡಿಕೆ ಮಾರುಕಟ್ಟೆ ಸ್ಥಿರದಿಂದ ಏರಿಕೆಯತ್ತ ಸಾಗುತ್ತಿದೆ. ಜೂನ್-ಜುಲೈನಲ್ಲಿ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ.
ಏಪ್ರಿಲ್ 1ರಿಂದ 15ರವರೆಗೆ ಸ್ವಯಂ-ಎಣಿಕೆ ಆರಂಭವಾಗಿದೆ. ಏಪ್ರಿಲ್ 16ರಿಂದ ಮನೆಗಳಿಗೆ ಭೇಟಿ ನೀಡಿ…