ಈ ವರ್ಷ ಮಳೆಯ ಸಮಸ್ಯೆ ಕಾಡಿದ್ದಾಯಿತು. ಎಲ್ಲೆಡೆಯೂ ಸಮಸ್ಯೆಯೇ ಸಮಸ್ಯೆ. ಬಹುಪಾಲು ಬರಗಾಲವೇ ಕಂಡಿದೆ. ಇದೀಗ ಮುಂದಿನ ವರ್ಷದ ಆತಂಕ ಆರಂಭವಾಗಿದೆ. ಇದಕ್ಕೆ ಕಾರಣವಾದ್ದು ಯುಎಸ್ ಮೂಲದ ಹವಾಮಾನ ಸಂಸ್ಥೆ ಮುಂದಿನ ವರ್ಷ ಸೂಪರ್ ಎಲ್ ನಿನೋ ಬಗ್ಗೆ ಎಚ್ಚರಿಸಿದೆ.
ಈ ವರ್ಷ ಮಳೆಗಾಲವೇ ಇಲ್ಲವೇನೋ ಎಂದು ದೇಶದ ಕೆಲವು ಭಾಗಗಳಲ್ಲಿ ಅನ್ನಿಸಿದರೆ ಇನ್ನು ಕೆಲವು ಭಾಗಗಳಲ್ಲಿ ಸಾಕೋ ಸಾಕು ಅನ್ನಿಸುವಷ್ಟು ಮಳೆಯಾಗಿತ್ತು. ಈಗ ಆತಂಕ ಹುಟ್ಟಿಸಿರುವ ವಿಚಾರ ಎಂದರೆ ಮುಂದಿನ ವರ್ಷ ಪೆಸಿಫಿಕ್ ಸಾಗರದಲ್ಲಿ “ಸೂಪರ್ ಎಲ್‌ನಿನೋ’(Super El Nino) ಉಂಟಾಗಬಹುದು ಎಂದು ಅಮೆರಿಕದ ಹವಾಮಾನ ಸಂಸ್ಥೆ ಎಚ್ಚರಿಸಿದೆ.
ಪೆಸಿಫಿಕ್ ಅಥವಾ ಶಾಂತಸಾಗರದ ಉತ್ತರ ಅಮೆರಿಕದ ಬದಿ ಮತ್ತು ದಕ್ಷಿಣ ಅಮೆರಿಕದ ಬದಿಗಳಲ್ಲಿ ಸಾಗರದ ನೀರಿನ ಉಷ್ಣತೆ ಇಡೀ ಜಗತ್ತಿನ ಹವಾಮಾನವನ್ನು ಪ್ರಭಾವಿಸುತ್ತದೆ ಎನ್ನುವುದು ಎಲ್ಲರೂ ತಿಳಿದಿರುವ ಸತ್ಯ. ಶಾಂತ ಸಾಗರದ ಉತ್ತರ ಅಮೆರಿಕ ಕಡೆಯಲ್ಲಿ ಶೀತ ನೀರು ಮತ್ತು ದಕ್ಷಿಣ ಅಮೆರಿಕ ಬದಿಯಲ್ಲಿ ಉಷ್ಣ ನೀರು ಇರುತ್ತದೆ. ಸಾಗರದ ಒಳಗೆ ಉಷ್ಣ ಮತ್ತು ಶೀತ ಅಂತರ್‌ಪ್ರವಾಹಗಳಿರುತ್ತವೆ. ದಕ್ಷಿಣ ಅಮೆರಿಕ ಬದಿಯ ನೀರು ಸಹಜಕ್ಕಿಂತ ಹೆಚ್ಚು ಬಿಸಿಯಾದರೆ ಎಲ್ ನಿನೋ ಉಂಟಾಗುತ್ತದೆ. ಉತ್ತರ ಅಮೆರಿಕ ಬದಿಯ ಶೀತ ನೀರು ವಾಡಿಕೆಗಿಂತ ಹೆಚ್ಚು ತಂಪಾದರೆ ಲಾ ನಿನೋ ತಲೆದೋರುತ್ತದೆ.
ಇವೆರಡೂ ಸ್ಥಿತಿಗಳು ಜಾಗತಿಕ ಹವಾಮಾನ ಸ್ಥಿತಿಗತಿಯಲ್ಲಿ ಅಲ್ಲೋಲಕಲ್ಲೋಲ ಉಂಟು ಮಾಡಬಲ್ಲವು. ಈ ವರ್ಷದ ಮಳೆಗಾಲದ ಅವಾಂತರಗಳಿಗೆ ಎಲ್ ನಿನೋ ಕಾರಣ. ಮುಂದಿನ ವರ್ಷ ಇದು “ಸೂಪರ್ ಎಲ್ ನಿನೋ’ ಆಗಿ ಮರುಕಳಿಸಬಹುದು ಎನ್ನುವುದು ಅಮೆರಿಕದ ಹವಾಮಾನ ಸಂಸ್ಥೆ ಎಚ್ಚರಿಸಿದೆ. ಇದರ ಬೆನ್ನಿಗೇ ಕೃಷಿ ವಲಯದಲ್ಲಿ ಚರ್ಚೆ ಆರಂಭವಾಗಿದೆ.
ಈಗಾಗಲೇ ತಾಳೆ ಕೃಷಿಯ ಬಗ್ಗೆ ಚರ್ಚೆ ನಡೆದಿದೆ. ಎಲ್ ನಿನೊವು ವಿಶ್ವದ ಪ್ರಮುಖ ತಾಳೆ ಎಣ್ಣೆ ಬೆಳೆಯುವ ಪ್ರದೇಶಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಇದು 2024 ರ ಇಳುವರಿ ಮೇಲೆ ಪರಿಣಾಮ ಬೀರುತ್ತದೆ. ಎಲ್ ನಿನೋ-ಸಂಬಂಧಿತ ತೇವಾಂಶದ ಕೊರತೆಯು ಇಂಡೋನೇಷ್ಯಾದ ಹಲವಾರು ಭಾಗಗಳಲ್ಲಿ ಸಮಸ್ಯೆಯಾಗುತ್ತದೆ.
ಭಾರತದಲ್ಲಿ, ಎಲ್ ನಿನೋ ಸಾಮಾನ್ಯವಾಗಿ ಮಾನ್ಸೂನ್ ಮಾರುತಗಳಿಗೆ ಸಂಬಂಧಿಸುತ್ತವೆ. ಮಳೆಯ ಮೇಲೆ ತೀರಾ ಪರಿಣಾಮ ಕೊಡುತ್ತವೆ. ಮಾನ್ಸೂನ್ ಅವಧಿಯಲ್ಲಿ ಕಡಿಮೆ ಮಳೆಗೆ ಕಾರಣವಾಗಬಹುದು. ಆದರೆ ಸೂಪರ್ ಎಲ್ ನಿನೊವು ಭಾರತದಲ್ಲಿ ವಿಶಿಷ್ಟ ಹವಾಮಾನ ಮಾದರಿಗಳನ್ನು ಸೃಷ್ಟಿಸಬಹುದು. ಇದರಿಂದ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆ ಮತ್ತು ಕೆಲವು ಪ್ರದೇಶಗಳಲ್ಲಿ ಮಳೆಯ ತೀವ್ರ ಕೊರತೆ ಕಾಣಬಹುದು.ಇದುವರೆಗಿನ ಹವಾಮಾನ ಘಟನೆಗೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಕಡಿಮೆ ಮಳೆಯ ಪ್ರಭಾವ ಇರುತ್ತದೆ. ಆದರೆ ಕೃಷಿ ವಲಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಬೆಳೆ ಕೊರತೆ, ನೀರಿನ ಕೊರತೆ ಕೃಷಿ ಕ್ಷೇತ್ರದ ಮೇಲೆ ಹೊಡೆತ ಬೀಳಬಹುದು. ಇದರಿಂದ ಆಹಾರ ಉತ್ಪಾದನೆ ಸೇರಿದಂತೆ ಎಲ್ಲಾ ವಿಭಾಗದಲ್ಲೂ ಸಮಸ್ಯೆಯಾಗಬಹುದು.
ಸಾಗರದ ನೀರು 1.5 ಡಿಗ್ರಿ ಸೆಂಟಿಗ್ರೇಡ್‌ನಷ್ಟು ಬಿಸಿಯಾಗಿ “ಬಲವಾದ ಎಲ್‌ನಿನೋ’ ಉಂಟಾಗುವ ಸಾಧ್ಯತೆ ಶೇ. 75-80 ಇದ್ದರೆ, 2 ಡಿಗ್ರಿ ಸೆಂಟಿಗ್ರೇಡ್‌ಗಿಂತ ಹೆಚ್ಚಿ “ಸೂಪರ್ ಎಲ್‌ನಿನೋ’ ತಲೆದೋರುವ ಸಂಭವ ಶೇ. 30 ಇದೆ ಎನ್ನುವುದು ಈ ಹವಾಮಾನ ತಜ್ಞರ ಅಂಬೋಣ.1997-98 ಮತ್ತು 2015-16 ರ ಐತಿಹಾಸಿಕವಾಗಿ ಪ್ರಬಲ ಘಟನೆಗಳ ಸಂಭವನೀಯತೆ ಪ್ರಕಾರ ಕೆಲವು ಕಡೆ ಭಾರೀ ಮಳೆ ಇದ್ದು , ಇನ್ನೂ ಕೆಲವು ಕಡೆ ಮಳೆಯ ಕೊರತೆ ಪ್ರಪಂಚದಾದ್ಯಂತ ಇತ್ತು.
ಈ ವರ್ಷದ ಬರಗಾಲ ಸ್ಥಿತಿಯ ಪರಿಣಾಮ ಇನ್ನು ಮುಂದಿನ ದಿನಗಳಲ್ಲಿ ಅನುಭವಕ್ಕೆ ಬರಬೇಕಷ್ಟೇ. ಅದಾದ ಬೆನ್ನಿಗೆ ಸೂಪರ್ ಎಲ್ ನಿನೋ ಬಗ್ಗೆ ಹವಾಮಾನ ಸಂಸ್ಥೆ ಎಚ್ಚರಿಸಿದೆ. ಈ ಬಗ್ಗೆ ಈಗಾಗಲೇ ಕೆಲವು ದೇಶಗಳ ಕೃಷಿ ವಲಯದಲ್ಲಿ ಚರ್ಚೆ ಆರಂಭವಾಗಿದೆ. ಭಾರತದಲ್ಲಿ ಈ ಬಗ್ಗೆ ಇನ್ನಷ್ಟೇ ಯೋಚನೆ ಆರಂಭವಾಗಬೇಕಿದೆ.
Over the past few years, this change has become more evident. In some parts of the country, it rained so much that it seemed to be enough in some parts of the country. The issue that has raised concern is the prospect of a "Super El Nino" in the Pacific Ocean next year, according to the US National Oceanic and Atmospheric Administration.Over the past few years, this change has become more evident. In some parts of the country, it rained so much that it seemed to be enough in some parts of the country. The issue that has raised concern is the prospect of a "Super El Niño" in the Pacific Ocean next year, according to the US National Oceanic and Atmospheric Administration.
Source : Weather News
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…