ವಿಶೇಷ ವರದಿಗಳು

ಸೂಚನೆಯೇ ಇಲ್ಲದೆ ನಿನ್ನೆಯ ಮಳೆ ಸುರಿದದ್ದು ಹೇಗೆ..? | ಕರಾವಳಿ ಜಿಲ್ಲೆಯಲ್ಲಿ ಸುರಿದ ಬೇಸಿಗೆ ಮಳೆ ಎಷ್ಟು…? | ಮೊದಲ ಮಳೆ 100 ಮಿಮೀ ದಾಟಿತ್ತು…! |

Share

ಕರಾವಳಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ತಾಪಮಾನ ಏರಿಕೆಯಾಗುತ್ತಿದೆ.ಈ ನಡುವೆ ಬುಧವಾರ ಸಂಜೆ ಕರಾವಳಿ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗಿದೆ. ಮಂಗಳೂರಿನ ಸುರತ್ಕಲ್‌ ಪ್ರದೇಶದಲ್ಲಿ 100 ಮಿಮೀಗಿಂತಲೂ ಅಧಿಕ ಮಳೆಯಾಗಿದೆ. ಹಲವು ಪ್ರದೇಶದಲ್ಲಿ 25 ಮಿಮೀಯಷ್ಟು ಮಳೆಯಾಗಿದೆ. ಗಾಳಿಯ ಕಾರಣದಿಂದ ಕೆಲವು ಪ್ರದೇಶದಲ್ಲಿ ಕೃಷಿಗೆ ಹಾನಿಯಾಗಿದೆ. ಅಡಿಕೆ ಮರ ಗಾಳಿಯ ಹೊಡೆತದಿಂದ ಉರುಳಿದೆ. ಬೇಸಗೆಯ ಮೊದಲ ಮಳೆ ಭರ್ಜರಿಯಾಗಿಯೇ ಸುರಿದಿದೆ.………ಮುಂದೆ ಓದಿ……..

ಕೃಷಿಕರ ಮಳೆ ಮಾಹಿತಿ ಗುಂಪಿನ ಸದಸ್ಯರ ಮಳೆ ಮಾಪಕದ ಪ್ರಕಾರ ಮಂಗಳೂರು ಬಳಿಯ ಸುರತ್ಕಲ್‌ನಲ್ಲಿ ಅಧಿಕ ಮಳೆಯಾಗಿದೆ. ಸುರತ್ಕಲ್‌ ನಲ್ಲಿ 105 ಮಿಮೀ ಮಳೆ ದಾಖಲಾಗಿದೆ. ಉಳಿದಂತೆ ಸುಳ್ಯದ ಕಲ್ಲಾಜೆ 41 ಮಿಮೀ, ಸುಬ್ರಹ್ಮಣ್ಯದಲ್ಲಿ 60 ಮಿಮೀ, ಪುತ್ತೂರಿನ ಬಂಗಾರಡ್ಕದಲ್ಲಿ 20 ಮಿಮೀ,  ಕಡಬದ ಕೋಡಿಂಬಾಳದಲ್ಲಿ 23 ಮಿಮೀ, ಬಂಟ್ವಾಳದಲ್ಲಿ 31 ಮಿಮೀ,  ಕುಂಬಳೆಯಲ್ಲಿ 5 ಮಿಮೀ, ಗುತ್ತಿಗಾರಿನ ಮೆಟ್ಟಿನಡ್ಕದಲ್ಲಿ 28 ಮಿಮೀ, ಬಜಗೋಳಿಯಲ್ಲಿ 13 ಮಿಮೀ, ಸುಳ್ಯದ ಬಾಳುಗೋಡಿನಲ್ಲಿ 30 ಮಿಮೀ, ಸುಳ್ಯ ನಗರದಲ್ಲಿ 5 ಮಿಮೀ, ಬಳ್ಪದಲ್ಲಿ 10 ಮಿಮೀ, ಬೆಳ್ತಂಗಡಿಯಲ್ಲಿ 50 ಮಿಮೀ, ಚೆಂಬು 18 ಮಿಮೀ ಮಳೆಯಾಗಿದೆ.

ಮಳೆಯ ಕಾರಣದಿಂದ ಬೆಳ್ತಂಗಡಿ ಹಾಗೂ ಕೆಲವು ಕಡೆ ಅಡಿಕೆ ಮರಗಳು ಗಾಳಿಯ ಹೊಡೆತದಿಂದ ಉರುಳಿದೆ. ಕೃಷಿಕರಿಗೆ ನಷ್ಟ ಸಂಭವಿಸಿದೆ. ಕೃಷಿಕ ಬಾಲ್ಯ ಶಂಕರ್‌ ಭಟ್‌ ಅವರು ಅಡಿಕೆ ಮರ ಉರುಳಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ಮುನ್ಸೂಚನೆ ಪ್ರಕಾರ ತುಂತುರು ಮಳೆಯ ಸಾಧ್ಯತೆ ಇತ್ತು.ಆದರೆ ಧಾರಾಕಾರ ಮಳೆಯ ಸಾಧ್ಯತೆ ಇರಲಿಲ್ಲ. ಆದರೆ ಎಲ್ಲಾ ಹವಾಮಾನ ವಿಶ್ಲೇಷಣೆಗಳನ್ನೂ ಮೀರಿ ಮಳೆಯಾಗಿದೆ. ಈ ಬಗ್ಗೆ ಹವಾಮಾನ ವಿಶ್ಲೇಷಕ ಸಾಯಿಶೇಖರ್‌ ಕರಿಕಳ ಅವರ ಪ್ರಕಾರ ಪ್ರಕೃತಿಯ ಲೆಕ್ಕಾಚಾರವೇ ಬೇರೆ ಇರುತ್ತದೆ ಎನ್ನುತ್ತಾರೆ.

ಸಾಯಿಶೇಖರ್ , ಕರಿಕಳ
ಪ್ರಕೃತಿಯನ್ನು ಅಳೆಯಲು ಯಾರಿಂದಲೂ ಸಾಧ್ಯವಿಲ್ಲ. ನಿನ್ನೆಯ ಅಷ್ಟೊಂದು ಪ್ರಮಾಣದ ಮಳೆಯು ಯಾವ ಮುನ್ಸೂಚನೆಯಲ್ಲೂ ಇರಲಿಲ್ಲ. ನಿರೀಕ್ಷೆಯೂ ಇರಲಿಲ್ಲ. ಬೆಳಿಗ್ಗೆ ಚಳಿ, ಮಧ್ಯಾಹ್ನ 3 ಗಂಟೆಯ ತನಕವೂ ತೇವಾಂಶ ಸಾಮಾನ್ಯಕ್ಕಿಂತ ಕಡಿಮೆಯೇ ಇತ್ತು. ಆದರೆ 4 ಗಂಟೆಯ ಸುಮಾರಿಗೆ ಬೀಸಿದ ಒಂದು ಗಾಳಿಯ ಪ್ರಭಾವದಿಂದ ತೇವಾಂಶ ಇದ್ದಕ್ಕಿದ್ದ ಹಾಗೆ ಏರತೊಡಗಿತು.

“ಮೋಡಗಳು ಸಮುದ್ರದಲ್ಲಿ ಉತ್ಪತ್ತಿಯಾಗಿ ಗಾಳಿಯ ಮೂಲಕ ಭೂ ಭಾಗಕ್ಕೆ ಬಂದು ಮಳೆಯಾಗುತ್ತೆ” ಅಂತ ನಾವು ಶಾಲಾ ಸಮಯದಲ್ಲಿ ಕಲಿತದ್ದು. ಆದರೆ ವಿಚಿತ್ರ ನಿನ್ನೆಯ ಮಳೆಯ ಕೇಂದ್ರ ಶಿರಾಡಿ ಹಾಗೂ ಮಡಿಕೇರಿ ಘಾಟಿಯ ಆಚೆ ಈಚೆ ಮಗ್ಗುಲ ಪ್ರದೇಶ.  ಅಲ್ಲಿಂದ ಮೋಡಗಳ ಮೆರವಣಿಗೆ ಒಂದು ಭಾಗ ಅರಬ್ಬಿ ಸಮುದ್ರದ ತೀರದ ವರೆಗೆ ತಲುಪಿದರೆ ಇನ್ನೊಂದು ಭಾಗ ಹಾಸನ, ತಿಪಟೂರು, ತುಮಕೂರು ದಾಟಿ ಪಾವಗಢದ ತನಕವೂ ಸಾಗಿದ ರೀತಿ ಅದ್ಭುತ.

ರಾತ್ರಿ ಪಾವಗಡದಿಂದ ” ಸರ್ ಮಿಂಚುತ್ತಿದೆ. ಮಳೆ ಬರ್ಬಹುದಾ” ಅಂತ ಕೇಳುವಾಗಲೇ ಗೊತ್ತಾಗಿದ್ದು. ಮೋಡದ ಬಾಲ ಅಲ್ಲಿಯ ತನಕವೂ ಬೆಳೆದಿದೆ ಅಂತ.

ಒಮ್ಮೆ ಮಳೆ ಬಂದು ಮತ್ತೆ ಮತ್ತೆ ತೇವಾಂಶಗಳು ಸೇರಿ ಸೇರಿ ಮಳೆಯ ಸರಣಿಯೇ ಉಂಟಾಗಿದೆ. ಹಾಗಂತ ಪ್ರತಿ ಬಾರಿ ಹೀಗಾಗುತ್ತಿದೆಯೇ? ಇಲ್ಲ. ಮಳೆ ಮೋಡಗಳ ಉತ್ಪತ್ತಿ ಹಾಗೂ ಅದು ಮಳೆಯಾಗಿ ಪರಿವರ್ತನೆಗೊಳ್ಳವ ರೀತಿಯ ವಿಷಯದ ಅಧ್ಯಯನದಲ್ಲಿ ಇನ್ನೂ ನಾವು ಹಿಂದೆ ಉಳಿದಿದ್ದೇವೆ ಅಂತ ನನ್ನ ಅಭಿಪ್ರಾಯ. ಅದನ್ನು ಸಂಬಂಧ ಪಟ್ಟ ಇಲಾಖೆಗಳಾಗಲಿ ಅಥವಾ ವಿಜ್ಞಾನ ವಿಭಾಗಗಳಾಗಲಿ ವೈಜ್ಞಾನಿಕವಾಗಿ ಅಧ್ಯಯನ ಮಾಡಿದರೆ ಮಾತ್ರ ನಿಖರವಾದ ಮಳೆಯ ಮುನ್ಸೂಚನೆ ನೀಡಲು ಸಾಧ್ಯ ವಾಗಬಹುದು.

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 13-03-2025 | ಕೆಲವು ಕಡೆ ತುಂತುರು- ಸಾಮಾನ್ಯ ಮಳೆ ಸಾಧ್ಯತೆ |

ಲಾ ನಿನಾ ಪ್ರಭಾವ ಇರುವುದರಿಂದ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಅದರಲ್ಲೂ ದಕ್ಷಿಣ ಒಳನಾಡು,…

48 minutes ago

ಇಂದೂ ಕರಾವಳಿ ಜಿಲ್ಲೆಯಲ್ಲಿ ಮಳೆಯಾಗುವ ಸಾಧ್ಯತೆ ಇದೆ | ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದ ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ…

4 hours ago

ಏಪ್ರಿಲ್‌ನಲ್ಲಿ ಶನಿ ನಕ್ಷತ್ರ ಪ್ರವೇಶದಿಂದ 5 ರಾಶಿಗಳ ಲೈಫ್ ಚೇಂಜ್ ಆಗುವ ಸಾಧ್ಯತೆ‌ |

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

8 hours ago

ಕೊಡಗು ಜಿಲ್ಲೆಯ ಕೆಲವೆಡೆ ಲಘು ಭೂಕಂಪನ | ಆತಂಕಪಡುವ ಅಗತ್ಯವಿಲ್ಲ | ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ ಸ್ಪಷ್ಟನೆ

ಕೊಡಗು ಜಿಲ್ಲೆಯ ಕೆಲವೆಡೆ ಲಘು ಭೂಕಂಪನವಾಗಿದ್ದು ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 1.6…

17 hours ago

ದಕ್ಷಿಣ ಕನ್ನಡ ಜಿಲ್ಲೆಯ ವಿವಿದೆಡೆ ಗುಡುಗು ಸಹಿತ ಗಾಳಿ-ಮಳೆ | ಎರಡನೇ ಬಾರಿ ಸುರಿದ ಧಾರಾಕಾರ ಮಳೆ |

ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ತಾಲೂಕುಗಳ ಹಲವು ಕಡೆ ಸಂಜೆ ಉತ್ತಮ ಮಳೆಯಾಗಿದೆ.…

17 hours ago

ಸರ್ಕಾರಿ ವೈದ್ಯರು ಆಸ್ಪತ್ರೆಗಳಲ್ಲಿ ಬೆಳಗ್ಗೆ 9 ಗಂಟೆಯಿಂದ 4 ಗಂಟೆಯವರೆಗೆ ಇರಬೇಕು- ಸಚಿವ ಶರಣಪ್ರಕಾಶ್ ಪಾಟೀಲ್

ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ನು ಮುಂದೆ ಕರ್ತವ್ಯ ನಿರ್ವಹಿಸುವ ವೈದ್ಯರು ಬೆಳಗ್ಗೆ 9 ಗಂಟೆಯಿಂದ…

1 day ago