ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಕಳೆದ ಒಂಬತ್ತು ತಿಂಗಳಿಗೂ ಹೆಚ್ಚು ಕಾಲ ಸಿಲುಕಿಕೊಂಡಿದ್ದ ಭಾರತೀಯ ಮೂಲದ ಅಮೆರಿಕ ಗಗನಯಾನಿ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್‌ಮೋರ್ ಅವರನ್ನು ಮಂಗಳವಾರ ಸಂಜೆ ಭೂಮಿಗೆ ಹಿಂತಿರುಗಿಸಲಾಗುವುದು, ಭಾನುವಾರ ತಲಪುವ ನಿರೀಕ್ಷೆ ಇದೆ ಎಂದು ನಾಸಾ ತಿಳಿಸಿದೆ. ಬುಚ್ ವಿಲ್ಮೋರ್ ಮತ್ತು ಸುನಿತಾ ವಿಲಿಯಮ್ಸ್ ಅವರನ್ನು ಮತ್ತೊಬ್ಬ ಅಮೇರಿಕನ್ ಗಗನಯಾತ್ರಿ ಮತ್ತು ರಷ್ಯಾದ ಗಗನಯಾತ್ರಿಯೊಂದಿಗೆ ಸ್ಪೇಸ್‌ಎಕ್ಸ್ ಕ್ರೂ ಡ್ರ್ಯಾಗನ್ ಕ್ರಾಫ್ಟ್‌ನಲ್ಲಿ ಸಾಗಿಸಲಾಗುವುದು, ಅದು ಭಾನುವಾರ ಮುಂಜಾನೆ ಭೂಮಿಗೆ ತಲುಪಲಿದೆ ಎಂದು ನಾಸಾ ಹೇಳಿದೆ.………ಮುಂದೆ ಓದಿ……..
ಗಗನಯಾನಿ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್‌ಮೋರ್ ಅವರನ್ನು ಭೂಮಿಗೆ ಕರೆ ತರಲು ನಾಸಾ ವಿಜ್ಞಾನಿಗಳ ತಂಡ ಉಡಾವಣೆ ಮಾಡಿದ ಸ್ಪೇಸ್‌ಎಕ್ಸ್ ಡ್ರ್ಯಾಗನ್ ಸ್ಪೇಸ್‌ಕ್ರಾಫ್ಟ್ ‘ದಿ ಕ್ರ್ಯೂ-10’ ಭಾನುವಾರ ಯಶಸ್ವಿಯಾಗಿ ಬಾಹ್ಯಾಕಾಶ ನಿಲ್ದಾಣ ತಲುಪಿತ್ತು. ಅಲ್ಲಿನ ಸ್ಥಿತಿಗತಿ ಗಮನಿಸಿ ಇದೀಗ ಅಧಿಕೃತವಾದ ಹೇಳಿಕೆಯನ್ನು ನಾಸಾ ಹೇಳಿದೆ.
ಕಳೆದ ವರ್ಷದ ಜೂನ್ 5 ರಂದು ಬೋಯಿಂಗ್‌ನ ಸ್ಟಾರ್‌ಲೈನ್ ಗಗನನೌಕೆ ಮೂಲಕ ಸುನಿತಾ, ಬುಚ್ ಮತ್ತಿತರ ಗಗನಯಾತ್ರಿಗಳು ಗಗನಯಾನ ಕೈಗೊಂಡಿದ್ದರು. ಎಂಟು ದಿನಗಳ ಬಳಿಕ ಭೂಮಿಗೆ ಮರಳ ಬೇಕಿದ್ದ ಗಗನಯಾನಿಗಳು ನೌಕೆಯಲ್ಲಿ ಉಂಟಾದ ತಾಂತ್ರಿಕ ದೋಷದಿಂದ ಬಾಹ್ಯಾಕಾಶ ನಿಲ್ದಾಣದಲ್ಲೇ ಉಳಿದುಕೊಂಡಿದ್ದರು. ಇದೀಗ ಕರೆತರುವ ಪ್ರಯತ್ನದ ಬಳಿಕ ಗಗನಯಾತ್ರಿಗಳ ಭೂಮಿ ಪ್ರವೇಶವು ಫ್ಲೋರಿಡಾ ಕರಾವಳಿಯಲ್ಲಿ ನಡೆಯಲಿದೆ ಎಂದು ನಾಸಾ ಭಾನುವಾರ ಸಂಜೆ ಹೇಳಿಕೆಯಲ್ಲಿ ತಿಳಿಸಿದೆ. ಹವಾಮಾನ ಪರಿಸ್ಥಿತಿ ಸಹಿತ ಇತರ ಎಲ್ಲಾ ಅಂಶಗಳನ್ನು ಗಮನಿಸಿಕೊಂಡು ನೌಕೆ ಇಳಿಯಲಿದೆ.
ನಾಸಾ ಗಗನಯಾತ್ರಿ ನಿಕ್ ಹೇಗ್ ಮತ್ತು ರೋಸ್ಕೋಸ್ಮೋಸ್ ಗಗನಯಾತ್ರಿ ಅಲೆಕ್ಸಾಂಡರ್ ಗೋರ್ಬುನೋವ್ ಕೂಡ ಡ್ರ್ಯಾಗನ್ ಕ್ಯಾಪ್ಸುಲ್‌ನಲ್ಲಿ ಹಿಂತಿರುಗಲಿದ್ದಾರೆ, ಸೋಮವಾರ ಸಂಜೆಯಿಂದ ಸಿದ್ಧತೆಗಳು ಪ್ರಾರಂಭವಾದಾಗ ಪ್ರಯಾಣವನ್ನು ನೇರ ಪ್ರಸಾರ ಮಾಡಲಾಗುವುದು ಎಂದೂ ನಾಸಾ ಹೇಳಿದೆ.
ಪ್ರಾಣಿ ಸಂಪತ್ತು ಇಲ್ಲದೆ ಅರಣ್ಯ ಸಂಪತ್ತಿಗೆ ಮೌಲ್ಯವೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಹೊಸದಾಗಿ 900 ಬಸ್ ಗಳು ಸೇರ್ಪಡೆಗೊಳ್ಳಲಿವೆ ಎಂದು…
2025-26 ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ಎಫ್.ಎ.ಕ್ಯೂ ಗುಣಮಟ್ಟದ ಶೇಂಗಾ…
ರಾಜ್ಯದಲ್ಲಿ ಈಗಾಗಲೇ ಮಲೆನಾಡು ಪ್ರದೇಶದಲ್ಲಿ ಕಳೆದ ವರ್ಷ 100 ಕಾಲುಸಂಕ ನಿರ್ಮಾಣ ಮಾಡಲಾಗಿದೆ.…
ಉತ್ತರ ಕರ್ನಾಟಕ ಭಾಗದಲ್ಲಿ ಮುಂಗಾರು ಫಸಲು ಬಂದಾಗ ಭೂತಾಯಿಗೆ ಪೂಜೆ ಸಲ್ಲಿಸಿ ಫಸಲನ್ನು…
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯದ ಜನರ ಸಾಮಾಜಿಕ ಮತ್ತು…