ನಗುವಿನೊಂದಿಗೆ ಭೂಮಿಗೆ ಇಳಿದ ಗಗನಯಾತ್ರಿ ಸುನಿತಾ ವಿಲಿಯಮ್ಸ್

March 19, 2025
6:22 AM
ಭಾರತೀಯ ಮೂಲದ ಅಮರಿಕನ್ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಬಾಹ್ಯಾಕಾಶದಿಂದ ಭೂಮಿಗೆ ಸುರಕ್ಷಿತವಾಗಿ ಮರಳಿದ್ದಾರೆ.

ಭಾರತೀಯ ಮೂಲದ ಅಮರಿಕನ್ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಬಾಹ್ಯಾಕಾಶದಿಂದ ಭೂಮಿಗೆ ಸುರಕ್ಷಿತವಾಗಿ ಮರಳಿದ್ದಾರೆ. ಅಂತಾರಾಷ್ಟ್ರಿಯ ಬಾಹ್ಯಾಕಾಶ ವಿಮಾನ ನಿಲ್ದಾಣದಿಂದ ಹೊರಟಿದ್ದ ಎಲ್ಲಾ ಗಗನಯಾತ್ರಿಗಳು ಸುರಕ್ಷಿತವಾಗಿ ಫ್ಲೋರಿಡಾ ಕಡಲಿಗೆ ಬಂದಿಳಿದಿದ್ದಾರೆ. ನೌಕೆಯು ಇಳಿಯುತ್ತಿದ್ದಂತೆಯೇ ನಾಲ್ವರು ಗಗನಯಾತ್ರಿಗಳನ್ನು ರಕ್ಷಣಾ ತಂಡವು ಸ್ವಾಗತ ನೀಡಿತು.  ಬಾಹ್ಯಾಕಾಶದಲ್ಲಿ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್​ 9 ತಿಂಗಳ ಕಾಲ ಕಳೆದರು. ಈ ವೇಳೆ 60 ಗಂಟೆಗಳ ಬಾಹ್ಯಾಕಾಶ ನಡಿಗೆಯನ್ನೂ ಮಾಡಿ ಅಧ್ಯಯನದಲ್ಲಿ ತೊಡಗಿಸಿದ್ದರು.

Advertisement
Advertisement

ಕಳೆದ 9 ತಿಂಗಳುಗಳಿಂದ ಬಾಹ್ಯಾಕಾಶದಲ್ಲಿ ಬಾಕಿಯಾಗಿದ್ದ ನಾಸಾ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಭೂಮಿಗೆ ಕರೆತರಲು ಎಲ್ಲಾ ಸಿದ್ಧತೆಯನ್ನು ನಾಸಾ ಮಾಡಿಕೊಂಡಿತ್ತು. ವಾರದ ನಂತರ ಹವಾಮಾನ ಹದಗೆಡುವ ಸೂಚನೆ ಇದ್ದುದರಿಂದ ನಾಸಾ ಬೇಗನೆ ಕಾರ್ಯಾಚರಣೆಗೆ ಇಳಿಯಿತು. ನಾಸಾದ ನಿಕ್ ಹೇಗ್ ಮತ್ತು ರಷ್ಯಾದ ಅಲೆಕ್ಸಾಂಡರ್ ಗೋರ್ಬುನೋವ್ ಜೊತೆಗೆ ಸ್ಪೇಸ್‌ಎಕ್ಸ್‌ನ ಕ್ರೂ ಡ್ರ್ಯಾಗನ್ ಫ್ರೀಡಂನಲ್ಲಿ ಇಬ್ಬರೂ ಗಗನಯಾತ್ರಿಗಳನ್ನು ಕರೆತರುವ ಪ್ರಯಾಣ ಬೆಳೆಸಿದ್ದರು.  ಇಬ್ಬರೂ ಸ್ಪೇಸ್‌ಎಕ್ಸ್ ಕ್ಯಾಪ್ಸುಲ್‌ನಲ್ಲಿ ಐಎಸ್‌ಎಸ್‌ಗೆ ತೆರಳಿದ್ದರು. ಇದೀಗ ಎಲ್ಲಾ ಗಗನಯಾತ್ರಿಗಳೊಂದಿಗೆ ವಾಪಾಸಾಗುವ ಮೂಲಕ ಕಾರ್ಯಾಚರಣೆ ಯಶಸ್ವಿಯಾಗಿದೆ.

ಗಗನಯಾತ್ರಿಗಳನ್ನು ಕರೆತುವ ವೇಳೆ ಯಾವಾಗಲೂ  ಗಲ್ಫ್​ ಆಫ್​ ಮೆಕ್ಸಿಕೋ ಸಮುದ್ರ- ಅಂಟ್ಲಾಟಿಕ್ ಸಮುದ್ರದ ನಡುವೆ ಡ್ರ್ಯಾಗನ್ ಕ್ಯಾಪ್ಸುಲ್ ಟಚ್​ಡೌನ್ ಮಾಡುವ ಸವಾಲು ಇತ್ತು. ನಾಸಾ ತಂಡವು ಇದನ್ನು ಯಶಸ್ವಿಯಾಗಿ ನಿಭಾಯಿಸಿತು, ಇಷ್ಟೇ ಇಲ್ಲದೆ ನಿಗದಿತ ಸ್ಥಳದಲ್ಲಿಯೇ ಕ್ಯಾಪ್ಸುಲ್ ಟಚ್​ಡೌನ್ ಆಗಿತ್ತು. ಟಚ್​ಡೌನ್ ಆದ ಸ್ಥಳದಲ್ಲಿ ಕೂಡಾ ಸೂಕ್ತವಾದ ಹವಾಮಾನ ಪರಿಸ್ಥಿತಿ ಇರಬೇಕು.  ಇದೆಲ್ಲವೂ ಕಾರ್ಯಾಚರಣೆಯ ಯಶಸ್ಸಿಗೆ ಕಾರಣವಾಗಿದೆ.ಕ್ಯಾಪ್ಸುಲ್ ಟಚ್​ಡೌನ್ ವೇಳೆ  ಗಂಟೆಗೆ 17 ಕಿಮೀಗಿಂತ ಹೆಚ್ಚಿನ ಗಾಳಿ ಇರಬಾರದು, ಸಮುದ್ರದಲ್ಲಿ 7 ಡಿಗ್ರಿಗಿಂತ ಹೆಚ್ಚಿನ ಪ್ರಮಾಣದ ಅಲೆಗಳು ಕೂಡ ಇರಬಾರದು, ಗಾಳಿ,ಮಳೆ ಕೂಡಾ ಇರಬಾರದು. ಇದೆಲ್ಲವೂ ಅನುಕೂಲವಾದ ವಾತಾವರಣ ಸೃಷ್ಟಿಯಾಗಿತ್ತು.ಸಮುದ್ರಕ್ಕೆ ಕ್ಯಾಪ್ಸೂಲ್ ಬದ್ದ ತಕ್ಷಣ ಮುಂದಿನ ಕಾರ್ಯಾಚರಣೆ ಶುರುವಾಯಿತು.

ಗಗನಯಾತ್ರಿಗಳನ್ನು ಈಗ ಎಚ್ಚರಿಕೆಯಿಂದ ಚೇತರಿಕೆ ಪ್ರಕ್ರಿಯೆಗೆ ಒಳಪಡಿಸುತ್ತಾರೆ. ಆರೋಗ್ಯ ಸುಧಾರಣೆ ಬಳಿಕವೇ ಸುನಿತಾ ವಿಲಿಯಮ್ಸ್ ಮತ್ತು ವಿಲ್ಮೋರ್ ಅವರು ಕಾರ್ಯಾಚರಣೆಯ ನಂತರದ ಚರ್ಚೆಗಳಲ್ಲಿ ಭಾಗವಹಿಸಲಿದ್ದಾರೆ, ಅಲ್ಲಿ ಅವರು ISS ನಲ್ಲಿ ತಮ್ಮ ವಿಸ್ತೃತ ವಾಸ್ತವ್ಯದ ಒಳನೋಟಗಳನ್ನು ಹಂಚಿಕೊಳ್ಳುತ್ತಾರೆ, ಅವರು ಎದುರಿಸಿದ ಸವಾಲುಗಳನ್ನು ಚರ್ಚಿಸುತ್ತಾರೆ ಮತ್ತು ಬೋಯಿಂಗ್ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಕಾರ್ಯಕ್ಷಮತೆಯ ಕುರಿತು ಪ್ರತಿಕ್ರಿಯೆ ನೀಡುತ್ತಾರೆ.

ಬಾಹ್ಯಾಕಾಶದಲ್ಲಿ ದೀರ್ಘಕಾಲದಲ್ಲಿ ಇರುವುದರಿಂದ ಮಾನವ ದೇಹದ ಮೇಲೆ ಹಲವಾರು ರೀತಿಯಲ್ಲಿ ಪರಿಣಾಮ ಬೀರುತ್ತದೆ. ಭೂಮಿಯ ಗುರುತ್ವಾಕರ್ಷಣೆಗೆ ಹಿಂತಿರುಗಿದ ನಂತರ, ಗಗನಯಾತ್ರಿಗಳು ಆಗಾಗ್ಗೆ ತಲೆತಿರುಗುವಿಕೆ, ವಾಕರಿಕೆ ಮತ್ತು ದೇಹದ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ತೊಂದರೆ ಅನುಭವಿಸುತ್ತಾರೆ. ಅನೇಕರು ತಾತ್ಕಾಲಿಕ ದೃಷ್ಟಿ ಸಮಸ್ಯೆಗಳು, ನಡೆಯಲು ತೊಂದರೆ ಅನುಭವಿಸುತ್ತಾರೆ.  ಪಾದಗಳು ಅತ್ಯಂತ ಮೆದುವಾಗಿರುತ್ತದೆ, ಅಲ್ಲಿ ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಒತ್ತಡದ ಕೊರತೆಯಿಂದಾಗಿ ಅಡಿಭಾಗದ ಮೇಲೆ ದಪ್ಪಗಾದ ಚರ್ಮವು ಮೃದುವಾಗುತ್ತದೆ. ಇದೆಲ್ಲಾ ಇನ್ನೂ ಕೆಲವು ದಿನಗಳ ಬಳಿಕ ಸುಧಾರಿಸದ ನಂತರ ಅವರು ಮಾಹಿತಿ ನೀಡುವರು.

Advertisement
Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅಡಿಕೆ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕಾಗಿ ಸರಕಾರಗಳಿಂದ ರಚಿಸಲಾದ ಸಮಿತಿಗಳು ಏನು ಹೇಳಿವೆ..?
May 17, 2025
7:27 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಮೇ ಕೊನೆಯ ವಾರದಂದು ಈ ಐದು ರಾಶಿಯವರಿಗೆ ಶುಕ್ರ ದೆಸೆ
May 17, 2025
7:01 AM
by: ದ ರೂರಲ್ ಮಿರರ್.ಕಾಂ
ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಬಾಗಲಕೋಟೆ ಜಿಲ್ಲೆಯ  ಶೂರ್ಪಾಲಿಯ ಶ್ರೀಲಕ್ಷ್ಮೀ ನರಸಿಂಹ ದೇವಾಲಯ
May 16, 2025
9:59 PM
by: The Rural Mirror ಸುದ್ದಿಜಾಲ
ಕಾಯಕ ಗ್ರಾಮ  ಯೋಜನೆ | ಹಿಂದುಳಿದ ಗ್ರಾಮಗಳನ್ನು ದತ್ತು ಸ್ವೀಕರಿಸುವಂತೆ ಸಲಹೆ
May 16, 2025
9:51 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group